ಮುಡಾ ಪ್ರಕರಣದಿಂದ ಪಕ್ಷಕ್ಕೆ ಮುಜುಗರ, ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್‌ನಲ್ಲೆ ಒತ್ತಾಯ!

ಸಿದ್ದರಾಮಯ್ಯ ರಾಜೀನಾಮೆ ಕಾಂಗ್ರೆಸ್ ಪಕ್ಷದಲ್ಲಿ ಒತ್ತಾಯ,ಕಾನೂನು ಸಂಕಷ್ಟದಿಂದ ತಪ್ಪಿಸಿಕೊಳ್ಳಲು ಸಿದ್ದರಾಮಯ್ಯ ಸತತ ಚರ್ಚೆ, ಕೋರ್ಟ್ ಆದೇಶ ನೀಡಿದರೂ ಸಿಎಂ ಸಿದ್ದರಾಮಯ್ಯ ವಿರುದ್ದ ದಾಖಲಾಗದ FIR ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

Share this Video
  • FB
  • Linkdin
  • Whatsapp

ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೂಗು ಇದೀಗ ಕಾಂಗ್ರೆಸ್ ಪಕ್ಷದಲ್ಲೇ ಕೇಳಿಬರುತ್ತಿದೆ. ಮಾಜಿ ವಿಧಾನಸಭೆ ಸ್ಪೀಕರ್, ಕಾಂಗ್ರೆಸ್ ನಾಯಕ ಕೆಬಿ ಕೋಳಿವಾಡ ಇದೀಗ ಸಿದ್ದರಾಮಯ್ಯ ರಾಜೀನಾಮೆ ಸೂಕ್ತ ಎಂದಿದ್ದಾರೆ. ಆರೋಪ ಕೇಳಿಬಂದಿರುವ ಕಾರಣ ಸಿದ್ದರಾಮಯ್ಯ ರಾಜೀನಾಮೆ ನೀಡಿ, ಆರೋಪ ಮುಕ್ತರಾಗಿ ಮತ್ತೆ ಅಧಿಕಾರ ಸ್ವೀಕರಿಸಬೇಕು ಎಂದಿದ್ದಾರೆ. ಇಲ್ಲಿದ್ದರೆ, ಪ್ರಧಾನಿ ಮುಂದೆ ಮೂರು ರಾಜ್ಯಗಳ ಚುನಾವಣೆಯಲ್ಲಿ ಇದೇ ಅಸ್ತ್ರ ಬಳಸಿಕೊಳ್ಳುತ್ತಾರೆ. ಇದರಿಂದ ಪಕ್ಷಕ್ಕೆ ಹಿನ್ನಡೆಯಾಗಲಿದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video