11:02 PM (IST) Sep 16

India Latest News Live 16 September 2026 ಬೆಂಗಳೂರಿನ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ಆಗಿದ್ದೇನು?

ಬೆಂಗಳೂರಿನಲ್ಲಿ ನಡೆದ ಎಂ.ಎಸ್. ಸುಬ್ಬುಲಕ್ಷ್ಮಿ ಅವರ 110ನೇ ಜಯಂತ್ಯುತ್ಸವದಲ್ಲಿ ಗಾನ ಸುಧೆ ಆಲಿಸುತ್ತಾ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಭಾವುಕರಾದರು. ಕರ್ನಾಟಿಕ್ ಸಂಗೀತದಲ್ಲಿ ಭಕ್ತಿಯೇ ಜೀವಾಳ ಎಂದ ಅವರು, ಸುಬ್ಬುಲಕ್ಷ್ಮಿ ಅವರ ಸಾಧನೆ ಹಾಗೂ ಗಾಂಧೀಜಿಯವರೊಂದಿಗಿನ ಒಡನಾಟವನ್ನು ಸ್ಮರಿಸಿದರು.
Read Full Story
10:56 PM (IST) Sep 16

India Latest News Live 16 September 2026 ಪ್ರಧಾನಿ ಮೋದಿ ಭೇಟಿಯಾದ ಬಾಲ್ಯದ ಶಾಲಾ ಗೆಳೆಯ, ಬೆನ್ನಲ್ಲೇ ನಡೀತು ಒಂದು ದೊಡ್ಡ ಪವಾಡ

ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ತಮ್ಮ ಶಾಲಾ ದಿನಗಳ ಗೆಳೆಯನನ್ನು ಭೇಟಿಯಾಗಿದ್ದರು. ಸಮಸ್ಯೆ ಹೇಳಿಕೊಂಡು ಮೋದಿ ಮುಂದೆ ಕೈಕಟ್ಟಿ ನಿಂತಿದ್ದ ಗೆಳೆಯನಿಗೆ ಇಂದು ಗುಡ್‌ನ್ಯೂಸ್ ಸಿಕ್ಕಿದೆ. ಏನದು ಪ್ರಕರಣ? ಸ್ಟೋರಿ ಓದಿ.

Read Full Story
08:48 PM (IST) Sep 16

India Latest News Live 16 September 2026 ರೈಡ್‌ಗೂ ಮುನ್ನ ಟಿಪ್ಸ್‌ - ರಾಪಿಡೋಗೆ 10 ಲಕ್ಷ ದಂಡ ವಿಧಿಸಿದ ಸಿಸಿಪಿಎ, ನಮ್ಮ ಯಾತ್ರಿಗೆ ಏಕಿಲ್ಲ?

ರೈಡ್-ಹೇಲಿಂಗ್ ಆಪ್‌ಗಳಲ್ಲಿ ಪ್ರಯಾಣಕ್ಕೂ ಮುನ್ನವೇ 'ಟಿಪ್ಸ್' ಪಡೆಯುವ ತಂತ್ರದ ವಿರುದ್ಧ ಸಿಸಿಪಿಎ ಕಟ್ಟುನಿಟ್ಟಿನ ಕ್ರಮಕೈಗೊಂಡಿದೆ. ನಿಯಮ ಉಲ್ಲಂಘಿಸಿದ 'ರಾಪಿಡೋ' ಸಂಸ್ಥೆಗೆ ₹10 ಲಕ್ಷ ದಂಡ ವಿಧಿಸಲಾಗಿದ್ದು, 'ನಮ್ಮ ಯಾತ್ರಿ' ಆಪ್ ವಿರುದ್ಧದ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ.
Read Full Story
08:05 PM (IST) Sep 16

India Latest News Live 16 September 2026 ಇಸ್ಲಾಂ, ಕ್ರಿಶ್ಚಿಯನ್‌ಗೆ ಮತಾಂತರವಾದ ದಲಿತರಿಗೆ SC ಸ್ಥಾನಮಾನವಿಲ್ಲ? - ಯಥಾಸ್ಥಿತಿ ಕಾಯ್ದುಕೊಳ್ಳಲು KGB ಸಮಿತಿ ಶಿಫಾರಸು ಸಾಧ್ಯತೆ

ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ದಲಿತರಿಗೆ ಪರಿಶಿಷ್ಟ ಜಾತಿ (SC) ಸ್ಥಾನಮಾನ ನೀಡುವ ಕುರಿತು ಕೆ.ಜಿ. ಬಾಲಕೃಷ್ಣನ್ ನೇತೃತ್ವದ ಆಯೋಗವು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

Read Full Story
07:38 PM (IST) Sep 16

India Latest News Live 16 September 2026 ಧೂಮಪಾನಿಗಳ ಹೊಗೆ ಹಾಕಿಸಿದ ITC, ಫೇಮಸ್‌ ಬ್ರ್ಯಾಂಡ್‌ಗಳ ಸಿಗರೇಟ್‌ ದರದಲ್ಲಿ ಭರ್ಜರಿ ಏರಿಕೆ!

ಐಟಿಸಿ ಲಿಮಿಟೆಡ್ ತನ್ನ ಪ್ರಸಿದ್ಧ ಸಿಗರೇಟ್ ಬ್ರ್ಯಾಂಡ್‌ಗಳಾದ ಕ್ಲಾಸಿಕ್ ಕನೆಕ್ಟ್ ಮತ್ತು ಗೋಲ್ಡ್ ಫ್ಲೇಕ್ ಬೆಲೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ನೂತನ ತೆರಿಗೆ ನಿಯಮಾವಳಿಗಳು ಮತ್ತು ಹೆಚ್ಚುವರಿ ಅಬಕಾರಿ ಸುಂಕದ ಹೊರೆಯಿಂದಾಗಿ ಈ ಬೆಲೆ ಏರಿಕೆ ಮಾಡಲಾಗಿದೆ.

Read Full Story
07:31 PM (IST) Sep 16

India Latest News Live 16 September 2026 ಅದಾನಿಯನ್ನು ಹಿಂದಿಕ್ಕಿ ಏಷ್ಯಾದ ನಂ.1 ಶ್ರೀಮಂತನಾದ ಈ ವ್ಯಕ್ತಿ ಯಾರು? ಟಾಪ್​-5 ಪಟ್ಟಿಯಲ್ಲಿ ಭಾರತಕ್ಕೆ ದಕ್ಕಿದ್ದೆಷ್ಟು

ಟಿಕ್‌ಟಾಕ್ ಮಾತೃಸಂಸ್ಥೆ ಬೈಟ್‌ಡ್ಯಾನ್ಸ್‌ನ ಸಂಸ್ಥಾಪಕ ಜಾಂಗ್ ಯಿಮಿಂಗ್ ಅವರು ಗೌತಮ್ ಅದಾನಿಯನ್ನು ಹಿಂದಿಕ್ಕಿ ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕೃತಕ ಬುದ್ಧಿಮತ್ತೆ (AI) ಮತ್ತು ಟಿಕ್‌ಟಾಕ್‌ನ ಜಾಗತಿಕ ಯಶಸ್ಸಿನಿಂದಾಗಿ ಅವರ ನಿವ್ವಳ ಮೌಲ್ಯ $105 ಬಿಲಿಯನ್ ಮೀರಿದೆ.
Read Full Story
06:35 PM (IST) Sep 16

India Latest News Live 16 September 2026 ಒಂದೇ ದಿನ ಎರಡು ವಿಚಿತ್ರ ಪ್ರಕರಣ - ಪತ್ನಿಯರಿಂದ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದ ಇಬ್ಬರು ಪತಿರಾಯರು!

ಉತ್ತರಪ್ರದೇಶದಲ್ಲಿ ಮಂಗಳವಾರ ಒಂದು ವಿಚಿತ್ರ ಘಟನೆ ನಡೆದಿದೆ. ಪತ್ನಿಯರಿಂದ ನಮ್ಮನ್ನು ರಕ್ಷಿಸುವಂತೆ ಆಗ್ರಾದ ಏಕ್ತಾ ಪೊಲೀಸ್ ಠಾಣೆಗೆ ಇಬ್ಬರು ಪತಿರಾಯರು ಬಂದಿದ್ದಾರೆ. ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ ಗೊತ್ತಾ? ಪತ್ನಿಯರು ಹಿಂಗೂ ಇರ್ತಾರಾ ದೇವ್ರೇ ಅನ್ಸುತ್ತೆ.

Read Full Story
06:20 PM (IST) Sep 16

India Latest News Live 16 September 2026 ಭಿಕ್ಷಾಟನೆಯಲ್ಲಿದ್ದ ಇಂಡಿಯಾನಾ ಮಾಜಿ ಫುಟ್ಬಾಲ್ ತಾರೆ ಬದುಕು ಬದಲಿಸಿದ ಆ ಬ್ಯಾಗ್, ಹೊಸ ಮನೆ ಕೊಡಿಸಿದ ಯೂಟ್ಯೂಬರ್!

ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದ ಮಾಜಿ ಫುಟ್‌ಬಾಲ್ ಆಟಗಾರ ಸ್ಯಾಂಪ್ಸನ್ ಜೇಮ್ಸ್ ಗಾಯ ಮತ್ತು ಮಾನಸಿಕ ಸಮಸ್ಯೆಯಿಂದ ನಿರಾಶ್ರಿತರಾಗಿದ್ದರು. ಆಸ್ಟಿನ್ ಬೀದಿಯಲ್ಲಿದ್ದ ಅವರ ಬಳಿಯಿದ್ದ ಕೆಂಪು ಬ್ಯಾಗ್ ನೋಡಿ ಹಳೆಯ ವಿದ್ಯಾರ್ಥಿಯೊಬ್ಬರು ಗುರುತಿಸಿ ಸಹಾಯಕ್ಕೆ ಮುಂದಾದರು. ಆನ್‌ಲೈನ್ ನಿಧಿಸಂಗ್ರಹದ ಮೂಲಕ 17,000 ಡಾಲರ್ ಸಂಗ್ರಹಿಸಿ ಅವರಿಗೆ ಹೊಸ ಬದುಕು ನೀಡಲಾಗಿದೆ.
Read Full Story
06:20 PM (IST) Sep 16

India Latest News Live 16 September 2026 ಕಮಲ್‌ ಹಾಸನ್‌ ಬದಲು ಚಿರಂಜೀವಿ ಹೀರೋ; 110 ದಿನ ಓಡಿದ ಸಿನಿಮಾದ ಇಂಟರೆಸ್ಟಿಂಗ್‌ ಕಥೆ!

ಮೆಗಾಸ್ಟಾರ್ ಚಿರಂಜೀವಿ ಅವರ ಆರಂಭಿಕ 'ಕೋತಲ ರಾಯುಡು' ಸಿನಿಮಾ ದೊಡ್ಡ ಯಶಸ್ಸು ಕಂಡರೂ, ನಿರ್ಮಾಪಕ ತಮ್ಮಾರೆಡ್ಡಿ ಭರದ್ವಾಜ ಅವರಿಗೆ ಈ ವಿಚಾರ ತಿಳಿದಿರಲಿಲ್ಲ. ಕಮಲ್ ಹಾಸನ್ ಬದಲು ಚಿರಂಜೀವಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿ, ಕಡಿಮೆ ಲಾಭಕ್ಕೆ ವಿತರಕರಿಗೆ ಮಾರಾಟ ಮಾಡಿದ್ದರು. ತಿಂಗಳ ನಂತರ ಸಿನಿಮಾ 110 ದಿನ ಪೂರೈಸಿದ ಪೋಸ್ಟರ್ ನೋಡಿ ನಿರ್ಮಾಪಕರು ಆಶ್ಚರ್ಯಚಕಿತರಾದರು.
Read Full Story
05:56 PM (IST) Sep 16

India Latest News Live 16 September 2026 ಕಮಲ್​ ಹಾಸನ್​ ದಾಖಲೆ ಮುರಿದ 4ರ ಬಾಲೆ - ರಾಷ್ಟ್ರಪತಿಯಿಂದ ಗೌರವ ಸ್ವೀಕಾರ- ಯಾರೀ ಪುಟಾಣಿ

ದೆಹಲಿಯಲ್ಲಿ ನಡೆದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 4 ವರ್ಷದ ತ್ರಿಶಾ ಥೋಸರ್ ಅತ್ಯುತ್ತಮ ಬಾಲನಟಿ ಪ್ರಶಸ್ತಿ ಸ್ವೀಕರಿಸಿದ್ದಾಳೆ. ಈ ಮೂಲಕ ಕಮಲ್ ಹಾಸನ್ ಅವರ 64 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಅತಿ ಕಿರಿಯ ವಯಸ್ಸಿನಲ್ಲಿ ಈ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ. ಕಮಲ್ ಹಾಸನ್ ಕೂಡ ಈ ಪುಟಾಣಿಯ ಸಾಧನೆಯನ್ನು ಶ್ಲಾಘಿಸಿದ್ದಾರೆ.

Read Full Story
05:38 PM (IST) Sep 16

India Latest News Live 16 September 2026 Clean Greasy Non-Stick Pan - ನಾನ್-ಸ್ಟಿಕ್ ಪ್ಯಾನ್ ಅಂಚಿನಲ್ಲಿರುವ ಜಿಡ್ಡು ಹೋಗ್ತಿಲ್ವಾ? ಈ ಟ್ರಿಕ್ಸ್ ಟ್ರೈ ಮಾಡಿ

ನಾನ್-ಸ್ಟಿಕ್ ಪ್ಯಾನ್ ಅನ್ನು ಎಷ್ಟೇ ಹುಷಾರಾಗಿ ಬಳಸಿದರೂ ಅದರ ಅಂಚಿನಲ್ಲಿ ಎಣ್ಣೆ, ಜಿಡ್ಡು ಕೂತುಬಿಡುತ್ತದೆ. ಬರೀ ಡಿಶ್‌ವಾಶ್‌ನಿಂದ ತೊಳೆದರೆ ಈ ಜಿಡ್ಡು ಹೋಗಲ್ಲ. ಹಾಗಂತ ಗಟ್ಟಿಯಾಗಿ ಉಜ್ಜಿದರೆ ಪ್ಯಾನ್ ಕೋಟಿಂಗ್ ಹಾಳಾಗುತ್ತೆ. ಆದರೆ ನಮ್ಮ ಅಡುಗೆಮನೆಯಲ್ಲಿ ಸಿಗುವ ವಸ್ತುಗಳನ್ನು ಬಳಸಿ ಕ್ಲೀನ್ ಮಾಡಬಹುದು.

Read Full Story
05:17 PM (IST) Sep 16

India Latest News Live 16 September 2026 ಸಿಎಂ ಯೋಗಿ ಆದಿತ್ಯನಾಥ ಅವರ ಮುಸ್ಲಿಂ ಅಭಿಮಾನಿ ಟ್ಯಾಟೂ ನೋಡಿ ಶಾಕ್! ದೇಶದ ರಾಜಕಾರಣದಲ್ಲಿ ಸಂಚಲನ ಸೃಷ್ಟಿ!

ಪ್ರಧಾನಿ ನರೇಂದ್ರ ಮೋದಿ ಅವರ ನಂತರ ಬಿಜೆಪಿಯಲ್ಲಿ ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿ ಯಾರೆಂಬ ಚರ್ಚೆ ಜೋರಾಗಿ ನಡೆಯುತ್ತಿದೆ. ಹೀಗಿರುವಾಗ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರ ಮುಸ್ಲಿಂ ಅಭಿಮಾನಿಯೊಬ್ಬರು ನೆಕ್ಸ್ಟ್‌ ಪಿಎಂ ಯೋಗಿ ಎಂದು ಟ್ಯಾಟೋ ಹಾಕಿಸಿಕೊಂಡ ವಿಡಿಯೋ ವೈರಲ್ ಆಗಿದೆ.

Read Full Story
05:10 PM (IST) Sep 16

India Latest News Live 16 September 2026 Sanjukta Parashar - ಸಿಆರ್‌ಪಿಎಫ್‌ನ ಮಹಾಬಲಿಷ್ಠ ಕೋಬ್ರಾ ಕಮಾಂಡೋ ಯುನಿಟ್‌ಗೆ ಇದೇ ಮೊದಲ ಬಾರಿಗೆ ಮಹಿಳೆ ಚೀಫ್‌!

ಸಿಆರ್‌ಪಿಎಫ್‌ನ ನಕ್ಸಲ್ ನಿಗ್ರಹ ಕಮಾಂಡೋ ಘಟಕವಾದ 'ಕೋಬ್ರಾ' ವಲಯಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ಐಪಿಎಸ್ ಅಧಿಕಾರಿ ಸಂಯುಕ್ತಾ ಪರಾಶರ್ ಅವರು ಈ ಐತಿಹಾಸಿಕ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

Read Full Story
04:54 PM (IST) Sep 16

India Latest News Live 16 September 2026 ಬಾಂಗ್ಲಾದೇಶದ ಸ್ಟಾರ್ ಕ್ರಿಕೆಟಿಗನ ಮನೆಯಲ್ಲಿ ಜಯ ಗಣೇಶ ಜಯ ಗಣೇಶ, ಸ್ಪೆಷಲ್ ಫೋಟೋಗಳು

ಬಾಂಗ್ಲಾದೇಶ ಖ್ಯಾತ ಕ್ರಿಕೆಟಿಗ ತನ್ನ ಮನೆಯಲ್ಲಿ ಗಣೇಶನ ಕೂರಿಸಿ ಎಲ್ಲರಿಗೂ ಹಬ್ಬದ ಶುಭಾಶಯ ಕೋರಿದ್ದಾರೆ. ಅಷ್ಟಕ್ಕೂ ಯಾರು ಕ್ರಿಕೆಟಿಗ? ಸ್ಟೋರಿ ಓದಿ.

Read Full Story
04:53 PM (IST) Sep 16

India Latest News Live 16 September 2026 Fresh Mutton Tips - ಮಟನ್ ತರ್ತಾ ಇದ್ದೀರಾ? ಎಳೆ, ಫ್ರೆಶ್‌ ಮಟನ್‌ ಗುರುತಿಸೋದು ಹೇಗೆ? ಈ ಸಿಂಪಲ್‌ ಟಿಪ್ಸ್‌ ಗೊತ್ತಿದ್ರೆ ಸಾಕು

ಮಾರುಕಟ್ಟೆಯಲ್ಲಿ ಮಟನ್ ತಂದಾಗಲೆಲ್ಲಾ ಬಲ್ತಿರೋ ಮಾಂಸ ಸಿಗ್ತಾ ಇದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಸಾಕು, ನಿಮಗೆ ಮಟನ್ ಬಗ್ಗೆ ಐಡಿಯಾ ಇಲ್ಲದಿದ್ದರೂ ಪ್ರತಿ ಬಾರಿಯೂ ಫ್ರೆಶ್ ಮಾಂಸವನ್ನೇ ಮನೆಗೆ ತರಬಹುದು.

Read Full Story
04:49 PM (IST) Sep 16

India Latest News Live 16 September 2026 35ರಂತೆ ಕಾಣುವ 75ರ ಚೆಲುವೆ! ಏನೀ ಸೌಂದರ್ಯದ ಗುಟ್ಟು? ಅಮ್ಮನ ಕಥೆ ಕೇಳಿ ಮಗಳೇ ಬೆಚ್ಚಿಬಿದ್ದ ಸ್ಟೋರಿ ಇದು

ಚೀನಾದಲ್ಲಿ 75 ವರ್ಷದ ವೃದ್ಧೆಯೊಬ್ಬಳು ತನ್ನ ನಿವೃತ್ತಿ ಉಳಿತಾಯದ ₹4 ಕೋಟಿಗೂ ಹೆಚ್ಚು ಹಣವನ್ನು ಒಂದೇ ಬ್ಯೂಟಿ ಸಲೂನ್‌ನಲ್ಲಿ ಖರ್ಚು ಮಾಡಿರುವ ಆಘಾತಕಾರಿ ಘಟನೆ ನಡೆದಿದೆ. ಮಾರುಕಟ್ಟೆ ದರಕ್ಕಿಂತ ಹತ್ತಾರು ಪಟ್ಟು ಹೆಚ್ಚು ಹಣ ವಸೂಲಿ ಮಾಡಿರುವ ಬಿಲ್‌ಗಳನ್ನು ನೋಡಿ ಆಕೆಯ ಮಗಳು ಹಾಗೂ ಕುಟುಂಬಸ್ಥರು ಬೆಚ್ಚಿಬಿದ್ದಿದ್ದಾರೆ. ವಯಸ್ಸಾದ ಗ್ರಾಹಕರಿಗೆ ದುಬಾರಿ ಚಿಕಿತ್ಸೆ ನೀಡಿರುವ ಬಗ್ಗೆ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ.

Read Full Story
04:43 PM (IST) Sep 16

India Latest News Live 16 September 2026 ಅರೆಬಿಯನ್‌ ಸಮುದ್ರ ಮಧ್ಯೆ ಪಾಕಿಸ್ತಾನ ಪುಂಡಾಟ - ಭಾರತೀಯ ಯುದ್ಧನೌಕೆಗೆ ಸ್ಫೀಡ್ ಆಗಿ ಬಂದು ಡಿಕ್ಕಿ ಹೊಡೆದ ಪಾಕ್ ನೌಕೆ

ಉತ್ತರ ಅರೇಬಿಯನ್ ಸಮುದ್ರದಲ್ಲಿ ಪಾಕಿಸ್ತಾನಿ ನೌಕಾಪಡೆಯ ಹಡಗು ಭಾರತೀಯ ಯುದ್ಧನೌಕೆಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದಿದೆ. ಈ ಅಪಾಯಕಾರಿ ಕೃತ್ಯವು 1991ರ ದ್ವಿಪಕ್ಷೀಯ ಒಪ್ಪಂದದ ನೇರ ಉಲ್ಲಂಘನೆಯಾಗಿದ್ದು, ಭಾರತವು ಪಾಕಿಸ್ತಾನದ ರಾಯಭಾರಿಗೆ ತೀವ್ರ ಎಚ್ಚರಿಕೆ ನೀಡಿದೆ.
Read Full Story
04:28 PM (IST) Sep 16

India Latest News Live 16 September 2026 ಗಣೇಶನ ಕಣ್ಣಿನಿಂದ ಎಂಟು ಗಂಟೆ ನೀರು - ಆತಂಕದಲ್ಲಿ ಭಕ್ತರು! ವಿಡಿಯೋ ವೈರಲ್​- ಗ್ರಾಮಸ್ಥರು ಹೇಳೋದೇನು

ಉಜ್ಜಯಿನಿ ಜಿಲ್ಲೆಯ ಚೋಪ್ರಾ ಗ್ರಾಮದ 700 ವರ್ಷಗಳಷ್ಟು ಹಳೆಯ ದೇವಾಲಯದಲ್ಲಿ ಗಣೇಶನ ಮೂರ್ತಿಯಿಂದ ಕಣ್ಣೀರು ಬಂದಿರುವ ಘಟನೆ ನಡೆದಿದೆ. ಸತತ ಎಂಟು ಗಂಟೆಗಳ ಕಾಲ ಕಣ್ಣೀರು ಹರಿದಿದ್ದು, ಭಕ್ತರಲ್ಲಿ ಆತಂಕ ಮತ್ತು ಅಚ್ಚರಿ ಮೂಡಿಸಿದೆ. ಗ್ರಾಮಸ್ಥರು ಪೂಜೆ ಸಲ್ಲಿಸಿ ಕ್ಷಮೆ ಕೇಳಿದ ನಂತರವಷ್ಟೇ ಕಣ್ಣೀರು ನಿಂತಿದೆ.
Read Full Story
04:10 PM (IST) Sep 16

India Latest News Live 16 September 2026 Samsung Galaxy S26 FE ಭಾರತದಲ್ಲಿ ಲಾಂಚ್‌; 50MP ಕ್ಯಾಮೆರಾ, 4,900mAh ಬ್ಯಾಟರಿ, 45W ಫಾಸ್ಟ್ ಚಾರ್ಜಿಂಗ್‌!

ಸ್ಯಾಮ್‌ಸಂಗ್ ಕಂಪನಿಯು ಭಾರತದಲ್ಲಿ ಹೊಸ ಗ್ಯಾಲಕ್ಸಿ S26 FE ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಇದು 6.7 ಇಂಚಿನ ಡಿಸ್‌ಪ್ಲೇ, Exynos 2500 ಪ್ರೊಸೆಸರ್, 50MP ಕ್ಯಾಮೆರಾ ಮತ್ತು ಗ್ಯಾಲಕ್ಸಿ AI ಫೀಚರ್‌ಗಳನ್ನು ಒಳಗೊಂಡಿದೆ. 79,999 ರೂ. ಬೆಲೆಯ ಈ ಫೋನ್‌ಗೆ ಆಕರ್ಷಕ ಎಕ್ಸ್‌ಚೇಂಜ್ ಮತ್ತು ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಿವೆ.
Read Full Story
03:30 PM (IST) Sep 16

India Latest News Live 16 September 2026 ಬೆಳ್ಳಿಪರದೆಯ ಮೇಲೆ ಮರುಜೀವ ಪಡೆಯಲಿದೆ ಎಂ.ಎಸ್.ಸುಬ್ಬುಲಕ್ಷ್ಮಿ ಕಥನ - ರಶ್ಮಿಕಾ ಮಂದಣ್ಣ ನಾಯಕಿ!

ಭಾರತ ರತ್ನ ಎಂ.ಎಸ್.ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಬಯೋಪಿಕ್ ಅಧಿಕೃತವಾಗಿ ಘೋಷಣೆಯಾಗಿದೆ. 110ನೇ ಜಯಂತಿಯ ಸಂದರ್ಭದಲ್ಲಿ ಚೆನ್ನೈನ ದಿ ಮ್ಯೂಸಿಕ್ ಅಕಾಡೆಮಿಯಲ್ಲಿ ಚಿತ್ರವನ್ನು ಪ್ರಕಟಿಸಲಾಗಿದೆ.

Read Full Story