ವಿಮಾನ ನಿಲ್ದಾಣದ ಸಮೀಪವಿರುವ ಸುಮಾರು 8 ಕೋಟಿ ರೂ. ಮೌಲ್ಯದ 1.80 ಎಕರೆ ಜಮೀನನ್ನು ಇನಾಯತ್ ಅಲಿ ಮೂಲ್ಕಿ ಕುಟುಂಬದವರು ಹಜ್ ಭವನ ನಿರ್ಮಾಣಕ್ಕಾಗಿ ದಾನ ಮಾಡಿದ್ದಾರೆ. ಅಗತ್ಯವಿದ್ದರೆ ಇನ್ನಷ್ಟು ಜಾಗ ನೀಡಲು ಸಿದ್ಧರಿರುವುದಾಗಿ ಅವರು ತಿಳಿಸಿದ್ದಾರೆ.

ದಕ್ಷಿಣ ಕನ್ನಡ: ಬಜ್ಪೆ ಸಮೀಪ, ವಿಮಾನ ನಿಲ್ದಾಣಕ್ಕೆ ಅತಿ ಹತ್ತಿರದಲ್ಲಿ, ಇಂದಿನ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 8 ಕೋಟಿ ರುಪಾಯಿ ಬೆಲೆಬಾಳುವ 1.80 ಎಕರೆ ಜಮೀನನ್ನು ಪವಿತ್ರ ಹಜ್ ಭವನ ನಿರ್ಮಾಣಕ್ಕಾಗಿ ದಾನವಾಗಿ ನೀಡುವ ಮೂಲಕ ಜನಾಬ್ ಇನಾಯತ್ ಅಲಿ ಮೂಲ್ಕಿ ಮತ್ತು ಅವರ ಕುಟುಂಬದವರು ತ್ಯಾಗ ಮೆರೆದಿದ್ದಾರೆ.

ಬಜ್ಪೆ ಮುಖ್ಯ ರಸ್ತೆ ಬಳಿ ಅವರ ಕುಟುಂಬಕ್ಕೆ ಸೇರಿದ 1.80 ಎಕರೆ ಜಮೀನನ್ನು ಹಜ್ ಕಮಿಟಿಗೆ ದಾನವಾಗಿ ನೀಡಿದ್ದು, ಒಂದು ವೇಳೆ ಇನ್ನೂ ಹೆಚ್ಚಿನ ಜಾಗದ ಅವಶ್ಯಕತೆ ಇದ್ದರೆ, ಅದನ್ನೂ ನೀಡಲು ತಯಾರಿದ್ದೇವೆ ಎಂದು ಇನಾಯತ್‌ ಆಲಿಯವರು ರಾಜ್ಯ ಹಜ್ ಕಮಿಟಿಗೆ ತಿಳಿಸಿದ್ದಾರೆ.

ಸಾವಿರಾರು ಹಜ್ ಯಾತ್ರಿಕರಿಗಾಗಿ ಭೂಮಿ ದಾನ

ಇದು ಕೇವಲ ಜಾಗದ ದಾನವಲ್ಲ. ಮುಂದಿನ ತಲೆಮಾರುಗಳವರೆಗೆ ಸಾವಿರಾರು ಹಜ್ ಯಾತ್ರಿಕರಿಗೆ ಅನುಕೂಲವಾಗುವ, ಅವರ ಪ್ರಯಾಣಕ್ಕೆ, ವಸತಿಗೆ, ಮಾರ್ಗದರ್ಶನಕ್ಕೆ ನೆರವಾಗುವ ಪುಣ್ಯದ ಕೇಂದ್ರಕ್ಕೆ ಭದ್ರ ಬುನಾದಿ. ಹಜ್ ಯಾತ್ರೆಗೆ ಹೊರಡುವ ಹಿರಿಯರು, ತಾಯಂದಿರು, ಬಡ ಯಾತ್ರಿಕರು ಈ ಭವನದಲ್ಲಿ ವಿಶ್ರಮಿಸಿ, ದುಆ ಮಾಡುವಾಗಲೆಲ್ಲಾ ಅದರ ಪ್ರತಿಫಲ ದಾನಿಗಳಿಗೆ ತಲುಪುತ್ತಲೇ ಇರುತ್ತದೆ.

ಇದನ್ನೂ ಓದಿ: 'ನನಗೆ ಮುಸ್ಲಿಮರೇ ಮೊದಲು', ವಿವಾದಕ್ಕೆ ಕಾರಣವಾಯ್ತು ತುಳು ಹಾಸ್ಯನಟ ಅರವಿಂದ್ ಬೋಳಾರ್ ಹೇಳಿಕೆ

ಇದನ್ನೂ ಓದಿ: ತುಳು ಭಾಷೆಗೆ ಕರ್ನಾಟಕದ 2ನೇ ಅಧಿಕೃತ ಭಾಷೆ ಸ್ಥಾನಮಾನ, ಸೂಚನೆ ನೀಡಿದ ಸಚಿವ ಶಿವರಾಜ್ ತಂಗಡಗಿ