MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • News
  • Politics
  • ಟಾರ್ಗೆಟ್ 2028 ಟಾಸ್ಕ್, ಕುಮಾರಸ್ವಾಮಿ-ನಿಖಿಲ್‌ಗೆ ಹೊಸ ಜವಾಬ್ದಾರಿ! JDS ಪಾಳಯದಲ್ಲಿ ಸಂಚಲನ

ಟಾರ್ಗೆಟ್ 2028 ಟಾಸ್ಕ್, ಕುಮಾರಸ್ವಾಮಿ-ನಿಖಿಲ್‌ಗೆ ಹೊಸ ಜವಾಬ್ದಾರಿ! JDS ಪಾಳಯದಲ್ಲಿ ಸಂಚಲನ

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರಿಗೆ 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಲಾಗಿದೆ. ಇದರ ಬೆನ್ನಲ್ಲೇ HDK ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ಯುವಕರಿಗೆ ಕರೆ ನೀಡಿದ್ದಾರೆ.

2 Min read
Author : Sumanth SN
Published : Aug 28 2026, 01:17 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರಧಾನಿ ಮೋದಿ ಭೇಟಿಯಾದ ಕುಮಾರಸ್ವಾಮಿ, ನಿಖಿಲ್
Image Credit : x.com hd kumaraswamy

ಪ್ರಧಾನಿ ಮೋದಿ ಭೇಟಿಯಾದ ಕುಮಾರಸ್ವಾಮಿ, ನಿಖಿಲ್

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಂದ್ರ ಸಚಿವ ಕುಮಾರಸ್ವಾಮಿ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು, ಕುಮಾರಸ್ವಾಮಿ ಅವರಿಗೆ ಹೊಸ ಟಾಸ್ಕ್ ಕೊಟ್ಟಿದ್ದಾರೆ. 2028ರ ಚುನಾವಣೆಯನ್ನು ಗುರಿಯಾಗಿಸಿಕೊಂಡು ಹೊಸ ಟಾಸ್ಕ್ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜೆಡಿಎಸ್‌ಗೆ ಮೋದಿ ಹೊಸ ಜವಾಬ್ದಾರಿ
Image Credit : x.com hd kumaraswamy

ಜೆಡಿಎಸ್‌ಗೆ ಮೋದಿ ಹೊಸ ಜವಾಬ್ದಾರಿ

ದೆಹಲಿ ಭೇಟಿಯ ಸಂದರ್ಭದಲ್ಲಿ ಕುಮಾರಸ್ವಾಮಿ ಮತ್ತು ಮೋದಿ ಅವರ ನಡುವೆ ಮಾತುಕತೆ ನಡೆಸಿದ್ದು, ಈ ವೇಳೆ ನಿಖಿಲ್ ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿ ಪ್ರಧಾನಿಗಳು ಮಾತನಾಡಿದ್ದರಂತೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಎಕ್ಸ್‌ ಕ್ಲೂಸಿವ್ ಮಾಹಿತಿ ಲಭ್ಯವಾಗಿದ್ದು, 2028ರ ಚುನಾವಣೆ ಗೆದ್ದು ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು. ಅದರಲ್ಲೂ ಇದಕ್ಕೆ ಬಿಜೆಪಿ ಜೆಡಿಎಸ್ ಮಿತ್ರಪಕ್ಷವಾಗಿ ಅದರ ಪಾತ್ರ ಹಾಗೂ ಟಾರ್ಗೆಟ್ ರೀಚ್ ಆಗಲು ಯಾವ ಪಾತ್ರವಹಿಸಬೇಕು ಎಂದು ಜೆಡಿಎಸ್‌ಗೆ ಮೋದಿ ಜವಾಬ್ದಾರಿ ನೀಡಿದ್ದಾರಂತೆ.

Related Articles

Related image1
113 ವರ್ಷಗಳ ದಾಖಲೆ ಬ್ರೇಕ್! ಪ್ರಭಾಸ್, ಅಲ್ಲು ಅರ್ಜುನ್, ಶಾರುಖ್ ಹಿಂದಿಕ್ಕಿ ಇತಿಹಾಸ ಬರೆದ ಯಶ್
Related image2
Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ
36
ಮೋದಿ ಅವರು ಕೊಟ್ಟ ಟಾಸ್ಕ್ ಏನು?
Image Credit : x.com hd kumaraswamy

ಮೋದಿ ಅವರು ಕೊಟ್ಟ ಟಾಸ್ಕ್ ಏನು?

ಏನೆಲ್ಲಾ ಮಾತುಕತೆ ಆಗಿದೆ? ಜೆಡಿಎಸ್‌ಗೆ ಮೋದಿ ಅವರು ಕೊಟ್ಟ ಟಾಸ್ಕ್ ಏನು ಅಂತ ನೋಡುವುದಾದರೆ, ರಾಜ್ಯದಲ್ಲಿ ಜೆನ್‌ ಝೀಗಳನ್ನು ಗುರುರಿಯಾಗಿಸಿಕೊಂಡು ಮೋದಿ ಅವರು ಕೆಲವು ಸಲಹೆ ನೀಡಿದ್ದರಂತೆ. ಈಗಾಗಲೇ ಬಿಜೆಪಿ ಹಿರಿಯ ನಾಯಕರಿಗೆ ಈ ಬಗ್ಗೆ ಟಾಸ್ಕ್ ಕೊಟ್ಟಿದ್ದೇವೆ. ಜೆನ್ ಝೀಗಳ ನಡುವೆ ಸಾವಿರ ಸಭೆಗಳನ್ನು ಮಾಡಿ ಅಂತ ಹೇಳಿದ್ದರಂತೆ. ಈಗ ಇದೇ ಟಾಸ್ಕ್ ಅನ್ನು ಜೆಡಿಎಸ್ ಯುವ ನಾಯಕ ನಿಖಿಲ್ ಅವರಿಗೂ ನೀಡಿದ್ದರಂತೆ.

46
ಹೊಸ ಮತದಾರರನ್ನು ಟಾರ್ಗೆಟ್ ಮಾಡಿ
Image Credit : x.com hd kumaraswamy

ಹೊಸ ಮತದಾರರನ್ನು ಟಾರ್ಗೆಟ್ ಮಾಡಿ

1997ರ ನಂತರ ಹುಟ್ಟಿರುವ ಹಾಗೂ ಹೊಸ ಮತದಾರರನ್ನು ಟಾರ್ಗೆಟ್ ಮಾಡಿ, ನಮ್ಮ ಕಡೆ ಸೆಳೆಯುವ ಕಾರ್ಯಕ್ರಮಗಳನ್ನು ರೂಪಿಸಿ. ಅವರ ಬೇಡಿಕೆಗಳು ಏನು? ಅವುಗಳಿಗೆ ತಕ್ಷಣದ ಪರಿಹಾರ ಏನು? ದೂರದೃಷ್ಟಿಯಿಂದ ಏನು ಮಾಡಬೇಕು ಎಂದು ನಿರ್ಧಾರ ಮಾಡಿ. ಇದಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮಗಳನ್ನು ರೂಪಿಸಿ ಎಂದು ಮೋದಿ ಸಲಹೆ ನೀಡಿದ್ದಾರಂತೆ.

56
ಸಂಪೂರ್ಣ ಇಮೇಜ್ ಬದಲಿಸುವ ತಾಕತ್ತು
Image Credit : x.com hd kumaraswamy

ಸಂಪೂರ್ಣ ಇಮೇಜ್ ಬದಲಿಸುವ ತಾಕತ್ತು

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೂ ಒಂದಷ್ಟು ಸಲಹೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದಾರಂತೆ. ಜೆನ್ ಝೀಗಳ ಶಕ್ತಿ ಏನು ಅಂತ ಈಗಾಗಲೇ ಗೊತ್ತಾಗಿದೆ. ಸಂಪೂರ್ಣ ಇಮೇಜ್ ಅನ್ನೇ ಬದಲಾವಣೆ ಮಾಡುವ ತಾಕತ್ತು ಈ ಯುವ ಸಮೂಹಕ್ಕೆ ಇದೆ. ಅವರನ್ನು ನಮ್ಮ ಕಡೆ ಸೆಳೆಯಲು ಕ್ರಿಯಾಶೀಲವಾಗಿ ಕೆಲಸ ಮಾಡಿ, ಪಕ್ಷದ ಯುವ ಘಟಕದೊಂದಿಗೆ ಕೆಲಸ ಮಾಡಿ. ಹೊಸ ಮತದಾರರನ್ನು ಸೆಳೆಯುವ ನಿಟ್ಟಿನಲ್ಲಿ ಕೆಲಸ ಮಾಡಲು ಶುರು ಮಾಡಿ ಎಂದು ಹೇಳಿದ್ದಾರಂತೆ.

66
ಎಚ್‌ಡಿಕೆ ತುರ್ತು ಸುದ್ದಿಗೋಷ್ಠಿ, ಹೇಳಿದ್ದೇನು?
Image Credit : x.com hd kumaraswamy

ಎಚ್‌ಡಿಕೆ ತುರ್ತು ಸುದ್ದಿಗೋಷ್ಠಿ, ಹೇಳಿದ್ದೇನು?

ಇನ್ನು, ಪ್ರಧಾನಿ ಮೋದಿ ಅವರು ಕೊಟ್ಟ ಟಾಸ್ಕ್ ಅನ್ನು ಜೆಡಿಎಸ್ ಸವಾಲಿನ ರೂಪದಲ್ಲಿ ಸ್ವೀಕಾರ ಮಾಡಿದ್ದು, ಹೊಸ ತಂತ್ರಗಾರಿಕೆ ರೂಪಿಸಲು ಸಿದ್ಧತೆ ನಡೆಸಿದೆಯಂತೆ. ಇದರಂತೆ ಶೀಘ್ರವೇ ಪಕ್ಷದ ಯುವಘಟಕದ ಮೂಲಕ ಟಾಸ್ಕ್ ಜಾರಿಗೆ ಮಾರ್ಗಸೂಚಿ ಮಾಡಿಕೊಂಡಿದೆಯಂತೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಬಳಿಕ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ರಾಜ್ಯ ಯಾವ ದಿಕ್ಕಿನಲ್ಲಿ ಹೋಗ್ತಾ ಇದೆ. ಹಲವಾರು ಸಮಸ್ಯೆ ಗಳು ಪ್ರತಿನಿತ್ಯ ಹೇಗೆ ನಡೆಯುತ್ತಿವೆ. ಬರಗಾಲ, ಮಂತ್ರಿಗಳ ರಾಜೀನಾಮೆ, ಕೆಪಿಎಸ್ಸಿ ಸಮಸ್ಯೆ, ಬೆಂಗಳೂರು ಅಭಿವೃದ್ಧಿ, ಇತ್ತೀಚಿನ ಅಧಿವೇಶನ, ಪಾರ್ಕ್ ಗಳ ಭೂಮಿ ಪಡೆದುಕೊಳ್ಳುವ ಬಿಲ್ ಹೀಗೆ ಅನೇಕ ವಿಚಾರಗಳಿವೆ. ಚರ್ಚೆ ಮಾಡ್ತಾ ಹೋದರೆ ಧಾರಾವಾಹಿ ರೀತಿ ಆಗುತ್ತದೆ. ಇಂದು ನಮ್ಮ ರಾಜ್ಯದ ಗೃಹ ಸಚಿವರಿಗೆ ಸಂಬಂಧಿಸಿದ ವಿಚಾರ ಮಾತನಾಡುತ್ತಿದ್ದು, ಎಪ್ಪತ್ತೈದು ಸಾವಿರ ಹುದ್ದೆಗಳ ನೇಮಕಾತಿ ಮಾಡಿಕೊಳ್ತೀವಿ ಅಂತ ಹೇಳಿ ಯಾವ ರೀತಿ ನಡೆಸುತ್ತಿದ್ದಾರೆ ನೋಡಿ. ನಿರುದ್ಯೋಗಿ ಯುವಕರು ನೀವು ಏಳದಿದ್ದರೆ, ಇದು ಸರಿ ಹೋಗೋದಿಲ್ಲ. ಮನೆ‌ ಮಠ ಹಾಳುಮಾಡಿಕೊಂಡು ಕೋಟಿ ಕೋಟಿ ಹಣ ಕೊಟ್ಟು ಬಂದು, ಯಾರ ತಲೆ‌ ಹೊಡೀತೀರಾ ನೀವು? ಯಾರಿಗೆ ಕಿಕ್ ಬ್ಯಾಕ್ ಹೋಗಿದೆ ಪ್ರಿಯಾಂಕ್ ಖರ್ಗೆಯವರೇ? ಇದರ ಬಗ್ಗೆ ಯಾಕೆ ಮಾತನಾಡೋದಿಲ್ಲ? ಈಗಾಗಲೇ ಅಪಾಯಿಟ್ಮೆಂಟ್ ಕೊಟ್ಟಾಗಿದೆ, ಒಂದು ವರ್ಷ ಸಂಬಳ ಕೊಟ್ಟಾಗಿದೆ, ಈಗ ಏನು ಕ್ರಮ ತಗೋತೀರಿ? ದೆಹಲಿಯಲ್ಲಿ ಅಪಾಯಿಟ್ಮೆಂಟ್ ಮಾಡುವಾಗ 360 ಡಿಗ್ರಿ ತನಿಕೆ ನಡೆಯುತ್ತೆ. ಇಲ್ಲಿ ಯಾಕೆ ಯಾವುದೇ ಪರಿಶೀಲನೆ ಮಾಡಲ್ಲ? ಯುವಕರು ಯಾಕೆ ಮೌನವಾಗಿದ್ದೀರಿ? ಇದನ್ನು ಸರಿಪಡಿಸಲು ನೀವು ಬೀದಿಗಿಳಿಯಬೇಕು. ನೀಟ್ ಪರೀಕ್ಷೆ ಅಕ್ರಮ ದಲ್ಲಿ ಹೋರಾಟ ಮಾಡಿದ ರೀತಿ ಇಲ್ಲೂ ರಾಜ್ಯದಲ್ಲಿ ಆಗಬೇಕು ಎಂದು ಯುವಕರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಕರೆ ಕೊಟ್ಟಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಹೆಚ್.ಡಿ. ಕುಮಾರಸ್ವಾಮಿ
ನರೇಂದ್ರ ಮೋದಿ
ಜನತಾದಳ (ಜಾತ್ಯತೀತ)
ಬಿಜೆಪಿ

Latest Videos
Recommended Stories
Recommended image1
ವಾಲ್ಮೀಕಿ ಹಗರಣ: ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ಕೊನೆಗೂ ರಾಜೀನಾಮೆ; ಹೈಕಮಾಂಡ್ ಸೂಚನೆ ಬೆನ್ನಲ್ಲೇ ನಿರ್ಧಾರ!
Recommended image2
'ಫೈಲ್ ನನ್ನ ಬಳಿಯೇ ಬರಬೇಕು ತಾನೇ?.. ಸಂಪುಟ ಬದಲಾವಣೆ ಚರ್ಚೆಗೆ ಖರ್ಗೆ ತೆರೆ: ಯಾವಾಗ ಏನು ಬೇಕಾದ್ರೂ ಆಗಬಹುದು ಎಂದಿದ್ದೇಕೆ ಹೆಬ್ಬಾಳ್ಕರ್?
Recommended image3
India News Live: ನಿಮ್ಮ ಪಿತ್ರಾರ್ಜಿತ ಆಸ್ತಿ ಮಾರಾಟ ಮಾಡಬಹುದೇ? ಅದಕ್ಕೆ ಇರುವ ತೆರಿಗೆ ನಿಯಮಗಳು ಏನೇನು..?
Related Stories
Recommended image1
113 ವರ್ಷಗಳ ದಾಖಲೆ ಬ್ರೇಕ್! ಪ್ರಭಾಸ್, ಅಲ್ಲು ಅರ್ಜುನ್, ಶಾರುಖ್ ಹಿಂದಿಕ್ಕಿ ಇತಿಹಾಸ ಬರೆದ ಯಶ್
Recommended image2
Irumudi Record: 105 ವರ್ಷಗಳ ದಾಖಲೆ ಬ್ರೇಕ್! ಬಾಹುಬಲಿ, RRR, ಪುಷ್ಪ ಸಿನಿಮಾಗಳಿಂದಲೇ ಆಗಲಿಲ್ಲ, ಇತಿಹಾಸ ಬರೆದ ರವಿತೇಜ ಸಿನಿಮಾ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved