- Home
- Karnataka Districts
- ಸೆಪ್ಟೆಂಬರ್‌ನಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ಸಾಲು ಸಾಲು ರಜೆ; ಲಾಂಗ್ ವೀಕ್ ಎಂಡ್ ಯಾವಾಗ ಸಿಗುತ್ತೆ?
ಸೆಪ್ಟೆಂಬರ್‌ನಲ್ಲಿ ಶಾಲೆ, ಕಾಲೇಜು, ಕಚೇರಿಗಳಿಗೆ ಸಾಲು ಸಾಲು ರಜೆ; ಲಾಂಗ್ ವೀಕ್ ಎಂಡ್ ಯಾವಾಗ ಸಿಗುತ್ತೆ?
2026ರ ಸೆಪ್ಟೆಂಬರ್ ತಿಂಗಳು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ಸಾಲು ಸಾಲು ರಜೆಗಳನ್ನು ತರಲಿದೆ. ಕೃಷ್ಣ ಜನ್ಮಾಷ್ಟಮಿ ಮತ್ತು ಗಣೇಶ ಚತುರ್ಥಿ ಹಬ್ಬಗಳು ವಾರಾಂತ್ಯದೊಂದಿಗೆ ಸೇರಿ ಎರಡು ಲಾಂಗ್ ವೀಕೆಂಡ್‌ಗಳನ್ನು ಸೃಷ್ಟಿಸುತ್ತವೆ. ಈ ತಿಂಗಳಿನಲ್ಲಿರುವ ಒಟ್ಟು ರಜೆಗಳ ಸಂಪೂರ್ಣ ವಿವರ ಇಲ್ಲಿದೆ.

ಸೆಪ್ಟೆಂಬರ್ ರಜಾ ಪಟ್ಟಿ: ಅಚ್ಚರಿ ಕಾದಿದೆಯೇ?
ಆಗಸ್ಟ್ ತಿಂಗಳ ರೀತಿಯಲ್ಲಿಯೇ ಸೆಪ್ಟೆಂಬರ್‌ನಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಸಾಲು ಸಾಲು ರಜೆ ಸಿಗಲಿದೆ. ವೀಕ್ ಎಂಡ್‌ಗಳು ಸ್ವಲ್ಪ ಹೆಚ್ಚಾಗಿ ಸಿಗಲಿದ್ದು, ಸೆಪ್ಟೆಂಬರ್‌ನಲ್ಲಿ ಒಟ್ಟು ಎಷ್ಟು ರಜೆಗಳಿದೆ ಎಂದು ತಿಳಿದುಕೊಳ್ಳಲು ಈ ಸ್ಟೋರಿ ಓದಿ.
ಸಿಗಲಿದೆ ಸಾಲು ಸಾಲು ರಜೆ
ಆಗಸ್ಟ್ ತಿಂಗಳಿನಲ್ಲಿ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ಸಾಲು ಸಾಲು ರಜೆ ಸಿಗಲಿದೆ. ಆಷಾಢ ಮಾಸದಲ್ಲಿ ಆರಂಭವಾದ ರಜೆಗಳ ಪರಂಪರೆ ಸ್ವಾತಂತ್ರ್ಯ ದಿನಾಚರಣೆ, ವರಲಕ್ಷ್ಮೀ ಪೂಜೆ, ಈದ್ ಮಿಲಾದ್ ವರೆಗೂ ಮುಂದುವರೆದಿತ್ತು. ಶ್ರಾವಣ ಹುಣ್ಣಿಮೆಯೊಂದಿಗೆ ಈ ತಿಂಗಳ ಸೇವೆಗಳು ಮುಗಿಯಲಿದ್ದು, ಆಗಸ್ಟ್ ತಿಂಗಳು ಮುಗಿದರೂ ಮುಂದಿನ ತಿಂಗಳಿನಲ್ಲಿ ರಜೆಗಳ ಸಾಲುಗಳು ಮುಂದುವರಿಯಲಿದೆ. ಸೆಪ್ಟೆಂಬರ್‌ನಲ್ಲಿ ಸಾಲು ಸಾಲು ರಜೆ ಇರಲಿದ್ದು, ಹಬ್ಬದ ರಜೆಗಳು ವೀಕ್ ಎಂಡ್ ನೊಂದಿಗೆ ಸೇರಿ ಬರಲಿದೆ. ಇದರೊಂದಿಗೆ ವೀಕೆಂಡ್, ಲಾಮಗ್ ವೀಕೆಂಡ್ ಆಗಿ ಬದಲಾವಣೆಯಾಗಲಿದೆ.
ಸೆಪ್ಟೆಂಬರ್ ಮೊದಲ ವಾರವೇ ಲಾಂಗ್ ವೀಕೆಂಡ್ ಸಿಗಲಿದೆ
ಸೆಪ್ಟೆಂಬರ್ 04 ರಂದು (ಶುಕ್ರವಾರ) ಹಿಂದೂಗಳು ಪವಿತ್ರಾವಾಗಿ ಭಾವಿಸುವ ಶ್ರೀಕೃಷ್ಣನ ಜನ್ಮ ದಿನಾಚರಣೆ, ಈ ದಿನ ದೇಶದಾದ್ಯಂತ ಕೃಷ್ಣಾಷ್ಟಮಿ ಆಚರಣೆ ಅದ್ಧೂರಿಯಾಗಿ ನಡೆಯಲಿದೆ. ಕರ್ನಾಟಕದ ಜನರು ಕೂಡ ಈ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುತ್ತಾರೆ. ದೇಶದ ಹಲವು ರಾಜ್ಯಗಳಲ್ಲಿ ಕೃಷ್ಣ ಜನ್ಮಾಷ್ಟಮಿಗೆ ಅಧಿಕೃತವಾಗಿ ರಜೆ ಇದ್ದು, ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ರಜೆ ಸಿಗಲಿದೆ. ಕರ್ನಾಟಕದಲ್ಲಿ ಮಾತ್ರ ಸಾರ್ವತ್ರಿಕ ರಜೆ ಇಲ್ಲ, ಆದರೆ ಪರಿಮಿತ ರಜೆ ಪಟ್ಟಿಯಲ್ಲಿ ಅವಕಾಶ ನೀಡಲಾಗಿದ್ದು, ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯನಿರ್ಹಿಸುತ್ತವೆ.
ಸೆಪ್ಟೆಂಬರ್ 5ರ ಶನಿವಾರ, ಬೆಂಗಳೂರು ಸೇರಿದಂತೆ ದೇಶದ ಹಲವು ಐಟಿ, ಕಾರ್ಪೋರೇಟ್ ಉದ್ಯೋಗಿಗಳಿಗೆ ವಾರದ ರಜೆ ಇರಲಿದೆ. ಕೆಲವು ಶಾಲೆಗಳಿಗೆ ಈ ದಿನವೂ ರಜೆ ಇರುತ್ತದೆ. ವಿದ್ಯಾರ್ಥಿಗಳಿಗೆ ಹೊರತು ಪಡಿಸಿದರೆ ಉದ್ಯೋಗಿಗಳಿಗೆ ಲಾಂಗ್ ವೀಕ್ ಎಂಡ್ ರಜೆ ಸಿಗಲಿದೆ. ಇನ್ನು ಸೆಪ್ಟೆಂಬರ್ 06 ಭಾನುವಾರ ಆಗಿರುವುದರಿಂದ ವಿದ್ಯಾರ್ಥಿಗಳಿಗೆ, ಉದ್ಯೋಗಿಗಳಿಗೆ ರಜೆ ಇರಲಿದೆ. ಇದರಂತೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಲಾಂಗ್ ವೀಕ್ ಎಂಡ್ ಸಿಗಲಿದೆ.
ಸೆಪ್ಟೆಂಬರ್ ಎರಡನೇ ವಾರವೂ ಲಾಂಗ್ ವೀಕ್ ಎಂಡ್
ಸೆಪ್ಟೆಂಬರ್‌ನ ಮೊದಲ ವಾರದಂತೆಯೇ, ಎರಡನೇ ವಾರವೂ ದೀರ್ಘ ವಾರಾಂತ್ಯದ ರಜೆಯನ್ನು (long weekend) ಒದಗಿಸುತ್ತದೆ. ಪ್ರತಿ ತಿಂಗಳ ಎರಡನೇ ಶನಿವಾರದಂದು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಕಚೇರಿಗಳಿಗೆ ಅಧಿಕೃತ ರಜೆ ಇರುತ್ತದೆ. ಸೆಪ್ಟೆಂಬರ್ 12 ಎರಡನೇ ಶನಿವಾರದಂದು ಬರುವುದರಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳಿಗೆ ರಜೆ ಇರುತ್ತದೆ. ಹಾಗೆಯೇ ಸೆಪ್ಟೆಂಬರ್ 13 (ಭಾನುವಾರ) ಎಂದಿನಂತೆ ಸಾರ್ವತ್ರೀಕ ರಜಾದಿನವಾಗಿರುತ್ತದೆ.
ಸೆಪ್ಟೆಂಬರ್ 14 (ಸೋಮವಾರ) ಕೂಡ ಒಂದು ವಿಶೇಷ ರಜಾದಿನವಾಗಿದೆ. ಈ ದಿನದಂದು ಗಣೇಶ ಹಬ್ಬ ಬರುವುದರಿಂದ, ಕರ್ನಾಟಕ ಸರ್ಕಾರ ಇದನ್ನು ಅಧಿಕೃತ ರಜಾದಿನವೆಂದು ಘೋಷಿಸಿವೆ. ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳಾದ್ಯಂತ ವಿಜೃಂಭಣೆಯ ಆಚರಣೆಗಳು ನಡೆಯುತ್ತವೆ. ಪ್ರತಿಯೊಂದು ಬಡಾವಣೆಯಲ್ಲೂ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುತ್ತದೆ ಮತ್ತು ಮನೆಗಳಲ್ಲೂ ದೇವರಿಗೆ ಅತ್ಯಂತ ಭಕ್ತಿಯಿಂದ ಪೂಜೆ ಸಲ್ಲಿಸಲಾಗುತ್ತದೆ. ಇದರ ಜೊತೆಗೆ, ರಾಜ್ಯದ ಹಲವು ಜಿಲ್ಲೆಗಳಲ್ಲಿ ವಿಗ್ರಹ ವಿಸರ್ಜನೆಯ ದಿನದಂದೂ ರಜೆಯನ್ನು ಘೋಷಿಸಲಾಗಿದೆ.
ಸೆಪ್ಟೆಂಬರ್ 12, 13 ಮತ್ತು 14 ರಂದು (ಅಂದರೆ ಎರಡನೇ ಶನಿವಾರ, ಭಾನುವಾರ ಮತ್ತು ಸೋಮವಾರ) ಸತತ ರಜೆಗಳು ಬರುತ್ತಿರುವುದರಿಂದ, ಈ ವಾರಾಂತ್ಯವು ವಾಸ್ತವವಾಗಿ ದೀರ್ಘ ವಾರಾಂತ್ಯವಾಗಿ (long weekend) ಪರಿವರ್ತನೆಗೊಳ್ಳುತ್ತಿದೆ. ಇದರಿಂದಾಗಿ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಮ್ಮ ಕುಟುಂಬದೊಂದಿಗೆ ವಿನಾಯಕ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗುತ್ತದೆ.
ಸೆಪ್ಟೆಂಬರ್ 23ರಂದು ಮತ್ತೊಂದು ರಜೆ
ಮುಸ್ಲಿಮರ ಹಬ್ಬ ಯಝ್‍ದಹುಮ್ ಶರೀಫ್ ಇರುವುದರಿಂದ ತೆಲಂಗಾಣ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ರಜೆ ಇರಲಿದೆ. ಖ್ಯಾತ ಸೂಫಿ ಸಂತ ಹಜರತ್ ಖಾದಿರ್ ಜಿಲಾನಿ (ಗೌಸ್-ಎ-ಆಜಮ್) ಅವರ ಸ್ಮರಣಾರ್ಥ ಆಚರಿಸಲಾಗುವ ಪವಿತ್ರ ಧಾರ್ಮಿಕ ಆಚರಣೆಯಾಗಿದೆ. ಈ ಶುಭ ದಿನದಂದು ರಜೆ ಪಡೆಯಲು ಬಯಸುವ ಸರ್ಕಾರಿ ನೌಕರರು, ಪೂರ್ವಾನುಮತಿ ಪಡೆಯುವ ಮೂಲಕ ವೇತನ ಸಹಿತ ರಜೆಯನ್ನು ಪಡೆಯಬಹುದು.
ಒಟ್ಟು ಎಷ್ಟು ರಜೆಗಳು ಸಿಗಲಿದೆ?
ಸೆಪ್ಟೆಂಬರ್‌ನಲ್ಲಿ ಒಟ್ಟು 30 ದಿನಗಳಿದ್ದು, ಇದರಲ್ಲಿ 6,13,20,27 ದಿನಾಂಕಗಳಂದು ಭಾನುವಾರ ಆಗಿರುವುದರಿಂದ ನಾಲ್ಕು ರಜೆ, ಸೆಪ್ಟೆಂಬರ್ 12ರಂದು ಎರಡನೇ ಶನಿವಾರ ರಜೆ, ಸೆಪ್ಟೆಂಬರ್ 04 ರಂದು ಕೃಷ್ಣ ಜನ್ಮಾಷ್ಟಮಿ, ಸೆಪ್ಟೆಂಬರ್ 14ರಂದು ಗಣೇಶ ಹಬ್ಬ ಇರುವುದರಿಂದ ವಿಶೇಷ ರಜೆ ಸಿಗಲಿದೆ. ಇದರಂತೆ ಮುಂದಿನ ತಿಂಗಳು ಒಟ್ಟು 7 ರಜೆ ದಿನಗಳು ಸಿಗಲಿದ್ದು, ಆಪ್ಷನಲ್ ಹಾಲಿಡೇ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸ್ಥಳೀಯ ಹಬ್ಬಗಳ ಕಾರಣದಿಂದಾಗಿ ಹೆಚ್ಚುವರಿ ರಜೆಗಳು ಇರುವ ಸಾಧ್ಯತೆಯೂ ಇರುತ್ತದೆ.

