
PSI recruitment scam ಮಗನಿಗಾಗಿ ಮನೆ ಮಾರಿ ₹50 ಲಕ್ಷ ನೀಡಿದ್ದ ತಂದೆ ಅರೆಸ್ಟ್
ಪುತ್ರನನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮಾಡಲು ತನ್ನ ಮನೆಯನ್ನು ಮಾರಿ ₹50 ಲಕ್ಷ ವ್ಯಯಿಸಿದ್ದ ಅಭ್ಯರ್ಥಿ ಮತ್ತು ಅವರ ತಂದೆಯನ್ನು ಬಂಧಿಸಲಾಗಿದೆ.
ಬೆಂಗಳೂರು(ಮೇ.3): ಪಿಎಸ್ಐ ನೇಮಕಾತಿ ಅಕ್ರಮ (PSI Recruitment Scam) ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿಗೆ (CID) ಬಗೆದಷ್ಟು ಹೊಸ ಹೊಸ ಹಗರಣಗಳು ಹೊರಬರುತ್ತಲೇ ಇವೆ. ಇದೀಗ ಅಕ್ರಮದ ಹಾದಿ ಹಿಡಿದವರ ಕಣ್ಣೀರ ಕಥೆ ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ತಮ್ಮ ಪುತ್ರನನ್ನು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (PSI) ಮಾಡಲು ತನ್ನ ಮನೆಯನ್ನು ಮಾರಿ ₹50 ಲಕ್ಷ ವ್ಯಯಿಸಿದ್ದ ಅಭ್ಯರ್ಥಿ ಮತ್ತು ಅವರ ತಂದೆಯನ್ನು ಬಂಧಿಸಲಾಗಿದೆ.
PROFESSOR RECRUITMENT SCAM ಪ್ರೊ. ನಾಗರಾಜ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ
ಮಗನಿಗಾಗಿ ಮನೆ ಮಾರಿ ಮಧ್ಯವರ್ತಿ ಚಂದ್ರಕಾಂತ ಕುಲಕರ್ಣಿಗೆ (Chandrakant Kulkarni ) ₹50 ಲಕ್ಷ ನೀಡಿದ್ದ ಅಭ್ಯರ್ಥಿ ಪ್ರಭು ಎಂಬುವವರ ತಂದೆ ಶರಣಪ್ಪ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಮಗನಿಗೆ ಸರಕಾರಿ ಉದ್ಯೋಗ ಕೊಡಿಸುವ ಆಸೆಯಲ್ಲಿ ಈಗ ನಿವೇಶನವೂ ಹೋಯ್ತು. ಹಣವೂ ವಂಚಕರ ಪಾಲಾಯ್ತು.