10:13 PM (IST) Aug 27

India Latest New Live 27 August 2026ಬ್ರಹ್ಮಪುತ್ರ ನದಿಗೆ ಚೀನಾದಿಂದ ವಿಶ್ವದ ಅತೀ ದೊಡ್ಡ ಡ್ಯಾಂ - ಈಶಾನ್ಯ ಭಾರತಕ್ಕೆ ನೇಪಾಳದಂತೆಯೇ ಜಲಸ್ಫೋಟದ ಎಚ್ಚರಿಕೆ!

ಟಿಬೆಟ್‌ನಲ್ಲಿ ಬ್ರಹ್ಮಪುತ್ರ ನದಿಗೆ ಚೀನಾ ನಿರ್ಮಿಸುತ್ತಿರುವ ಬೃಹತ್ ಮೆಡಾಗ್ ಅಣೆಕಟ್ಟು, ಭೂಕಂಪನ ಸೂಕ್ಷ್ಮ ವಲಯದಲ್ಲಿರುವುದರಿಂದ ಭಾರತಕ್ಕೆ 'ಜಲ ಬಾಂಬ್'ನಂತೆ ಅಪಾಯಕಾರಿಯಾಗಿದೆ. ಈ ಯೋಜನೆಯಿಂದ ದಿಢೀರ್ ಪ್ರವಾಹ ಮತ್ತು ನೀರಿನ ಕೊರತೆಯ ಭೀತಿ ಎದುರಾಗಿದ್ದು, ಇದಕ್ಕೆ ಪ್ರತಿಯಾಗಿ ಭಾರತವೂ ಅಪ್ಪರ್ ಸಿಯಾಂಗ್ ಯೋಜನೆಯನ್ನು ಕೈಗೆತ್ತಿಕೊಂಡಿದೆ.
Read Full Story
09:37 PM (IST) Aug 27

India Latest New Live 27 August 2026ಝೀ ಗ್ರೂಪ್ ಸುಭಾಷ್ ಚಂದ್ರ ದಿವಾಳಿತನ ಕೇಸ್ - ₹22000 ಕೋಟಿ ಸಾಲಕ್ಕೆ ಕೇವಲ ₹6.5 ಕೋಟಿ ಮರುಪಾವತಿ! NCLT ವಿವಾದಿತ ಆದೇಶ

ಝೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ ವೈಯಕ್ತಿಕ ದಿವಾಳಿತನ ಪ್ರಕರಣದಲ್ಲಿ, ₹22,000 ಕೋಟಿಗೂ ಅಧಿಕ ಸಾಲಕ್ಕೆ ಪ್ರತಿಯಾಗಿ ಕೇವಲ ₹6.5 ಕೋಟಿ ಪಾವತಿಸುವ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ ಅನುಮೋದನೆ ನೀಡಿದೆ. ಈ ಯೋಜನೆಯಡಿ ಸಾಲದಾತರು ಶೇ. 99.97ರಷ್ಟು ನಷ್ಟ ಅನುಭವಿಸಲಿದ್ದು, ಸಾಲದಾತರ 'ವಾಣಿಜ್ಯ ಬುದ್ಧಿವಂತಿಕೆ' ಮತ್ತು ಚಂದ್ರರ ಆಸ್ತಿ ಮೌಲ್ಯದ ಕೊರತೆಯನ್ನು ಆಧರಿಸಿ ನ್ಯಾಯಮಂಡಳಿ ಈ ತೀರ್ಪು ನೀಡಿದೆ.

Read Full Story
09:35 PM (IST) Aug 27

India Latest New Live 27 August 2026ಸ್ಟಾರ್ ಹೀರೋಗಳ ಜೊತೆ ನಟಿಸಿದ್ದ ನಟನೀಗ ಅಪಾರ್ಟ್‌ಮೆಂಟ್ ವಾಚ್‌ಮ್ಯಾನ್ - ಸಾವಿ ಸಿಧು ಕಹಿ ಕಥೆ

ಸಾವಿ ಸಿಧು ಅವರ ಬದುಕು ಅನಿರೀಕ್ಷಿತ ತಿರುವು ಕಂಡಿದೆ. ವೈಯಕ್ತಿಕ ನಷ್ಟಗಳು, ಆರೋಗ್ಯ ಸಮಸ್ಯೆಗಳು ಮತ್ತು ಆರ್ಥಿಕ ಸಂಕಷ್ಟದ ಬಳಿಕ ಅವರು ಮುಂಬೈ ಅಪಾರ್ಟ್‌ಮೆಂಟ್‌ನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದ ಕಥೆ ಇದೀಗ ಮತ್ತೊಮ್ಮೆ ಗಮನ ಸೆಳೆಯುತ್ತಿದೆ.

Read Full Story
09:02 PM (IST) Aug 27

India Latest New Live 27 August 2026WTC Points Table - ತಲೆ ಕೆಳಗಾದ ಟೀಂ ಇಂಡಿಯಾ ಲೆಕ್ಕಾಚಾರ; ಫೈನಲ್ ಕನಸು ನನಸಿಗೆ ದಾರಿ ಯಾವುದು?

ಶ್ರೀಲಂಕಾ ಎದುರಿನ ಎರಡನೇ ಟೆಸ್ಟ್ ಡ್ರಾನಲ್ಲಿ ಅಂತ್ಯಗೊಂಡಿದೆ. ಇದು ಟೀಂ ಇಂಡಿಯಾಗೆ ದೊಡ್ಡ ಆಘಾತ ತಂದಿದೆ. WTC ಫೈನಲ್ ಎದುರು ನೋಡ್ತಿದ್ದ ಭಾರತ ತಂಡಕ್ಕೆ ದೊಡ್ಡ ಹೊಡೆತ ನೀಡಿದೆ.

Read Full Story
08:59 PM (IST) Aug 27

India Latest New Live 27 August 2026ರೈಲ್ವೆ ಆವರಣದಲ್ಲಿ ಬಯಲು ಶೌಚ, ಉಗುಳುವುದು, ಗಲೀಜು ಮಾಡಿದರೆ ಇನ್ಮುಂದೆ ದಂಡ ಡಬಲ್‌, ಕೋರ್ಟ್ ಮೆಟ್ಟಿಲೇರುವುದು ಕೂಡ ಕಡ್ಡಾಯ!

ಭಾರತೀಯ ರೈಲ್ವೆಯು ರೈಲ್ವೆ ನಿಲ್ದಾಣ, ರೈಲು ಮತ್ತು ಆವರಣದಲ್ಲಿ ನೈರ್ಮಲ್ಯ ನಿಯಮಗಳನ್ನು ಬಿಗಿಗೊಳಿಸಿದೆ. ಹೊಸ ತಿದ್ದುಪಡಿಯ ಪ್ರಕಾರ, ಗಲೀಜು ಮಾಡುವುದು, ಉಗುಳುವುದು ಸೇರಿದಂತೆ ಹಲವು ಕೃತ್ಯಗಳಿಗೆ ವಿಧಿಸುವ ದಂಡವನ್ನು ₹500 ರಿಂದ ₹1000 ಕ್ಕೆ ಹೆಚ್ಚಿಸಲಾಗಿದೆ.

Read Full Story
08:45 PM (IST) Aug 27

India Latest New Live 27 August 2026ಇಂದು ಟೆಸ್ಟ್ ಕ್ರಿಕೆಟ್ ಗೆದ್ದಿದೆ - ಪಂದ್ಯ ಡ್ರಾ ಬೆನ್ನಲ್ಲೇ ಗಿಲ್ ಭಾವುಕ; WTC ಫೈನಲ್ ಹಿನ್ನಡೆ ಬಗ್ಗೆ ಹೇಳಿದ್ದೇನು?

ಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆಲುವಿನ ಸನಿಹ ಬಂದು ಡ್ರಾ ಮಾಡಿಕೊಂಡಿದ್ದಕ್ಕೆ ಭಾರತೀಯ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಟೀಮ್ ಇಂಡಿಯಾ ನಾಯಕ ಗಿಲ್ ಮಾತ್ರ ಪಂದ್ಯದ ಫಲಿತಾಂಶವನ್ನು ಸಕಾರಾತ್ಮಕವಾಗಿ ನೋಡಿದ್ದಾರೆ. ಪಂದ್ಯದ ಬಳಿಕ ಮಾತನಾಡಿದ ಅವರು ಅಂತಿಮವಾಗಿ ಇಂದು ಟೆಸ್ಟ್ ಕ್ರಿಕೆಟ್ ಗೆದ್ದಿದೆ ಎಂದು ಬಣ್ಣಿಸಿದ್ದಾರೆ.

Read Full Story
08:02 PM (IST) Aug 27

India Latest New Live 27 August 2026ಲಿಂಬೆ ಹಣ್ಣು ಕತ್ತರಿಸಿ ಮಳೆ ನಿಲ್ಲಿಸಿದ ಸಂಸದ? ಮತ್ತೊಮ್ಮೆ ಕಟ್​ ಮಾಡಿ ಸಕ್ಕರೆ ಬೆಲೆ ಇಳಿಸಲು ಡಿಮಾಂಡ್​

ಛತ್ತೀಸ್‌ಗಢದ ಬಿಜೆಪಿ ಸಂಸದ ಭೋಜರಾಜ್ ನಾಗ್ ಅವರು, ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಿಂಬೆಹಣ್ಣು ಕತ್ತರಿಸಿ ಮಳೆಯನ್ನು ನಿಲ್ಲಿಸಿರುವುದಾಗಿ ಹೇಳಿಕೊಂಡಿದ್ದಾರೆ. ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರು ತೀವ್ರ ಟ್ರೋಲ್‌ಗೆ ಒಳಗಾಗಿದ್ದಾರೆ ಮತ್ತು ಕಾಂಗ್ರೆಸ್‌ನಿಂದ ಟೀಕೆಗೆ ಗುರಿಯಾಗಿದ್ದಾರೆ.
Read Full Story
07:28 PM (IST) Aug 27

India Latest New Live 27 August 2026ಅದಾನಿ-ಅಂಬಾನಿ ನಡುವೆ ರೇಸ್ - ₹2.73 ಲಕ್ಷ ಕೋಟಿ ಪ್ಲಾನ್, ಅಲ್ಯೂಮಿನಿಯಂ ತಯಾರಿಸಲು ರಿಲಯನ್ಸ್ ಬಿಗ್ ಸ್ಕೆಚ್!

ಉದ್ಯಮಿ ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಲ್ಯೂಮಿನಿಯಂ ಉತ್ಪಾದನಾ ರಂಗಕ್ಕೆ ಪ್ರವೇಶಿಸಲು ಗಂಭೀರ ಚಿಂತನೆ ನಡೆಸಿದೆ. ತನ್ನ ಕಲ್ಲಿದ್ದಲು ಅನಿಲೀಕರಣ ಯೋಜನೆಯಿಂದ ಉತ್ಪತ್ತಿಯಾಗುವ ಇಂಧನವನ್ನು ಬಳಸಿ ಲೋಹ ಸಂಸ್ಕರಣೆ ಮಾಡುವ ಮೂಲಕ, ಅದಾನಿ ಮತ್ತು ವೇದಾಂತದಂತಹ ದೈತ್ಯ ಕಂಪನಿಗಳಿಗೆ ಪೈಪೋಟಿ ನೀಡಲು ಸಜ್ಜಾಗುತ್ತಿದೆ.
Read Full Story
07:28 PM (IST) Aug 27

India Latest New Live 27 August 2026ಕಾಕ್ರೋಚ್‌ ಜನತಾ ಪಾರ್ಟಿ ಚುನಾವಣೆಗೆ ನಿಂತರೆ ಎಷ್ಟು ಸೀಟು ಗೆಲ್ಲಬಹುದು? MOTN ಸಮೀಕ್ಷೆಯಲ್ಲಿ ಸಿಕ್ತು ಉತ್ತರ

ನೀಟ್ ಪ್ರತಿಭಟನೆಯಿಂದ ಗಮನ ಸೆಳೆದ 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ರಾಜಕೀಯ ಪಕ್ಷವಾಗಿ ಚುನಾವಣೆಗೆ ಸ್ಪರ್ಧಿಸಿದರೆ ಹೆಚ್ಚಿನ ಜನ ಬೆಂಬಲಿಸುವುದಿಲ್ಲ ಎಂದು 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ ತಿಳಿಸಿದೆ.

Read Full Story
07:10 PM (IST) Aug 27

India Latest New Live 27 August 2026MOTN Survey - ಇಂದೇ ಲೋಕಸಭೆ ಚುನಾವಣೆ ನಡೆದರೆ ಮತ್ತೆ ಮೋದಿಯೇ ಪ್ರಧಾನಿ, 326 ಸೀಟು ಗೆಲ್ಲಲಿದೆ NDA

ಇಂಡಿಯಾ ಟುಡೇ ಮತ್ತು ಸಿ-ವೋಟರ್ ನಡೆಸಿದ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆಯ ಪ್ರಕಾರ, ಇಂದು ಲೋಕಸಭಾ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ 326 ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಗಳಿಸಲಿದೆ. ಆದಾಗ್ಯೂ, ಕಳೆದ ಜನವರಿ ಸಮೀಕ್ಷೆಗೆ ಹೋಲಿಸಿದರೆ ಎನ್‌ಡಿಎ 26 ಸ್ಥಾನಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.

Read Full Story
06:37 PM (IST) Aug 27

India Latest New Live 27 August 2026ಭಾರತದ ಸಾರ್ವಕಾಲಿಕ ಶ್ರೇಷ್ಠ ಟಾಪ್-5 ಟೆಸ್ಟ್ ವೇಗದ ಬೌಲರ್ ಆಯ್ಕೆ ಮಾಡಿದ ಪೂಜಾರ..! ಇಬ್ಬರು ಪ್ರಮುಖ ಮ್ಯಾಚ್‌ ವಿನ್ನರ್‌ಗಿಲ್ಲ ಸ್ಥಾನ

ಭಾರತದ ಮಾಜಿ ಟೆಸ್ಟ್ ಆಟಗಾರ ಚೇತೇಶ್ವರ್ ಪೂಜಾರ, ತಮ್ಮ ಸಾರ್ವಕಾಲಿಕ ಶ್ರೇಷ್ಠ ಐವರು ಭಾರತೀಯ ವೇಗದ ಬೌಲರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಪಟ್ಟಿಯಲ್ಲಿ ಕಪಿಲ್ ದೇವ್, ಜಹೀರ್ ಖಾನ್, ಜಾವಗಲ್ ಶ್ರೀನಾಥ್, ಜಸ್ಪ್ರೀತ್ ಬುಮ್ರಾ ಮತ್ತು ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದು, ಮೊಹಮ್ಮದ್ ಸಿರಾಜ್ ಮತ್ತು ಶಮಿಗೆ ಸ್ಥಾನ ಸಿಕ್ಕಿಲ್ಲ. ಜೊತೆಗೆ, ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯ ಫಲಿತಾಂಶದ ವಿವರಗಳೂ ಇವೆ.
Read Full Story
06:28 PM (IST) Aug 27

India Latest New Live 27 August 2026ಮಾಜಿ ಕೇಂದ್ರ ಸಚಿವರ ಸೊಸೆ ನೇಪಾಳ ಪ್ರವಾಹದಲ್ಲಿ ನಾಪತ್ತೆ, ಜೊತೆಯಲ್ಲಿದ್ದ 31 ಯಾತ್ರಿಕರೂ ಮಿಸ್ಸಿಂಗ್

ಮಾಜಿ ಕೇಂದ್ರ ರೈಲ್ವೈ ಸಚಿವ ಮುಕುಲ್ ರಾಯ್ ಸೊಸೆ ನೇಪಾಳ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಕೈಲಾಸ ಹಾಗೂ ಮಾನಸ ಸರೋವರ ಯಾತ್ರೆಯಲ್ಲಿದ್ದ ಮುಕುಲ್ ರಾಯ್ ಸೊಸೆ ಕುರಿತು ಯಾವುದೇ ಸುಳಿವು ಪತ್ತೆಯಾಗಿಲ್ಲ.

Read Full Story
06:03 PM (IST) Aug 27

India Latest New Live 27 August 2026ಉದಯಪುರದ ಐಷಾರಾಮಿ ಒಬೆರಾಯ್ ಉದಯವಿಲಾಸ್ ಹೋಟೆಲ್‌ನಲ್ಲಿ ತಂಗಿ ₹5.74 ಲಕ್ಷ ಬಿಲ್ ಕಟ್ಟದೆ ಹೋದ ಕುಟುಂಬ! ಕಾರಣವೇನು?

ಉದಯಪುರದ 'ದಿ ಒಬೆರಾಯ್ ಉದಯವಿಲಾಸ್' ಪಂಚತಾರಾ ಹೋಟೆಲ್‌ನಲ್ಲಿ 10 ದಿನ ತಂಗಿದ್ದ ಕುಟುಂಬವೊಂದು, ₹5.74 ಲಕ್ಷ ಬಿಲ್ ಪಾವತಿಸದೆ ವಂಚಿಸಿದೆ. ಟ್ರಾವೆಲ್ ಏಜೆನ್ಸಿ ಬಿಲ್ ಪಾವತಿಸುತ್ತದೆ ಎಂದು ಹೇಳಿ ಪರಾರಿಯಾದ ದೆಹಲಿ ಮೂಲದ ಅನುರಾಗ್ ಯಾದವ್ ವಿರುದ್ಧ ಹೋಟೆಲ್ ಆಡಳಿತ ಮಂಡಳಿ ಪೊಲೀಸ್ ದೂರು ದಾಖಲಿಸಿದೆ.
Read Full Story
06:01 PM (IST) Aug 27

India Latest New Live 27 August 2026ಬೆಚ್ಚಿಬೀಳಿಸೋ ಘಟನೆ.. ಮನೆಗೆ ನುಗ್ಗಿ 21 ವರ್ಷದ ಮಾಡೆಲ್‌ನ ಚುಚ್ಚಿ ಚುಚ್ಚಿ ಜೀವ ತೆಗೆದ ಜಿಮ್ ಟ್ರೈನರ್‍‌

ಖ್ಯಾತ ಮಾಡೆಲ್ ಮನೆಗೆ ನುಗ್ಗಿದ ಜಿಮ್ ಟ್ರೈನರ್ ಒಬ್ಬ, ಆಕೆ ಮೇಲೆ ಮನಬಂದಂತೆ ಚಾಕುವಿನಿಂದ ದಾಳಿ ನಡೆಸಿ ಜೀವ ತೆಗೆದು ಪರಾರಿ ಆಗಿದ್ದಾನೆ. ಬೆನ್ನಲ್ಲೇ ಮೃತ ಮಾಡೆಲ್‌ನ ಸ್ನೇಹಿತ ನೀಡಿದ ಹೇಳಿಕೆ ಬೆಚ್ಚಿ ಬೀಳಿಸುವಂತಿದೆ..

Read Full Story
05:34 PM (IST) Aug 27

India Latest New Live 27 August 2026Irumudi Controversy - ‘ಕಂಡಲ್ಲಿ ಹೊಡೆಯುತ್ತೇವೆ’ - ರವಿತೇಜ ಇರುಮುಡಿ ವಿರುದ್ಧ ಶಿಕ್ಷಕರ ಆಕ್ರೋಶ

ಮಾಸ್ ಮಹಾರಾಜ ರವಿತೇಜ ಅಭಿನಯದ ‘ಇರುಮುಡಿ’ ಸಿನಿಮಾ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿರುವ ನಡುವೆಯೇ ವಿವಾದಕ್ಕೆ ಸಿಲುಕಿದೆ. ಸರ್ಕಾರಿ ಶಾಲೆಗಳು ಮತ್ತು ಶಿಕ್ಷಕರನ್ನು ನಕಾರಾತ್ಮಕವಾಗಿ ಬಿಂಬಿಸಲಾಗಿದೆ ಎಂದು ಆಂಧ್ರಪ್ರದೇಶದ APTF ಹಾಗೂ UTF ಶಿಕ್ಷಕರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

Read Full Story
05:04 PM (IST) Aug 27

India Latest New Live 27 August 2026ಸಿಜೆಐ ಸೂರ್ಯಕಾಂತ್‌, ಬಿಸಿಐ ಅಧ್ಯಕ್ಷ ಭಾಗವಹಿಸುವಿಕೆಗೆ ವಿರೋಧ; ಬೆಂಗಳೂರಿನ NLSIU 34ನೇ ವಾರ್ಷಿಕ ಘಟಿಕೋತ್ಸವ ರದ್ದು

ಬೆಂಗಳೂರಿನ 'ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿವರ್ಸಿಟಿ' (NLSIU) ತನ್ನ 34ನೇ ವಾರ್ಷಿಕ ಘಟಿಕೋತ್ಸವವನ್ನು ರದ್ದುಗೊಳಿಸಿದೆ. ಸಿಜೆಐ ಸೂರ್ಯ ಕಾಂತ್ ಮತ್ತು ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಅವರ ಭಾಗವಹಿಸುವಿಕೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಈ ನಿರ್ಧಾರ ಮಾಡಲಾಗಿದೆ.

Read Full Story
05:02 PM (IST) Aug 27

India Latest New Live 27 August 2026ಜಿಯೋ, ಏರ್‌ಟೆಲ್‌ಗೆ ಟಕ್ಕರ್, BSNL ಹಾಗೂ ವೊಡಾಫೋನ್ ಐಡಿಯಾ ಮಹತ್ವದ ನೆಟ್‌ವರ್ಕ್ ಒಪ್ಪಂದ!

ವೊಡಾಫೋನ್ ಐಡಿಯಾ (Vi) ಮತ್ತು BSNL ತಮ್ಮ ನೆಟ್‌ವರ್ಕ್ ಜಾಲವನ್ನು ಹಂಚಿಕೊಳ್ಳಲು ಐತಿಹಾಸಿಕ ಒಪ್ಪಂದ ಮಾಡಿಕೊಂಡಿವೆ. ಈ ಒಪ್ಪಂದದ ಮೂಲಕ, ನಗರ ಪ್ರದೇಶಗಳಲ್ಲಿ BSNL ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 'ವಿ' ಬಳಕೆದಾರರಿಗೆ ಉತ್ತಮ ಸಂಪರ್ಕ ಲಭಿಸಲಿದ್ದು, ಎರಡೂ ಕಂಪನಿಗಳು ತಮ್ಮ ವೆಚ್ಚವನ್ನು ಕಡಿತಗೊಳಿಸಿ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಜ್ಜಾಗಿವೆ.
Read Full Story
04:39 PM (IST) Aug 27

India Latest New Live 27 August 2026200ಕ್ಕೂ ಹೆಚ್ಚು ವರ್ಷ ಭಾರತವನ್ನಾಳಿದ ಬ್ರಿಟಿಷರಿಗೆ ಈ ರಾಜ್ಯ ಮಾತ್ರ ಸಿಗಲೇ ಇಲ್ಲ! ಯಾವುದು ಗೊತ್ತಾ?

ಇತ್ತೀಚೆಗಷ್ಟೇ ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡು 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇನ್ನೂರಕ್ಕೂ ಅಧಿಕ ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟೀಷರಿಗೆ ಈ ಒಂದು ರಾಜ್ಯ ಅವರ ಆಡಳಿತಕ್ಕೆ ಒಳಪಡಲೇಯಿಲ್ಲ. ಯಾವುದದು ರಾಜ್ಯ ನೋಡೋಣ ಬನ್ನಿ.

Read Full Story
04:19 PM (IST) Aug 27

India Latest New Live 27 August 2026ನ್ಯೂಯಾರ್ಕ್‌ನ 'ಬಂಗ್ಲೋ'ಗೆ ಅಂಬಾನಿ ಕುಟುಂಬ ಭೇಟಿ, ರಾಧಿಕಾ ಮರ್ಚೆಂಟ್ ಕಟ್ಟಿದ ರಾಖಿಗೆ ಚೆಫ್ ವಿಕಾಸ್ ಖನ್ನಾ ಭಾವುಕ!

ನ್ಯೂಯಾರ್ಕ್‌ನಲ್ಲಿರುವ ಬಾಣಸಿಗ ವಿಕಾಸ್ ಖನ್ನಾ ಅವರ 'ಬಂಗ್ಲೋ' ರೆಸ್ಟೋರೆಂಟ್‌ಗೆ ಮುಕೇಶ್ ಅಂಬಾನಿ ಕುಟುಂಬ ಭೇಟಿ ನೀಡಿತ್ತು. ಈ ವೇಳೆ ರಾಧಿಕಾ ಮರ್ಚೆಂಟ್ ಅವರು ಖನ್ನಾ ಅವರ ಕೈಗೆ ಜಿಲೇಬಿ ಆಕಾರದ ರಾಖಿ ಕಟ್ಟಿದ್ದು, ಈ ಭಾವನಾತ್ಮಕ ಕ್ಷಣದಿಂದ ಖನ್ನಾ ಭಾವುಕರಾದರು. ಅಲ್ಲದೆ, ಅನಂತ್ ಅಂಬಾನಿಯವರ 'ವಂತಾರಾ' ಯೋಜನೆಯನ್ನು ಶ್ಲಾಘಿಸಿದರು.
Read Full Story
04:02 PM (IST) Aug 27

India Latest New Live 27 August 202622 ಸಾವಿರ ಕೋಟಿ ಸಾಲಕ್ಕೆ 6.5 ಕೋಟಿ ರೂಪಾಯಿ ಸೆಟ್ಲ್‌ಮೆಂಟ್‌ ಒಪ್ಪಿದ NCLT, ಬಚಾವ್‌ ಆದ ಉದ್ಯಮಿ!

ಜೀ ಗ್ರೂಪ್ ಸಂಸ್ಥಾಪಕ ಸುಭಾಷ್ ಚಂದ್ರ ಅವರ 22,006 ಕೋಟಿ ರೂ. ಸಾಲಕ್ಕೆ ಕೇವಲ 6.5 ಕೋಟಿ ರೂ. ಪಾವತಿಸುವ ಯೋಜನೆಗೆ ರಾಷ್ಟ್ರೀಯ ಕಂಪನಿ ಕಾನೂನು ಮಂಡಳಿ (NCLT) ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಸಾಲದಾತರಿಗೆ 99.97% ನಷ್ಟವಾಗಲಿದೆ.

Read Full Story