ಮಗುವಿಗೆ ಹೆಚ್ಚು ಸಮಯ ಹಾಲು ಕುಡಿಸಿದ್ರೆ ತಾಯಿ ಸೌಂದರ್ಯ ಹಾಳಾಗುತ್ತಾ?
ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಎದೆಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲ ಪೋಷಕಾಂಶಗಳ ಜೊತೆಗೆ ಅಗತ್ಯ ರೋಗ ನಿರೋಧಕ ಶಕ್ತಿ ಅಡಗಿದ್ದು ಪ್ರತಿಯೊಬ್ಬ ತಾಯಂದಿರು ಮಗುವಿಗೆ ನಿರ್ಧಿಷ್ಟ ಸಮಯದ ತನಕ ಎದೆಹಾಲು ಉಣಿಸಲೇಬೇಕೆಂದು ತಜ್ಞರು ಸೂಚಿಸುತ್ತಾರೆ. ಆದರೆ ಮಗುವಿಗೆ ಹೆಚ್ಚು ಸಮಯ ಹಾಲು ಕುಡಿಸಿದ್ರೆ ತಾಯಿ ಸೌಂದರ್ಯ ಹಾಳಾಗುತ್ತಾ?
ನವಜಾತ ಶಿಶುವಿನ ಆರೋಗ್ಯಕ್ಕೆ ತುಂಬಾ ಮುಖ್ಯವಾದುದು ತಾಯಿಯ ಎದೆಹಾಲು. ತಾಯಿಯ ಎದೆಹಾಲಿನಿಂದಲೇ ಮಕ್ಕಳು ಆರೋಗ್ಯಯುತವಾಗಿ ಬೆಳೆಯುತ್ತಾರೆ. ತಾಯಿಯ ಎದೆಹಾಲು ಅಮೃತಕ್ಕೆ ಸಮಾನವಾಗಿದ್ದು, ಎದೆಹಾಲಿನಲ್ಲಿ ಮಗುವಿಗೆ ಬೇಕಾದ ಎಲ್ಲ ಪೋಷಕಾಂಶಗಳ ಜೊತೆಗೆ ಅಗತ್ಯ ರೋಗ ನಿರೋಧಕ ಶಕ್ತಿ ಅಡಗಿದ್ದು ಪ್ರತಿಯೊಬ್ಬ ತಾಯಂದಿರು ಮಗುವಿಗೆ ನಿರ್ಧಿಷ್ಟ ಸಮಯದ ತನಕ ಎದೆಹಾಲು ಉಣಿಸಲೇಬೇಕೆಂದು ತಜ್ಞರು ಸೂಚಿಸುತ್ತಾರೆ.
ಆದರೆ ಇತ್ತೀಚಿನ ಕೆಲ ವರ್ಷಗಳಿಂದ ಕೆಲ ಮಹಿಳೆಯರು ಮಗುವಿಗೆ ಹಾಲು ಕುಡಿಸಿದರೆ ತಮ್ಮ ಸೌಂದರ್ಯ ಹಾಳಾಗುತ್ತೆ ಅನ್ನೋ ಕಾರಣಕ್ಕೆ ಮಗುವಿಗೆ ಬಾಟಲ್ ಹಾಲು, ಪ್ಯಾಕೆಟ್ ಹಾಲು ಕುಡಿಸುವ ಅಭ್ಯಾಸ ರೂಢಿಸಿಕೊಂಡಿದ್ದಾರೆ. ಮೊದಲೆಲ್ಲಾ ಸೆಲೆಬ್ರಿಟಿಗಳಷ್ಟೇ ಇದನ್ನು ಮಾಡುತ್ತಿದ್ದರು. ಆದರೆ ಇತ್ತೀಚಿಗೆ ಜನಸಾಮಾನ್ಯರಿಗೂ ಇದರ ಚಾಳಿ ಹತ್ತಿದೆ. ಈ ಅಭ್ಯಾಸ ಎಷ್ಟರಮಟ್ಟಿಗೆ ಸರಿ. ಮಗುವಿಗೆ ಹೆಚ್ಚು ಸಮಯ ಹಾಲು ಕುಡಿಸಿದ್ರೆ ತಾಯಿ ಸೌಂದರ್ಯ ಹಾಳಾಗುತ್ತಾ? ಈ ಬಗ್ಗೆ ಆಹಾರ ತಜ್ಞೆ ಡಾ. ಹೆಚ್.ಎಸ್. ಪ್ರೇಮಾ ಮಾಹಿತಿ ನೀಡಿದ್ದಾರೆ.
ಮಾಂಸ ತಿಂದು ದೇವಸ್ಥಾನಕ್ಕೆ ಹೋಗಲೇಬಾರದು ಅನ್ನೋದ್ಯಾಕೆ? ತಜ್ಞರ ಉತ್ತರ ಇಲ್ಲಿದೆ