MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • Karnataka Districts
  • El Nino ಎಷ್ಟು ವರ್ಷ ಇರುತ್ತೆ? ಸೆಪ್ಟೆಂಬರ್‌ನಲ್ಲಿ ಆದರೂ ಮಳೆ ಬರುತ್ತಾ?

El Nino ಎಷ್ಟು ವರ್ಷ ಇರುತ್ತೆ? ಸೆಪ್ಟೆಂಬರ್‌ನಲ್ಲಿ ಆದರೂ ಮಳೆ ಬರುತ್ತಾ?

ದೇಶದಲ್ಲಿ ಎಲ್‌ ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ?

2 Min read
Author : Sumanth SN
Published : Aug 28 2026, 03:38 PM IST
Share this Photo Gallery
  • FB
  • TW
  • Linkdin
  • Whatsapp
17
ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ?
Image Credit : Gemini

ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ?

ದೇಶದಲ್ಲಿ ಎಲ್‌ ನಿನೋ ಪ್ರಭಾವ ತೀವ್ರವಾಗಿದೆ. ಅದರಲ್ಲೂ ದಕ್ಷಿಣ ಭಾರತದ ರಾಜ್ಯಗಳ ಮೇಲೆ ಇದರ ಪ್ರಭಾವ ಹೆಚ್ಚಾಗಿದೆ. ಎಲ್ ನಿನೋ ಪ್ರಭಾವದಿಂದ ನಿರೀಕ್ಷತ ಪ್ರಮಾಣದಲ್ಲಿ ಮಳೆಯಾಗಿಲ್ಲ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿಯೂ ನೀರಿನ ಶೇಖರಣೆ ಪ್ರಮಾಣ ಕಡಿಮೆಯಾಗಿದೆ. ಈ ಪರಿಸ್ಥಿತಿ ಮುಂದುವರಿದರೆ ಕುಡಿಯುವ ನೀರಿನ ಸಮಸ್ಯೆ ಕೂಡ ಉದ್ಭವಿಸಲಿದೆ. ಎಲ್ ನಿನೋ ಹೇಗೆ ಕಡಿಮೆಯಾಗುತ್ತದೆ? ಈ ರೀತಿ ಏನಾಗಬೇಕು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಎಲ್ ನಿನೋ ಕಾರಣದಿಂದ ಜಗತ್ತಿನಾದ್ಯಂತ ತೀವ್ರ ಬರ
Image Credit : X

ಎಲ್ ನಿನೋ ಕಾರಣದಿಂದ ಜಗತ್ತಿನಾದ್ಯಂತ ತೀವ್ರ ಬರ

ಜಗತ್ತಿನ ಹವಾಮಾನವನ್ನು ತಲೆಕೆಳಗಾಗಿ ಮಾಡುತ್ತಿರುವ ಎಲ್ ನಿನೋ ಪ್ರಭಾವ ಹೇಗೆ ಕಡಿಮೆಯಾಗುತ್ತದೆ? ಸಾಮಾನ್ಯ ವಾತಾವರಣದ ಸ್ಥಿತಿಗೆ ಹವಾಮಾನ ಯಾವಾಗ ಬದಲಾವಣೆ ಆಗಲಿದೆ ಎಂಬ ಪ್ರಶ್ನೆಗಳು ತಜ್ಞರು ಸೇರಿದಂತೆ ಸಾಮಾನ್ಯ ಜನರನ್ನು ಕಾಡುತ್ತಿದೆ. ಎಲ್ ನಿನೋ ಕಾರಣದಿಂದ ಜಗತ್ತಿನಾದ್ಯಂತ ಉಷ್ಣತೆ, ತೀವ್ರ ಬರ ಸ್ಥಿತಿ, ಕೆಲವು ಕಡೆ ಭಾರೀ ಮಳೆ-ಪ್ರವಾಹಗಳು ಉಂಟಾಗುತ್ತಿವೆ. ಆದರೆ ಪ್ರಕೃತಿಯ ಈ ಋತುವಿನಲ್ಲಿ ಎಲ್ ನಿನೋ ಯಾವಾಗ ಪ್ರಭಾವ ಕಡಿಮೆಯಾಗುವ ಪ್ರಭಾವ ಸಮುದ್ರ ವಾತಾವರಣ ಪ್ರಕ್ರಿಯೆಯಿಂದ ನಡೆಯುತ್ತದೆ.

Related Articles

Related image1
Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ
Related image2
Now Playing
ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
37
ಎಲ್ ನಿನೋ ಉತ್ತುಂಗ ತಲುಪಿದ ಬಳಿಕ
Image Credit : X

ಎಲ್ ನಿನೋ ಉತ್ತುಂಗ ತಲುಪಿದ ಬಳಿಕ

'ಎಲ್ ನಿನೋ' (El Niño) ಎಂಬುದು ಮಧ್ಯ ಮತ್ತು ಪೂರ್ವ ಪೆಸಿಫಿಕ್ ಮಹಾಸಾಗರದ ಮೇಲ್ಮೈ ನೀರು ವಾಡಿಕೆಗಿಂತ ಗಮನಾರ್ಹವಾಗಿ ಹೆಚ್ಚು ಬಿಸಿಯಾಗುವ ವಿದ್ಯಮಾನವಾಗಿದೆ. ಸಮುದ್ರದ ಮೇಲ್ಮೈ ತಾಪಮಾನವು ಮತ್ತೆ ತಣ್ಣಗಾಗಲು ಪ್ರಾರಂಭಿಸಿದಾಗ ಇದರ ತೀವ್ರತೆಯು ಕುಗ್ಗಲು ಆರಂಭವಾಗುತ್ತದೆ. ಎಲ್ ನಿನೋ (El Niño) ತನ್ನ ಉತ್ತುಂಗವನ್ನು ತಲುಪಿದ ನಂತರ, ಸಾಗರದ ಆಳದಿಂದ ತಣ್ಣನೆಯ ನೀರಿನ ಪ್ರವಾಹಗಳು ಮೇಲಕ್ಕೆ ಏರಲು ಪ್ರಾರಂಭಿಸುತ್ತವೆ. ಇದರ ಪರಿಣಾಮವಾಗಿ, ಬೆಚ್ಚಗಾದ ಮೇಲ್ಮೈ ನೀರಿನ ತಾಪಮಾನವು ಕ್ರಮೇಣ ಕಡಿಮೆಯಾಗಿ ಸಾಮಾನ್ಯ ಮಟ್ಟಕ್ಕೆ ಮರಳುತ್ತದೆ. ಹವಾಮಾನಶಾಸ್ತ್ರದಲ್ಲಿ, ಈ ಪ್ರಕ್ರಿಯೆಯನ್ನು "ತಟಸ್ಥ ಹಂತ" (neutral phase) ಎಂದು ಕರೆಯಲಾಗುತ್ತದೆ.

47
ಈ ಸಂದರ್ಭದಲ್ಲಿ ಎಲ್ ನಿನೋ ಪ್ರಭಾವ ಸಂಪೂರ್ಣ ಕಡಿಮೆಯಾಗಲಿದೆ
Image Credit : X

ಈ ಸಂದರ್ಭದಲ್ಲಿ ಎಲ್ ನಿನೋ ಪ್ರಭಾವ ಸಂಪೂರ್ಣ ಕಡಿಮೆಯಾಗಲಿದೆ

ಎಲ್ ನಿನೋ ಪ್ರಭಾವ ಉಂಟಾದ ಸಂದರ್ಭದಲ್ಲಿ ಪಶ್ಚಿಮದಿಂದ ಪೂರ್ವಕ್ಕೆ ಬೀಸುವ ಗಾಳಿಯ ವೇಗ ಕಡಿಮೆಯಾಗುತ್ತದೆ. ಆದರೆ ಎಲ್ ನಿನೋ ಬಲ ಕಡಿಮೆಯಾಗುವ ಸಂದರ್ಭದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಬೀಸುವ ಮಾರುತಗಳು ಮತ್ತೆ ಬಲಪಡೆದುಕೊಂಡು ಚಲಿಸಲು ಪ್ರಾರಂಭಿಸುತ್ತವೆ. ಈ ಬಲವಾದ ಗಾಳಿಯೂ ಸಮುದ್ರದ ಮೇಲ್ಮೈ ಇರುವ ಬೀಸಿ ನೀರನ್ನು ಪಶ್ಚಿಮ ಪೆಸಿಫಿಕ್ (ಏಷ್ಯಾ, ಆಸ್ಟ್ರೇಲಿಯಾ) ಕಡೆಗೆ ಬೀಸುವಂತೆ ಮಾಡುತ್ತದೆ. ಪೂರ್ವ ಪೆಸಿಫಿಕ್ ತೀರದಲ್ಲಿ ಖಾಲಿಯಾಗುವ ಸ್ಥಳದಲ್ಲಿ ಸಮುದ್ರದ ಅಳದಲ್ಲಿರುವ ತಣ್ಣನೆಯ ನೀರು ಮೇಲಕ್ಕೆ ಬಂದು ಸೇರುತ್ತದೆ. ಇದು ಪ್ರಾರಂಭವಾದ ಸಂದರ್ಭದಲ್ಲಿ ಎಲ್ ನಿನೋ ಪ್ರಭಾವ ಸಂಪೂರ್ಣವಾಗಿ ಕಡಿಮೆಯಾಗಲಿದೆ.

57
ಸಾಗರದ ಮೇಲ್ಮೈ ಅಡಿಯಲ್ಲಿ ಚಲಿಸುವ ಕೆಲ್ವಿನ್ ಅಲೆಗಳು
Image Credit : 2026 Heatwave In India Extreme North India Summer Hot Weather IMD Alert Delhi temperature to rise Mega El Nino Fears

ಸಾಗರದ ಮೇಲ್ಮೈ ಅಡಿಯಲ್ಲಿ ಚಲಿಸುವ ಕೆಲ್ವಿನ್ ಅಲೆಗಳು

ಸಾಗರದಲ್ಲಿ ಉಂಟಾಗುವ 'ಕೆಲ್ವಿನ್ ಅಲೆಗಳು' (Kelvin waves) ವಾತಾವರಣದ ಬದಲಾವಣೆಗಳಿಗೆ ಕಾರಣವಾಗುವ ಪ್ರಮುಖ ಅಂಶಗಳಾಗಿವೆ. ಸಾಗರದ ಮೇಲ್ಮೈ ಅಡಿಯಲ್ಲಿ ಚಲಿಸುವ ಈ ಕೆಲ್ವಿನ್ ಅಲೆಗಳು ಪಶ್ಚಿಮದಿಂದ ಪೂರ್ವಕ್ಕೆ ಸಾಗುವಾಗ, ತಮ್ಮ ಹಾದಿಯಲ್ಲಿರುವ ಬೆಚ್ಚಗಿನ ನೀರಿನ ಪದರಗಳ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸುತ್ತವೆ. ಇದರ ಪರಿಣಾಮವಾಗಿ, ಸಾಗರದ ನೀರಿನಲ್ಲಿರುವ ಉಷ್ಣತೆಯು ಕ್ರಮೇಣ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ ಅಥವಾ ಇತರ ಪ್ರದೇಶಗಳಿಗೆ ಹರಡುತ್ತದೆ, ಇದರಿಂದಾಗಿ ತಾಪಮಾನದಲ್ಲಿ ಇಳಿಕೆಯಾಗುತ್ತದೆ.

67
ಎಲ್ ನಿನಾ ಸ್ಥಿತಿ ನಿರ್ಮಾಣ
Image Credit : Asianet News

ಎಲ್ ನಿನಾ ಸ್ಥಿತಿ ನಿರ್ಮಾಣ

ಎಲ್‌ ನಿನೋ ಪ್ರಭಾವ ಕಡಿಮೆಯಾದ ಬಳಿಕ ಸಾಮಾನ್ಯ ವಾತಾವರಣ ನಿರ್ಮಾಣವಾಗುತ್ತದೆ, ಈ ಬಳಿಕ ಸಮುದ್ರ ಪ್ರದೇಶಗಳು ಸಾಮಾನ್ಯಕ್ಕಿಂತ ಹೆಚ್ಚು ತಣ್ಣಗಾಗಿ ನಿನಾ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಎಲ್ ನಿನೋ ಭಾರತದಲ್ಲಿ ಮಳೆಯ ಪ್ರಭಾವ, ಮಳೆಗಾಲದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಬರಗಾಲ ನಿರ್ಮಾಣವಾಗಲು ಕಾರಣವಾದರೆ. ಎಲ್ ನಿನೋ ಪ್ರಭಾವ ಕಡಿಮೆಯಾಗಿ ಎಲ್ ನಿನಾ ಸ್ಥಿತಿ ನಿರ್ಮಾಣವಾದರೆ ನೈರುತ್ಯ ಮಾನ್ಸೂನ್ ಮಾರುತಗಳು ಅತ್ಯಂತ ವೇಗವಾಗಿ ದೇಶದಾದ್ಯಂತ ವಿಸ್ತರಣೆಯಾಗಿ ಭಾರೀ ಮಳೆಯಾಗುತ್ತದೆ.

77
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆ
Image Credit : Asianet News

ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆ

ಭಾರತದ ಕೃಷಿಯ ಮೇಲೆ ಹಾಗೂ ಜಲಾಶಯಗಳ ನೀರಿನ ಸಂಗ್ರಹಕ್ಕೆ ರಿಲೀಫ್ ನೀಡುತ್ತದೆ. ಎಲ್ ನಿನೋ ಮುಗಿದ ಬಳಿಕ ಲಾ ನಿನಾ ಆರಂಭವಾಗಲು ಕೆಲವು ತಿಂಗಳಿಂದ ಗರಿಷ್ಠ 1-2 ವರ್ಷಗಳು ತೆಗೆದುಕೊಳ್ಳುತ್ತದೆ. ಇದು ವರ್ಷಗಳ ಕಾಲ ನಡೆಯುವ ಸುದೀರ್ಘ ಪ್ರಕ್ರಿಯೆ ಆಗಿದ್ದು, ಕೆಲವು ಸಂದರ್ಭಗಳಲ್ಲಿ ಕೇವಲ ಒಂದು ವರ್ಷದಲ್ಲಿಯೇ ಬದಲಾವಣೆಗಳು ನಡೆಯುತ್ತದೆ. ಕರ್ನಾಟಕದಲ್ಲಿ ಸೆಪ್ಟೆಂಬರ್ 01ರ ವರೆಗೂ ಮಳೆ ಚಟುವಟಿಕೆಗಳು ಮತ್ತೆ ಚುರುಕುಗೊಳ್ಳುವ ನಿರೀಕ್ಷೆ ಇದ್ದು, ಕರ್ನಾಟಕದಾದ್ಯಂ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಕರ್ನಾಟಕ ಮಳೆ
ಮುಂಗಾರು ಮಳೆ

Latest Videos
Recommended Stories
Recommended image1
ಕೇಂದ್ರದ 7 ಚತುಷ್ಪಥ ರೈಲು ಯೋಜನೆಯಲ್ಲಿ ರಾಜ್ಯಕ್ಕೆ ‘ಮಲತಾಯಿ ಧೋರಣೆ’; ಸಚಿವ ಎಂ.ಬಿ.ಪಾಟೀಲ್ ಆಕ್ರೋಶ!
Recommended image2
ಬಳ್ಳಾರಿಯಲ್ಲಿ ಇಮ್ಮಡಿ ಹರಿಹರನ ಕಾಲದ 2 ಅಪರೂಪದ ಜಿನ ಶಾಸನಗಳು ಪತ್ತೆ! ವಿಜಯನಗರ ಕಾಲದ ಭೂಮಿ ದಾನ ಉಲ್ಲೇಖ
Recommended image3
ಬರಿದಾದ ಕೆರೆಗೆ ಜೀವಕಳೆ: ಎತ್ತಿನಹೊಳೆ ವ್ಯರ್ಥ ನೀರೇ ಆಸರೆ; ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ ಎರಡು ಗ್ರಾಮಸ್ಥರು..!
Related Stories
Recommended image1
Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ
Recommended image2
Now Playing
ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved