10:35 PM (IST) Aug 20

India News Liveದಕ್ಷಿಣ ಭಾರತದಲ್ಲೇ ಒಂದೇ ವರ್ಷಕ್ಕೆ 806 ಕೋಟಿ ರೂ. ಆದಾಯ! - ನಷ್ಟದಲ್ಲಿದ್ದ ಭಾರತೀಯ ರೈಲ್ವೆಗೆ ಬಂಪರ್ 'ಖಜಾನೆ'ಯಾದ ವಂದೇ ಭಾರತ್!

ದೇಶದ ಸೆಮಿ-ಹೈಸ್ಪೀಡ್ ರೈಲು 'ವಂದೇ ಭಾರತ್ ಎಕ್ಸ್‌ಪ್ರೆಸ್' ಭಾರತೀಯ ರೈಲ್ವೆಗೆ ಬೃಹತ್ ಆದಾಯದ ಮೂಲವಾಗಿದೆ, ದಕ್ಷಿಣ ಭಾರತದಲ್ಲೇ 806 ಕೋಟಿ ರೂ. ಗಳಿಸಿದೆ. ದುಬಾರಿ ಟಿಕೆಟ್ ದರ, ಶೇ.100ರಷ್ಟು ಆಕ್ಯುಪೆನ್ಸಿ ಮತ್ತು ವೇಗದ ಪ್ರಯಾಣದ ಕಾರಣ ಇದು ಯಶಸ್ವಿಯಾಗಿದೆ.

Read Full Story
09:58 PM (IST) Aug 20

India News Liveಜಿಯೋ ರಿಚಾರ್ಜ್ ದರ ಹೆಚ್ಚಳ ಬಹುತೇಕ ಖಚಿತ - ಗ್ರಾಹಕರಿಗೆ ಶೀಘ್ರದಲ್ಲೇ ಶಾಕ್ ನೀಡಲು ಮುಹೂರ್ತ ಫಿಕ್ಸ್!

ರಿಲಯನ್ಸ್ ಜಿಯೋ ಶೀಘ್ರದಲ್ಲೇ ತನ್ನ ರೀಚಾರ್ಜ್ ದರಗಳನ್ನು ಶೇಕಡಾ 15-20 ರಷ್ಟು ಹೆಚ್ಚಿಸಲು ಸಿದ್ಧತೆ ನಡೆಸಿದೆ. ಈ ದರ ಏರಿಕೆಯಿಂದ ಗ್ರಾಹಕರನ್ನು ತಾತ್ಕಾಲಿಕವಾಗಿ ರಕ್ಷಿಸಲು, ಕಂಪನಿಯು ₹300 ಮೌಲ್ಯದ 'ಜಿಯೋ ಪ್ರೈಮ್ ಮೆಂಬರ್‌ಶಿಪ್' ಅನ್ನು ಪರಿಚಯಿಸಿದೆ.

Read Full Story
09:45 PM (IST) Aug 20

India News Liveಅಲ್ಲು ಅರ್ಜುನ್ ಜೊತೆ ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್? ‘ರಾಕ’ ಸಿನಿಮಾದಲ್ಲಿ ಮಹತ್ವದ ಪಾತ್ರದ ಆಫರ್!

ಪುಷ್ಪ 2 ನಂತರ ಅಲ್ಲು ಅರ್ಜುನ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಕ'. ಅಟ್ಲಿ ನಿರ್ದೇಶನದ ಈ ಚಿತ್ರದ ಬಗ್ಗೆ ಈಗೊಂದು ಬಿಸಿ ಬಿಸಿ ಸುದ್ದಿ ಹರಿದಾಡುತ್ತಿದೆ. ಹಾಲಿವುಡ್ ಸ್ಟಾರ್ ವಿಲ್ ಸ್ಮಿತ್ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ.

Read Full Story
09:26 PM (IST) Aug 20

India News Liveಶ್ರಾವಣ ಮಾಸದಲ್ಲಿ ನಿತಿನ್ ನಬಿನ್ ಮಾಂಸಾಹಾರ ತಿಂದ್ರಾ? 'ಇದು ಸುಳ್ಳು ಸುದ್ದಿ' ಕಾಂಗ್ರೆಸ್ ಪೋಸ್ಟ್‌ಗೆ ಬಿಜೆಪಿ ಕೆಂಡಾಮಂಡಲ!

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಶ್ರಾವಣ ಮಾಸದಲ್ಲಿ ಮಾಂಸಾಹಾರ ಸೇವಿಸಿದ್ದಾರೆಂದು ಛತ್ತೀಸ್‌ಗಢ ಕಾಂಗ್ರೆಸ್ ಸುಳ್ಳು ಪೋಸ್ಟ್ ಮಾಡಿದೆ ಎಂದು ಬಿಜೆಪಿ ಸಂಸದ ಸುಧಾಂಶು ತ್ರಿವೇದಿ ಕಿಡಿಕಾರಿದ್ದಾರೆ. ಇದು ಸೋಲಿನ ಹತಾಶೆಯಿಂದ ಮಾಡುತ್ತಿರುವ ಅಪಪ್ರಚಾರ ಎಂದು ಬಿಜೆಪಿ ಕಿಡಿಕಾರಿದೆ.

Read Full Story
08:24 PM (IST) Aug 20

India News Liveಐಟಿ ಉದ್ಯೋಗಿಗಳ ಪ್ರೈವೆಸಿಗೆ ಬಿತ್ತು ಕನ್ನ - ಲ್ಯಾಪ್‌ಟಾಪ್‌ಗಳಲ್ಲಿ ಮಾನಿಟರಿಂಗ್ ಸಾಫ್ಟ್‌ವೇರ್ ಹಾಕಿ ಟ್ರ್ಯಾಕ್‌ ಮಾಡಲು ಆರಂಭಿಸಿದ ಟಿಸಿಎಸ್!

TCS ತನ್ನ ಉದ್ಯೋಗಿಗಳ ಲ್ಯಾಪ್‌ಟಾಪ್‌ಗಳಲ್ಲಿ 'ಡಿಜಿಟಲ್ ಯೂಸರ್ ಎಕ್ಸ್‌ಪೀರಿಯನ್ಸ್ ಮಾನಿಟರಿಂಗ್' ಟೂಲ್ ಅಳವಡಿಸಿದೆ. ಈ ಕ್ರಮವು ಡೇಟಾ ಭದ್ರತೆಗಾಗಿಯೇ ಅಥವಾ ಉದ್ಯೋಗಿಗಳ ಚಟುವಟಿಕೆಗಳ ಮೇಲೆ ಕಣ್ಣಿಡಲು ಬಳಸಲಾಗುತ್ತಿದೆಯೇ ಎಂಬ ಆತಂಕ ಮತ್ತು ಅನುಮಾನಗಳನ್ನು ಸಿಬ್ಬಂದಿ ವಲಯದಲ್ಲಿ ಹುಟ್ಟುಹಾಕಿದೆ.

Read Full Story
07:46 PM (IST) Aug 20

India News Liveಮಹಿಳಾ ಏಷ್ಯಾಕಪ್ 2026 - ಭಾರತ ಚಾಂಪಿಯನ್ ಆದರೆ ಪಿಸಿಬಿ ಅಧ್ಯಕ್ಷ ನಖ್ವಿಯಿಂದ ಟ್ರೋಫಿ ಪಡೆಯುತ್ತಾ ಹರ್ಮನ್‌ಪ್ರೀತ್ ಪಡೆ?

ಮಹಿಳಾ ಏಷ್ಯಾಕಪ್ 2026ರಲ್ಲಿ, ಭಾರತ ತಂಡ ಫೈನಲ್ ಗೆದ್ದರೆ ಟ್ರೋಫಿ ಸ್ವೀಕಾರದ ಕುರಿತು ವಿವಾದ ಮರುಕಳಿಸುವ ಸಾಧ್ಯತೆಯಿದೆ. ಎಸಿಸಿ ಅಧ್ಯಕ್ಷರಾಗಿ ಪಾಕಿಸ್ತಾನದ ಮೊಹ್ಸಿನ್ ನಖ್ವಿ ಇರುವುದರಿಂದ, ಹರ್ಮನ್‌ಪ್ರೀತ್ ಪಡೆ ಟ್ರೋಫಿ ಸ್ವೀಕರಿಸುವುದೇ ಅಥವಾ ಪುರುಷರ ತಂಡದಂತೆ ನಿರಾಕರಿಸುವುದೇ ಎಂಬ ಕುತೂಹಲ ಮೂಡಿದೆ.

Read Full Story
07:04 PM (IST) Aug 20

India News Liveಎಚ್‌ಎಎಲ್-ಸೈಯಂಟ್ ಜಂಟಿ ಉದ್ಯಮಕ್ಕೆ ತೆರೆ - ಇನ್ಫೋಟೆಕ್ HAL ಮುಚ್ಚಲು NCLT ಆದೇಶ, ತೆರೆಮರೆಗೆ ಸರಿದ ಜಂಟಿ ಉದ್ಯಮ

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯು (NCLT) ಎಚ್‌ಎಎಲ್ ಮತ್ತು ಸೈಯಂಟ್ ನಡುವಿನ ನಿಷ್ಕ್ರಿಯ ಜಂಟಿ ಉದ್ಯಮ 'ಇನ್ಫೋಟೆಕ್ HAL ಲಿಮಿಟೆಡ್' ಅನ್ನು ವಿಸರ್ಜಿಸಲು ಆದೇಶಿಸಿದೆ. ಈ ಬೆಳವಣಿಗೆಯು ಎಚ್‌ಎಎಲ್‌ನ ಪ್ರಮುಖ ಕಾರ್ಯಾಚರಣೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಏಕೆಂದರೆ ಸಂಸ್ಥೆಯು ಉತ್ತಮ ಆರ್ಥಿಕ ಸಾಧನೆ ಮತ್ತು ಸರ್ಕಾರದ ದೇಶೀಕರಣ ನೀತಿಗಳಿಂದಾಗಿ ಸದೃಢವಾಗಿ ಮುನ್ನಡೆಯುತ್ತಿದೆ.
Read Full Story
06:50 PM (IST) Aug 20

India News Liveಭಾರತದ ಮೊದಲ ಎಟಿಎಂ ಯಾವುದು? ಎಲ್ಲಿ ಸ್ಥಾಪಿಸಲಾಯಿತು? ಇದರ ಹಿಂದಿನ ಇತಿಹಾಸ ಗೊತ್ತಾ?

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಎಟಿಎಂಗಳು ತಂದ ಕ್ರಾಂತಿಯ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಎಟಿಎಂ ಬಂದ ನಂತರ ಬ್ಯಾಂಕಿಂಗ್ ವ್ಯವಹಾರವೇ ಬದಲಾಯಿತು. ಹಾಗಾದರೆ, ಭಾರತದ ಮೊದಲ ಎಟಿಎಂ ಎಲ್ಲಿದೆ, ಅದರ ಹಿಂದಿನ ಕಥೆ ಏನು? ತಿಳಿಯೋಣ ಬನ್ನಿ.

Read Full Story
06:50 PM (IST) Aug 20

India News LiveWatch - ಲಾರ್ಡ್ಸ್ ಬಾಲ್ಕನಿಯಲ್ಲಿ ಮರುಕಳಿಸಿದ 'ದಾದಾ' ಖದರ್ - ಇಂಗ್ಲೆಂಡ್ ನೆಲದಲ್ಲಿ ಕೋಟ್ ಬಿಚ್ಚಿ ಸಂಭ್ರಮಿಸಿದ ಭಾರತೀಯ ದಿವ್ಯಾಂಗ ಕ್ರಿಕೆಟಿಗರು!

ಇಂಗ್ಲೆಂಡ್ ವಿರುದ್ಧದ 7ನೇ ಟಿ20 ಪಂದ್ಯದಲ್ಲಿ ಭಾರತೀಯ ಮಿಶ್ರ ದಿವ್ಯಾಂಗ ಕ್ರಿಕೆಟ್ ತಂಡ 118 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಐತಿಹಾಸಿಕ ಗೆಲುವನ್ನು ತಂಡವು ಲಾರ್ಡ್ಸ್ ಬಾಲ್ಕನಿಯಲ್ಲಿ ಸೌರವ್ ಗಂಗೂಲಿ ಅವರ ಶೈಲಿಯಲ್ಲಿ ಕೋಟ್ ಕಳಚಿ ಸಂಭ್ರಮಿಸುವ ಮೂಲಕ ಸ್ಮರಣೀಯವಾಗಿಸಿತು.
Read Full Story
06:38 PM (IST) Aug 20

India News LiveAIನಿಂದ ಉದ್ಯೋಗ ನಷ್ಟ ಭೀತಿ - ಕಾರ್ಪೊರೇಟ್ ಕಂಪನಿಗಳಿಗೆ ಮಾಜಿ RBI ಗವರ್ನರ್ ರಘುರಾಮ್ ಹೊಸ ತೆರಿಗೆ ಅಸ್ತ್ರ ಪ್ರಸ್ತಾಪ!

ಆರ್‌ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು, ಕೃತಕ ಬುದ್ಧಿಮತ್ತೆಯಿಂದ (AI) ಉಂಟಾಗುವ ಉದ್ಯೋಗ ನಷ್ಟವನ್ನು ಸರಿದೂಗಿಸಲು ಕಂಪನಿಗಳು ಬಳಸುವ 'AI ಟೋಕನ್‌ಗಳ' ಮೇಲೆ ತೆರಿಗೆ ವಿಧಿಸಬೇಕೆಂದು ಪ್ರತಿಪಾದಿಸಿದ್ದಾರೆ. ಮಾನವ ಮತ್ತು ಯಾಂತ್ರಿಕ ಶ್ರಮದ ನಡುವಿನ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಹಾಗೂ ಉದ್ಯೋಗಿಗಳಿಗೆ ಮರು ತರಬೇತಿ ನೀಡುವ ಸಂಸ್ಥೆಗಳಿಗೆ ಪ್ರೋತ್ಸಾಹಧನ ನೀಡಲು ಅವರು ಸಲಹೆ ನೀಡಿದ್ದಾರೆ.
Read Full Story
06:17 PM (IST) Aug 20

India News LiveHyundai Price Hike - ಹ್ಯುಂಡೈ ಕಾರ್ ಬೆಲೆ ಮತ್ತೆ ಏರಿಕೆ! ಯಾವ ಮಾಡೆಲ್‌ಗೆ ಎಷ್ಟು ಬೆಲೆ ಏರಿಕೆ?

ಹ್ಯುಂಡೈ ಮೋಟಾರ್ ಇಂಡಿಯಾ ತನ್ನೆಲ್ಲಾ ಕಾರುಗಳ ಬೆಲೆಯನ್ನು 2026ರ ಸೆಪ್ಟೆಂಬರ್‌ನಿಂದ 1% ರಷ್ಟು ಹೆಚ್ಚಿಸಲು ನಿರ್ಧರಿಸಿದೆ. ಕಚ್ಚಾ ವಸ್ತುಗಳ ಬೆಲೆ ಏರಿಕೆ, ಸಾಗಾಟ ವೆಚ್ಚ ಮತ್ತು ಜಾಗತಿಕ ಅಸ್ಥಿರತೆಗಳು ಈ ನಿರ್ಧಾರಕ್ಕೆ ಕಾರಣವಾಗಿದ್ದು, ಇದು 2026ರಲ್ಲಿ ಕಂಪನಿಯು ಮಾಡುತ್ತಿರುವ ಮೂರನೇ ಬೆಲೆ ಏರಿಕೆಯಾಗಿದೆ.
Read Full Story
06:14 PM (IST) Aug 20

India News Liveಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಮೊದಲು - ಪಂದ್ಯ ಮುಗಿದ ಬೆನ್ನಲ್ಲೇ ಮೈದಾನದಲ್ಲೇ ಎರಡು ಭಾಗವಾಗಿ ಕತ್ತರಿಸಲಾಯ್ತು ಚೆಂಡು!

ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಹೆಡಿಂಗ್ಲೆ ಟೆಸ್ಟ್ ಪಂದ್ಯದಲ್ಲಿ, ಇಬ್ಬರು ಇಂಗ್ಲೆಂಡ್ ಬೌಲರ್‌ಗಳಾದ ಓಲ್ಲೀ ರಾಬಿನ್ಸನ್ ಮತ್ತು ಜೋಶ್ ಟಂಗ್ ತಲಾ 5 ವಿಕೆಟ್ ಪಡೆದರು. ಈ ಅಪರೂಪದ ಸಾಧನೆಗಾಗಿ, ಪಂದ್ಯದ ಚೆಂಡನ್ನು ಎರಡು ಭಾಗವಾಗಿ ಕತ್ತರಿಸಿ ಇಬ್ಬರಿಗೂ ನೆನಪಿನ ಕಾಣಿಕೆಯಾಗಿ ಹಂಚಲಾಯಿತು.
Read Full Story
06:07 PM (IST) Aug 20

India News Liveಕ್ಷೀರಪಥದ ಕೇಂದ್ರದಲ್ಲಿ ವಿಶ್ವದ ಅತ್ಯಂತ ವೇಗದ ನಕ್ಷತ್ರ ಪತ್ತೆ - ಕಪ್ಪು ಕುಳಿಯ ರಹಸ್ಯ ಬಿಡಿಸಲಿದೆಯೇ S301?

ಖಗೋಳಶಾಸ್ತ್ರಜ್ಞರು ನಮ್ಮ ಕ್ಷೀರಪಥದ ಕೇಂದ್ರದಲ್ಲಿರುವ ಕಪ್ಪು ಕುಳಿಯ ಸುತ್ತ ಅತ್ಯಂತ ವೇಗವಾಗಿ ಪರಿಭ್ರಮಿಸುವ 'S301' ಎಂಬ ನಕ್ಷತ್ರವನ್ನು ಪತ್ತೆಹಚ್ಚಿದ್ದಾರೆ. ಈ ನಕ್ಷತ್ರದ ಅಸಾಧಾರಣ ವೇಗ ಮತ್ತು ವಿಶಿಷ್ಟ ಕಕ್ಷೆಯು, ಕಪ್ಪು ಕುಳಿಯ ಗುಣಲಕ್ಷಣಗಳನ್ನು ಅರಿಯಲು ಮತ್ತು ಐನ್‌ಸ್ಟೈನ್ ಸಿದ್ಧಾಂತವನ್ನು ಪರೀಕ್ಷಿಸಲು ವಿಜ್ಞಾನಿಗಳಿಗೆ ಸಹಾಯ ಮಾಡಲಿದೆ.
Read Full Story
05:40 PM (IST) Aug 20

India News Liveಕೈಗೆಟಕುವ ದರದಲ್ಲಿ ಐಕ್ಯೂ Z11 ಸ್ಮಾರ್ಟ್‌ಫೋನ್ ಹಾಗೂ iQOO ಬಡ್ಸ್ ಭಾರತದಲ್ಲಿ ಬಿಡುಗಡೆ

ಐಕ್ಯೂ ಸಂಸ್ಥೆಯು ಭಾರತೀಯ ಮಾರುಕಟ್ಟೆಗೆ ತನ್ನ ನೂತನ iQOO Z11 ಸ್ಮಾರ್ಟ್‌ಫೋನ್ ಮತ್ತು iQOO ಬಡ್ಸ್ ಅನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಹೊಸ Z11 ಫೋನ್ 144Hz ಡಿಸ್ಪ್ಲೇ, ಮೀಡಿಯಾ ಟೆಕ್ ಡೈಮೆನ್ಸಿಟಿ 7500 ಟರ್ಬೊ ಚಿಪ್‌ಸೆಟ್, ಮತ್ತು 7,050mAh ಬ್ಯಾಟರಿಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.
Read Full Story
05:39 PM (IST) Aug 20

India News LiveNASA Viking Mission - ಮಂಗಳ ಗ್ರಹದ ಮೇಲೆ ಮೊದಲ ಬಾರಿಗೆ ಇಳಿದ ಬಾಹ್ಯಾಕಾಶ ನೌಕೆ; ಕೆಂಪು ಗ್ರಹದ ಚಿತ್ರಗಳು ಭೂಮಿಗೆ ರವಾನೆ

1976ರಲ್ಲಿ ನಾಸಾದ ವೈಕಿಂಗ್ 1 ನೌಕೆಯು ಮಂಗಳ ಗ್ರಹದ ಮೇಲೆ ಯಶಸ್ವಿಯಾಗಿ ಇಳಿದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ. ಇದು ಕೆಂಪು ಗ್ರಹದ ಮೇಲ್ಮೈಯ ಮೊದಲ ಕ್ಲೋಸ್-ಅಪ್ ಚಿತ್ರಗಳನ್ನು ಭೂಮಿಗೆ ಕಳುಹಿಸಿತು. ಆರು ವರ್ಷಗಳಿಗೂ ಹೆಚ್ಚು ಕಾಲ ಕಾರ್ಯನಿರ್ವಹಿಸಿದ ಈ ನೌಕೆಯು, ಮಂಗಳದ ವಾತಾವರಣ ಮತ್ತು ಜೀವದ ಕುರುಹುಗಳ ಬಗ್ಗೆ ಅಧ್ಯಯನ ನಡೆಸಿತು.
Read Full Story
05:22 PM (IST) Aug 20

India News Liveಚಾಣಕ್ಯ ನೀತಿ ಪ್ರಕಾರ, ಬುದ್ಧಿವಂತ ವ್ಯಕ್ತಿ ಈ 5 ವಿಷಯಗಳನ್ನು ಯಾರಿಗೂ ಹೇಳಲ್ಲ..! ಯಾಕಂದ್ರೆ?

ಮನುಷ್ಯನ ಮಾತಿಗೆ ಎಲ್ಲಿಲ್ಲದ ಶಕ್ತಿ ಇದೆ. ಒಂದು ಮಾತು ಸಂಬಂಧವನ್ನು ಬೆಳೆಸಬಲ್ಲದು, ಮುರಿಯಬಲ್ಲದು. ಹಾಗಾಗಿ ಯಾವಾಗ ಮಾತನಾಡಬೇಕು? ಹೇಗೆ ಮಾತನಾಡಬೇಕು? ಯಾರೊಂದಿಗೆ ಏನು ಹೇಳಬೇಕು? ಎಂಬ ಬಗ್ಗೆ ಎಚ್ಚರಿಕೆ ಇರಬೇಕು. ಚಾಣಕ್ಯನ ಪ್ರಕಾರ, ಬುದ್ಧಿವಂತ ವ್ಯಕ್ತಿ ಯಾರಿಗೂ ಹೇಳದ ಆ 5 ವಿಷಯಗಳು ಯಾವುವು ನೋಡೋಣ.

Read Full Story
04:53 PM (IST) Aug 20

India News Liveಲಂಡನ್ ಹಾಸ್ಟೆಲ್‌ನಿಂದ ಭಾರತೀಯ ಮಹಿಳೆ ಹೊರಹಾಕಿದ್ದು ಯಾಕೆ? ಜನಾಂಗೀಯ ತಾರತಮ್ಯದ ಅಸಲಿ ಸತ್ಯ ಬಿಚ್ಚಿಟ್ಟ ವ್ಲಾಗರ್!

ಲಂಡನ್ ಹಾಸ್ಟೆಲ್‌ನಿಂದ ಭಾರತೀಯ ಮಹಿಳೆಯನ್ನು ಹೊರಹಾಕಿದ ಘಟನೆಯನ್ನು ಪ್ರವಾಸಿ ವ್ಲಾಗರ್ ರಾಹುಲ್ ವಿವರಿಸಿದ್ದಾರೆ. ಹಾಸ್ಟೆಲ್‌ನ ಚೆಕ್-ಔಟ್ ನಿಯಮಗಳನ್ನು ಪಾಲಿಸಲು ನಿರಾಕರಿಸಿದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆಯೇ ಹೊರತು, ಇದು ಜನಾಂಗೀಯ ತಾರತಮ್ಯದ ಪ್ರಕರಣವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
Read Full Story
04:18 PM (IST) Aug 20

India News Liveಭಾರತದ ಒಂದೇ ಸಿಟಿ, ಎರಡು ರಾಜ್ಯಗಳಿಗೆ ರಾಜಧಾನಿ! ಯಾವುದು ಆ ನಗರ? ಇದರ ಹಿಂದಿನ ಕಥೆಯೇನು?

ನಮ್ಮ ದೇಶದಲ್ಲಿ ಎರಡು ರಾಜ್ಯಗಳಿಗೆ ಒಂದೇ ರಾಜಧಾನಿ ಇದೆ. ಆ ರಾಜ್ಯಗಳು ಯಾವುವು? ಒಂದೇ ನಗರವನ್ನು ಎರಡು ರಾಜ್ಯಗಳು ರಾಜಧಾನಿಯಾಗಿ ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಹಾಗಾದರೆ ಆಡಳಿತ ಯಾರ ಕೈಯಲ್ಲಿದೆ?

Read Full Story
04:08 PM (IST) Aug 20

India News Liveಒಲಿಂಪಿಕ್ಸ್‌, ಏಷ್ಯನ್ ಗೇಮ್ಸ್‌ನಿಂದ ಮುತ್ತಜ್ಜಿಯ ಲೆಹೆಂಗಾವರೆಗೆ - ಪಟಿಯಾಲ ರಾಜಮನೆತನದ ಕಲಾ ವೈಭವ, ರಹಸ್ಯ ಕಥೆಗಳು!

ಪಟಿಯಾಲ ರಾಜಮನೆತನದ ಕುಡಿ ರಾಜೇಶ್ವರಿ ಕುಮಾರಿ, ತಮ್ಮ ಕುಟುಂಬದ ಪ್ರಸಿದ್ಧ ಆಭರಣಗಳ ಆಚೆಗಿನ ಕಲೆ, ಕ್ರೀಡೆ ಮತ್ತು ಫ್ಯಾಷನ್ ಪರಂಪರೆಯನ್ನು ಅನಾವರಣಗೊಳಿಸಿದ್ದಾರೆ. ತಮ್ಮ ದೆಹಲಿಯ ಫಾರ್ಮ್‌ಹೌಸ್‌ನಲ್ಲಿ, ಅವರು ಐತಿಹಾಸಿಕ ಕ್ರೀಡಾ ಪದಕಗಳು, ಅಮೃತಶಿಲೆಯ ಪ್ರತಿಮೆಗಳು ಮತ್ತು ತಮ್ಮ ಮುತ್ತಜ್ಜಿಯ ಪುನರುಜ್ಜೀವನಗೊಂಡ ಲೆಹೆಂಗಾದಂತಹ ಅಮೂಲ್ಯ ವಸ್ತುಗಳ ಹಿಂದಿನ ಕಥೆಗಳನ್ನು ಹಂಚಿಕೊಂಡಿದ್ದಾರೆ.
Read Full Story
04:00 PM (IST) Aug 20

India News Liveಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು.. ತಮ್ಮದೇ ಪ್ರಾಂಶುಪಾಲರನ್ನ 27 ಬಾರಿ ಇರಿದು ಕೊಂದರು.. ಕಾರಣ?

ಐಷಾರಾಮಿ ಜೀವನದ ಹಪಾಹಪಿಗೆ ಬಿದ್ದ ಇಬ್ಬರು 10ನೇ ತರಗತಿ ವಿದ್ಯಾರ್ಥಿಗಳು, ತಮ್ಮ ಶಾಲೆಯ ಪ್ರಾಂಶುಪಾಲರನ್ನು 27 ಬಾರಿ ಇರಿದು ಭೀಕರವಾಗಿ ಕೊಲೆ ಮಾಡಿರುವ ಆತಂಕಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಕ್ಕಳನ್ನು ತಿದ್ದಲು ಹೋದ ಗುರುವನ್ನೇ ಹಣಕ್ಕಾಗಿ ವಿದ್ಯಾರ್ಥಿಗಳು ಹತ್ಯೆ ಮಾಡಿರುವ ಈ ಪ್ರಕರಣ, ಸಮಾಜದಲ್ಲಿ ಮಕ್ಕಳ ಕ್ರೂರ ಮನಸ್ಥಿತಿಯ ಬಗ್ಗೆ ತೀವ್ರ ಆತಂಕ ಮೂಡಿಸಿದೆ.

Read Full Story