ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!

ಸೀರಿಯಲ್ ನಟಿ ಜೋಶಿತಾ ಮತ್ತು ಪತಿ ಸುರೇಶ್ ಅವರ ಪ್ರೇಮ ವಿವಾಹವು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪರಸ್ಪರ ಹಲ್ಲೆ ಮತ್ತು ಕಿರುಕುಳದ ಆರೋಪಗಳನ್ನು ಮಾಡುತ್ತಿರುವ ದಂಪತಿ, ತಮ್ಮ ಒಂದೂವರೆ ವರ್ಷದ ಮಗುವಿಗಾಗಿ ನಡುರಸ್ತೆಯಲ್ಲಿ ಗಲಾಟೆ ಮಾಡಿಕೊಂಡಿದ್ದು, ಪ್ರಕರಣ ತನಿಖಾ ಹಂತದಲ್ಲಿದೆ.

Share this Video
  • FB
  • Linkdin
  • Whatsapp

ಬೆಂಗಳೂರು (ಡಿ.18): ಪ್ರೀತಿಸಿ ಮದುವೆಯಾಗಿದ್ದ ಸೀರಿಯಲ್ ನಟಿ ಜೋಶಿತಾ ಮತ್ತು ಸಂಘವೊಂದರ ರಾಜ್ಯಾಧ್ಯಕ್ಷ ಸುರೇಶ್ ಅವರ ದಾಂಪತ್ಯ ಜೀವನ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. 'ನೀನೇ ಬೇಕು' ಎಂದು ಹಠ ಹಿಡಿದು ಒಂದಾದ ಈ ಜೋಡಿ, ಮದುವೆಯಾಗಿ 2 ವರ್ಷ ಕಳೆಯುವಷ್ಟರಲ್ಲಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಾ ಬೀದಿ ರಂಪಾಟಕ್ಕಿಳಿದಿದ್ದಾರೆ.

ಪ್ರಕರಣದ ಹಿನ್ನೆಲೆ
ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದ ಜೋಶಿತಾ ಹಾಗೂ ಸುರೇಶ್ ಪೋಷಕರಿಗೆ ತಿಳಿಯದಂತೆ ವಿವಾಹವಾಗಿದ್ದರು. ಆರಂಭದಲ್ಲಿ ವಿರೋಧ ವ್ಯಕ್ತಪಡಿಸಿದ್ದ ಪೋಷಕರು ನಂತರ ಈ ಜೋಡಿಯನ್ನು ಒಪ್ಪಿಕೊಂಡಿದ್ದರು. ಇವರಿಗೆ ಈಗ ಒಂದೂವರೆ ವರ್ಷದ ಮಗುವಿದೆ. ಆದರೆ, ಕಳೆದ ಕೆಲವು ತಿಂಗಳಿಂದ ದಂಪತಿಗಳ ನಡುವೆ ವಿರಸ ಉಂಟಾಗಿದ್ದು, ಜಗಳ ವಿಕೋಪಕ್ಕೆ ಹೋಗಿದೆ. ನಟಿ ಜೋಶಿತಾ ತನ್ನ ಪತಿ ಸುರೇಶ್ ವಿರುದ್ಧ ಹಲ್ಲೆ ಮತ್ತು ಕಿರುಕುಳದ ಗಂಭೀರ ಆರೋಪ ಮಾಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಮಗುವಿಗಾಗಿ ನಡುರಸ್ತೆಯಲ್ಲಿ ಗಲಾಟೆ 

ಈ ಕಥೆಗೆ ಹೊಸ ತಿರುವು ಸಿಕ್ಕಿದ್ದು ಮಗುವಿನ ವಿಚಾರದಲ್ಲಿ. ಗಂಡನಿಂದ ಮುಕ್ತಿ ಬೇಕು ಎಂದು ಹೊರಬಂದಿದ್ದ ನಟಿ ಜೋಶಿತಾ, ಇತ್ತೀಚೆಗೆ ತನ್ನ ಒಂದೂವರೆ ವರ್ಷದ ಮಗುವನ್ನು ಗಂಡನ ಬಳಿಯೇ ಬಿಟ್ಟು ಬರಲು ಹೋಗಿದ್ದರು ಎನ್ನಲಾಗಿದೆ. ಈ ವೇಳೆ ನಡುರಸ್ತೆಯಲ್ಲೇ ಇಬ್ಬರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಸುರೇಶ್ ಈ ಘಟನೆಯನ್ನು ಫೇಸ್‌ಬುಕ್ ಲೈವ್ ಮಾಡುವ ಮೂಲಕ ಹೆಂಡತಿ ಮತ್ತು ಅತ್ತೆಯ ನಡವಳಿಕೆಯನ್ನು ಜನರೆದುರು ತೆರೆದಿಟ್ಟಿದ್ದಾನೆ. ಮಗುವನ್ನು ಪೊಲೀಸರ ಸಮ್ಮುಖದಲ್ಲೇ ಹಸ್ತಾಂತರಿಸು ಎಂದು ಸುರೇಶ್ ಪಟ್ಟು ಹಿಡಿದಾಗ ಗಲಾಟೆ ತಾರಕಕ್ಕೇರಿ ಹಲ್ಲೆಯ ಹಂತಕ್ಕೆ ತಲುಪಿದೆ.

ಆರೋಪ ಮತ್ತು ಪ್ರತ್ಯಾರೋಪ 

ನಟಿ ಮತ್ತು ಆಕೆಯ ತಾಯಿ 'ಸುರೇಶ್ ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ, ಮದುವೆಗೆ ಮೊದಲೇ ಮೋಸ ಮಾಡಿದ್ದಾನೆ' ಎಂದು ಆರೋಪಿಸಿದರೆ, ಸುರೇಶ್ ಮಾತ್ರ 'ತನ್ನ ಹೆಂಡತಿ ಮಗುವನ್ನೂ ಬೇಡವೆಂದು ರಸ್ತೆಯಲ್ಲಿ ಎಸೆದು ಹೋಗುತ್ತಿದ್ದಾಳೆ' ಎಂಬ ವಿಡಿಯೋ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾನೆ. ಈ ವಿಡಿಯೋಗಳು ಈಗ ಅಮ್ಮ-ಮಗಳ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ. ಪ್ರೀತಿಯಿಂದ ಆರಂಭವಾದ ಈ ಸಂಸಾರ ಈಗ ದ್ವೇಷದ ದಳ್ಳುರಿಯಲ್ಲಿ ಬೇಯುತ್ತಿದೆ. ಇಬ್ಬರ ಅಹಂಕಾರ ಮತ್ತು ಜಗಳದ ನಡುವೆ ಒಂದೂವರೆ ವರ್ಷದ ಹಸುಗೂಸು ಅನಾಥವಾಗುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Related Video