MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Ind vs SL 2nd Test
Raksha Bandhan Wishes
Toxic OTT Release Date
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Viral News
  • 200ಕ್ಕೂ ಹೆಚ್ಚು ವರ್ಷ ಭಾರತವನ್ನಾಳಿದ ಬ್ರಿಟಿಷರಿಗೆ ಈ ರಾಜ್ಯ ಮಾತ್ರ ಸಿಗಲೇ ಇಲ್ಲ! ಯಾವುದು ಗೊತ್ತಾ?

200ಕ್ಕೂ ಹೆಚ್ಚು ವರ್ಷ ಭಾರತವನ್ನಾಳಿದ ಬ್ರಿಟಿಷರಿಗೆ ಈ ರಾಜ್ಯ ಮಾತ್ರ ಸಿಗಲೇ ಇಲ್ಲ! ಯಾವುದು ಗೊತ್ತಾ?

ಇತ್ತೀಚೆಗಷ್ಟೇ ಭಾರತವು ಬ್ರಿಟೀಷರಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡು 80ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಇನ್ನೂರಕ್ಕೂ ಅಧಿಕ ವರ್ಷಗಳ ಕಾಲ ಭಾರತವನ್ನು ಆಳಿದ ಬ್ರಿಟೀಷರಿಗೆ ಈ ಒಂದು ರಾಜ್ಯ ಅವರ ಆಡಳಿತಕ್ಕೆ ಒಳಪಡಲೇಯಿಲ್ಲ. ಯಾವುದದು ರಾಜ್ಯ ನೋಡೋಣ ಬನ್ನಿ.

1 Min read
Author : Naveen Kodase
Published : Aug 27 2026, 04:39 PM IST
Share this Photo Gallery
  • FB
  • TW
  • Linkdin
  • Whatsapp
15
ಗೋವಾ ಬ್ರಿಟೀಷರ ಕೈಗೆ ಕೊನೆಗೂ ಸಿಗಲೇಯಿಲ್ಲ
Image Credit : our own

ಗೋವಾ ಬ್ರಿಟೀಷರ ಕೈಗೆ ಕೊನೆಗೂ ಸಿಗಲೇಯಿಲ್ಲ

ಸುಮಾರು ಇನ್ನೂರಕ್ಕೂ ಅಧಿಕ ವರ್ಷಗಳ ಕಾಲ ಬ್ರಿಟೀಷರು ಭಾರತವನ್ನು ಆಳಿದರೂ, ಗೋವಾವನ್ನು ಕೈವಶ ಮಾಡಿಕೊಳ್ಳಬೇಕು ಎನ್ನುವ ಬ್ರಿಟೀಷರ ಕನಸು ಕನಸಾಗಿಯೇ ಉಳಿಯಿತು. ಕರಾವಳಿ ತೀರದ ಈ ರಾಜ್ಯ ಕೊನೆಯವರೆಗೂ ಪೋರ್ಚುಗೀಸರ ನಿಯಂತ್ರಣದಲ್ಲಿಯೇ ಉಳಿಯಿತು. ಬ್ರಿಟೀಷರ ನೇರ ಆಡಳಿತಕ್ಕೆ ಒಳಪಡದ ಕೆಲವೇ ಕೆಲವು ರಾಜ್ಯಗಳ ಪೈಕಿ ಗೋವಾ ಕೂಡಾ ಒಂದಾಗಿದೆ. ಯಾಕೆ ಹೀಗೆ ಎನ್ನುವುದನ್ನು ನೋಡೋಣ ಬನ್ನಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬ್ರಿಟೀಷರಿಗಿಂತ ಮೊದಲೇ ಭಾರತಕ್ಕೆ ಬಂದಿಳಿದಿದ್ದ ಪೋರ್ಚುಗೀಸರು
Image Credit : Getty

ಬ್ರಿಟೀಷರಿಗಿಂತ ಮೊದಲೇ ಭಾರತಕ್ಕೆ ಬಂದಿಳಿದಿದ್ದ ಪೋರ್ಚುಗೀಸರು

ಬ್ರಿಟೀಷರು ಬರುವ ಮುನ್ನ ಪೋರ್ಚುಗೀಸರು ಭಾರತಕ್ಕೆ ಎಂಟ್ರಿಕೊಟ್ಟಿದ್ದರು. ವಾಸ್ಕೋ ಡ ಗಾಮಾ ಸಮುದ್ರ ಮಾರ್ಗದ ಮೂಲಕ 1498ರಲ್ಲಿ ಭಾರತಕ್ಕೆ ಬಂದನು. ಈ ಮೂಲಕ ಭಾರತ ಹಾಗೂ ಪೋರ್ಚುಗೀಸರ ನಡುವೆ ವ್ಯಾಪರ-ವಹಿವಾಟು ಆರಂಭವಾಯಿತು. ಇದಾದ ಸುಮಾರು ನೂರು ವರ್ಷಗಳ ಬಳಿಕ ಅಂದರೆ 1608ರಲ್ಲಿ ಬ್ರಿಟೀಷರು ಸೂರತ್‌ಗೆ ಬಂದಿಳಿದರು. ಅಷ್ಟರಲ್ಲಾಗಲೇ ಪೋರ್ಚುಗೀಸರು ಗೋವಾ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು.

Related Articles

Related image1
ಗೋವಾ ಕ್ಯಾಸಿನೋ ಪ್ಲಾನ್ ಮಾಡಿದ್ದೀರಾ? ಹೊಸ ನಿಯಮ ಜಾರಿ, ಯಾರಿಗೆಲ್ಲಾ ಪ್ರವೇಶ ಬ್ಯಾನ್?
Related image2
ಕರಾವಳಿಗೆ ಖುಷಿ, ಸೂರತ್-ಮಂಗಳೂರು ಸ್ಪೆಷಲ್ ರೈಲು ಶಾಶ್ವತ ಸೇವೆಗೆ ಪರಿವರ್ತಿಸಿದ ರೈಲ್ವೆ ಇಲಾಖೆ, ಗೋವಾ ಈಗ ಹತ್ತಿರ!
35
ಗೋವಾ ಪೋರ್ಚುಗೀಸರ ಪ್ರಮುಖ ವಸಾಹತು ಕೇಂದ್ರವಾಗಿತ್ತು
Image Credit : Gemini AI

ಗೋವಾ ಪೋರ್ಚುಗೀಸರ ಪ್ರಮುಖ ವಸಾಹತು ಕೇಂದ್ರವಾಗಿತ್ತು

ಗೋವಾ ಪೋರ್ಚುಗೀಸರ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ಗೋವಾವನ್ನು ಪೋರ್ಚುಗೀಸರು ತಮ್ಮ ವಸಾಹತುವನ್ನಾಗಿಸಿಕೊಂಡರು. ಇದಷ್ಟೇ ಅಲ್ಲದೇ ಭಾರತದಲ್ಲಿ ಕಾರ್ಯಾಚರಣೆ ಮಾಡಲು ಗೋವಾವನ್ನೇ ತಮ್ಮ ಭದ್ರನೆಲೆ ಮಾಡಿಕೊಂಡರು. ಅರೇಬಿಯನ್ ಸಮುದ್ರದ ತೀರದಲ್ಲಿರುವ ಈ ನಗರವು ಪೋರ್ಚುಗೀಸರ ಪ್ರಮುಖ ವ್ಯಾಪಾರ ಬಂದರಾಗಿ ಅಭಿವೃದ್ದಿ ಪಡಿಸಿದರು. ಇದರ ಜತೆಗೆ ತಮ್ಮ ನೆಲೆಯನ್ನು ಭದ್ರಪಡಿಸಿಕೊಂಡರು.

45
ಬ್ರಿಟಿಷರು ಗೋವಾದ ಮೇಲೆ ಎಂದಿಗೂ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ:
Image Credit : Getty

ಬ್ರಿಟಿಷರು ಗೋವಾದ ಮೇಲೆ ಎಂದಿಗೂ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ:

ಬ್ರಿಟಿಷರು ಮತ್ತು ಪೋರ್ಚುಗೀಸರು ಪ್ರತಿಸ್ಪರ್ಧಿ ವಸಾಹತುಶಾಹಿ ಶಕ್ತಿಗಳಾಗಿದ್ದರೂ ಮತ್ತು ಹಲವಾರು ಬಾರಿ ಘರ್ಷಣೆ ನಡೆಸಿದರೂ, ಬ್ರಿಟಿಷರು ಗೋವಾವನ್ನು ವಶಪಡಿಸಿಕೊಳ್ಳುವಲ್ಲಿ ಎಂದಿಗೂ ಯಶಸ್ವಿಯಾಗಲಿಲ್ಲ. ಭಾರತೀಯ ಉಪಖಂಡದ ಬಹುಭಾಗದಲ್ಲಿ ಬ್ರಿಟಿಷ್ ಆಳ್ವಿಕೆ ವಿಸ್ತರಿಸುತ್ತಿದ್ದಾಗಲೂ, ಈ ಪ್ರದೇಶವು ಸುಮಾರು 400 ವರ್ಷಗಳ ಕಾಲ ಪೋರ್ಚುಗೀಸ್ ಆಡಳಿತದ ಅಡಿಯಲ್ಲೇ ಮುಂದುವರಿಯಿತು.

55
ಗೋವಾ 1961ರಲ್ಲಿ ಭಾರತದೊಂದಿಗೆ ವಿಲೀನಗೊಂಡಿತು:
Image Credit : AI

ಗೋವಾ 1961ರಲ್ಲಿ ಭಾರತದೊಂದಿಗೆ ವಿಲೀನಗೊಂಡಿತು:

1947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದ ನಂತರವೂ ಗೋವಾ ಪೋರ್ಚುಗೀಸ್ ಪ್ರದೇಶವಾಗಿಯೇ ಉಳಿದಿತ್ತು. ಪೋರ್ಚುಗೀಸ್ ಆಳ್ವಿಕೆಯನ್ನು ಕೊನೆಗೊಳಿಸಲು ಭಾರತ ಸರ್ಕಾರವು ನಡೆಸಿದ ಸೇನಾ ಕಾರ್ಯಾಚರಣೆಯ ನಂತರ, 1961ರಲ್ಲಿ ಇದು ಅಧಿಕೃತವಾಗಿ ಭಾರತದ ಭಾಗವಾಯಿತು. ಗೋವಾದ ವಾಸ್ತುಶಿಲ್ಪ, ಆಹಾರ ಮತ್ತು ಸಂಸ್ಕೃತಿಯಲ್ಲಿ ಇಂದಿಗೂ ಪೋರ್ಚುಗೀಸ್ ಪ್ರಭಾವವನ್ನು ಕಾಣಬಹುದು.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಭಾರತ
ಬ್ರಿಟಿಷ್ ಸೇನೆ
ಗೋವಾ

Latest Videos
Recommended Stories
Recommended image1
Paper Leak: ಗರ್ಲ್‌ಫ್ರೆಂಡ್‌ಗಾಗಿ ಪ್ರಶ್ನೆಪತ್ರಿಕೆ ತಂದಿದ್ದ ಭೂಪ, ಬ್ರೇಕಪ್ ನಂತರ ರಹಸ್ಯ ಬಯಲು! ಮುಂದೆ ಆಗಿದ್ದೇನು?
Recommended image2
₹1.8 ಕೋಟಿಯ ಮನೆ ಮಾರಿ ಬೈಕ್ ಖರೀದಿಸಿದ ಸ್ಟಾರ್ಟ್‌ಅಪ್ ಉದ್ಯಮಿ! ಕಾರಣ ಕೇಳಿದರೆ ನೀವು ಶಾಕ್ ಆಗ್ತೀರಾ!
Recommended image3
ಸಂದೀಪ್ ರೆಡ್ಡಿ ವಂಗಾ: 'ಸ್ಪಿರಿಟ್‌'ಗಿಂತ ರಾಜಮೌಳಿಯ 'ವಾರಣಾಸಿ' ದೊಡ್ಡ ಚಿತ್ರ.. ಸನ್ನೆ ಮಾಡಿದ್ಯಾಕೆ ಈ ನಿರ್ದೇಶಕರು?
Related Stories
Recommended image1
ಗೋವಾ ಕ್ಯಾಸಿನೋ ಪ್ಲಾನ್ ಮಾಡಿದ್ದೀರಾ? ಹೊಸ ನಿಯಮ ಜಾರಿ, ಯಾರಿಗೆಲ್ಲಾ ಪ್ರವೇಶ ಬ್ಯಾನ್?
Recommended image2
ಕರಾವಳಿಗೆ ಖುಷಿ, ಸೂರತ್-ಮಂಗಳೂರು ಸ್ಪೆಷಲ್ ರೈಲು ಶಾಶ್ವತ ಸೇವೆಗೆ ಪರಿವರ್ತಿಸಿದ ರೈಲ್ವೆ ಇಲಾಖೆ, ಗೋವಾ ಈಗ ಹತ್ತಿರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved