- Home
- Entertainment
- News
- ನ್ಯೂಯಾರ್ಕ್ ಬೀದಿಯಲ್ಲಿ ಓಡಾಡ್ತಿರೋ ನಿವೇದಿತಾ ಗೌಡ.. ವಿಡಿಯೋ ಯಾರ್ ಮಾಡಿದ್ದು ಅಲ್ಲಿ? ಭಾರೀ ಸೀಕ್ರೆಟ್..!?
ನ್ಯೂಯಾರ್ಕ್ ಬೀದಿಯಲ್ಲಿ ಓಡಾಡ್ತಿರೋ ನಿವೇದಿತಾ ಗೌಡ.. ವಿಡಿಯೋ ಯಾರ್ ಮಾಡಿದ್ದು ಅಲ್ಲಿ? ಭಾರೀ ಸೀಕ್ರೆಟ್..!?
ನ್ಯೂಯಾರ್ಕ್‌ನ ಸುಂದರ ರಸ್ತೆಯ ಝೀಬ್ರಾ ಕ್ರಾಸಿಂಗ್ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ನಡೆದು ಬರುತ್ತಿದ್ದಾರೆ. ಅವರ ಈ 'ವಾಕ್' ನೋಡುಗರನ್ನು ಸೆಳೆಯುತ್ತಿದ್ದು, ಯಾವುದೋ ಹಾಲಿವುಡ್ ಸಿನಿಮಾದ ದೃಶ್ಯದಂತೆ ಕಾಣುತ್ತಿದೆ. ಅಲ್ಲಿ ಅವರ ವಿಡಿಯೋ ಮಾಡಿದ್ದು ಯಾರು? ಈ ಸ್ಟೋರಿ ನೋಡಿ..

ನ್ಯೂಯಾರ್ಕ್ ಬೀದಿಗಳಲ್ಲಿ 'ಗೊಂಬೆ' ದರ್ಬಾರ್: ಝೀಬ್ರಾ ಕ್ರಾಸಿಂಗ್ ಮೇಲೂ ನಿವೇದಿತಾ ಗೌಡದ್ದೇ ಹವಾ!
ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದು, ತಮ್ಮ ಪುಟ್ಟ ಪುಟ್ಟ ಮಾತುಗಳು ಹಾಗೂ ರೀಲ್ಸ್ ಮೂಲಕವೇ ಸುದ್ದಿಯಾಗುವ 'ಬಿಗ್ ಬಾಸ್' ಬೆಡಗಿ ನಿವೇದಿತಾ ಗೌಡ ಈಗ ಸಪ್ತಸಾಗರದಾಚೆ ಸಂಚಲನ ಸೃಷ್ಟಿಸುತ್ತಿದ್ದಾರೆ.
ಮೈಸೂರು ಚೆಲುವೆ ಈಗ ಬೆಂಗಳೂರಿನ ಟ್ರಾಫಿಕ್‌ನಿಂದ ಕೊಂಚ ಬಿಡುವು ಮಾಡಿಕೊಂಡು, ಅಮೆರಿಕಾದ ನ್ಯೂಯಾರ್ಕ್ ನಗರದ ಬೀದಿಗಳಲ್ಲಿ ರೌಂಡ್ಸ್ ಹಾಕುತ್ತಿದ್ದಾರೆ. ಟ್ರಾವೆಲಿಂಗ್ ಅಂದ್ರೆ ಪಂಚಪ್ರಾಣ ಎನ್ನುವ ನಿವೇದಿತಾ, ಈ ಬಾರಿ ನ್ಯೂಯಾರ್ಕ್‌ನ ಸುಂದರ ರಸ್ತೆಗಳಲ್ಲಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.
ಝೀಬ್ರಾ ಕ್ರಾಸಿಂಗ್ ಮೇಲೆ ಕ್ಯಾಟ್‌ವಾಕ್!
ಇತ್ತೀಚೆಗೆ ನಿವೇದಿತಾ ಗೌಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ನ್ಯೂಯಾರ್ಕ್‌ನ ಸುಂದರ ರಸ್ತೆಯ ಝೀಬ್ರಾ ಕ್ರಾಸಿಂಗ್ ಮೇಲೆ ಅತ್ಯಂತ ಆತ್ಮವಿಶ್ವಾಸದಿಂದ ನಡೆದು ಬರುತ್ತಿದ್ದಾರೆ. ಅವರ ಈ 'ವಾಕ್' ನೋಡುಗರನ್ನು ಸೆಳೆಯುತ್ತಿದ್ದು, ಯಾವುದೋ ಹಾಲಿವುಡ್ ಸಿನಿಮಾದ ದೃಶ್ಯದಂತೆ ಕಾಣುತ್ತಿದೆ. ಈ ವಿಡಿಯೋದಲ್ಲಿ ನಿವೇದಿತಾ ಬ್ಲ್ಯಾಕ್ ಅಂಡ್ ವೈಟ್ ಪೋಲ್ಕಾ ಡಾಟ್ ಇರುವ ಮ್ಯಾಕ್ಸಿ ಡ್ರೆಸ್ ತೊಟ್ಟಿದ್ದು, ಅದರಲ್ಲಿ ಅವರು ನಿಜಕ್ಕೂ 'ಮಾಡರ್ನ್ ಗೊಂಬೆ'ಯಂತೆ ಕಂಗೊಳಿಸುತ್ತಿದ್ದಾರೆ.
ಎರಡು ಸೂಟ್‌ಕೇಸ್ ತುಂಬಾ ಬಟ್ಟೆ!
ನಿವೇದಿತಾ ಅವರ ಈ ಪ್ರವಾಸದ ಹಿಂದೆ ಒಂದು ಮಜವಾದ ಸಂಗತಿಯೂ ಇದೆ. ಈ ಹಿಂದೆ ಅವರು ಆರ್.ಜೆ. ರಾಜೇಶ್ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡುತ್ತಾ, "ನನಗೆ ಪ್ರವಾಸ ಮಾಡುವುದು ಎಂದರೆ ತುಂಬಾ ಇಷ್ಟ. ಅದಕ್ಕಿಂತ ಹೆಚ್ಚಾಗಿ ಪ್ರವಾಸಕ್ಕೆ ಹೋದಾಗ ವೆರೈಟಿ ಬಟ್ಟೆಗಳನ್ನು ತೊಡುವುದೆಂದರೆ ಮತ್ತಷ್ಟು ಇಷ್ಟ.
ಅದಕ್ಕಾಗಿಯೇ ನಾನು ಹೋಗುವ ಕಡೆಯಲ್ಲೆಲ್ಲಾ ಕನಿಷ್ಠ ಎರಡು ಸೂಟ್‌ಕೇಸ್ ತುಂಬಾ ಬಟ್ಟೆಗಳನ್ನು ಹೊತ್ತುಕೊಂಡು ಹೋಗುತ್ತೇನೆ" ಎಂದು ಹೇಳಿಕೊಂಡಿದ್ದರು. ಈಗ ನ್ಯೂಯಾರ್ಕ್‌ನಲ್ಲಿ ಅವರ ಒಂದೊಂದೇ ಹೊಸ ಲುಕ್ ನೋಡುತ್ತಿದ್ದರೆ, ಅವರು ನಿಜವಾಗಿಯೂ ಸೂಟ್‌ಕೇಸ್ ತುಂಬಾ ಬಟ್ಟೆ ತಂದಿದ್ದಾರೆ ಎಂಬುದು ಸಾಬೀತಾಗುತ್ತಿದೆ.
ಸೆಪ್ಟೆಂಬರ್ ತಿಂಗಳ ಮೇಲೆ ಬೆಟ್ಟದಷ್ಟು ಭರವಸೆ!
ಈ ವಿಡಿಯೋದ ಜೊತೆಗೆ ನಿವೇದಿತಾ ಒಂದು ಸ್ಪೆಷಲ್ ಕ್ಯಾಪ್ಶನ್ ಕೂಡ ನೀಡಿದ್ದಾರೆ. "ಸೆಪ್ಟೆಂಬರ್ ತಿಂಗಳೇ, ನೀನು ಖಂಡಿತ ಅದ್ಭುತವಾಗಿರುತ್ತೀಯಾ ಎಂಬ ಭರವಸೆ ನನಗಿದೆ" ಎಂದು ಇಂಗ್ಲಿಷ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನು ನೋಡಿದರೆ, ಈ ಇಡೀ ತಿಂಗಳು ಅವರು ವಿದೇಶಿ ಪ್ರವಾಸದಲ್ಲಿಯೇ ಕಾಲ ಕಳೆಯುವ ಪ್ಲಾನ್ ಮಾಡಿಕೊಂಡಿದ್ದಾರೆ ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿದೆ.
ಇಷ್ಟಕ್ಕೂ ನಿವೇದಿತಾ ನ್ಯೂಯಾರ್ಕ್‌ಗೆ ಒಬ್ಬರೇ ಹೋಗಿದ್ದಾರಾ ಅಥವಾ ಜೊತೆಯಲ್ಲಿ ಗೆಳೆಯರು ಯಾರಾದರೂ ಇದ್ದಾರಾ? ಅವರ ಈ ವಿಡಿಯೋವನ್ನು ಶೂಟ್ ಮಾಡಿದ ರಹಸ್ಯ ವ್ಯಕ್ತಿ ಯಾರು? ಎಂಬ ಕುತೂಹಲ ಮಾತ್ರ ಇನ್ನೂ ಹಾಗೆಯೇ ಇದೆ.
ಫ್ಯಾನ್ಸ್ ಫುಲ್ ಫಿದಾ!
ನಿವೇದಿತಾ ಅವರ ಈ ಪೋಸ್ಟ್ ಕೆಳಗೆ ಅಭಿಮಾನಿಗಳು ಕಾಂಪ್ಲಿಮೆಂಟ್ಸ್ ಸುರಿಮಳೆಗರೆಯುತ್ತಿದ್ದಾರೆ. "ನೀವಂತೂ ಸಖತ್ ಸ್ಟೈಲಿಶ್ ಆಗಿ ಕಾಣುತ್ತಿದ್ದೀರಾ ಮೇಡಂ", "ಲೈಫ್ ಅಂದ್ರೆ ನಿಮ್ಮದೇ, ಚೆನ್ನಾಗಿ ಎಂಜಾಯ್ ಮಾಡಿ ಬನ್ನಿ" ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಒಟ್ಟಿನಲ್ಲಿ, ನ್ಯೂಯಾರ್ಕ್‌ನ ಚಳಿಯಲ್ಲಿ ನಿವೇದಿತಾ ಗೌಡ ತಮ್ಮ ಫ್ಯಾಶನ್ ಸೆನ್ಸ್ ಮೂಲಕ ಬಿಸಿಯೇರಿಸುತ್ತಿರುವುದಂತೂ ಸುಳ್ಳಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

