11:51 PM (IST) Sep 04

Karnataka News Live 4th September:ನಿಮ್ಮ ಹಳದಿ ಹಲ್ಲುಗಳು ಮಾಯವಾಗಿ ಫಳಫಳನೆ ಹೊಳೆಯುವಂತೆ ಆಗಲು ಈ ಟ್ರಿಕ್ಸ್‌ ಬಳಸಿ

ಹಳದಿ ಹಲ್ಲುಗಳು ಮತ್ತು ಬಾಯಿಯ ದುರ್ವಾಸನೆಗೆ ಕಾರಣಗಳು ಹಾಗೂ ಪರಿಹಾರವಾಗಿ, ಮನೆಯಲ್ಲೇ ಸುಲಭವಾಗಿ ಹರ್ಬಲ್ ಟೂತ್ ಪೌಡರ್ ತಯಾರಿಸುವ ವಿಧಾನವನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ಬೇವಿನ ಪುಡಿ, ಲವಂಗ, ದಾಲ್ಚಿನ್ನಿ ಮುಂತಾದ ನೈಸರ್ಗಿಕ ಪದಾರ್ಥಗಳನ್ನು ಬಳಸಿ ಇದನ್ನು ತಯಾರಿಸಬಹುದು.
Read Full Story
11:13 PM (IST) Sep 04

Karnataka News Live 4th September:Motor Vehical - ರಸ್ತೆಯಲ್ಲಿ ನಿಮ್ಮ ವಾಹನ ತಡೆದರೆ ತಕ್ಷಣ ದಾಖಲೆ ಕೊಡಬೇಕಾ? ಟ್ರಾಫಿಕ್ ಪೊಲೀಸ್‌-RTO ಅಧಿಕಾರದ ಅಸಲಿ ಸತ್ಯ ಇಲ್ಲಿದೆ!

ರಸ್ತೆಯಲ್ಲಿ ವಾಹನ ತಪಾಸಣೆ ಮಾಡುವಾಗ ಸಂಚಾರ ಪೊಲೀಸ್ ಮತ್ತು ಆರ್‌ಟಿಒ ಅಧಿಕಾರಿಗಳ ಅಧಿಕಾರಗಳಲ್ಲಿ ವ್ಯತ್ಯಾಸವಿದೆ. ಸಂಚಾರ ಪೊಲೀಸರು ನಿಯಮ ಉಲ್ಲಂಘನೆ ಪರಿಶೀಲಿಸಿದರೆ, ಆರ್‌ಟಿಒ ಅಧಿಕಾರಿಗಳು ವಾಹನದ ತಾಂತ್ರಿಕ ಮತ್ತು ಕಾನೂನುಬದ್ಧ ದಾಖಲೆಗಳನ್ನು ತನಿಖೆ ಮಾಡುತ್ತಾರೆ. ಈ ವೇಳೆ, ಚಾಲಕರು ತಮ್ಮ ಹಕ್ಕುಗಳ ಬಗ್ಗೆ ತಿಳಿದಿರುವುದು ಮುಖ್ಯ.
Read Full Story
10:37 PM (IST) Sep 04

Karnataka News Live 4th September:IMD - ಆಗಸ್ಟ್‌ನಲ್ಲಿ 16% ಮಳೆ ಅಭಾವ! ಅಲ್ಲಿಂದ ಹರಿದುಬರುತ್ತಿರುವ ಆ ಗಾಳಿ ರೈತರಿಗೆ ಸಿಹಿಯೋ, ಕಹಿಯೋ?

ಪ್ರಪಂಚದ ಅನೇಕ ಭಾಗಗಳು ಈಗಾಗಲೇ ಪ್ರವಾಹ ಮತ್ತು ತೀವ್ರ ಬರಗಾಲದಿಂದ ನಲುಗುತ್ತಿರುವಾಗ, ಪೆಸಿಫಿಕ್ ಮಹಾಸಾಗರದಲ್ಲಿ ರೂಪುಗೊಳ್ಳುತ್ತಿರುವ ಒಂದು ದೊಡ್ಡ ಹವಾಮಾನ ಬದಲಾವಣೆಯು ಇಡೀ ಜಗತ್ತನ್ನೇ ಅಸ್ತವ್ಯಸ್ತಗೊಳಿಸಲು ಸಜ್ಜಾಗಿದೆ. ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Read Full Story
10:28 PM (IST) Sep 04

Karnataka News Live 4th September:ಕೂಲಿ ಕಾರ್ಮಿಕರ ಕೈಗೆ ಸಿಕ್ತು ಲಕ್ಷಾಂತರ ಮೌಲ್ಯದ ಚಿನ್ನದ ನಿಧಿ - ಮುಂದೇನಾಯ್ತು ಗೊತ್ತಾ?

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಇಂಚಲ ಗ್ರಾಮದಲ್ಲಿ ಕೂಲಿ ಕಾರ್ಮಿಕರಿಗೆ ಗಡಿಗೆಯೊಳಗೆ 14 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. 54.8 ಗ್ರಾಂ ತೂಕದ ಈ ನಾಣ್ಯಗಳ ಮೌಲ್ಯ ಸುಮಾರು 8.27 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

Read Full Story
09:52 PM (IST) Sep 04

Karnataka News Live 4th September:Cricket - ಹಿಟ್‌ಮ್ಯಾನ್ ಅಸಲಿ ವೈರಿ ಯಾರು? ಟೀಂ ಇಂಡಿಯಾದಲ್ಲಿ ನಡೀತಿರೋ ಈ ಕಳಪೆ ಗೇಮ್ ಪ್ಲಾನ್ ಏನು? ಇಲ್ಲಿದೆ ಕಂಪ್ಲೀಟ್‌ ರಿಪೋರ್ಟ್!

ಸಂಪೂರ್ಣ ಫಿಟ್‌ನೆಸ್ ಹೊಂದಿಲ್ಲದ ಆಟಗಾರರನ್ನು ಪದೇ ಪದೇ ತಂಡಕ್ಕೆ ಆಯ್ಕೆ ಮಾಡಲಾಗುತ್ತಿದೆ ಎಂಬ ಟೀಕೆ ಕೇಳಿಬರುತ್ತಿದ್ದರೆ, ಇನ್ನೊಂದೆಡೆ ತಂಡದ ನಾಯಕ ಹಾಗೂ ದಂತಕಥೆ ಬ್ಯಾಟ್ಸಮನ್ ರೋಹಿತ್ ಶರ್ಮಾ ಅವರನ್ನೇ ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪ ವ್ಯಕ್ತವಾಗಿವೆ.

Read Full Story
09:04 PM (IST) Sep 04

Karnataka News Live 4th September:ಸರ್ಕಾರಿ ಶಾಲೆಯಲ್ಲೇ ಸ್ಪೋಕನ್‌ ಇಂಗ್ಲಿಷ್‌ ಕ್ರಾಂತಿ - ಕವನ್ ಮೇಷ್ಟ್ರು ಕಲಿಸಿದ ಪಾಠಕ್ಕೆ ಮಕ್ಕಳೇ ಸಾಕ್ಷಿ!

ಮಂಗಳೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇಂಗ್ಲಿಷ್ ಕಲಿಕೆಯಲ್ಲಿ ಆತ್ಮವಿಶ್ವಾಸ ಮೂಡಿಸಿರುವ ಶಿಕ್ಷಕ ಕವನ್ ಕುಮಾರ್. ಕಳೆದ ಆರು ವರ್ಷಗಳಿಂದ ಪ್ರತಿದಿನ ಬೆಳಗ್ಗೆ ಸ್ಪೋಕನ್‌ ಇಂಗ್ಲಿಷ್‌ ತರಗತಿ ನಡೆಸುತ್ತಿದ್ದಾರೆ.

Read Full Story
08:19 PM (IST) Sep 04

Karnataka News Live 4th September:ಲಾವಾ ಇಲ್ಲದೆ ಜ್ವಾಲಾಮುಖಿ ಹೇಗೆ? - ಬರಟಾಂಗ್ ದ್ವೀಪದ ಈ ನೈಸರ್ಗಿಕ ವಿಸ್ಮಯದ ಬಗ್ಗೆ ಗೊತ್ತಾ?

ಅಂಡಮಾನ್‌ನ ಬರಟಾಂಗ್ ದ್ವೀಪದಲ್ಲಿರುವ ಮಣ್ಣಿನ ಜ್ವಾಲಾಮುಖಿಗಳು ಅಪರೂಪದ ಭೌಗೋಳಿಕ ವಿಸ್ಮಯಗಳಲ್ಲಿ ಒಂದಾಗಿದೆ. ಲಾವಾ ಅಥವಾ ಉರಿಯುವ ಶಿಲಾಪದಾರ್ಥದ ಬದಲು ಭೂಗರ್ಭದಲ್ಲಿನ ಅನಿಲ, ನೀರು ಮತ್ತು ಕೆಸರು ಮೇಲ್ಮೈಗೆ ಹೊರಹೊಮ್ಮಿ ಜ್ವಾಲಾಮುಖಿಯಂತಹ ರಚನೆಯನ್ನು ಸೃಷ್ಟಿಸುತ್ತವೆ.

Read Full Story
08:02 PM (IST) Sep 04

Karnataka News Live 4th September:Cricket - ಸಿಕ್ಸರ್‌ಗಳ ಕಿಂಗ್, ಸೆಂಚುರಿಗಳ ಸರದಾರ! ವಿಶ್ವಕಪ್ ಮೈದಾನದಲ್ಲಿ ‘ರೋಹಿತ್ ಶೋ’ ಹಿಂದಿದೆ ಮುರಿಯಲಾಗದ ದಾಖಲೆ!

ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ವಿಶ್ವಕಪ್ ಇತಿಹಾಸದ ದಾಖಲೆ ಏನು? ಎನ್ನುವುದನ್ನು ನೋಡಿಕೊಂಡು ಬರೋಣ ಬನ್ನಿ!

Read Full Story
07:32 PM (IST) Sep 04

Karnataka News Live 4th September:ಕರ್ನಾಟಕ ಜನತೆಗೆ ಬಸ್ ದರ ಏರಿಕೆ ಶಾಕ್? ಶೀಘ್ರದಲ್ಲೇ ಟಿಕೆಟ್ ಬೆಲೆ ಹೆಚ್ಚಳ ಸೂಚಿಸಿದ ಸಚಿವ

ಕರ್ನಾಟಕ ಜನತೆಗೆ ಬಸ್ ಮತ್ತೊಂದು ದರ ಏರಿಕೆ ಶಾಕ್ ಎದುರಾಗಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಬಸ್ ಪ್ರಯಾಣ ದರಿಕೆ ಸೂಚನೆ ನೀಡಿದ್ದಾರೆ. ಸಾರಿಗೆ ಸಂಸ್ಥೆಗಳ ನಷ್ಟ ಸರಿದೂಗಿಸಲು ದರ ಏರಿಕೆ ಅನಿವಾರ್ಯ ಎಂದಿದ್ದಾರೆ.

Read Full Story
07:17 PM (IST) Sep 04

Karnataka News Live 4th September:ಕ್ಯೂಟ್ ಎಕ್ಸ್‌ಪ್ರೆಷನ್, ಟ್ರೆಂಡಿ ಔಟ್‌ಫಿಟ್ - ಕಮಾಲ್ ಮಾಡ್ತಿದೆ ಆಶಿಕಾ ರಂಗನಾಥ್ ಕಣ್ಣೋಟ!

ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಅವರ ಹೊಸ ಟ್ರೆಂಡಿ ಲುಕ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ‘ಅಮಿಗೋಸ್’, ‘ನಾ ಸಾಮಿ ರಂಗ’ ಸಿನಿಮಾಗಳ ಮೂಲಕ ಟಾಲಿವುಡ್ ಪ್ರೇಕ್ಷಕರಿಗೂ ಪರಿಚಿತರಾಗಿರುವ ಆಶಿಕಾ.

Read Full Story
06:13 PM (IST) Sep 04

Karnataka News Live 4th September:ಬೆಂಗಳೂರು ಐಟಿ ಕೆಲಸ ಬಿಟ್ಟು ಮೈಸೂರಲ್ಲಿ ₹10 ಲಕ್ಷದಿಂದ ಉದ್ಯಮ ಕಟ್ಟಿ ಜಾಗತಿಕವಾಗಿ ಕೋಟಿ ಮೌಲ್ಯಕ್ಕೆ ಬೆಳೆದ ಕನ್ನಡಿಗ!

ಮೈಸೂರಿನ ಸುಪ್ರೀತ್ ಕಶ್ಯಪ್, ತಮ್ಮ ಐಟಿ ಉದ್ಯೋಗವನ್ನು ತೊರೆದು 'ವೆಲ್ಬಿ' ಎಂಬ ಸುಸ್ಥಿರ ಉಡುಪು ಬ್ರ್ಯಾಂಡ್ ಅನ್ನು ಸ್ಥಾಪಿಸಿದರು. ₹10 ಲಕ್ಷದ ಬಂಡವಾಳದಿಂದ ಆರಂಭವಾದ ಈ ಉದ್ಯಮವು ಇಂದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದು, ಮೈಸೂರಿನಲ್ಲೇ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ.
Read Full Story
06:04 PM (IST) Sep 04

Karnataka News Live 4th September:ಹಳದಿ ಸೀರೆಯಲ್ಲಿ ಕಂಗೊಳಿಸಿದ ಈ ಬಿಗ್ ಬಾಸ್ ಬೆಡಗಿ ಯಾರು? ಫೋಟೋಸ್ ನೋಡಿದ್ರೆ ನೀವು ಫಿದಾ!

ಬಿಗ್ ಬಾಸ್ ಖ್ಯಾತಿಯ ಕಿರುತೆರೆ ನಟಿ ಸ್ಪಂದನಾ ಸೋಮಣ್ಣ ಅವರು ಹಳದಿ ಸೀರೆಯಲ್ಲಿ ಮಾಡಿರುವ ಹೊಸ ಫೋಟೋಶೂಟ್ ಇದೀಗ ಅಭಿಮಾನಿಗಳ ಗಮನ ಸೆಳೆಯುತ್ತಿದೆ. ನದಿ ತೀರದ ಪ್ರಕೃತಿ ಸೌಂದರ್ಯದ ನಡುವೆ ಸ್ಪಂದನಾ ನೀಡಿರುವ ಸಿಂಪಲ್ ಆ್ಯಂಡ್ ಕ್ಲಾಸಿಕ್ ಪೋಸ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಪಡೆಯುತ್ತಿವೆ.

Read Full Story
05:36 PM (IST) Sep 04

Karnataka News Live 4th September:ಯಶ್‌ಗಾಗಿ ಅಪಾಯಕಾರಿ ಸ್ಟಂಟ್ ಮಾಡಿದ ಯುವಕ ಇವರೇ - 'ಟಾಕ್ಸಿಕ್' ಕ್ಲೈಮ್ಯಾಕ್ಸ್‌ ಹಿಂದಿದೆ ಈ ಸೀಕ್ರೆಟ್

‘ಟಾಕ್ಸಿಕ್’ ಸಿನಿಮಾದಲ್ಲಿ ಯಶ್ ಅವರ ಟಿಕೆಟ್ ಪಾತ್ರದ ಹಲವು ಕಷ್ಟಕರ ಆ್ಯಕ್ಷನ್ ಮತ್ತು ಸ್ಟಂಟ್ ದೃಶ್ಯಗಳಿಗೆ ಶಾಕ್ಯಾ ಶರ್ಮಾ ಸ್ಟಂಟ್ ಡಬಲ್ ಆಗಿ ಕೆಲಸ ಮಾಡಿದ್ದಾರೆ. ‘ಗೋಟ್’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು.

Read Full Story
05:18 PM (IST) Sep 04

Karnataka News Live 4th September:'ಕನ್ನಡದ ಹೃತಿಕ್‌ ರೋಷನ್‌' ನಿರಂಜನ್‌ - ನಟ ಡಾರ್ಲಿಂಗ್‌ ಕೃಷ್ಣ ಹೇಳಿದ ಮಾತು ವೈರಲ್!

ನಿರಂಜನ್‌ ಸುಧೀಂದ್ರ, ರಚನಾ ಇಂದರ್‌ ಅಭಿನಯದ ‘ಸ್ಪಾರ್ಕ್‌’ ಸಿನಿಮಾದ ‘ಮಧುರ ಮುಗುಳುನಗೆ’ ಹಾಡು ಬಿಡುಗಡೆಯಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾರ್ಲಿಂಗ್‌ ಕೃಷ್ಣ, ನಿರಂಜನ್‌ ಅವರ ಡ್ಯಾನ್ಸ್‌ ಹಾಗೂ ಆ್ಯಕ್ಷನ್‌ ಪ್ರತಿಭೆಯನ್ನು ಮೆಚ್ಚಿ ಅವರನ್ನು ‘ಕನ್ನಡದ ಹೃತಿಕ್‌ ರೋಷನ್‌’ ಎಂದು ಕರೆದಿದ್ದಾರೆ.

Read Full Story
04:48 PM (IST) Sep 04

Karnataka News Live 4th September:ಮೈಸೂರು-ಅಜ್ಮೀರ್ ಪ್ರಯಾಣಿಕರಿಗೆ ಗುಡ್‌ನ್ಯೂಸ್ - ಕೊಟ್ಟೂರು ಮೂಲಕ ಈ ಹೊಸ ಎಕ್ಸ್‌ಪ್ರೆಸ್ ರೈಲು!

ಕೊಟ್ಟೂರು ಭಾಗದ ಸಾರ್ವಜನಿಕರ ಬಹುದಿನದ ಬೇಡಿಕೆಯಾಗಿದ್ದ ಮೈಸೂರು-ಅಜ್ಮೀರ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸುವ ಘೋಷಣೆ ಪ್ರಕಟವಾಗಿದೆ. ಮೈಸೂರಿನಿಂದ ಹೊರಡುವ ರೈಲು ಕೊಟ್ಟೂರು ರೈಲ್ವೆ ನಿಲ್ದಾಣಕ್ಕೆ ತಲುಪಿ ಅಜ್ಮೀರ್‌ನತ್ತ ಸಂಚರಿಸಲಿದೆ.

Read Full Story
04:31 PM (IST) Sep 04

Karnataka News Live 4th September:ನ್ಯೂಯಾರ್ಕ್ ಬೀದಿಯಲ್ಲಿ ಓಡಾಡ್ತಿರೋ ನಿವೇದಿತಾ ಗೌಡ.. ವಿಡಿಯೋ ಯಾರ್ ಮಾಡಿದ್ದು ಅಲ್ಲಿ? ಇದೆಂಥಾ ಸೀಕ್ರೆಟ್..!?

ನ್ಯೂಯಾರ್ಕ್‌ನ ಸುಂದರ ರಸ್ತೆಯ ಝೀಬ್ರಾ ಕ್ರಾಸಿಂಗ್ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ನಡೆದು ಬರುತ್ತಿದ್ದಾರೆ. ಅವರ ಈ 'ವಾಕ್' ನೋಡುಗರನ್ನು ಸೆಳೆಯುತ್ತಿದ್ದು, ಯಾವುದೋ ಹಾಲಿವುಡ್ ಸಿನಿಮಾದ ದೃಶ್ಯದಂತೆ ಕಾಣುತ್ತಿದೆ. ಅಲ್ಲಿ ಅವರ ವಿಡಿಯೋ ಮಾಡಿದ್ದು ಯಾರು? ಈ ಸ್ಟೋರಿ ನೋಡಿ..

Read Full Story
04:16 PM (IST) Sep 04

Karnataka News Live 4th September:'ದ್ಹನಿ ಎತ್ತದಿದ್ರೆ ಮೂಲೆಗೆ ಕೂರಿಸ್ತಾರೆ..' ಮಾಜಿ ಸಚಿವೆ ಮೋಟಮ್ಮ ಸಿಎಂ ಡಿಕೆಶಿ ವಿರುದ್ಧ ಗರಂ ಆಗಿದ್ಯಾಕೆ?

ಚಿಕ್ಕಮಗಳೂರಿನಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ, ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಮತ್ತು ಮನೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು.

Read Full Story
04:10 PM (IST) Sep 04

Karnataka News Live 4th September:ಜಾಗತಿಕವಾಗಿ 1 ಲಕ್ಷ ನೌಕರರನ್ನು ವಜಾಕ್ಕೆ ಆಡಿ, ಪೋರ್ಷೆ ಒಡೆಯ ವೋಕ್ಸ್‌ವ್ಯಾಗನ್ ಬೃಹತ್ ಪ್ಲಾನ್, ಕಾರಣ ಈ ದೇಶಗಳು!

ಚೀನಾದ ಇವಿ ಪೈಪೋಟಿ ಮತ್ತು ಅಮೆರಿಕದ ಸುಂಕಗಳಿಂದಾಗಿ ವೋಕ್ಸ್‌ವ್ಯಾಗನ್ 50,000 ಹೆಚ್ಚುವರಿ ಉದ್ಯೋಗಗಳನ್ನು ಕಡಿತಗೊಳಿಸುತ್ತಿದೆ. 'ಫ್ಯೂಚರ್ ಪ್ಲಾನ್ 2030' ಭಾಗವಾಗಿ, ಕಂಪನಿಯು ತನ್ನ ಕಾರು ಮಾದರಿಗಳನ್ನು 75% ರಷ್ಟು ಕಡಿಮೆ ಮಾಡಲು ಮತ್ತು ವೆಚ್ಚವನ್ನು ತಗ್ಗಿಸಲು ಬೃಹತ್ ಪುನರ್ರಚನೆಗೆ ಮುಂದಾಗಿದೆ.
Read Full Story
04:09 PM (IST) Sep 04

Karnataka News Live 4th September:ಅಬ್ಬಬ್ಬಾ ಲಾಟರಿ... ದೀಪಿಕಾಗೆ ಚಮಕ್ ಕೊಟ್ಟು ದೇಶದ ನಂ.1 ನಟಿಯಾದ ರಶ್ಮಿಕಾ ಮಂದಣ್ಣ

ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ‘ಇಂಡಿಯಾ ಟುಡೇ’ ನಡೆಸಿದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯಲ್ಲಿ ದೇಶದ ನಂಬರ್ 1 ಜನಪ್ರಿಯ ನಟಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಅಗ್ರಸ್ಥಾನದಲ್ಲಿದ್ದ ದೀಪಿಕಾ ಪಡುಕೋಣ್‌ರನ್ನು ಹಿಂದಿಕ್ಕಿ ರಶ್ಮಿಕಾ ಈ ಸಾಧನೆ ಮಾಡಿದ್ದಾರೆ.

Read Full Story
04:05 PM (IST) Sep 04

Karnataka News Live 4th September:Cricket - ಸ್ಮೃತಿ ಮಂಧನಾ ಅದ್ಭುತ ಪ್ರದರ್ಶನ! 92 ವರ್ಷಗಳ ಹಳೆಯ ವರ್ಲ್ಡ್ ರೆಕಾರ್ಡ್ ಪೀಸ್ ಪೀಸ್, 1934ರ ನಂತರ ಇದೇ ಪ್ರಥಮ!

ಭಾರತೀಯ ಕ್ರಿಕೆಟರ್ ಸ್ಮೃತಿ ಮಂಧನಾ, ಹಾಂಗ್ ಕಾಂಗ್ ವಿರುದ್ಧ 124 ರನ್‌ಗಳ ಸ್ಫೋಟಕ ಶತಕ ಬಾರಿಸಿದ್ದಾರೆ. ಈ ಇನ್ನಿಂಗ್ಸ್ ಮೂಲಕ ಅಂತರಾಷ್ಟ್ರೀಯ ಶತಕಗಳನ್ನು ಪೂರೈಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಷ್ಟಕ್ಕೂ ಆ ದಾಖಲೆ ಏನು ಎನ್ನುವುದನ್ನು ನೋಡೋಣ ಬನ್ನಿ.

Read Full Story