ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!

ರೀಲ್ಸ್ ಮೂಲಕ ಖ್ಯಾತರಾದ ದಂಪತಿಯ ಸಂಸಾರದಲ್ಲಿ ಬಿರುಕು ಮೂಡಿದ್ದು, ಪತ್ನಿ ತನ್ನ ಗಂಡ ಬೇಡ, ಪೊಲೀಸಪ್ಪನೇ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ಗಂಡ ತಾನು ಸರಿ ಇದ್ದೇನೆ ಎಂದು ವಾದಿಸುತ್ತಿದ್ದು, ಇವರಿಬ್ಬರ ಜಗಳದ ನಡುವೆ ಮಗುವಿನ ಭವಿಷ್ಯ ಅತಂತ್ರವಾಗಿದೆ.  

Share this Video
  • FB
  • Linkdin
  • Whatsapp

ಅವಳಿಗೆ ಈಗಾಗಲೇ ಎರಡು ಮದುವೆಯಾಗಿದೆ.. ಅವನ ಹೆಂಡತಿ ಮಕ್ಕಳು ಮನೆಯಲ್ಲಿದ್ದಾರೆ.. ಆದ್ರೂ ಇಬ್ಬರೂ ರೀಲ್ಸ್​ಗಳನ್ನ ಮಾಡಿಕೊಂಡು ಯುವ ಪ್ರೇಮಿಗಳಂತೆ ಫೋಸ್​ ಕೊಡ್ತಿದ್ದಾರೆ.. ಯಾಕಮ್ಮ ಹೀಗೆ ಮಾಡ್ತಿದ್ಯಾ ಅಂತ ಆಕೆಯನ್ನ ಕೆಳಿದ್ರೆ ಆಕೆ ಬೊಟ್ಟು ಮಾಡ್ತಿರೋದು ಗಂಡನ ಕಡೆಗೆ.. ಅವನು ಸರಿ ಇದ್ದಿದ್ರೆ ನಾನ್ಯಾಕೆ ಹೀಗಾಗುತ್ತಿದ್ದೆ ಅಂತಿದ್ದಾಳೆ.. ಅಷ್ಟೇ ಅಲ್ಲ ನನಗೆ ಗಂಡ ಬೇಡವೇ ಬೇಡ.. ಪೊಲೀಸಪ್ಪನೇ ಸಾಕು ಅಂತಿದ್ದಾಳೆ. ಮೊದಲ ಗಂಡನಿಗೆ ಸೋಡ ಚೀಟಿ ಕೊಟ್ಟು ಈ ಮಂಜುನಾಥನನ್ನ ಪ್ರೀತಿಸಿ ಮದುವೆಯಾಗಿದ್ದಳು ಆದ್ರೆ ಈಗ ಅವನು ಬೇಡ ಪೊಲೀಸಪ್ಪನೇ ಒಳ್ಳೆಯವನು ಅಂತಿದ್ದಾಳೆ. ಮಗುವನ್ನ ನಾನು ಸಾಕುತ್ತೇನೆ ಅಂತ ಹೆಳುತ್ತಿದ್ದಾಳೆ. ಬಟ್​​ ಈಕೆಗೆ ಅವನು ಮಗ ಆದ್ರೆ ಪೊಲೀಸಪ್ಪನಿಗೆ.? ಆತ ತನ್ನ ಮಗನಂತೆಯೇ ನೋಡಿಕೊಳ್ತಾನೆ.. ಈಗ ನೋಡಿದ್ರೆ ಆ ಮಗ ಕೂಡ ನನಗೆ ಅಪ್ಪನೇ ಬೇಕು ಅಂತಿದ್ದಾನೆ. ಅಷ್ಟೇ ಅಲ್ಲ ವೀಕ್ಷಕರೇ. ಗಂಡನನ್ನ ನಾನೇ ಸಾಕುತ್ತಿದ್ದೆ ಅಂತ ಹೆಳುತ್ತಿದ್ದಾಳೆ. ಆತ ನೋಡಿದ್ರೆ ನಾನು ಶ್ರೀರಾಮಚಂದ್ರ ಅನ್ನುತ್ತಿದ್ದಾನೆ. ಈಕೆ ಇಲ್ಲಿಗೆ ನಿಲ್ಲಿಸೋದಿಲ್ಲ. ಅವನ ಜನ್ಮವನ್ನ ಜಾಲಾಡಿದ್ದಾಳೆ.

ಪೊಲೀಸರಂತೂ ಇಬ್ಬರನ್ನೂ ಕೂರಿಸಿ ಮಾತನ್ನಾಡಿದ್ದಾರೆ.. ಅವಳಿಗೆ ಇವನು ಬೇಡ.. ಇವನಿಗೆ ಅವಳು ಬೇಡ.. ಆದ್ರೂ ಈ ವಿಷಯವನ್ನ ಬೀದಿ ರಂಪಾಟ ಮಾಡುತ್ತಿದ್ದಾರೆ.. ಇನ್ನೂ ಇವರಿಬ್ಬರ ಮಧ್ಯೆ ಬಂದ ಪೊಲೀಸಪ್ಪ ಮಾತ್ರ ಮಾತನ್ನಾಡಿಸೋಣ ಅಂದ್ರೆ ಕೈಗೆ ಸಿಗುತ್ತಿಲ್ಲ. ಸದ್ಯ ರೀಲ್ಸ್​ ಜೋಡಿ ಒಂದಾಗಿದೆ.. ಗಂಡನೂ ಏನೂ ತಲೆಕೆಡಸಿಕೊಳ್ತಿಲ್ಲ. ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಹಾಗೆ ಇವತ್ತು ನಿಜಕ್ಕೂ ಬಡವಾಗಿರೋದು ಮೋನಿಕಾ ಮತ್ತು ಮಂಜುನಾಥನ ಮಗ.. ಇನ್ನೂ ಏನೂ ಅರಿಯದ ಮಗ ದೊಡ್ಡವನ್ನಾದ ಮೇಲೆ ನನ್ನ ಜೀವನದಲ್ಲಿ ಇಷ್ಟೆಲ್ಲಾ ಆಗಿತ್ತು ಅನ್ನೋದು ಗೊತ್ತಾದ್ರೆ ಆತನಿಗೆ ಹೇಗೆಲ್ಲಾ ಅನ್ನಿಸಬೇಡ.

Related Video