MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Duleep Trophy Final
Today's Horoscope in Kannada
Mantralaya Online Scam
Hubballi Ganeshotsava
Kalaburagi Drought List
Pitru Paksha 2026 Date
PM Modi Meeting
Karnataka Farmers
Gulbarga Bus Accident
Western Ghats ESA
Karnataka Taxi Fare Meter
Bigg Boss Kannada 13
  • Home
  • News
  • State
  • ಕಾಂಗ್ರೆಸ್‌ನಲ್ಲಿ ' ಸರ್ಕಾರಿ ಬಂಗಲೆ' ವಾರ್: ಮಹದೇವಪ್ಪ ಮನೆಯಲ್ಲಿದ್ದಾಗಲೇ ಪೇಂಟಿಂಗ್ ಆರಂಭಿಸಿದ ಭೈರತಿ ಸುರೇಶ್!

ಕಾಂಗ್ರೆಸ್‌ನಲ್ಲಿ ' ಸರ್ಕಾರಿ ಬಂಗಲೆ' ವಾರ್: ಮಹದೇವಪ್ಪ ಮನೆಯಲ್ಲಿದ್ದಾಗಲೇ ಪೇಂಟಿಂಗ್ ಆರಂಭಿಸಿದ ಭೈರತಿ ಸುರೇಶ್!

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ಬಂಗಲೆಗಾಗಿ ಕಾಂಗ್ರೆಸ್ ನಾಯಕರಾದ ಎಚ್.ಸಿ. ಮಹದೇವಪ್ಪ ಮತ್ತು ಭೈರತಿ ಸುರೇಶ್ ನಡುವೆ ವಿವಾದ ಭುಗಿಲೆದ್ದಿದೆ. ಮಹದೇವಪ್ಪನವರು ನಿವಾಸ ಖಾಲಿ ಮಾಡುವ ಮುನ್ನವೇ, ಸುರೇಶ್ ಅವರು ನವೀಕರಣ ಕಾರ್ಯ ಆರಂಭಿಸಿ, ಶೆಡ್ ಕೆಡವಿರುವುದು ತೀವ್ರ ಚರ್ಚೆಗೆ ಕಾರಣವಾಗಿದೆ.

2 Min read
Author : Sathish Kumar KH
Published : Sep 07 2026, 12:30 PM IST
Share this Photo Gallery
  • FB
  • TW
  • Linkdin
  • Whatsapp
13
ಸರ್ಕಾರಿ ಬಂಗಲೆಗಾಗಿ ಸಚಿವರ ಹೋರಾಟ
Image Credit : Asianet News

ಸರ್ಕಾರಿ ಬಂಗಲೆಗಾಗಿ ಸಚಿವರ ಹೋರಾಟ

ಬೆಂಗಳೂರು (ಸೆ.07): ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರ ನಡುವೆ ಇದೀಗ 'ಸರ್ಕಾರಿ ಬಂಗಲೆ' ಕಿತ್ತಾಟ ತಾರಕಕ್ಕೇರಿದೆ. ರಾಜಧಾನಿಯ ಪ್ರತಿಷ್ಠಿತ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸವನ್ನು ಮಾಜಿ ಸಚಿವ, ಹಿರಿಯ ಮುಖಂಡ ಡಾ. ಎಚ್‌.ಸಿ. ಮಹದೇವಪ್ಪ ಅವರು ಖಾಲಿ ಮಾಡುವ ಮುನ್ನವೇ, ಹಾಲಿ ಸಚಿವ ಭೈರತಿ ಸುರೇಶ್ ಆ ಮನೆಯ ನವೀಕರಣ ಕಾರ್ಯ ಆರಂಭಿಸಿರುವುದು ತೀವ್ರ ವಿವಾದ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಮಹದೇವಪ್ಪ ಅವರು ಇನ್ನೂ ಮನೆಯಲ್ಲೇ ವಾಸ್ತವ್ಯ ಹೂಡಿರುವಾಗಲೇ ಮನೆಗೆ ಪೇಂಟಿಂಗ್ ಮಾಡಿಸುವುದು ಹಾಗೂ ಸಾರ್ವಜನಿಕರ ಭೇಟಿಗಾಗಿ ನಿರ್ಮಿಸಲಾಗಿದ್ದ ಶೆಡ್ ಅನ್ನು ಒಡೆಸಿ ಹಾಕಿರುವುದು ಕಾಂಗ್ರೆಸ್ ಪಾಳೆಯದಲ್ಲಿ ಭಾರೀ ಮುಜುಗರ ಸೃಷ್ಟಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಮನೆಯಲ್ಲಿದ್ದಾಗಲೇ ಶೆಡ್ ಧ್ವಂಸ, ಪೇಂಟಿಂಗ್ ಶುರು!
Image Credit : Asianet News

ಮನೆಯಲ್ಲಿದ್ದಾಗಲೇ ಶೆಡ್ ಧ್ವಂಸ, ಪೇಂಟಿಂಗ್ ಶುರು!

ಸದ್ಯ ಡಾ. ಎಚ್.ಸಿ. ಮಹದೇವಪ್ಪ ವಾಸವಿರುವ ಕ್ರೆಸೆಂಟ್ ರಸ್ತೆಯ ಸರ್ಕಾರಿ ನಿವಾಸವು ಹಾಲಿ ಸಚಿವ ಭೈರತಿ ಸುರೇಶ್ ಅವರಿಗೆ ಹಂಚಿಕೆಯಾಗಿದೆ (Allot). ನಿಯಮಾವಳಿಗಳ ಪ್ರಕಾರ ಯಾವುದೇ ಸಚಿವರು ಅಥವಾ ಶಾಸಕರು ಸರ್ಕಾರಿ ನಿವಾಸವನ್ನು ತೆರವುಗೊಳಿಸಲು ಕನಿಷ್ಠ 6 ತಿಂಗಳ ಕಾಲಾವಕಾಶವಿರುತ್ತದೆ. ಆದರೆ, ಮಹದೇವಪ್ಪ ಅವರು ಮನೆ ಹುಡುಕಿ ಖಾಲಿ ಮಾಡುವ ಮುನ್ನವೇ ಭೈರತಿ ಸುರೇಶ್ ಅತಿಯಾದ ಆತುರ ತೋರಿದ್ದಾರೆ ಎನ್ನಲಾಗಿದೆ. ಖುದ್ದು ಭೈರತಿ ಸುರೇಶ್ ಅವರೇ ಸ್ಥಳಕ್ಕೆ ಭೇಟಿ ನೀಡಿ, ಮಹದೇವಪ್ಪ ಅವರು ಸಾರ್ವಜನಿಕರನ್ನು ಭೇಟಿ ಮಾಡುತ್ತಿದ್ದ ಮೀಟಿಂಗ್ ಹಾಲ್/ಶೆಡ್ ಅನ್ನು ನೆಲಸಮ ಮಾಡಿಸಿದ್ದಾರೆ.

ಮಹದೇವಪ್ಪ ಅವರು ಮನೆಯ ಒಳಗಿರುವಾಗಲೇ ಹೊರಗಡೆ ಪೇಂಟಿಂಗ್ ಹಾಗೂ ನವೀಕರಣ ಕಾಮಗಾರಿ ಶುರುಮಾಡಿಸಲಾಗಿದೆ. ಅಷ್ಟೇ ಅಲ್ಲದೆ, ಮಹದೇವಪ್ಪ ಅವರ ಮನೆಯ ಸಿಬ್ಬಂದಿಗೆ ಭೈರತಿ ಸುರೇಶ್ ಆವಾಜ್ ಹಾಕಿದ್ದು, ಕೇವಲ 2 ದಿನಗಳಲ್ಲಿ ಮನೆ ಖಾಲಿ ಮಾಡುವಂತೆ ತಾಕೀತು ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

Related Articles

Related image1
ಫ್ರಿ ಬಸ್ ಸ್ಮಾರ್ಟ್‌ಕಾರ್ಡ್‌ ವಿತರಣೆಗೆ ಸಿದ್ಧವಾಯ್ತು ಹೊಸ ಸೂತ್ರ: ಸಚಿವ ಬೈರತಿ ಸುರೇಶ್‌
Related image2
ಗ್ಯಾರಂಟಿ ಯೋಜನೆಯಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ: ಸಚಿವ ಬೈರತಿ ಸುರೇಶ್
33
ಪಾಪ ಅವರಿಗೆ ಬಹಳ ಕಷ್ಟ ಇರಬಹುದು: ಮಹದೇವಪ್ಪ ಮಾರ್ಮಿಕ ತಿರುಗೇಟು!
Image Credit : Asianet News

ಪಾಪ ಅವರಿಗೆ ಬಹಳ ಕಷ್ಟ ಇರಬಹುದು: ಮಹದೇವಪ್ಪ ಮಾರ್ಮಿಕ ತಿರುಗೇಟು!

ಭೈರತಿ ಸುರೇಶ್ ಅವರ ಈ ಅಸಹನೆ ಮತ್ತು ವರ್ತನೆಗೆ ಅತ್ಯಂತ ಸಂಯಮ ಹಾಗೂ ಮಾರ್ಮಿಕ ವ್ಯಂಗ್ಯದ ಮೂಲಕವೇ ಡಾ. ಎಚ್.ಸಿ. ಮಹದೇವಪ್ಪ ಪ್ರತ್ಯುತ್ತರ ನೀಡಿದ್ದಾರೆ. 'ಮನೆ ಭೈರತಿ ಸುರೇಶ್‌ಗೆ ಅಲಾಟ್ ಆಗಿದೆ. ಖಾಲಿ ಮಾಡಿ ಎಂದಿದ್ದಾರೆ, ಖಾಲಿ ಮಾಡಬೇಕಲ್ಲವೇ? ಪಾಪ... ಅವರಿಗೆ ಬಹಳ ಕಷ್ಟ ಇರಬಹುದು, ಬಹಳ ಬೇಗ ಇಲ್ಲಿಗೆ ಬರಬೇಕೆಂಬ ಆತುರ ಇರಬಹುದು. ಇಲ್ಲಿ ಹಿರಿಯ-ಕಿರಿಯ ನಾಯಕ ಎಂಬ ಪ್ರಶ್ನೆಯೇ ಬರಲ್ಲ. ಅವರು ಮಿನಿಸ್ಟರ್ ಇದ್ದಾರೆ, ಅವರ ಕೆಲಸ ಕಾರ್ಯಗಳಿಗೆ ಅಡ್ಡಿ ಆಗಬಾರದು. ನಾನು ಬಾಡಿಗೆ ಮನೆ ಹುಡುಕುತ್ತಿದ್ದೇನೆ, ಸಿಕ್ಕ ತಕ್ಷಣ ಖಾಲಿ ಮಾಡಿಕೊಡುತ್ತೇನೆ. ಪಾಪ ಅವರು ಕೇಳ್ತಿದ್ದಾರೆ, ಅವರಿಗೆ ತೊಂದರೆ ಆಗಬಾರದು ಎಂದು ಬಿಡುತ್ತಿದ್ದೇನೆ. ನಾನು ಸರ್ಕಾರಿ ಕೆಲಸದಲ್ಲಿದ್ದೆ, ಮನೆ ಕೊಟ್ಟಿದ್ದರು. ಈಗ ನಾನಿಲ್ಲ, ಬೇಗ ಬಿಡ್ತೇನೆ. ಇದರಲ್ಲಿ ನಾನು ಯಾರ ತಪ್ಪನ್ನೂ ಹುಡುಕಲ್ಲ' ಎಂದು ಕುಟುಕಿದ್ದಾರೆ.

ಪಕ್ಷದ ಹಿರಿಯ ನಾಯಕನೊಬ್ಬ ಇನ್ನೂ ಮನೆಯಲ್ಲೇ ಇರುವಾಗ ಈ ರೀತಿ ದರ್ಪ ಪ್ರದರ್ಶಿಸಿ, ಮನೆಗೆ ಬಣ್ಣ ಬಳಿಯಲು ಮುಂದಾಗಿರುವ ಕಿರಿಯ ಸಚಿವ ಭೈರತಿ ಸುರೇಶ್ ಅವರ ನಡೆಗೆ ಸ್ವಪಕ್ಷೀಯರೇ ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಹೆಚ್.ಸಿ. ಮಹದೇವಪ್ಪ
ಬೈರತಿ ಸುರೇಶ್
ಕರ್ನಾಟಕ ಸುದ್ದಿ
ಕರ್ನಾಟಕ ರಾಜಕೀಯ

Latest Videos
Recommended Stories
Recommended image1
ಕರ್ನಾಟಕದಲ್ಲಿ ಟ್ಯಾಕ್ಸಿಗಳ ದರ ಸುಲಿಗೆಗೆ ಬ್ರೇಕ್, ಮೀಟರ್ ಕಡ್ಡಾಯಕ್ಕೆ ಮುಂದಾದ ಸಾರಿಗೆ ಇಲಾಖೆ
Recommended image2
90Km ವೇಗದಲ್ಲಿದ್ದಾಗ ಎದ್ದು ನಿಂತ ಚಾಲಕ! ಜಮೀನಿಗೆ ನುಗ್ಗಿ ನಿಂತ ಖಾಸಗಿ ಬಸ್! ಭಯಾನಕ ವಿಡಿಯೋ ವೈರಲ್!
Recommended image3
Karnataka News Live: ಕಾಂಗ್ರೆಸ್‌ನಲ್ಲಿ ' ಸರ್ಕಾರಿ ಬಂಗಲೆ' ವಾರ್ - ಮಹದೇವಪ್ಪ ಮನೆಯಲ್ಲಿದ್ದಾಗಲೇ ಪೇಂಟಿಂಗ್ ಆರಂಭಿಸಿದ ಭೈರತಿ ಸುರೇಶ್!
Related Stories
Recommended image1
ಫ್ರಿ ಬಸ್ ಸ್ಮಾರ್ಟ್‌ಕಾರ್ಡ್‌ ವಿತರಣೆಗೆ ಸಿದ್ಧವಾಯ್ತು ಹೊಸ ಸೂತ್ರ: ಸಚಿವ ಬೈರತಿ ಸುರೇಶ್‌
Recommended image2
ಗ್ಯಾರಂಟಿ ಯೋಜನೆಯಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ: ಸಚಿವ ಬೈರತಿ ಸುರೇಶ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved