45, ಮಾರ್ಕ್ ಜೊತೆ ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರ: ಡಿ.25ಕ್ಕೆ ಮೋಹನ್ ಲಾಲ್ 'ವೃಷಭ' ತೆರೆಗೆ

ಡಿಸೆಂಬರ್ 25ಕ್ಕೆ ಮಾರ್ಕ್​, 45 ಸಿನಿಮಾಗಳ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ತೆರೆಗೆ ಬರ್ತಾ ಇದೆ. ಮೋಹಲ್ ಲಾಲ್ ನಟನೆಯ ವೃಷಭ ಸಿನಿಮಾ ಡಿಸೆಂಬರ್ 25ಕ್ಕೆ ರಿಲೀಸ್ ಆಗ್ತಾ ಇದ್ದು, ಇದ್ರಲ್ಲಿ ಕನ್ನಡಿಗರ ಕಮಾಲ್ ಇದೆ.

Share this Video
  • FB
  • Linkdin
  • Whatsapp

ಡಿಸೆಂಬರ್ 25ಕ್ಕೆ ಮಾರ್ಕ್​, 45 ಸಿನಿಮಾಗಳ ಜೊತೆಗೆ ಮತ್ತೊಂದು ಪ್ಯಾನ್ ಇಂಡಿಯಾ ಮೂವಿ ತೆರೆಗೆ ಬರ್ತಾ ಇದೆ. ಮೋಹಲ್ ಲಾಲ್ ನಟನೆಯ ವೃಷಭ ಸಿನಿಮಾ ಡಿಸೆಂಬರ್ 25ಕ್ಕೆ ರಿಲೀಸ್ ಆಗ್ತಾ ಇದ್ದು, ಇದ್ರಲ್ಲಿ ಕನ್ನಡಿಗರ ಕಮಾಲ್ ಇದೆ. ಡಿಸೆಂಬರ್ 25ಕ್ಕೆ ಕನ್ನಡದ ಎರಡು ಬಿಗ್ ಸಿನಿಮಾಗಳು ಪ್ಯಾನ್ ಇಂಡಿಯಾ ತೆರೆಗೆ ಬಂದು ಅಬ್ಬರಿಸಲಿವೆ. 45 ಮತ್ತು ಮಾರ್ಕ್ ಸಿನಿಮಾಗಳು ಕ್ರಿಸ್ ಮಸ್ ದಿನ ತೆರೆಗೆ ಬರ್ತಾ ಇರೋದು ಗೊತ್ತೇ ಇದೆ. ಇವುಗಳ ಜೊತೆಗೆ ಇನ್ನೊಂದು ಪ್ಯಾನ್ ಇಂಡಿಯಾ ಮೂವಿ ಅಂದೇ ರಿಲೀಸ್ ಆಗ್ತಾ ಇದೆ. ಅದುವೇ ವೃಷಭ.

ಲಾಲೆಟ್ಟೆನ್ ಮೋಹನ್ ಲಾಲ್ ನಟನೆಯ ಈ ಮೂವಿಯಲ್ಲೂ ಹಲವು ಕನ್ನಡಿಗರ ಕೊಡುಗೆ ತುಂಬಾನೇ ಇದೆ. ಅಸಲಿಗೆ ಇದು ಕನ್ನಡ ನಿರ್ದೇಶಕ ನಂದಕಿಶೋರ್ ನಿರ್ದೇಶನದ ಸಿನಿಮಾ. ರಾಗಿಣಿ ಈ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಇನ್ನೂ ನಮ್ಮ ಕನ್ನಡದ ಹುಡುಗ ಸಮರ್ಜಿತ್ ಲಂಕೇಶ್ ಈ ಚಿತ್ರದಲ್ಲಿ ಮೋಹನ್ ಲಾಲ್ ಪುತ್ರ ಪಾತ್ರದಲ್ಲಿ ನಟಿಸಿದ್ದಾರೆ. ಗೌರಿ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಎಂಟ್ರಿ ಕೊಟ್ಟ ಸಮರ್ಜಿತ್ , ವೃಷಭ ಮೂಲಕ ಪ್ಯಾನ್ ಇಂಡಿಯಾ ಸದ್ದು ಮಾಡೋದಕ್ಕೆ ಸಜ್ಜಾಗ್ತಾ ಇದ್ದಾರೆ. ಅದ್ರಲ್ಲೂ ಮೋಹಲ್​ಲಾಲ್ ರಂಥಾ ಲೆಜೆಂಡ್ ಜೊತೆ ನಟಿಸಿರೋ ಸಮರ್ಜಿತ್ ಸಿನಿದುನಿಯಾದಲ್ಲಿ ಸದ್ದು ಮಾಡ್ತಾ ಇದ್ದಾರೆ.

Related Video