ಸಿಲಿಕಾನ್‌ ಸಿಟಿಯಲ್ಲಿ ಗಾಂಜಾ ಘಾಟು: ಪುಷ್ಪ ಸಿನಿಮಾ ರೀತಿ ಸಪ್ಲೈ ಮಾಡ್ತಿದ್ದ ಗ್ಯಾಂಗ್‌ ಅಂದರ್‌

ಗಾಂಜಾ ಸಪ್ಲೈ ಮಾಡುತ್ತಿದ್ದ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರಿಂದ 12 ಕೋಟಿ ರೂಪಾಯಿ ಬೆಲೆ ಬಾಳುವ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

Share this Video
  • FB
  • Linkdin
  • Whatsapp

ಬೆಂಗಳೂರು: ಸಿಲಿಕಾನ್‌ ಸಿಟಿಯಲ್ಲಿ ಪುಷ್ಪ ಸಿನಿಮಾ(Pushpa Movie) ನೋಡಿ ಗಾಂಜಾ(Marijuana) ಸಪ್ಲೈ ಮಾಡುತ್ತಿದ್ದವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸುಮಾರು 12 ಕೋಟಿ ಬೆಲೆಬಾಳುವ 1500 ಕೆಜಿ ಗಾಂಜಾವನ್ನು ಸಿಸಿಬಿ(CCB) ವಶಕ್ಕೆ ಪಡೆದಿದೆ. ಈ ಗಾಂಜಾ ಸಪ್ಲೈಯರ್ಸ್‌ ಅಂತಾರಾಜ್ಯದವರಾಗಿದ್ದಾರೆ. ಕಳೆದ ಮೂರು ವಾರಗಳಿಂದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ರು. ಸಲ್ಮಾನ್ ಪಾಷಾ, ಚಂದ್ರು ಭಾನು ಬಿಶ್ಣೋಯ್ ಹಾಗೂ ಲಕ್ಷ್ಮಿ ಮೋಹನ್ ದಾಸ್ ಬಂಧಿತ ಆರೋಪಿಗಳಾಗಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಕೆ ಮಾಡುತ್ತಿದ್ದ ಗೂಡ್ಸ್‌ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಸಿಕ್ರೇಟ್‌ ಕಂಪಾರ್ಟ್‌ ಮೆಂಟ್ ಮೂಲಕ ಸಾವಿರಾರು ಕೆಜಿ ಗಾಂಜಾವನ್ನು ಆಸಾಮಿಗಳು ಸಪ್ಲೈ ಮಾಡುತ್ತಿದ್ದರು. 

ಇದನ್ನೂ ವೀಕ್ಷಿಸಿ:  ಲೋಕಸಭಾ ಚುನಾವಣೆಗೆ ಜೆಡಿಎಸ್‌-ಬಿಜೆಪಿ ಮೈತ್ರಿ ವಿಚಾರ: ಈ ಬಗ್ಗೆ ಸಂಸದೆ ಸುಮಲತಾ ಹೇಳಿದ್ದೇನು ?

Related Video