
ಇನ್ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
ಆತ ಬ್ಯುಸಿನೆಸ್ ಮ್ಯಾನ್.. ಅಪ್ಪ ಮಾಡ್ತಿದ್ದ ಮೆಟಲ್ ಬ್ಯುಸಿನೆಸ್ ಅನ್ನೇ ನೋಡಿಕೊಳ್ತಿದ್ದ.. ಇನ್ನೇನು ವಯಸಿಗೆ ಬಂದ ಮಗನಿಗೆ ಮದುವೆ ಮಾಡೋಣ ಅಂತ ಹೆತ್ತವರು ಒಳ್ಳೆ ಹುಡುಗಿ ನೋಡಿ ಮದುವೆ ನಿಶ್ಚಯ ಮಾಡ್ತಾರೆ.. ಇವತ್ತಿಗೇ ಮದುವೆ ನಿಶ್ಚಯವಾಗಿತ್ತು.
ಆತ ಬ್ಯುಸಿನೆಸ್ ಮ್ಯಾನ್.. ಅಪ್ಪ ಮಾಡ್ತಿದ್ದ ಮೆಟಲ್ ಬ್ಯುಸಿನೆಸ್ ಅನ್ನೇ ನೋಡಿಕೊಳ್ತಿದ್ದ.. ಇನ್ನೇನು ವಯಸಿಗೆ ಬಂದ ಮಗನಿಗೆ ಮದುವೆ ಮಾಡೋಣ ಅಂತ ಹೆತ್ತವರು ಒಳ್ಳೆ ಹುಡುಗಿ ನೋಡಿ ಮದುವೆ ನಿಶ್ಚಯ ಮಾಡ್ತಾರೆ.. ಇವತ್ತಿಗೇ ಮದುವೆ ನಿಶ್ಚಯವಾಗಿತ್ತು.. ಎಲ್ಲಾ ಅಂದುಕೊಂಡಂತಾಗಿದ್ದಿದ್ರೆ ಇಷ್ಟೊತ್ತಿಗೆ ಆತ ಹೆಂಡತಿ ಜೊತೆ ಚೌಟ್ರಿಯಿಂದ ಮನೆಗೆ ಹೋಗಿರುತ್ತಿದ್ದ.. ಆದ್ರೆ ಇನ್ನೇನು ಗಂಡು ಹೆಣ್ಣು ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಡಬೇಕು.. ಆದ್ರೆ ಅಷ್ಟರಲ್ಲೇ ಯುವತಿಯೊಬ್ಬಳು ಬಂದು ಮದುವೆ ಗಂಡು ನನ್ನ ಗಂಡ ಅಂತ ಹೆಳಿಬಿಟ್ಟಿದ್ದಳು.. ನನ್ನ ಗಂಡನಿಗೆ ಮದುವೆ ಮಾಡಬೇಡಿ ಅಂತ ಗೋಳಾಡೋದಕ್ಕೆ ಶುರು ಮಾಡಿದ್ಲು.. ಅಷ್ಟಕ್ಕೂ ಯಾರು ಆ ಯುವತಿ..? ಆಕೆಯನ್ನ ಆ ವರ ಈಗಾಗಲೇ ಮದುವೆಯಾಗಿದ್ದನಾ..? ಒಂದು ಮುರಿದು ಬಿದ್ದ ಮದುವೆ ಕಥೆಯೇ ಇವತ್ತಿನ ಎಫ್ಐಆರ್. ಇಲ್ಲಿ ವಿದ್ಯಾಳ ದೈರ್ಯವನ್ನ ಮೆಚ್ಚಲೇಬೇಕು.. ಆಕೆ ಕೊಂಚ ಯಾಮಾರಿದ್ದಿದ್ರೂ ರಿಷಭ್ ಕೈತಪ್ಪಿ ಹೋಗುತ್ತಿದ್ದ.
ಸಣ್ಣ ವಯಸಿನಲ್ಲಿ ಪ್ರೀತಿ ಗೀತಿ ಅಂತ ತಲೆಕೆಡಸಿಕೊಳ್ಳೋರಿಗೆ ಇವತ್ತಿನ ಎಪಿಸೋಡ್ ಪಾಠ. ಆತ ಅನಿವಾಸಿ ಭಾರತೀಯನಿಗೆ .. ಹುಟ್ಟಿ ಬೆಳೆದಿದ್ದೆಲ್ಲಾ ಅಲ್ಲೇ .. ಆದ್ರೆ ಆತನ ಪೂರ್ವಜರು ಬೆಂಗಳೂರಿನಲ್ಲಿ ಒಂದಷ್ಟು ಆಸ್ತಿ ಮಾಡಿದ್ರು.. ಅಪ್ಪ ಹಾಕಿದ ಆಲದ ಮರದಲ್ಲೇ ಜೀವನ ಕಳೆಯೋಣ ಅಂತ ಆತ 10 ವರ್ಷದ ಹಿಂದೆ ವಾಪಸ್ ಬಂದಿದ್ದ.. ಆದ್ರೆ ಇತ್ತಿಚೆಗೆ ಮಗನ ಓದಿಗೆ ಹಣ ಬೇಕಿತ್ತು.. ಹೀಗಾಗಿ ಇದ್ದ ಮನೆಯನ್ನ ಮಾರಾಟ ಮಾಡೋದಕ್ಕೆ ನಿರ್ಧರಿಸಿದ.. ಇಬ್ಬರು ಬಂದು ಆ ಮನೆಯನ್ನ ಸೇಲ್ ಡೀಡ್ ಮಾಡಿಸಿಕೊಂಡರಂತೆ.. ಅಷ್ಟೇ ಅಲ್ಲ 17 ಕೋಟಿ ಚೆಕ್ ಕೂಡ ಕೊಟ್ಟಿದ್ರಂತೆ.. ಅದ್ರೆ ಚೆಕ್ ತಗೆದುಕೊಂಡು ಬ್ಯಾಂಕ್ಗೆ ಹೋದ್ರೆ ಚೆಕ್ಕೇ ಸರಿ ಇಲ್ಲ ಅಂದುಬಿಟ್ಟರಂತೆ.. ಅಲ್ಲಿಗೆ 17 ಕೋಟಿಗೆ ಪಂಗನಾಮ. ಬೆಂಗಳೂರಿನಲ್ಲಿ ಒಂದಿಂಚು ಭೂಮಿ ತಗೆದುಕೊಳ್ಳೋದು ಎಷ್ಟು ಕಷ್ಟ ಅನ್ನೋದು ಎಲ್ಲರಿಗೂ ಗೊತ್ತಿದೆ.. ಆದ್ರೆ ಇಂಥ ಪರಿಸ್ಥಿತಿಯಲ್ಲಿ ಮೋಸ ಮಾಡಿಕೊಂಡವರೂ ಹುಟ್ಟಿಕೊಂಡುಬಿಟ್ರೆ ಆ ದೇವರೇ ಗತಿ ಅಂತ.