ಊರ ಹಬ್ಬದಂತೆ ಸನ್ನಿ ಬರ್ತಡೇ ಸೆಲಬ್ರೇಟ್ ಮಾಡಿದ ಫ್ಯಾನ್ಸ್

ಮಾಜಿ ನೀಲಿ ತಾರೆ,ಬಾಲಿವುಡ್ ನಟಿ ಸನ್ನಿ ಲಿಯೂನ್ ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಂಡ್ರು. ಇತ್ತೀಚಿನ ದಿನಗಳಲ್ಲಿ  ಸನ್ನಿ ಲಿಯೋನ್ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

Share this Video
  • FB
  • Linkdin
  • Whatsapp

ಮಾಜಿ ನೀಲಿ ತಾರೆ,ಬಾಲಿವುಡ್ ನಟಿ ಸನ್ನಿ ಲಿಯೂನ್ (Sunny Leone) ಇತ್ತೀಚಿಗಷ್ಟೇ ತಮ್ಮ ಹುಟ್ಟುಹಬ್ಬವನ್ನ (birthday) ಆಚರಣೆ ಮಾಡಿಕೊಂಡ್ರು. ಇತ್ತೀಚಿನ ದಿನಗಳಲ್ಲಿ ಸನ್ನಿ ಲಿಯೋನ್ ತಮ್ಮ ಸಮಾಜಮುಖಿ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.

ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ '777 ಚಾರ್ಲಿ' ಹವಾ

ಸನ್ನಿ ಹುಟ್ಟುಹಬ್ಬವನ್ನ ಮಂಡ್ಯದ ಹುಡುಗರು ಸಂಭ್ರಮದಲ್ಲಿ ಆಚರಣೆ ಮಾಡಿದ್ರು. ಅದನ್ನ ಕಂಡ ಸನ್ನಿ ಲಿಯೋನ್ ಅಭಿಮಾನಿಗಳಿಗೆ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ. ತನ್ನ ಹುಟ್ಟುಹಬ್ಬಕ್ಕೆ ರಕ್ತದಾನ, ಅನ್ನದಾನದಂತಹ ಕಾರ್ಯಕ್ರಮಗಳನ್ನ ಆಯೋಜಿಸಿದ್ದ ಮಂಡ್ಯ ಅಭಿಮಾನಿಗಳ ಕಾರ್ಯವನ್ನು ನಟಿ ಸನ್ನಿ ಲಿಯೋನ್ ಗಮನಿಸಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಕುರಿತು ರಿಯಾಕ್ಟ್ ಮಾಡಿರೋ ಸನ್ನಿ. 'ಇದು ನಂಬಲು ಅಸಾಧ್ಯ. ನಿಮಗೆ ಗೌರವ ಸೂಚಿಸಲು ನಾನೂ ಹೋಗಿ ರಕ್ತದಾನ ಮಾಡುತ್ತೇನೆ. ತುಂಬಾ ಧನ್ಯವಾದಗಳು. ನಿಜವಾಗಿಯೂ ನೀವೆಲ್ಲರೂ ನನಗೆ ತುಂಬಾ ವಿಶೇಷವಾದ ಭಾವನೆ ಮೂಡಿಸುತ್ತೀರಿ. ಲವ್ ಯೂ’ ಎಂದು ಬರೆದುಕೊಂಡಿದ್ದಾರೆ. ಇದನ್ನ ಕಂಡ ಮಂಡ್ಯ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ. 

Related Video