ಚಿಕ್ಕಮಗಳೂರಿನಲ್ಲಿ ನಡೆದ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮಾಜಿ ಸಚಿವೆ ಮೋಟಮ್ಮ, ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡದಿರುವುದಕ್ಕೆ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಮತ್ತು ಮನೆಯಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು.

ಚಿಕ್ಕಮಗಳೂರು (ಸೆ.4): ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಬಳಿಕ ಡಿಕೆ ಶಿವಕುಮಾರ ನೇತೃತ್ವದ ರಚನೆಯಾದ ನೂತನ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುತ್ತೆ ಎಂಬ ನಿರೀಕ್ಷೆಯಿತ್ತು ಆದರೆ ಡಿಕೆಶಿ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಚಿವ ಸ್ಥಾನ ನೀಡದಿರುವುದು ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.

ಮಹಿಳೆಯರು ಧ್ವನಿ ಎತ್ತಬೇಕು ಇಲ್ಲದಿದ್ರೆ ಕೇರ್ ಮಾಡಲ್ಲ

ಇಂದು ಚಿಕ್ಕಮಗಳೂರಿನ ಮೂಡಿಗೆರೆಯಲ್ಲಿ ನಡೆದ ಜಿಲ್ಲಾ ಮಹಿಳಾ ಸಾಹಿತ್ಯ ಸಮ್ಮೇಳನದಲ್ಲಿ ಮಾತನಾಡಿದ ಮೋಟಮ್ಮ ಅವರು, ಮಹಿಳೆಯರು ಗಟ್ಟಿ, ಸಮರ್ಥರು ಅಂತಾ ತೋರಿಸದೇ ಇದ್ರೆ ಮೂಲೆಯಲ್ಲಿ ಕೂರಿಸ್ತಾರೆ. ನಮಗೆ ಅವಕಾಶ ಕೊಡಬೇಕೆಂದು ನೀವೆಲ್ಲ ಒಟ್ಟಾಗಿ ಒಗ್ಗಟ್ಟಾಗಿ ಮಾತನಾಡಬೇಕೆಂದು ನಾನು ಲಕ್ಷ್ಮಿ ಹೆಬ್ಬಾಳ್ಕರ್ ಗೆ ಹೇಳಿದ್ದೆ. ಸಚಿವ ಸ್ಥಾನ ನನಗೆ ಅಥವಾ ನಿನಗೆ ಅದು ಆಮೇಲೆ ಮೊದಲು ಮಹಿಳೆಯರಿಗೆ ಸಚಿವ ಸ್ಥಾನ ಬೇಕು ಅಂತಾ ಧ್ವನಿ ಎತ್ತಬೇಕು ಇಲ್ಲದಿದ್ರೆ ಕೇರ್‌ ಮಾಡಲ್ಲ ಎಂದರು.

ಪರೋಕ್ಷವಾಗಿ ಡಿಕೆಶಿ ವಿರುದ್ಧ ಅಸಮಾಧಾನ

ನಾವು ರಾಜಕಾರಣದಲ್ಲಾದ್ರೂ, ಮನೆಯಲ್ಲಾದ್ರೂ ಗಟ್ಟಿಯಾಗಿ ಮಾತನಾಡದಿದ್ರೆ ಯಾರು ತಾನೇ ಗುರುತಸ್ತಾರೆ? ಮನೆಯಲ್ಲೂ ಹೆಣ್ಣುಮಕ್ಕಳು ಗಟ್ಟಿ ಮಾಡದಿದ್ರೆ ಮಾವ ಗಂಡ ಯಾರೂ ಗುರುತಿಸಲ್ಲ, ಮೂಲೆಗೆ ಕೂರಿಸ್ತಾರೆ. ಹಾಗೆ ರಾಜಕಾರಣದಲ್ಲೂ ಮಹಿಳೆಯರು ತಮ್ಮ ಹಕ್ಕು, ಸ್ಥಾನಮಾನಕ್ಕಾಗಿ ಒಗ್ಗಟ್ಟಾಗಿ ಧ್ವನಿ ಎತ್ತಬೇಕು ಎಂದರು. ಪರೋಕ್ಷವಾಗಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.