Crop Destroyed: ಕೈ ಕೊಟ್ಟ ಬೋರ್‌ವೆಲ್‌..ನೀರಿಲ್ಲದೇ ಕಟಾವಿಗೆ ಬಂದ ಬೆಳೆಯನ್ನೇ ನಾಶಪಡಿಸಿದ ರೈತ !

ನೀರಿನ ಸಮಸ್ಯೆ ಉಂಟಾದ ಹಿನ್ನೆಲೆ ಚಿಕ್ಕಬಳ್ಳಾಪುರದಲ್ಲಿ ರೈತ ಅಖಿಲ್ ರೆಡ್ಡಿ ಬೆಳೆಯನ್ನು ನಾಶ ಪಡಿಸಿದ್ದಾರೆ.
 

Share this Video
  • FB
  • Linkdin
  • Whatsapp

ಚಿಕ್ಕಬಳ್ಳಾಪುರ: ಬೇಸಿಗೆ ಬಂತೆಂದರೆ ಸಾಕು ನೀರಿಗೆ ತತ್ವಾರ ಶುರುವಾಗಿದೆ. ನೀರಿನ ಸಮಸ್ಯೆಯಿಂದ ಕಟಾವಿಗೆ ಬಂದ ಬೆಳೆಯನ್ನೇ(Crop) ರೈತ ನಾಶಪಡಿಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಬೀಡ ಮಾಕಲ ಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಹತ್ತು ದಿನಗಳ ಹಿಂದೆ ಇದ್ದಕ್ಕಿದ್ದಂತೆ ಬೋರ್‌ವೆಲ್‌ನಲ್ಲಿ ನೀರು ನಿಂತು ಹೋಗಿದೆ. ಬೆಳೆಗೆ ಪರ್ಯಾಯ ನೀರಿನ ವ್ಯವಸ್ಥೆ(water problem) ಇಲ್ಲದೆ ಕಂಗಾಲಾಗಿದ್ದರು. ಅಕ್ಕ ಪಕ್ಕದ ರೈತರ ಬೋರ್‌ವೆಲ್‌ನಲ್ಲೂ ನೀರು ಕಡಿಮೆಯಾದರಿಂದ ಮತ್ತಷ್ಟು ಸಮಸ್ಯೆಯಾಗಿದೆ. ಟ್ಯಾಂಕರ್‌ನಲ್ಲಿ ನೀರು ಹಾಕಲು ಸಾಧ್ಯವಾಗದೆ, ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಕಾಲಿ ಫ್ಲವರ್ ಬೆಳೆದಿದ್ದರು. ಈಗಾಗಲೇ 60,000ಕ್ಕೂ ಹೆಚ್ಚು ಖರ್ಚು ಮಾಡಿದ್ದ ರೈತ ಅಖಿಲ್ ರೆಡ್ಡಿ(Farmer Akhil Reddy). ಬೆಳೆ ಒಣಗುತ್ತಿರುವುದನ್ನ ನೋಡಿ ರೋಟರಿ ಹಾಕಿ ರೈತ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ವೀಕ್ಷಿಸಿ:  Pratap Simha-Yaduveer: ಯದುವೀರ್‌ ಸ್ಫರ್ಧಿಸಿದ್ರೆ ಅವರ ಪರ ಕೆಲಸ ಮಾಡಿ ಗೆಲ್ಲಿಸ್ತೇನೆ: ಪ್ರತಾಪ್‌ ಸಿಂಹ

Related Video