ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ, ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ, ಬೆಳಗಾವಿ, ಹಾಗೂ ಕರಾವಳಿ-ಮಲೆನಾಡು ಭಾಗದ ಮಡಗಾಂವ್‌ಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳನ್ನು ಘೋಷಿಸಿದೆ. ಈ ರೈಲುಗಳು ಯಶವಂತಪುರ ಮತ್ತು ಎಸ್‌ಎಂವಿಟಿ ಬೆಂಗಳೂರು ನಿಲ್ದಾಣಗಳಿಂದ ಹೊರಡಲಿದ್ದು, ಅವುಗಳ ವೇಳಾಪಟ್ಟಿ ಮತ್ತು ನಿಲುಗಡೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.
ಬೆಂಗಳೂರು: ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ನೈರುತ್ಯ ರೈಲ್ವೆಯು ಬೆಂಗಳೂರಿನಿಂದ ವಿಜಯಪುರ ಹಾಗೂ ಬೆಳಗಾವಿ, ಕರಾವಳಿ ಮತ್ತು ಮಲೆನಾಡು ಭಾಗದ ನಗರಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲುಗಳ ಸೇವೆಯನ್ನು ಘೋಷಿಸಿದೆ. ಬೆಂಗಳೂರಿನ ಯಶವಂತಪುರ ಮತ್ತು ಗೋವಾದ ಮಡಗಾಂವ್ ನಡುವೆ ಬಂಟ್ವಾಳ ಹಾಗೂ ಉಡುಪಿ ಮಾರ್ಗವಾಗಿ ವಿಶೇಷ ರೈಲು ಸೇವೆ ಇರಲಿದೆ. ಇನ್ನು ವಿಜಯಪುರಕ್ಕೆ ತುಮಕೂರು ಮಾರ್ಗವಾಗಿ ಬಾಗಲಕೋಟೆ ಮೂಲಕ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ. ಇನ್ನು ಬೆಳಗಾವಿಗೆ ತುಮಕೂರು ದಾವಣಗೆರೆ ಮಾರ್ಗವಾಗಿ ಹುಬ್ಬಳ್ಳಿ ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ರೈಲು ಸಂಖ್ಯೆ 06591 ಯಶವಂತಪುರ - ಮಡಗಾಂವ್
ಯಶವಂತಪುರದಿಂದ ಮಡಗಾಂವ್‌ಗೆ ಸಂಚರಿಸಲಿರುವ ರೈಲು ಸಂಖ್ಯೆ 06591 ವಿಶೇಷ ರೈಲು ಸೆಪ್ಟೆಂಬರ್ 11, 2026ರ ಶುಕ್ರವಾರ ರಾತ್ರಿ 11:55ಕ್ಕೆ ಯಶವಂತಪುರದಿಂದ ಹೊರಡಲಿದೆ. ಈ ರೈಲು ಮಾರನೇ ದಿನ ಬೆಳಿಗ್ಗೆ 5:00 ಗಂಟೆಗೆ ಹಾಸನ, 5:55ಕ್ಕೆ ಸಕಲೇಶಪುರ, 8:50ಕ್ಕೆ ಸುಬ್ರಹ್ಮಣ್ಯ ರೋಡ್, 9:45ಕ್ಕೆ ಕಬಕ ಪುತ್ತೂರು, 10:15ಕ್ಕೆ ಬಂಟ್ವಾಳ, ಮಧ್ಯಾಹ್ನ 1:10ಕ್ಕೆ ಉಡುಪಿ, 1:40ಕ್ಕೆ ಕುಂದಾಪುರ, 2:08ಕ್ಕೆ ಬೈಂದೂರು, 2:38ಕ್ಕೆ ಭಟ್ಕಳ, 3:18ಕ್ಕೆ ಮುರ್ಡೇಶ್ವರ, ಸಂಜೆ 4:00 ಗಂಟೆಗೆ ಕುಮಟಾ, 4:20ಕ್ಕೆ ಗೋಕರ್ಣ ರೋಡ್, 4:32ಕ್ಕೆ ಅಂಕೋಲಾ, 4:50ಕ್ಕೆ ಕಾರವಾರ, 5:20ಕ್ಕೆ ಕಣಕೋಣ ತಲುಪಿ, ಸಂಜೆ 6:10ಕ್ಕೆ ಅಂತಿಮವಾಗಿ ಮಡಗಾಂವ್ ತಲುಪಲಿದೆ.
ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ
ಮರಳಿ ಪ್ರಯಾಣ ರೈಲು ಸಂಖ್ಯೆ 06592 ಮಡಗಾಂವ್-ಯಶವಂತಪುರ ವಿಶೇಷ ರೈಲು ಸೆಪ್ಟೆಂಬರ್ 14, 2026ರ ಸೋಮವಾರ ಬೆಳಿಗ್ಗೆ 11:00 ಗಂಟೆಗೆ ಮಡಗಾಂವ್‌ನಿಂದ ಹೊರಡಲಿದೆ. ಮಾರ್ಗಮಧ್ಯೆ ಈ ರೈಲು ಬೆಳಿಗ್ಗೆ 11:28ಕ್ಕೆ ಕಣಕೋಣ, 11:58ಕ್ಕೆ ಕಾರವಾರ, ಮಧ್ಯಾಹ್ನ 12:23ಕ್ಕೆ ಅಂಕೋಲಾ, 12:33ಕ್ಕೆ ಗೋಕರ್ಣ ರೋಡ್, 12:50ಕ್ಕೆ ಕುಮಟಾ, 1:03ಕ್ಕೆ ಹೊನ್ನಾವರ, 1:38ಕ್ಕೆ ಮುರ್ಡೇಶ್ವರ, 1:53ಕ್ಕೆ ಭಟ್ಕಳ, 2:12ಕ್ಕೆ ಬೈಂದೂರು, 2:40ಕ್ಕೆ ಕುಂದಾಪುರ, 2:55ಕ್ಕೆ ಬಾರ್ಕೂರು, 3:30ಕ್ಕೆ ಉಡುಪಿ, 3:58ಕ್ಕೆ ಮುಲ್ಕಿ, ಸಂಜೆ 4:12ಕ್ಕೆ ಸುರತ್ಕಲ್, 5:15ಕ್ಕೆ ತೋಕೂರು, 6:00 ಗಂಟೆಗೆ ಬಂಟ್ವಾಳ, 6:28ಕ್ಕೆ ಕಬಕ ಪುತ್ತೂರು, ರಾತ್ರಿ 7:45ಕ್ಕೆ ಸುಬ್ರಹ್ಮಣ್ಯ ರೋಡ್, 10:30ಕ್ಕೆ ಸಕಲೇಶಪುರ, 11:30ಕ್ಕೆ ಹಾಸನ ತಲುಪಿ, ಅಂತಿಮವಾಗಿ ಮರುದಿನ ಬೆಳಗಿನ ಜಾವ 3:00 ಗಂಟೆಗೆ ಯಶವಂತಪುರ ನಿಲ್ದಾಣವನ್ನು ತಲುಪಲಿದೆ.
1. ಯಶವಂತಪುರ – ವಿಜಯಪುರ – ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 06561/06562)
ಯಶವಂತಪುರ ಮತ್ತು ವಿಜಯಪುರ ನಡುವೆ ಓಡಾಡಲಿರುವ 'ರೈಲು ಸಂಖ್ಯೆ 06561' ವಿಶೇಷ ರೈಲು ಸೆಪ್ಟೆಂಬರ್ 11 ಮತ್ತು 13, 2026ರಂದು (ಶುಕ್ರವಾರ ಮತ್ತು ಭಾನುವಾರ) ಯಶವಂತಪುರದಿಂದ ಸಂಜೆ 6:15ಕ್ಕೆ ಹೊರಟು, ಮರುದಿನ ಬೆಳಿಗ್ಗೆ 5:15ಕ್ಕೆ ವಿಜಯಪುರ ತಲುಪಲಿದೆ.
ಮರುಮಾರ್ಗದಲ್ಲಿ 'ರೈಲು ಸಂಖ್ಯೆ 06562' ವಿಶೇಷ ರೈಲು ಸೆಪ್ಟೆಂಬರ್ 12 ಮತ್ತು 14, 2026ರಂದು (ಶನಿವಾರ ಮತ್ತು ಸೋಮವಾರ) ವಿಜಯಪುರದಿಂದ ಸಂಜೆ 5:00 ಗಂಟೆಗೆ ಹೊರಟು, ಮರುದಿನ ಬೆಳಗಿನ ಜಾವ 4:45ಕ್ಕೆ ಯಶವಂತಪುರವನ್ನು ತಲುಪಲಿದೆ.
ನಿಲುಗಡೆಗಳು: ಈ ರೈಲು ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಗದಗ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಬೋಗಿಗಳ ವಿವರ: ಈ ರೈಲು ಒಟ್ಟು 20 ಬೋಗಿಗಳನ್ನು ಒಳಗೊಂಡಿರಲಿದೆ. ಇದರಲ್ಲಿ 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 5 ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ದಿವ್ಯಾಂಗಜನ್ ಅನುಕೂಲವುಳ್ಳ 2 ಎಸ್‌ಎಲ್‌ಆರ್‌ಡಿ ಬೋಗಿಗಳು ಸೇರಿವೆ.
2. ಎಸ್‌ಎಂವಿಟಿ ಬೆಂಗಳೂರು – ಬೆಳಗಾವಿ – ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ (ವಿಶೇಷ ರೈಲುಗಳು)
ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಮತ್ತು ಬೆಳಗಾವಿ ನಡುವೆ ಎರಡು ಪ್ರತ್ಯೇಕ ಟ್ರಿಪ್‌ಗಳಲ್ಲಿ ವಿಶೇಷ ರೈಲುಗಳು ಸಂಚರಿಸಲಿವೆ.
ಮೊದಲ ಟ್ರಿಪ್ (ರೈಲು ಸಂಖ್ಯೆ: 06563/06564):
'ರೈಲು ಸಂಖ್ಯೆ 06563' ಸೆಪ್ಟೆಂಬರ್ 11, 2026ರ ಶುಕ್ರವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06564' ಸೆಪ್ಟೆಂಬರ್ 12, 2026ರ ಶನಿವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.
ಎರಡನೇ ಟ್ರಿಪ್ (ರೈಲು ಸಂಖ್ಯೆ: 06583/06584):
'ರೈಲು ಸಂಖ್ಯೆ 06583' ಸೆಪ್ಟೆಂಬರ್ 13, 2026ರ ಭಾನುವಾರ ಸಂಜೆ 7:00 ಗಂಟೆಗೆ SMVT ಬೆಂಗಳೂರಿನಿಂದ ಹೊರಟು, ಮರುದಿನ ಬೆಳಿಗ್ಗೆ 8:25ಕ್ಕೆ ಬೆಳಗಾವಿ ತಲುಪಲಿದೆ. ಮರುಪ್ರಯಾಣದ 'ರೈಲು ಸಂಖ್ಯೆ 06584' ಸೆಪ್ಟೆಂಬರ್ 14, 2026ರ ಸೋಮವಾರ ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಟು, ಮರುದಿನ ಬೆಳಿಗ್ಗೆ 5:00 ಗಂಟೆಗೆ SMVT ಬೆಂಗಳೂರು ತಲುಪಲಿದೆ.
ನಿಲುಗಡೆಗಳು: ಈ ರೈಲುಗಳು ಚಿಕ್ಕಬಾಣಾವರ, ತುಮಕೂರು, ಅರಸೀಕೆರೆ, ದಾವಣಗೆರೆ, ಎಸ್‌ಎಮ್‌ಎಮ್ ಹಾವೇರಿ, ಎಸ್‌ಎಸ್‌ಎಸ್ ಹುಬ್ಬಳ್ಳಿ, ಧಾರವಾಡ, ಅಲ್ನಾವರ, ಖಾನಾಪುರ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿವೆ.
ಬೋಗಿಗಳ ವಿವರ: ಈ ರೈಲುಗಳು 1 ಫಸ್ಟ್ ಕ್ಲಾಸ್ ಎಸಿ, 1 ಎಸಿ 2-ಟೈರ್, 3 ಎಸಿ 3-ಟೈರ್, 9 ಸ್ಲೀಪರ್ ಕ್ಲಾಸ್, 4 ಜನರಲ್ ಸೆಕೆಂಡ್ ಕ್ಲಾಸ್ ಮತ್ತು 2 ಎಸ್‌ಎಲ್‌ಆರ್‌ಡಿ ಸೇರಿದಂತೆ ಒಟ್ಟು 20 ಕೋಚ್‌ಗಳನ್ನು ಒಳಗೊಂಡಿರುತ್ತವೆ.


