
ಕಾಲಿವುಡ್ ಬ್ಯೂಟಿ ನಿವೇತಾ ಥಾಮಸ್‌ರ ಆ ಫೋಟೋ ವೈರಲ್: 'ನಾನವಳಲ್ಲ' ಎಂದ ಚತುರ್ಭಾಷಾ ನಟಿ
ಇತ್ತೀಚೆಗೆ ಎಐ, ಡೀಪ್ ಫೇಕ್ ಫೋಟೋ, ವಿಡಿಯೋಗಳು ಅದೆಷ್ಟರ ಮಟ್ಟಿಗೆ ವೈರಲ್ ಆಗ್ತಾ ಇವೆ ಅಂದ್ರೆ ನಿಜ ಯಾವುದು ಫೇಕ್ ಯಾವುದು ಗೊತ್ತೇ ಆಗಲ್ಲ. ಅದ್ರಲ್ಲೂ ಸಿನಿಮಾ ನಟಿಯರಿಗೆ ಈ ಎಐ ಫೇಕ್ ಫೋಟೋಗಳ ಕಾಟ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ.
ಇತ್ತೀಚೆಗೆ ಎಐ, ಡೀಪ್ ಫೇಕ್ ಫೋಟೋ, ವಿಡಿಯೋಗಳು ಅದೆಷ್ಟರ ಮಟ್ಟಿಗೆ ವೈರಲ್ ಆಗ್ತಾ ಇವೆ ಅಂದ್ರೆ ನಿಜ ಯಾವುದು ಫೇಕ್ ಯಾವುದು ಗೊತ್ತೇ ಆಗಲ್ಲ. ಅದ್ರಲ್ಲೂ ಸಿನಿಮಾ ನಟಿಯರಿಗೆ ಈ ಎಐ ಫೇಕ್ ಫೋಟೋಗಳ ಕಾಟ ಸಿಕ್ಕಾಪಟ್ಟೆ ಜಾಸ್ತಿ ಆಗಿದೆ. ರಶ್ಮಿಕಾ, ಶ್ರೀಲೀಲಾ ಬಳಿಕ ಮತ್ತೊಬ್ಬ ನಟಿ ಈ ಎಐ ಅವಾಂತರ ವಿರುದ್ದ ಧ್ವನಿ ಎತ್ತಿದ್ದಾರೆ. ಯೆಸ್ ಇತ್ತೀಚಿಗೆ ಎಲ್ಲೆಲ್ಲೂ ಎಐ ಫೋಟೋ ವಿಡಿಯೋಗಳ ಅಬ್ಬರ ಜೋರಾಗಿದೆ. ಸುಳ್ಳು ಯಾವುದು ನಿಜ ಯಾವುದು ಅಂತ ಗೊತ್ತೇ ಆಗದಷ್ಟು ಎಐ ಫೋಟೋ, ವಿಡಿಯೋಗಳು ವೈರಲ್ ಆಗ್ತಾ ಇವೆ. ಅದ್ರಲ್ಲೂ ನಟಿಮಣಿಯರ ಹಸಿ ಬಿಸಿ ಫೋಟೋ ವಿಡಿಯೋಗಳು ಸೋಷಿಯಲ್ ಮಿಡಿಯಾ ತುಂಬಾ ತುಂಬಿಕೊಂಡಿವೆ. ಆರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಡಿಪ್ ಫೇಕ್ ವಿಡಿಯೊವೊಂದು ಬಂದು ಬಿರುಗಾಳಿ ಎಬ್ಬಿಸಿತ್ತು.
ಆಗ ಇಡೀ ಚಿತ್ರರಂಗ ಅದನ್ನ ಖಂಡಿಸಿತ್ತು. ಆ ವಿಡಿಯೋ ಮಾಡಿದ ವ್ಯಕ್ತಿಯನ್ನ ಬಂಧಿಸಲಾಗಿತ್ತು. ಆದ್ರೆ ಈ ಘಟನೆ ಬಳಿಕ ಎಐ ಅವಾಂತರಗಳು ಕಡಿಮೆ ಆಗೋ ಬದಲು ಹೆಚ್ಚೇ ಆಗೋದಕ್ಕೆ ಶುರುವಾದವು. ಈಗ ಎಐ , ಡೀಫ್ ಫೇಕ್ ವಿಡಿಯೋಗಳು ಅದ್ಯಾವ ಮಟ್ಟಕ್ಕೆ ಹೋಗಿವೆ ಇವುಗಳನ್ನ ನಿಯಂತ್ರಿಸೋದು ಅಸಾಧ್ಯ ಅನ್ನುವ ಸ್ಥಿತಿ ಬಂದುಬಿಟ್ಟಿದೆ. ಇತ್ತೀಚಿಗೆ ಶ್ರೀಲೀಲಾ ಇಂಥಾ ವಿಡಿಯೋಗಳ ಬಗ್ಗೆ ಧ್ವನಿ ಎತ್ತಿದ್ರು. ಕೆಲ ದಿನಗಳ ಹಿಂದೆ ಶ್ರೀಲೀಲಾ ಮತ್ತು ಕೆಲ ನಟಿಯರ ಬಾತ್ ರೂಮ್ ಫೋಟೋಗಳನ್ನ ಎಐನಲ್ಲಿ ಜನರೇಟ್ ಮಾಡಿ ಹರಿಬಿಡಲಾಗಿತ್ತು. ಇದನ್ನ ಕಂಡು ಶಾಕ್ ಆಗಿದ್ದ ಶ್ರೀಲೀಲಾ ಸುದೀರ್ಘ ಪೋಸ್ಟ್ ವೊಂದನ್ನ ಹಾಕಿ ಕಳವಳ ವ್ಯಕ್ತಪಡಿಸಿದ್ರು. ಹೌದು ಇತ್ತೀಚಿಗೆ ನಿವೇತಾ ಥಾಮಸ್ ರ ಒಂದು ಹಾಟ್ ಹಾಟ್ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡ್ತಾ ಇತ್ತು.
ಈ ಫೋಟೋ ಅದ್ಯಾಪರಿ ವೈರಲ್ ಆಗಿತ್ತು ಅಂದ್ರೆ ಖುದ್ದು ನಿವೇತಾ ಥಾಮಸ್ ನಾನವಳಲ್ಲ.. ನಾನವಳಲ್ಲ ಅಂತ ಸ್ಪಷ್ಟನೆ ಕೊಡಬೇಕಾಗಿ ಬಂದಿದೆ. ನಿವೇತಾ ಥಾಮಸ್, ತಮಿಳಿನಲ್ಲಿ ಕಮಲ್ ಹಾಸನ್ ನಟನೆಯ ಪಾಪನಾಶಂ ಚಿತ್ರದಲ್ಲಿ ಕಮಲ್ ಮಗಳಾಗಿ ನಟಿಸಿ ಫೇಮಸ್ ಆದವರು. ನಂತರ ಜಿಲ್ಲಾ ಚಿತ್ರದಲ್ಲಿ ವಿಜಯ್ ತಂಗಿಯಾಗಿ ನಟಿಸಿದ್ದರು. ರಜನಿಕಾಂತ್ ಮಗಳಾಗಿ ದರ್ಬಾರ್ ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಸದ್ಯ ಟಾಲಿವುಡ್ನಲ್ಲಿ ನಿವೇತಾ ಬ್ಯುಸಿಯಾಗಿದ್ದಾರೆ. ಇಂಥಾ ಚತುರ್ಭಾಷಾ ನಟಿ ಸದ್ಯ ಎಐ ಕಾಟಕ್ಕೆ ಸುಸ್ತಾಗಿದ್ದಾರೆ. ಸುಧಿರ್ಘವಾದ ಪೋಸ್ಟ್ ಹಾಕಿ ಎಐ ವಿರುದ್ದ ಧ್ವನಿಯೆತ್ತಿದ್ದಾರೆ. ಇಂಥಾ ಫೋಟೊಗಳನ್ನ ಹಾಕುವವರ ವಿರುದ್ದ ಕಾನೂನು ಕ್ರಮ ಕೈಗೊಳ್ತಿನಿ ಅಂತ ಎಚ್ಚರಿಸಿದ್ದಾರೆ. ಒಟ್ನಲ್ಲಿ ಇತ್ತೀಚಿಗೆ ಈ ಎಐ ಅವಾಂತರದ ಬಗ್ಗೆ ದಿನಕೊಬ್ಬ ನಟಿ ಧ್ವನಿ ಎತ್ತತಾ ಇದ್ದಾರೆ. ಆದ್ರೆ ಎಐ ಅವಾಂತರಗಳು ಮಾತ್ರ ಕಮ್ಮಿ ಆಗ್ತಿಲ್ಲ..!