
ಕಬ್ಬಡಿಯಲ್ಲಿ ಏನೆಲ್ಲಾ ಕಠಿಣ ರೂಲ್ಸ್ ಇರುತ್ತೆ? GI-PKL Umpire ಅಜಯ್ ಚೌಹಾಣ್ ಜೊತೆ ಮಾತುಕತೆ
ಜಾಗತಿಕ ಭಾರತೀಯ-ಪ್ರವಾಸಿ ಕಬಡ್ಡಿ ಲೀಗ್ (GI-PKL) ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ಡಿಜಿಟಲ್ ಅಭಿಯಾನ ಆರಂಭಿಸಿದೆ. ಪುರುಷರ ಮತ್ತು ಮಹಿಳೆಯರ ವಿಭಾಗಗಳ ಫೈನಲ್ ಪಂದ್ಯಗಳು ಇಂದು ನಡೆಯಲಿವೆ.
ಬೆಂಗಳೂರು (ಏ.30): ಜಾಗತಿಕ ಭಾರತೀಯ-ಪ್ರವಾಸಿ ಕಬಡ್ಡಿ ಲೀಗ್ (GI-PKL) ಭಾರತದ ಸ್ಥಳೀಯ ಕ್ರೀಡೆಯನ್ನು ಪ್ರಪಂಚಕ್ಕೆ ಪ್ರಚಾರ ಮಾಡುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದೆ, ಏಪ್ರಿಲ್ 27 ರ ಭಾನುವಾರ ನ್ಯೂಯಾರ್ಕ್‌ನ ಐಕಾನಿಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಅದರ ಡಿಜಿಟಲ್ ಅಭಿಯಾನ ಆರಂಭವಾಗಿದ್ದು, ಇಂದು ಫೈನಲ್ ಪಂದ್ಯ ನಡೆಯಲಿದೆ.
GI PKL 2025: ಫೈನಲ್ ಪಂದ್ಯಕ್ಕಿಂದು ಕ್ಷಣಗಣನೆ!
ಇದಕ್ಕೂ ಮುನ್ನ GI-PKL ಅಂಪೈರ್ ಆಗಿರುವ ಅಜಯ್ ಚೌಹಾಣ್ ಟೂರ್ನಿಯ ಬಗ್ಗೆ ಮಾತನಾಡಿದ್ದು, ಕಬಡ್ಡಿಯಲ್ಲಿ ಏನೆಲ್ಲಾ ಕಠಿಣ ನಿಯಮಗಳು ಇರಲಿದೆ ಅನ್ನೋದರ ಬಗ್ಗೆ ಮಾತನಾಡಿದ್ದಾರೆ.
ಜಾಗತಿಕ ಭಾರತೀಯ-ಪ್ರವಾಸಿ ಕಬಡ್ಡಿ ಲೀಗ್ ಫೈನಲ್‌ನಲ್ಲಿ ಪುರುಷರ ವಿಭಾಗದಲ್ಲಿ ಮರಾಠಿ ವಲ್ಚರ್ ಹಾಗೂ ತಮಿಳ್ ಲಯನ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ. ಇನ್ನು ಮಹಿಳೆಯರ ವಿಭಾಗದಲ್ಲಿ ತಮಿಳ್ ಲಯೆನೆಸ್ ಹಾಗೂ ತೆಲುಗು ಚೀಥಾಸ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.