ಡಯಟ್‌ನಿಂದ ಗರ್ಭಿಣಿ ಶುಗರ್‌ ಕಡಿಮೆ ಮಾಡಿಕೊಳ್ಬೋದಾ?

ಇತ್ತೀಚಿನ ವರ್ಷಗಳಲ್ಲಿ ಶುಗರ್‌ ಅಥವಾ ಡಯಾಬಿಟಿಸ್‌ ಹಲವರನ್ನು ಕಾಡುತ್ತಿರುವ ಸಮಸ್ಯೆ. ಇದಕ್ಕೆ ನಿಯಮಿತವಾಗಿ ಔಷಧಿ ತೆಗೆದುಕೊಳ್ಳುವ ಜೊತೆಗೆ ಸಮತೋಲಿತ ಆಹಾರವನ್ನು ಸೇವಿಸ್ಬೇಕು. ಆದರೆ ಗರ್ಭಾವಸ್ಥೆಯಲ್ಲಿ ಮಧುಮೇಹದ ಸಮಸ್ಯೆಯಿದ್ದರೆ ಏನ್ಮಾಡ್ಬೇಕು?

Share this Video
  • FB
  • Linkdin
  • Whatsapp

ತಾಯ್ತನ ಅನ್ನೋದು ಪ್ರತಿ ಹೆಣ್ಣಿನ ಜೀವನದಲ್ಲೂ ಅತ್ಯಂತ ಮಹತ್ವದ್ದಾಗಿದೆ. ಸುರಕ್ಷಿತ ತಾಯ್ತನವನ್ನು ಪ್ರತಿಯೊಬ್ಬ ಮಹಿಳೆಯರೂ ಬಯಸ್ತಾರೆ. ಆದರೆ ಅದಕ್ಕಾಗಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದೂ ಮುಖ್ಯ. ಹೀಗಾಗಿ ಗರ್ಭಧಾರಣೆಯ ಸಂದರ್ಭ ಮಹಿಳೆ ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು. ತನ್ನ ಆರೋಗ್ಯದ ಬಗ್ಗೆ ಅತಿ ಹೆಚ್ಚು ಕಾಳಜಿಯನ್ನು ವಹಿಸಬೇಕಾಗುತ್ತದೆ. ಆದರೆ ಕೆಲ ಗರ್ಭಿಣಿಯರು ಶುಗರ್ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಗರ್ಭಾವಸ್ಥೆಯ ಸಂದರ್ಭದಲ್ಲಿ ರಕ್ತದಲ್ಲಿ ಸಕ್ಕರೆ ಅಂಶದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಎಚ್ಚರಿಕೆ ವಹಿಸುವುದು ಅಗತ್ಯ. ಇಂಥವರು ಏನ್ಮಾಡ್ಬೇಕು? ಡಯಟ್‌ನಿಂದ ಗರ್ಭಿಣಿ ಶುಗರ್‌ ಕಡಿಮೆ ಮಾಡಿಕೊಳ್ಬೋದಾ? ಈ ಬಗ್ಗೆ ಮಾಹಿತಿಯನ್ನು ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಅರುಣಾ ಮುರಳೀಧರ್ ಮಾಹಿತಿ ನೀಡಿದ್ದಾರೆ.

ಮಗುವಿಗೆ ಹೆಚ್ಚು ಸಮಯ ಹಾಲು ಕುಡಿಸಿದ್ರೆ ತಾಯಿ ಸೌಂದರ್ಯ ಹಾಳಾಗುತ್ತಾ?

Related Video