ಶಿವರಾಜ್‌ಕುಮಾರ್ ಅಭಿನಯದ ‘ಬೇಲ್’ ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಪವನ್ ಒಡೆಯರ್ ನಿರ್ದೇಶನದ ಚಿತ್ರದಲ್ಲಿ ಶಿವಣ್ಣ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅಕ್ಟೋಬರ್ 2ರಂದು ಸಿನಿಮಾ ರಿಲೀಸ್.
- Home
- News
- State
- Karnataka News Live: ಶಿವಣ್ಣನ ‘ಬೇಲ್’ ಟೀಸರ್ ರಿಲೀಸ್ - ಪೊಲೀಸ್ ಆಫೀಸರ್ ಅವತಾರದಲ್ಲಿ ಖಡಕ್ ಎಂಟ್ರಿ, ಕಥೆ ಏನು?
Karnataka News Live: ಶಿವಣ್ಣನ ‘ಬೇಲ್’ ಟೀಸರ್ ರಿಲೀಸ್ - ಪೊಲೀಸ್ ಆಫೀಸರ್ ಅವತಾರದಲ್ಲಿ ಖಡಕ್ ಎಂಟ್ರಿ, ಕಥೆ ಏನು?

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಮಹತ್ವದ ಮಾತುಕತೆ ನಡೆಸಿದರು. ಸುಮಾರು ಒಂದೂಕಾಲು ಗಂಟೆ ನಡೆದ ಮಾತುಕತೆ ವೇಳೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು, ಖಾಲಿ ಇರುವ ಸಚಿವ ಸ್ಥಾನ ತುಂಬುವುದು ಹಾಗೂ ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ.
ಮತ್ತೊಂದೆಡೆ ರಾಜ್ಯ ಸರ್ಕಾರದಲ್ಲಿ ಖಾಲಿಯಿರುವ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ಪಡೆಯಲುಲಾಬಿ ಮಾಡುವುದಕ್ಕೆ 10 ಶಾಸಕರು ಹಾಗೂ ಕಾಂಗ್ರೆಸ್ ನಾಯಕರು ದೆಹಲಿಗೆ ದಾಂಗುಡಿ ಇಟ್ಟಿದ್ದಾರೆ. ತಮಗೆ ನಿಗಮ ಮಂಡಳಿಗಳನ್ನಾದರೂ ದಯಪಾಲಿಸುವಂತೆ ಹೈಕಮಾಂಡ್ ಮುಂದೆ ಮೊರೆಯಿಟ್ಟಿದ್ದಾರೆ. ಆದರೆ, ಇದೀಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರಾಜ್ಯಕ್ಕೆ ವಾಪಸ್ ಬಂದಿದ್ದು, ಮುಂದೆ ಯಾವ ಬದಲಾವಣೆ ಆಗಲಿದೆ ನಿರೀಕ್ಷಿಸಲಾಗಿದೆ.
Karnataka News Liveಶಿವಣ್ಣನ ‘ಬೇಲ್’ ಟೀಸರ್ ರಿಲೀಸ್ - ಪೊಲೀಸ್ ಆಫೀಸರ್ ಅವತಾರದಲ್ಲಿ ಖಡಕ್ ಎಂಟ್ರಿ, ಕಥೆ ಏನು?
Karnataka News Liveಮಂತ್ರಿಯಾದ 25 ದಿನಕ್ಕೆ ನಾಗೇಂದ್ರ ರಾಜೀನಾಮೆ, ವಿಯೇಂದ್ರ ನೇತೃತ್ವದ ಹೋರಾಟಕ್ಕೆ ಮಣಿದ ಕಾಂಗ್ರೆಸ್ ಸರ್ಕಾರ
ಪ್ರಮಾಣ ವಚನ ಸ್ವೀಕರಿಸಿದ 25 ದಿನಕ್ಕೆ ಬಿ ನಾಗೇಂದ್ರ ರಾಜೀನಾಮೆ ನೀಡಿದ್ದಾರೆ. ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ನಡೆಸಿದ ಸತತ ಹೋರಾಟಕ್ಕೆ ಗೆಲುವು ಸಿಕ್ಕಿದೆ. ವಾಲ್ಮೀಕಿ ಹಗರಣದ ಆರೋಪ ಹೊತ್ತಿರುವ ನಾಗೇಂದ್ರ ರಾಜೀನಾಮೆ ಅಂಗೀಕಾರಗೊಂಡಿದೆ.
Karnataka News Liveವಿಮರ್ಶೆ-ಟ್ರೋಲ್‌ಗಳ ನಡುವೆ ಯಶ್‌ಗೆ ಕಿಚ್ಚನ ಬೆಂಬಲ - ‘ಟಾಕ್ಸಿಕ್’ ಬಗ್ಗೆ ಸುದೀಪ್ ಹೇಳಿದ್ದೇನು?
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಬಗ್ಗೆ ಪರ-ವಿರೋಧದ ಚರ್ಚೆ ನಡೆಯುತ್ತಿರುವ ನಡುವೆ ಕಿಚ್ಚ ಸುದೀಪ್ ಮತ್ತು ಉಪೇಂದ್ರ ಚಿತ್ರತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ಟಾಕ್ಸಿಕ್’ನ ವಿಭಿನ್ನ ಪ್ರಯತ್ನವನ್ನು ಸುದೀಪ್ ಮೆಚ್ಚಿಕೊಂಡಿದ್ದು, ಉಪೇಂದ್ರ ಕೂಡ ಸಿನಿಮಾ ನೋಡಿ ಹೊಸ ಅನುಭವ ಎಂದಿದ್ದಾರೆ.
Karnataka News Liveಅಪ್ಪನ ಸಿನಿಮಾ ಸಂಪರ್ಕ ಬಳಸಲಿಲ್ಲ - ಈ ಕಾರಣಕ್ಕೆ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ವಿಯಾರಾ ವೃದ್ಧಿ
ಕನ್ನಡ ಚಿತ್ರರಂಗಕ್ಕೆ ಹೊಸ ಹೆಜ್ಜೆ ಇಡುತ್ತಿರುವ ವಿಯಾರಾ ವೃದ್ಧಿ, ತಮ್ಮ ತಂದೆಯ ಸಿನಿಮಾ ಸಂಪರ್ಕ ಬಳಸದೆ ಸ್ವಂತ ದಾರಿಯಲ್ಲಿ ಸಾಗಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ‘ಕೌಂತೇಯ’ ಮತ್ತು ‘ಯುವರ್ಸ್ ಸಿನ್ಸಿಯರ್ಲಿ ರಾಮ್’ ಸಿನಿಮಾಗಳ ಬಗ್ಗೆ ಹಾಗೂ ವಿಭಿನ್ನ ಪಾತ್ರಗಳ ಕನಸಿನ ಕುರಿತು ನಟಿ ಮಾತನಾಡಿದ್ದಾರೆ.
Karnataka News Liveನಾಗೇಂದ್ರ ರಾಜೀನಾಮೆಗೆ ಹೋರಾಟ ಅಂತ್ಯವಾಗಲ್ಲ, ಸರ್ಕಾರಕ್ಕೆ ಬಿವೈ ವಿಜಯೇಂದ್ರ ಬಿಗ್ ವಾರ್ನಿಂಗ್
ವಾಲ್ಮೀಕಿ ಹಗರಣ ಆರೋಪ ಹೊತ್ತಿರುವ ಸಚಿವ ಬಿ ನಾಗೇಂದ್ರ ಕೊನೆಗೂ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ನಡೆಸಿದ ಸತತ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಆದರೆ ನಾಗೇಂದ್ರ ರಾಜೀನಾಮೆಯಿಂದ ಬಿಜೆಪಿ ಹೋರಾಟ ಅಂತ್ಯಗೊಳ್ಳುತ್ತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ.
Karnataka News Live'ನಾನು ಈಗಷ್ಟೇ ಶುರು ಮಾಡಿದ್ದೇನೆ' - 10 ವರ್ಷಗಳ ಸಿನಿ ಜರ್ನಿ ಬಗ್ಗೆ ಆಶಿಕಾ ರಂಗನಾಥ್ ಮಾತು
ಚಿತ್ರರಂಗದಲ್ಲಿ 10 ವರ್ಷ ಪೂರೈಸಿರುವ ಆಶಿಕಾ ರಂಗನಾಥ್, ತಮ್ಮ ಸಿನಿ ಜರ್ನಿ, ಸಿನಿಮಾ ಆಯ್ಕೆ, ವರ್ಕ್-ಲೈಫ್ ಬ್ಯಾಲೆನ್ಸ್ ಮತ್ತು ಹೊಸ ಪಾತ್ರಗಳ ಬಗ್ಗೆ ಮಾತನಾಡಿದ್ದಾರೆ. ಗಲ್-ನೆಕ್ಸ್ಟ್-ಡೋರ್ ಇಮೇಜ್‌ನಿಂದ ಹೊರಬಂದು ಆ್ಯಕ್ಷನ್, ಪೀರಿಯಡ್ ಡ್ರಾಮಾ ಹಾಗೂ ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ್ದಾರೆ.
Karnataka News Liveಸೆಪ್ಟೆಂಬರ್‌ನಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ಸಾಲು ಸಾಲು ರಜೆ; ಲಾಂಗ್ ವೀಕ್ ಎಂಡ್ ಯಾವಾಗ ಸಿಗುತ್ತೆ?
Karnataka News LiveEl Nino ಎಷ್ಟು ವರ್ಷ ಇರುತ್ತೆ? ಸೆಪ್ಟೆಂಬರ್‌ನಲ್ಲಿ ಆದರೂ ಮಳೆ ಬರುತ್ತಾ?
ದೇಶದಲ್ಲಿ ಎಲ್ ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ?
Karnataka News Liveಬಳ್ಳಾರಿಯಲ್ಲಿ ಇಮ್ಮಡಿ ಹರಿಹರನ ಕಾಲದ 2 ಅಪರೂಪದ ಜಿನ ಶಾಸನಗಳು ಪತ್ತೆ! ವಿಜಯನಗರ ಕಾಲದ ಭೂಮಿ ದಾನ ಉಲ್ಲೇಖ
Karnataka News Liveಬರಿದಾದ ಕೆರೆಗೆ ಜೀವಕಳೆ - ಎತ್ತಿನಹೊಳೆ ವ್ಯರ್ಥ ನೀರೇ ಆಸರೆ; ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ ಎರಡು ಗ್ರಾಮಸ್ಥರು..!
Karnataka News Liveಟಾರ್ಗೆಟ್ 2028 ಟಾಸ್ಕ್, ಕುಮಾರಸ್ವಾಮಿ-ನಿಖಿಲ್‌ಗೆ ಹೊಸ ಜವಾಬ್ದಾರಿ! JDS ಪಾಳಯದಲ್ಲಿ ಸಂಚಲನ
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಲಾಗಿದೆ. ಇದರ ಬೆನ್ನಲ್ಲೇ HDK ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಯುವಕರಿಗೆ ಕರೆ ನೀಡಿದ್ದಾರೆ.
Karnataka News Liveವಾಲ್ಮೀಕಿ ಹಗರಣ - ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಕೊನೆಗೂ ರಾಜೀನಾಮೆ; ಹೈಕಮಾಂಡ್ ಸೂಚನೆ ಬೆನ್ನಲ್ಲೇ ನಿರ್ಧಾರ!
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಆರೋಪದ ಹಿನ್ನೆಲೆಯಲ್ಲಿ, ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ವಿರೋಧ ಪಕ್ಷಗಳ ತೀವ್ರ ಒತ್ತಡ ಮತ್ತು ಕಾಂಗ್ರೆಸ್ ಹೈಕಮಾಂಡ್ ಸೂಚನೆಯ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಅವರು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಅಧಿಕೃತವಾಗಿ ಘೋಷಿಸಲಿದ್ದಾರೆ.
Karnataka News Live200 ಕೋಟಿ ವೆಚ್ಚ, 18 ಅಂತಸ್ತು; ಬೆಂಗಳೂರಿನಲ್ಲಿ ಇಂದಿನಿಂದ ಬೃಹತ್ ಕಟ್ಟಡ ತೆರವು ಕಾರ್ಯ ಆರಂಭ
Karnataka News Liveಕಲ್ಯಾಣ ಕರ್ನಾಟಕದಲ್ಲಿ ಭೀಕರ ಬರ - ಆದರೂ, ಸರ್ಕಾರದ ಆದೇಶ ಪಟ್ಟಿಯಲ್ಲಿಲ್ಲ ಬರಪೀಡಿತ ತಾಲೂಕುಗಳು!
Karnataka News Liveಮಂಡ್ಯ ಜನರ ಧೈರ್ಯ - ಪೊಲೀಸ್ ಠಾಣೆಯಿಂದ ಪರಾರಿ ಆಗ್ತಿದ್ದ ಕಳ್ಳನನ್ನ, ಕೈಲಿರೋ ಬೇಡಿ ನೋಡಿ ಅಟ್ಟಾಡಿಸಿ ಹಿಡಿದರು!
Karnataka News Liveನಮ್ಮ ಮೆಟ್ರೋದಲ್ಲಿ ಸಿಂಪಲ್ ಆಗಿ ಪ್ರಯಾಣ ಮಾಡಿದ ಮೈಸೂರು ಎಕ್ಸ್‌ಪ್ರೆಸ್ ಜಾವಗಲ್ ಶ್ರೀನಾಥ್
Karnataka News Liveಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ₹8.40 ಕೋಟಿ ಲೂಟಿ - ಕಿಂಗ್‌ಪಿನ್ ರವೀಂದ್ರಕುಮಾರ್ ಅರೆಸ್ಟ್!
Karnataka News Live6 ವರ್ಷಗಳ ಬಳಿಕ ಧಾರವಾಡಕ್ಕೆ ಶಾಸಕ ವಿನಯ್ ಕುಲಕರ್ಣಿ ಎಂಟ್ರಿ, ಆದ್ರೆ ಮೊದಲ ಆಯ್ಕೆ ಮನೆಯಲ್ಲ!
ಧಾರವಾಡ (ಆ.28): ಕಳೆದ ಆರು ವರ್ಷಗಳಿಂದ ಸ್ವಕ್ಷೇತ್ರಕ್ಕೆ ಪ್ರವೇಶವಿಲ್ಲದೆ ದೂರವೇ ಉಳಿದಿದ್ದ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ (Vinay Kulkarni) ಅವರಿಗೆ ಕೊನೆಗೂ ರಿಲೀಫ್ ಸಿಕ್ಕಿದ್ದು, ಇಂದು (ದಿನಾಂಕ) ಅಧಿಕೃತವಾಗಿ ಧಾರವಾಡ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಆದರೆ, ಧಾರವಾಡಕ್ಕೆ ಬಂದಿಳಿದ ತಕ್ಷಣ ಅವರು ತಮ್ಮ ಮನೆಗೆ ತೆರಳದೆ, ನೇರವಾಗಿ ದೇವರ ದರ್ಶನ ಹಾಗೂ ಮಠಾಧೀಶರ ಆಶೀರ್ವಾದ ಪಡೆಯಲು 'ಟೆಂಪಲ್ ರನ್' (Temple Run) ಆರಂಭಿಸಿದ್ದಾರೆ.
Karnataka News Liveಎಲ್ಲಾ ತ್ಯಾಗಕ್ಕೆ ನಾಗೇಂದ್ರ ಸಿದ್ಧ, ಆತ ಪಕ್ಷನಿಷ್ಠ ನಾಯಕ: ಡಿಕೆಶಿ
ವಾಲ್ಮೀಕಿ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆಗೆ ಒತ್ತಡ ಹೆಚ್ಚಾಗಿದ್ದು, ಸಿಎಂ ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ರಾಹುಲ್ ಗಾಂಧಿ ಜೊತೆ ಚರ್ಚಿಸಿದ್ದಾರೆ. ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.
ವಾಲ್ಮೀಕಿ ಹಗರಣದ ಆರೋಪಿ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಪಾದಯಾತ್ರೆಗೆ ಸಜ್ಜಾಗುತ್ತಿರುವ ನಡುವೆಯೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಗುರುವಾರ ದೆಹಲಿಯಲ್ಲಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಜೊತೆ ಮಹತ್ವದ ಮಾತುಕತೆ ನಡೆಸಿದರು.
ಸುಮಾರು ಒಂದೂಕಾಲು ಗಂಟೆ ನಡೆದ ಮಾತುಕತೆ ವೇಳೆ ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಪ್ರತಿಪಕ್ಷಗಳ ಪಟ್ಟು, ಖಾಲಿ ಇರುವ ಸಚಿವ ಸ್ಥಾನ ತುಂಬುವುದು ಹಾಗೂ ಸಂಪುಟದಲ್ಲಿ ಬದಲಾವಣೆ ಮಾಡುವ ವಿಚಾರಗಳ ಕುರಿತು ಸುದೀರ್ಘ ಮಾತುಕತೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ. ಬಳಿಕ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಜೊತೆಗೂ ಅವರು ಮಾತುಕತೆ ನಡೆಸಿದರು. ಈ ಮಧ್ಯೆ, ಸಚಿವ ನಾಗೇಂದ್ರ ಕೂಡ ದೆಹಲಿಗೆ ಆಗಮಿಸಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.