11:19 PM (IST) Sep 11

Karnataka News Live:Bangladesh - ಚಿನ್ಮಯ ಕೃಷ್ಣ ದಾಸ್ ಬಂಧನ; ಬಾಂಗ್ಲಾದಲ್ಲಿ ನಡೆದ ಮಹಾಪಾಪಕ್ಕೆ ಉತ್ತರ ನೀಡಬೇಕಿದೆ ತಾರಿಕ್ ರಹಮಾನ್!

ಬಾಂಗ್ಲಾದೇಶದಲ್ಲಿ ಬಂಧಿತರಾಗಿರುವ ಹಿಂದೂ ಹಕ್ಕುಗಳ ಹೋರಾಟಗಾರ ಸಂತ ಚಿನ್ಮಯ್ ಕೃಷ್ಣ ದಾಸ್ ಅವರಿಗೆ, ಅನಾರೋಗ್ಯ ಪೀಡಿತ ತಾಯಿ ನೋಡಲು ಪೆರೋಲ್ ನಿರಾಕರಿಸಲಾಯಿತು. ತಾಯಿಯ ಮರಣಾನಂತರ ಅಂತ್ಯಕ್ರಿಯೆಗೆ ಕೇವಲ ಐದು ಗಂಟೆಗಳ ಪೆರೋಲ್ ನೀಡಿದ ಅಮಾನವೀಯ ಘಟನೆ, ತಾರಿಕ್ ರಹಮಾನ್ ಉತ್ತರಿಸಬೇಕಿದೆ. ಅಷ್ಟೇ ಅಲ್ಲ ಅವರ ಮೇಲಿರುವ ಕೇಸ್‌ ಯಾವವು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ.

Read Full Story
11:14 PM (IST) Sep 11

Karnataka News Live:15 ವರ್ಷಗಳಲ್ಲಿ 96 ಕಿ.ಮೀ ಬೆಳೆದ ನಮ್ಮ ' ದುಬಾರಿ' ಮೆಟ್ರೋ, ನಿರೀಕ್ಷಿತ ಮಟ್ಟಕ್ಕೆ ಮುಟ್ಟದ ಪ್ರಯಾಣಿಕರ ಸಂಖ್ಯೆ

ಬೆಂಗಳೂರಿನ 'ನಮ್ಮ ಮೆಟ್ರೋ' 96 ಕಿ.ಮೀ.ಗೆ ವಿಸ್ತರಿಸಿದರೂ, ನಿರೀಕ್ಷಿತ 30 ಲಕ್ಷದ ಬದಲು ಕೇವಲ 10 ಲಕ್ಷ ದೈನಂದಿನ ಪ್ರಯಾಣಿಕರನ್ನು ಹೊಂದಿದೆ. ಈ ಹಿನ್ನಡೆಗೆ 'ಫಸ್ಟ್ ಅಂಡ್ ಲಾಸ್ಟ್ ಮೈಲ್ ಕನೆಕ್ಟಿವಿಟಿ' ಕೊರತೆಯೇ ಪ್ರಮುಖ ಕಾರಣವಾಗಿದೆ.

Read Full Story
10:48 PM (IST) Sep 11

Karnataka News Live:ಬಾಯಲ್ಲಿ ಸಿಮ್ ಕಾರ್ಡ್ ಅಡಗಿಸಿ ಪ್ರಜ್ವಲ್‌ಗೆ ನೀಡಿದ್ದ ಡಿಜೆ ಹಳ್ಳಿ ಆರೋಪಿ! - ಫೋನ್‌ಗಾಗಿ 70 ಸಾವಿರ, ಸಿಮ್‌ಗೆ 30 ಸಾವಿರ ರೂ. ಲಂಚ!

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಕಾನೂನುಬಾಹಿರವಾಗಿ ಮೊಬೈಲ್ ತಲುಪಿಸಿದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಈ ಪ್ರಕರಣದಲ್ಲಿ ಜೈಲು ವಾರ್ಡನ್ ಸೇರಿದಂತೆ ಐವರನ್ನು ಬಂಧಿಸಲಾಗಿದೆ.

Read Full Story
10:29 PM (IST) Sep 11

Karnataka News Live:Cricket - ವೈಭವ್ ಸೂರ್ಯವಂಶಿಯನ್ನು ಆಡಿಸಬೇಡಿ’! ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಗೂ ಮುನ್ನ ದಿಗ್ಗಜರ ಖಡಕ್‌ ಮಾತು!

ಅಫ್ಘಾನಿಸ್ತಾನ್ ವಿರುದ್ಧದ ಮುಂಬರುವ ಟಿ20 ಸರಣಿಗೆ, ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಆಡುವ ಬಳಗದಿಂದ ಹೊರಗಿಟ್ಟು, ಅವರ ಬದಲಿಗೆ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಬೇಕೆಂದು ಹಿರಿಯ ಆಟಗಾರ ಆಗ್ರಹಿಸಿದ್ದಾರೆ. ವಿಶ್ವಕಪ್ ಗೆದ್ದ ತಂಡದ ಮೇಲೆ ನಂಬಿಕೆ ಇಡಬೇಕು ಮತ್ತು ಕೆಲವೇ ಪಂದ್ಯಗಳ ವೈಫಲ್ಯಕ್ಕೆ ಸ್ಯಾಮ್ಸನ್ ಅವರನ್ನು ಕೈಬಿಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Read Full Story
09:49 PM (IST) Sep 11

Karnataka News Live:BRICS - ಟಾಲ್‌ಸ್ಟಾಯ್ ಬರೆದ ಪತ್ರ, ಗಾಂಧೀಜಿಗೆ ಸಿಕ್ಕ 'ಖಜಾನೆ' ಇಂದು ಪುಟಿನ್‌ಗೆ ಮೋದಿ ಸರ್ಪ್ರೈಸ್ ಗಿಫ್ಟ್!

ಲಿಯೋ ಟಾಲ್‌ಸ್ಟಾಯ್ ಅವರ 'ಹಿಂದೂಗೆ ಪತ್ರ' ಗಾಂಧೀಜಿಯವರ ಅಹಿಂಸಾ ತತ್ವಕ್ಕೆ ಸ್ಪೂರ್ತಿ ನೀಡಿತು. ಈ ಪತ್ರದ ಮೂಲಕ ಗಾಂಧೀಜಿಗೆ ಪರಿಚಯವಾದ 'ತಿರುಕ್ಕುರಲ್' ತಮಿಳು ಮಹಾಕಾವ್ಯ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಸಿದ್ಧಾಂತಕ್ಕೆ ಬುನಾದಿಯಾಯಿತು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
09:36 PM (IST) Sep 11

Karnataka News Live:'ಬೇರೆ ಧರ್ಮದವರಿಗೆ ತೊಂದರೆ ಕೊಡಬೇಡಿ' - ಗಣೇಶ ಹಬ್ಬಕ್ಕೂ ಮುನ್ನ ಎಸ್‌ಪಿ ಸಾಹಿಲ್ ಖಡಕ್ ಸೂಚನೆ!

ಗಂಗಾವತಿಯಲ್ಲಿ 150ಕ್ಕೂ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ. ಗಣೇಶ ಹಬ್ಬದ ಮುನ್ನ ಎಸ್‌ಪಿ ಸಾಹಿಲ್ ಬಾಗ್ಲಾ ಸೌಹಾರ್ದತೆ ಕಾಪಾಡುವಂತೆ ಖಡಕ್ ಸೂಚನೆ ನೀಡಿದ್ದಾರೆ. ಜೊತೆಗೆ ಹಬ್ಬದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು.

Read Full Story
08:29 PM (IST) Sep 11

Karnataka News Live:'ಸ್ಟಾರ್ ಹೀರೋಗಳಿಗಿಂತ ನನಗೆ ಪಾತ್ರವೇ ಮುಖ್ಯ' - ಕ್ಯೂಟ್ ನಟಿ ಆಶಿಕಾ ರಂಗನಾಥ್ ಹೀಗೆ ಹೇಳಿದ್ದೇಕೆ?

ಕನ್ನಡ ನಟಿ ಆಶಿಕಾ ರಂಗನಾಥ್ ಸಿನಿಮಾಗಳ ಸಂಖ್ಯೆಯಿಗಿಂತ ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದಾಗಿ ಹೇಳಿದ್ದಾರೆ. ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನವಾಗಿ ಕಾಣಿಸಿಕೊಳ್ಳಬೇಕು ಎಂಬ ತಮ್ಮ ಆಸೆಯನ್ನು ಹಂಚಿಕೊಂಡಿದ್ದಾರೆ.

Read Full Story
08:01 PM (IST) Sep 11

Karnataka News Live:Bribe - ಕಾಮಗಾರಿಗೆ 30% ಲಂಚದ ಕಮಿಷನ್ ಬೇಡಿಕೆ; ಲಂಚ ಪಡೆಯುತ್ತಿದ್ದಾಗ ಲೋಕಾ ಬಲೆಗೆ ಬಿದ್ದ RFO!

ಗುಬ್ಬಿ ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಸತೀಶ್ ಚಂದ್ರ, ಮಂಜೂರಾದ ಕಾಮಗಾರಿಗೆ ಗುತ್ತಿಗೆದಾರನಿಂದ 30% ಕಮಿಷನ್ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, RFO ಹಾಗೂ ಅವರ ಸಹವರ್ತಿಯನ್ನು ರೆಡ್‌ಹ್ಯಾಂಡ್‌ ಆಗಿ ಬಂಧಿಸಿದ್ದಾರೆ.

Read Full Story
07:52 PM (IST) Sep 11

Karnataka News Live:'ನಾನು ಸಿಂಪಲ್ ನನ್ನ ಪೆನ್ನು ತುಂಬಾ ಪವರ್ ಫುಲ್' - ಅಧಿಕಾರಿಗಳ ವಿರುದ್ಧ ಉಪಲೋಕಾಯುಕ್ತ ಬಿ.ವೀರಪ್ಪ ಗುಡುಗು

‘ನಾನು ಸಿಂಪಲ್, ನನ್ನ ಪೆನ್ನು ಪವರ್‌ಫುಲ್’ ಎಂದು ಬೆಳ್ಳೂರಿನಲ್ಲಿ ಗುಡುಗಿದ ಉಪಲೋಕಾಯುಕ್ತ ಬಿ.ವೀರಪ್ಪ. ಡಾಟಾ ಆಪರೇಟರ್ ವಹಿವಾಟು, ಎಫ್‌ಸಿ ಮುಗಿದ ಶಾಲಾ ಬಸ್‌ಗಳು, ಆಸ್ಪತ್ರೆ ಹಾಗೂ ಹಾಸ್ಟೆಲ್ ಅಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

Read Full Story
07:48 PM (IST) Sep 11

Karnataka News Live:ವೃಷಭಾವತಿ ಆಯ್ತು, ಈಗ ಕಾವೇರಿಗೂ ಕಂಟಕ; ಜೀವನದಿಗೆ ಸೇರುತ್ತಿದೆ ಬೆಂಗಳೂರಿನ ಶೇ. 50ರಷ್ಟು ಕೊಳಚೆ ನೀರು

ಬೆಂಗಳೂರಿನಿಂದ ಉತ್ಪತ್ತಿಯಾಗುವ ಶೇ. 47ರಷ್ಟು ಕೊಳಚೆ ನೀರು ಯಾವುದೇ ಶುದ್ಧೀಕರಣವಿಲ್ಲದೆ ನೇರವಾಗಿ ಕಾವೇರಿ ನದಿ ಸೇರುತ್ತಿದ್ದು, ಇದು ತಮಿಳುನಾಡಿನವರೆಗೂ ಮಾಲಿನ್ಯ ಉಂಟುಮಾಡುತ್ತಿದೆ. .

Read Full Story
07:18 PM (IST) Sep 11

Karnataka News Live:ಕೋಟಿ ಹಣಕ್ಕಿಂತ ಬಡ ಜನರು ಕೊಟ್ಟ ₹10, ₹20 ಬೆಲೆ ಹೆಚ್ಚು - ಮೋಹಕ ತಾರೆ ರಮ್ಯಾ ಹೇಳಿದ್ದೇನು?

ಸ್ಯಾಂಡಲ್‌ವುಡ್ ನಟಿ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಹಣ, ಖ್ಯಾತಿ ಶಾಶ್ವತವಲ್ಲ ಎಂದು ಹೇಳಿದ್ದಾರೆ. ಮಂಡ್ಯ ರಾಜಕೀಯ ಪ್ರಚಾರದ ವೇಳೆ ಜನರು ನೀಡಿದ ₹10, ₹20, ₹50 ನೆನಪಿಸಿಕೊಂಡ ರಮ್ಯಾ ಮಾತುಗಳು ಇದೀಗ ವೈರಲ್ ಆಗಿವೆ.

Read Full Story
07:14 PM (IST) Sep 11

Karnataka News Live:ಟಿಸಿಎಸ್, ವಿಪ್ರೋ, ಇನ್ಫೋಸಿಸ್‌ ಫ್ರೆಶರ್‌ಗಳ ವಾರ್ಷಿಕ ಸ್ಯಾಲರಿ ಪ್ಯಾಕೇಜ್‌ಗಿಂತ ದುಬಾರಿ iPhone Duo, ಭಾರೀ ವೈರಲ್‌ ಆದ ಪೋಸ್ಟ್‌

ಆಪಲ್‌ನ ಹೊಸ 'ಐಫೋನ್ ಡ್ಯುಯೋ' ಬೆಲೆಯು ಭಾರತದ ಪ್ರಮುಖ ಐಟಿ ಕಂಪನಿಗಳಾದ ಟಿಸಿಎಸ್, ಇನ್ಫೋಸಿಸ್‌ನ ಫ್ರೆಷರ್ಸ್ ವಾರ್ಷಿಕ ಸಂಬಳಕ್ಕೆ ಸಮನಾಗಿದೆ ಎಂದು 'ಎಕ್ಸ್'ನಲ್ಲಿ ವೈರಲ್ ಆದ ಪೋಸ್ಟ್ ಚರ್ಚೆ ಹುಟ್ಟುಹಾಕಿದೆ.

Read Full Story
07:10 PM (IST) Sep 11

Karnataka News Live:Viral News - ನೆಟ್‌ವರ್ಕ್ ಸಿಗಲಿಲ್ಲವೆಂದು Jio ಸಿಬ್ಬಂದಿಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು! ಎಂಪ್ಲಾಯ್‌ ಸ್ಥಿತಿ ಅಯೋಮಯ

ಉತ್ತರ ಪ್ರದೇಶದ ಫತೇಪುರ್‌ನಲ್ಲಿ 5G ನೆಟ್‌ವರ್ಕ್ ಸಮಸ್ಯೆಯಿಂದ ಕೋಪಗೊಂಡ ಗ್ರಾಮಸ್ಥರು, ಜಿಯೋ ನೌಕರನೊಬ್ಬನನ್ನು ಟವರ್ ಕಂಬಕ್ಕೆ ಕಟ್ಟಿಹಾಕಿ ಹಲ್ಲೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರು ನೌಕರನನ್ನು ರಕ್ಷಿಸಿ, ಗ್ರಾಮಸ್ಥರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
Read Full Story
06:16 PM (IST) Sep 11

Karnataka News Live:ತಿಂಗಳಿಗೆ 64 ಲಕ್ಷ ರೂಪಾಯಿ ಬಾಡಿಗೆ, ಬಿಎಂಟಿಸಿ ಕಚೇರಿಗೆ ಶಿಫ್ಟ್‌ ಆಗುವ ಪ್ಲ್ಯಾನ್‌ ಡ್ರಾಪ್‌ ಮಾಡಿದ ಬಿಡಿಎ

ತನ್ನ ಪ್ರಧಾನ ಕಚೇರಿಯ ಮರುಅಭಿವೃದ್ಧಿಗಾಗಿ, ಮೂರು ಬಿಎಂಟಿಸಿ ಸಂಕೀರ್ಣಗಳಿಗೆ ತಾತ್ಕಾಲಿಕವಾಗಿ ಸ್ಥಳಾಂತರಗೊಳ್ಳುವ ಯೋಜನೆಯನ್ನು ಬಿಡಿಎ ಕೈಬಿಟ್ಟಿದೆ. ಆಡಳಿತಾತ್ಮಕ ತೊಂದರೆಗಳಿಂದಾಗಿ ಈ ನಿರ್ಧಾರ ತೆಗೆದುಕೊಂಡಿದ್ದು, ಇದೀಗ ಒಂದೇ ಸೂರಿನಡಿ ಕಾರ್ಯನಿರ್ವಹಿಸಲು ಸೂಕ್ತ ಜಾಗಕ್ಕಾಗಿ ಹುಡುಕಾಟ ನಡೆಸುತ್ತಿದೆ.

Read Full Story
05:48 PM (IST) Sep 11

Karnataka News Live:90s Kids.. ನಿಮ್ಮ ಬಾಲ್ಯದ ಈ ಕಾರ್ಟೂನ್ ನೆನಪಿದೆಯಾ? ಜಿಪುಣ ಅಂಕಲ್ ಸ್ಕ್ರೂಜ್ ಕಥೆಯಿದು!

90s Kids DuckTales Cartoon Nostalgia
90ರ ದಶಕದ ಮಕ್ಕಳಾ ನೀವು? ಹಾಗಿದ್ರೆ ದೂರದರ್ಶನದಲ್ಲಿ ಬರ್ತಿದ್ದ ಡೊನಾಲ್ಡ್ ಡಕ್ ಕಾರ್ಟೂನ್ ನೆನಪಿದೆಯಾ? ಅಂಕಲ್ ಸ್ಕ್ರೂಜ್, ಹ್ಯೂಯಿ, ಡ್ಯೂಯಿ, ಲೂಯಿ ಎಲ್ಲ ನೆನಪಿದ್ದಾರಾ? ಬನ್ನಿ, ಆ ಕಾಮಿಡಿ ಸೀರಿಸ್ ಬಗ್ಗೆ ಇನ್ನಷ್ಟು ಇಂಟರೆಸ್ಟಿಂಗ್ ವಿಚಾರಗಳನ್ನು ತಿಳಿಯೋಣ.

Read Full Story
05:21 PM (IST) Sep 11

Karnataka News Live:ಈ ನಟ ಡ್ಯಾನ್ಸ್ ಮಾಡ್ತಿದ್ರೆ ಕಣ್ಣು ಮಿಟುಕಿಸೋಕೆ ಆಗಲ್ಲ.. ಮೈಕೇಲ್ ಜಾಕ್ಸನ್‌ಗಿಂತ ಬೆಸ್ಟ್ - ನಟಿ ರಂಭಾ

ನಟಿ ರಂಭಾ ಜೂ.ಎನ್‌ಟಿಆರ್ ಅವರ ಡ್ಯಾನ್ಸ್ ಬಗ್ಗೆ ಮನಸಾರೆ ಹೊಗಳಿದ್ದಾರೆ. ‘ನಾಚೋರೆ ನಾಚೋರೆ’ ಹಾಡಿನಲ್ಲಿನ ತಾರಕ್ ಡ್ಯಾನ್ಸ್‌ನ್ನು ಮೆಚ್ಚಿಕೊಂಡಿರುವ ರಂಭಾ, ತಮ್ಮ ದೃಷ್ಟಿಯಲ್ಲಿ ಮೈಕೇಲ್ ಜಾಕ್ಸನ್‌ಗಿಂತಲೂ ತಾರಕ್ ಬೆಸ್ಟ್ ಡ್ಯಾನ್ಸರ್ ಎಂದು ಹೇಳಿದ್ದಾರೆ.

Read Full Story
04:54 PM (IST) Sep 11

Karnataka News Live:ರಾಜ್ ಬಿ. ಶೆಟ್ಟಿಗೆ ಕಾಡ್ತಿದೆ ಆ ನಿಗೂಢ ರಹಸ್ಯ.. 'ರಕ್ಕಸಪುರದೊಳ್' ಪೊಲೀಸ್‌ಗೆ ಕಂಡ ಅತೀಂದ್ರಿಯ ತಿರುವು!

ನಟ ರಾಜ್ ಬಿ ಶೆಟ್ಟಿ ಅಭಿನಯದ ‘ರಕ್ಕಸಪುರದೊಳ್’ ಸಿನಿಮಾ ಇದೀಗ Amazon Prime Videoನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಕ್ರೈಂ, ಮಿಸ್ಟರಿ ಮತ್ತು ಅತೀಂದ್ರಿಯ ಅಂಶಗಳ ಈ ಥ್ರಿಲ್ಲರ್ ಸಿನಿಮಾವನ್ನು ಮನೆಯಲ್ಲೇ ವೀಕ್ಷಿಸಿ.

Read Full Story
04:32 PM (IST) Sep 11

Karnataka News Live:20 ಸಾವಿರ ಉದ್ಯೋಗಿಗಳ ಕೆಲಸ ಮಾಡಲಿದೆ ಕೆಲವೇ ಕೆಲವು AI ಏಜೆಂಟ್‌, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಅಳವಡಿಕೆಗೆ WIPRO ಭಾರಿ ಸಿದ್ಧತೆ!

ವಿಪ್ರೋ ಸಂಸ್ಥೆಯು ತನ್ನ ನೂತನ ಕೃತಕ ಬುದ್ಧಿಮತ್ತೆ (AI) ಯೋಜನೆಗಳ ಮೂಲಕ ಸುಮಾರು 20,000 ಉದ್ಯೋಗಿಗಳ ಕೆಲಸದ ಸಾಮರ್ಥ್ಯಕ್ಕೆ ಸಮನಾದ ಉತ್ಪಾದಕತೆಯನ್ನು ಸಾಧಿಸಿದೆ. ಈ ಹಿನ್ನೆಲೆಯಲ್ಲಿ, ಉಳಿತಾಯವಾದ ಮಾನವ ಸಂಪನ್ಮೂಲವನ್ನು ಬೇರೆಡೆಗೆ ನಿಯೋಜಿಸಲಾಗುತ್ತಿದೆ.

Read Full Story
04:28 PM (IST) Sep 11

Karnataka News Live:Election - ಸರ್ಕಾರಿ ಆದೇಶಕ್ಕೆ ಕ್ಯಾರೇ ಎನ್ನದ ವಿವಿ; ಕಾಲೇಜು ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಭಾರೀ ಮುಖಭಂಗ! ಗೆದ್ದು ಬೀಗಿದ ಎಬಿವಿಪಿ!

ಕಾಲೇಜು ಚುನಾವಣೆಯಲ್ಲಿ, ಕೊನೆ ಕ್ಷಣದಲ್ಲಿ ಸರ್ಕಾರ ಹೊರಡಿಸಿದ ನೇರ ಚುನಾವಣೆ ಆದೇಶವನ್ನು ವಿಶ್ವವಿದ್ಯಾಲಯ ತಿರಸ್ಕರಿಸಿತು. ನಿಗದಿಯಂತೆ ನಡೆದ ಪರೋಕ್ಷ ಚುನಾವಣೆಯಲ್ಲಿ ಎಬಿವಿಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಜಯ ಸಾಧಿಸಿದ್ದು, ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ತೀವ್ರ ಮುಖಭಂಗ ಉಂಟುಮಾಡಿದೆ.

Read Full Story
04:25 PM (IST) Sep 11

Karnataka News Live:ಆಫ್ರಿಕಾದಲ್ಲಿ ಇನ್ನೂ ವಹಿವಾಟು ಶುರುವಾಗಿಲ್ಲ, ವಿದೇಶಿ ಹೂಡಿಕೆ, ₹2 ಕೋಟಿ ಹಣದ ರಹಸ್ಯ ಬಿಚ್ಚಿಟ್ಟ ಸತೀಶ್ ಜಾರಕಿಹೊಳಿ

ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಮೇಲಿನ ಇಡಿ ದಾಳಿಯನ್ನು ಕೇಂದ್ರ ಸರ್ಕಾರದ ರಾಜಕೀಯ ಪ್ರೇರಿತ ಷಡ್ಯಂತ್ರ ಎಂದು ಕರೆದಿದ್ದಾರೆ. ದಾಳಿಯಲ್ಲಿ ಸಿಕ್ಕ ಹಣಕ್ಕೆ ಮತ್ತು ವಿದೇಶಿ ಕಂಪನಿ ನೋಂದಣಿಗೆ ಸ್ಪಷ್ಟನೆ ನೀಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪಕ್ಷದ ಬೆಂಬಲವಿದೆ ಎಂದು ತಿಳಿಸಿದ್ದಾರೆ.
Read Full Story