ಶಿವರಾತ್ರಿಯಂದೇ ಕಾಟನ್‌ಪೇಟೆ ಶಿವ ಮಟಾಷ್..! ಅವನ ಹೆಣ ಹಾಕಿದ್ದು ಮಾಜಿ ಗೆಳೆಯರು..!

ಕುಡಿತ ಬಿಡಿಸಲು ಬೇಸತ್ತು ಮಗನನ್ನೇ ಕೊಂದ ತಂದೆ..!
ಆತ್ಮಹತ್ಯೆ ಅಂದಿದ್ರು.. ತನಿಖೇಲಿ ಗೊತ್ತಾಯ್ತು ಕೊಲೆ..!
ಮಗನನ್ನ ಕೊಂದು ಆತ್ಮಹತ್ಯೆ ನಾಟಕವಾಡಿದ್ದ ತಂದೆ..!

Share this Video
  • FB
  • Linkdin
  • Whatsapp

ಅದು ಒಂದಲ್ಲ ಎರಡಲ್ಲ ಬರೋಬ್ಬರಿ 7 ವರ್ಷಗಳ ದ್ವೇಷ. ಒಂದೇ ಏರಿಯಾದ ಎರಡು ಗುಂಪಿನ ಮಧ್ಯೆ ಆಗಾಗ ಗಲಾಟೆಗಳು(Conflicts) ನಡೀತಾನೆ ಇತ್ತು. ಎಷ್ಟರ ಮಟ್ಟಿಗೆ ಅಂದ್ರೆ ಇವ್ರ ರೈವಲ್ರಿಗೆ ಒಂದೆರಡು ತಲೆಗಳು ಉರುಳಿದೆ..ಅಷ್ಟೇ ಅಲ್ಲಾ ಕಾಟ ಕೊಟ್ಟು ಏರಿಯಾ ಬಿಡುವಂತೆ ಮಾಡಿದ್ದವನಿಗೆ ಈ ಭೂಲೋಕವೇ ಬಿಡುವಂತೆ ಮಾಡಿಬಿಟ್ಟಿದ್ರು. ಮಚ್ಚು ಹಿಡಿದ ಮೇಲೆ ಮಚ್ಚಿನಿಂದಲೇ ಹೆಣವಾಗ್ತಾರೆ ಅನ್ನೋದಕ್ಕೆ ಇದೂ ಒಂದು ಉದಾಹರಣೆ ಅಷ್ಟೇ. ಇನ್ನೂ ಮತ್ತೊಂದು ಸ್ಟೋರಿಯಲ್ಲಿ ಆತ ಪಾನಿಪುರಿ(PaniPuri) ಅಂಗಡಿ ಇಟ್ಕೊಂಡಿದ್ದ. ತಂದೆಯಿಂದ(Father) ಬಂದಿದ್ದ ಒಳ್ಳೆ ಮನೆ ಇತ್ತು. ಹೆಂಡತಿ ಮತ್ತು ಒಬ್ಬ ಮಗ(Son), ಎಲ್ಲವೂ ಚೆನಾಗಿತ್ತು.‌ ಆದ್ರೆ ಎದೆ ಮಟ್ಟಿಗೆ ಬೆಳೆದಿದ್ದ ಮಗ ದಾರಿ ತಪ್ಪಿಬಿಟ್ಟಿದ್ದ. ಇಪ್ಪತ್ತರ ವಯಸ್ಸಿಗೆ ಕುಡಿತದ ದಾಸನಾಗಿದ್ದ. ಚಟ ಬಿಡಿಸಲು ಹರಸಹಾಸ ಪಟ್ಟಿದ್ದ ತಂದೆ ಕೊನೆಗೆ ಮಗನನ್ನೇ ಕೊಂದು(Murder) ಬಿಟ್ಟಿದ್ದಾನೆ. ಅಷ್ಟೇ ಅಲ್ಲ ಮಗನನ್ನ ಕೊಂದು ಆತ್ಮಹತ್ಯೆ ನಾಟಕವಾಡಲು ಮುಂದಾಗಿದ್ದ. ಆದ್ರೆ ಅವನ ನಾಟಕವನ್ನ ಪೊಲೀಸರು ಬಂದ್ ಮಾಡಿದ್ರು.

ಇದನ್ನೂ ವೀಕ್ಷಿಸಿ: Crop Destroyed: ಕೈ ಕೊಟ್ಟ ಬೋರ್‌ವೆಲ್‌..ನೀರಿಲ್ಲದೇ ಕಟಾವಿಗೆ ಬಂದ ಬೆಳೆಯನ್ನೇ ನಾಶಪಡಿಸಿದ ರೈತ !

Related Video