Professor Recruitment Scam ಪ್ರೊ. ನಾಗರಾಜ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯ

ನೇಮಕಾತಿ  ಪ್ರಶ್ನೆಗಳ ಸೋರಿಕೆ ಪ್ರಕರಣ ಹಿನ್ನಲೆಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಕುಲಸಚಿವ ಪ್ರೊ. ನಾಗರಾಜ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಕವಿವಿಯಲ್ಲಿ ಕೂಗೂ ಕೇಳಿಬರುತ್ತಿದೆ .

Professor Recruitment Question Paper Leak case Insist on disciplinary action against professor Nagaraj gow

ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 

ಧಾರವಾಡ (ಮೇ.3) :  ನೇಮಕಾತಿ  ಪ್ರಶ್ನೆಗಳ ಸೋರಿಕೆ (Professor Recruitment Scam ) ಪ್ರಕರಣ ಹಿನ್ನಲೆಯಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ (karnataka university) ಕುಲಸಚಿವ ಪ್ರೊ. ನಾಗರಾಜ (professor Nagaraj ) ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಕವಿವಿಯಲ್ಲಿ ಕೂಗೂ ಕೇಳಿಬರುತ್ತಿದೆ . ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣಕ್ಕೆ ಸಂಬಂದಿಸಿದ ನಗರದ ಕರ್ನಾಟಕ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವ ಪ್ರೊ. ಎಚ್. ನಾಗರಾಜ ಸಿಐಡಿ ಪೊಲೀಸರಿಂದ ಬಂಧನವಾದ ಬೆನ್ನಲ್ಲೇ ಅವರ ಅಮಾನತು ಅಥವಾ ಶಿಸ್ತು ಕ್ರಮ ಸನ್ನಿಹಿತವಾಗಿದೆ.

ಮೈಸೂರು ವಿಶ್ವವಿದ್ಯಾಲಯದ ಭೂಗೋಳಶಾಸ್ತ್ರ ಪ್ರಾಧ್ಯಾಪಕರಾಗಿದ್ದ ಪ್ರೊ. ನಾಗರಾಜ ವರ್ಷದ ಹಿಂದೆ ನಿಯೋಜನೆ ಗೊಂಡಿದ್ದರು. ಆಮೇಲೆ ಕವಿವಿ ಕುಲಸಚಿವ ಹುದ್ದೆ ವಹಿಸಿಕೊಂಡಿದ್ದರು. ಈಗಾಗಲೇ ಸಿಐಡಿ ಅಧಿಕಾರಿಗಳಿಂದ ಬಂಧಿತರಾಗಿರುವ ಭೂಗೋಳಶಾಸ್ತ್ರ ಸಂಶೋಧನಾ ಅಭ್ಯರ್ಥಿ ಮೈಸೂರಿನ ಸೌಮ್ಯಾ ಅವರಿಗೆ ಪ್ರೊ. ನಾಗರಾಜ ಮಾರ್ಗದರ್ಶನಕರಾಗಿದ್ದಾರೆ.

INDIA POST OFFICE RECRUITMENT 2022: ಬರೋಬ್ಬರಿ 38,926 ಹುದ್ದೆಗಳಿಗೆ ನೇಮಕಾತಿ

ಈ ಹಿನ್ನೆಲೆಯಲ್ಲಿ ಪ್ರೊ. ನಾಗರಾಜ ಅವರನ್ನು ಬೆಂಗಳೂರಿಗೆ ಕರೆಸಿದ್ದ ಸಿಐಡಿ ಅಧಿಕಾರಿಗಳ ತಂಡ, ತೀವ್ರ ವಿಚಾರಣೆಗೊಳಪಡಿಸಿತ್ತು. ಸೌಮ್ಯಾ ಬಳಿ ದೊರೆತಿರುವ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳು ಹಾಗೂ ಪ್ರೊ. ನಾಗರಾಜ ಪರೀಕ್ಷೆಗೆಂದು ಸಿದ್ಧಪಡಿಸಿ ಮನೆಯಲ್ಲಿಟ್ಟಿದ್ದ ಪ್ರಶ್ನೆಗಳಿಗೂ ಹೋಲಿಕೆಯಾಗಿದೆ. ಹಾಗಾಗಿ ಪ್ರೊ. ನಾಗರಾಜ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 ಶಾಸಕ ಬೆಲ್ಲದ ಶಿಫಾರಸು : ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯ ಪ್ರಶ್ನೆಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಬಂದಿತರಾಗಿರುವ ಪ್ರೊ. ನಾಗರಾಜ, ಸ್ಥಳೀಯ ಶಾಸಕ ಅರವಿಂದ ಬೆಲ್ಲದ ಅವರ ಶಿಫಾರಸಿನೊಂದಿಗೆ ನಿಯೋಜನೆ ಮೇಲೆ ಮೌಲ್ಯಮಾಪನ ಕುಲಸಚಿವರಾಗಿ ನೇಮಕಗೊಂಡಿದ್ದಾರೆ. 2021 ರ ಮೇ 22 ರಂದು ಶಾಸಕ ಅರವಿಂದ ಬೆಲ್ಲದ ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಅವರಿಗೆ ಶಿಫಾರಸು ಪತ್ರ ನೀಡಿದ್ದರು.

SAI Recruitment 2022: ಕ್ರೀಡಾ ಪ್ರಾಧಿಕಾರದಿಂದ ಯುವ ವೃತ್ತಿಪರರ ನೇಮಕಾತಿ

ರಾಜ್ಯಪಾಲರಿಗೆ, ಉನ್ನತ ಶಿಕ್ಷಣ ಸಚಿವರಿಗೆ ಪತ್ರ ಬರೆದ ಗುಡಸಿ: ಇನ್ನು ಕವಿವಿ ಕುಲಪತಿ ಗುಡಸಿ ಅವರು ವಿಶ್ವವಿದ್ಯಾಲಯದ ಕಾನೂನು ಶೆಲ್ ನಲ್ಲಿರುವ ಚರ್ಚಿಸಿ, ಸದ್ಯ ಮುಂದಿನ ಕ್ರಮದ ಬಗ್ಗೆ ಉನ್ನತ ಶಿಕ್ಷಣ ಸಚಿವರಿಗೆ ಮತ್ತು ರಾಜ್ಯ ಪಾಲರಿಗೆ ಪತ್ರ ಬರೆದಿದ್ದಾರೆ..ಸಚಿವರ ಎನು ಉತ್ತರ ಕೊಡ್ತಾರೆ ಅದರ ಮೆಲೆ ನಾನು ಪ್ರೋ.ನಾಗರಾಜ್ ಅವರ ಮೆಲೆ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಗುಡಸಿ ಅವರು ಹೇಳಿದ್ದಾರೆ. 

Latest Videos
Follow Us:
Download App:
  • android
  • ios