
ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
ಜಮೀರ್ ಸಚಿನ ಸ್ಥಾನದ ಓಟಕ್ಕೆ ಆಡಿಯೋ ಬ್ರೇಕ್ ಬಿದ್ದಿದೆ. ಇತ್ತ 2023ರ ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷದಿಂದ ಕಾಂಗ್ರೆಸ್ಗೆ ಬಂದವರು ಸಹ ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಯಾರಿಗೆಲ್ಲಾ ಮಂತ್ರಿಗಿರಿ?
ಡಿ.ಕೆ.ಶಿವಕುಮಾರ್ ಅವರ ಮಂತ್ರಿಮಂಡಲದಲ್ಲಿ ಯಾರೆಲ್ಲಾ ಇರ್ತಾರೆ..? ಇರುವ 20 ಸ್ಥಾನಗಳಿಗೆ 40ಕ್ಕೂ ಅಧಿಕ ಶಾಸಕರು ಪಟ್ಟು ಹಾಕ್ತಿದ್ದಾರಲ್ಲಾ ಅವರಲ್ಲಿ ಯಾರಿಗೆಲ್ಲಾ ಮಂತ್ರಿಭಾಗ್ಯ ಸಿಗುತ್ತೆ..? ಈ ಎಲ್ಲಾ ಪ್ರಶ್ನೆಗಳಿಗೆ ಅಧಿಕೃತ ಉತ್ತರ ಸಿಗುವ ಸಮಯ ಹತ್ತಿರ ಬಂದಾಗಿದೆ. ರಾಜ್ಯ ನಾಯಕರು ಹಾಗೂ ದೆಹಲಿ ವರಿಷ್ಟರ ನಡುವೆ ನಡೆದ ಹೈವೋಲ್ಟೇಜ್ ಸಭೆಯ ಮೂಲಕ ಸಂಪುಟ ಸಸ್ಪೆನ್ಸ್ ಕಡೆಗೂ ಅಂತ್ಯಗೊಳ್ಳೋ ಕಾಲ ಸನ್ನೀಹಿತವಾಗಿದೆ.