India News Live: ಆಪಲ್‌ನಿಂದ ಐಫೋನ್ 18 ಪ್ರೊ ಮತ್ತು 18 ಪ್ರೊ ಮ್ಯಾಕ್ಸ್ ರಿಲೀಸ್ - ಪರಿಚಯವಾಯ್ತು 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ!
ಸಾರಾಂಶ
‘2014ರ ನಂತರ ನಾವು 50,000 ಆಧುನಿಕ ರೈಲ್ವೆ ಬೋಗಿಗಳನ್ನು ನಿರ್ಮಿಸಿದ್ದೇವೆ. ಆದರೆ ಹಿಂದಿನ ಸರ್ಕಾರದ (ಕಾಂಗ್ರೆಸ್) ಕೈಲಿ 50,000 ಶೌಚಾಲಯಗಳನ್ನೂ ನಿರ್ಮಿಸಲು ಸಾಧ್ಯವಾಗಲಿಲ್ಲ. ಇದೀಗ ಅಭಿವೃದ್ಧಿಯನ್ನು ಕಂಡು ಮತ್ತೆ ಅತೃಪ್ತ ಆತ್ಮಗಳು ಅಥವಾ ಅತೃಪ್ತ ಅಂಕಲ್ಗಳು (ನಾರಾಜ್ ಫೂಫಾ) ಅರಚಲು ಆರಂಭಿಸುತ್ತವೆ’ ಎಂದು ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ವಿರುದ್ಧ ಮಂಗಳವಾರವೂ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಪ್ರಧಾನಿ ವಿಪಕ್ಷಗಳನ್ನು ‘ಅತೃಪ್ತ ಆತ್ಮಗಳು’ ಎಂದು ಕರೆದಿದ್ದು ವಿವಾದಕ್ಕೆ ಕಾರಣವಾಗಿತ್ತು. ಇದೀಗ ಮತ್ತೊಮ್ಮೆ ಅದೇ ಪದಬಳಕೆಯ ಮೂಲಕ ವಿರೋಧಿಗಳಿಗೆ ಚಾಟಿ ಬೀಸಿದ್ದಾರೆ.
ಗುಜರಾತಿನ ವಡೋದರಾದಲ್ಲಿ ಒಟ್ಟು 35,000 ಕೋಟಿ ರು. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ ನೀಡಿದರು. ದೇಶದ ಸಾರಿಗೆ ಮತ್ತು ವಾಣಿಜ್ಯ ರಂಗದಲ್ಲಿ ಹೊಸ ಕ್ರಾಂತಿಗೆ ಮುನ್ನುಡಿ ಬರೆಯುವ 2,800 ಕಿ.ಮೀ. ಉದ್ದದ ಬೃಹತ್ ‘ಮೀಸಲು ಸರಕು ಸಾಗಣೆ ಕಾರಿಡಾರ್’ ಯೋಜನೆಯನ್ನೂ ಲೋಕಾರ್ಪಣೆಗೊಳಿಸಿದರು.
11:13 PM (IST) Sep 09
India News Liveಆಪಲ್‌ನಿಂದ ಐಫೋನ್ 18 ಪ್ರೊ ಮತ್ತು 18 ಪ್ರೊ ಮ್ಯಾಕ್ಸ್ ರಿಲೀಸ್ - ಪರಿಚಯವಾಯ್ತು 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ!
ಆಪಲ್ ಸಂಸ್ಥೆಯು ತನ್ನ ಹೊಸ 'ಐಫೋನ್ 18 ಪ್ರೊ' ಮತ್ತು 'ಐಫೋನ್ 18 ಪ್ರೊ ಮ್ಯಾಕ್ಸ್' ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಈ ಫೋನ್‌ಗಳು ಐಫೋನ್ ಇತಿಹಾಸದಲ್ಲೇ ಅತಿದೊಡ್ಡ ಬ್ಯಾಟರಿ, ಮೊದಲ 'ವೇರಿಯೇಬಲ್ ಅಪರ್ಚರ್' ಕ್ಯಾಮೆರಾ, ಮತ್ತು ಅತ್ಯಾಧುನಿಕ 2nm 'A20 ಪ್ರೊ' ಚಿಪ್‌ಸೆಟ್ ಅನ್ನು ಹೊಂದಿವೆ.
India News Liveವಿಡಿಯೋ ವೈರಲ್ ಆಗಿದ್ದಕ್ಕೆ ಕರುಳಕುಡಿ ಎಂದೂ ನೋಡದೆ ಮಗಳನ್ನೇ ಕೊಂದ ತಂದೆ, ಅಣ್ಣ
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದಕ್ಕೆ ಕುಟುಂಬದ ಮರ್ಯಾದೆಗೆ ಅಂಜಿ ಅಹಮದಾಬಾದ್‌ನಲ್ಲಿ 22 ವರ್ಷದ ಯುವತಿಯನ್ನು ಆಕೆಯ ತಂದೆ ಮತ್ತು ಅಣ್ಣನೇ ಸುತ್ತಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಈ ಕೊಲೆಯನ್ನು ಹಿಟ್ ಆ್ಯಂಡ್ ರನ್ ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಆರೋಪಿಗಳ ಕಳ್ಳಾಟವನ್ನು ಬಯಲಿಗೆಳೆದ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
India News Liveಇನ್‌ಸ್ಟಾಗ್ರಾಮ್‌ನಲ್ಲಿ ₹1,545 ಅನಾರ್ಕಲಿ ಡ್ರೆಸ್ ಬುಕ್ ಮಾಡಿ ಮೋಸ ಹೋದ ಮಹಿಳೆಗೆ ₹16,000 ಪರಿಹಾರಕ್ಕೆ ಕೋರ್ಟ್ ಆದೇಶ!
ಇನ್‌ಸ್ಟಾಗ್ರಾಮ್‌ನಲ್ಲಿ ಜಾಹೀರಾತು ನೋಡಿ 1,545 ರೂ. ಪಾವತಿಸಿ ಅನಾರ್ಕಲಿ ಡ್ರೆಸ್ ಆರ್ಡರ್ ಮಾಡಿದ ಮಹಿಳೆಗೆ, ಆನ್‌ಲೈನ್ ಸ್ಟೋರ್ ವಂಚನೆ ಎಸಗಿದೆ. ತಿಂಗಳುಗಟ್ಟಲೆ ಡ್ರೆಸ್ ತಲುಪಿಸದ ಕಾರಣ, ಕಣ್ಣೂರು ಜಿಲ್ಲಾ ಗ್ರಾಹಕ ಆಯೋಗವು ಸ್ಟೋರ್‌ಗೆ ಹಣ ಹಿಂತಿರುಗಿಸಿ, 15,000 ರೂ. ಪರಿಹಾರ ನೀಡುವಂತೆ ಆದೇಶಿಸಿದೆ.
India News Liveಜೋ ರೂಟ್ ಮತ್ತೊಂದು ಇತಿಹಾಸ; ಸ್ಟೀವ್ ವಾ-ಪಾಂಟಿಂಗ್ ಹಿಂದಿಕ್ಕಿದ ಇಂಗ್ಲೆಂಡ್ ಸ್ಟಾರ್
ಇಂಗ್ಲೆಂಡ್ ಕ್ರಿಕೆಟಿಗ ಜೋ ರೂಟ್, ಪಾಕಿಸ್ತಾನ ವಿರುದ್ಧ ತಮ್ಮ 169ನೇ ಟೆಸ್ಟ್ ಪಂದ್ಯವನ್ನಾಡುವ ಮೂಲಕ, ಅತಿ ಹೆಚ್ಚು ಟೆಸ್ಟ್ ಆಡಿದವರ ಪಟ್ಟಿಯಲ್ಲಿ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರನ್ನು ಹಿಂದಿಕ್ಕಿ ಮೂರನೇ ಸ್ಥಾನಕ್ಕೇರಿದ್ದಾರೆ. ಈ ಮೂಲಕ ಸಚಿನ್ ತೆಂಡೂಲ್ಕರ್ ಮತ್ತು ಜೇಮ್ಸ್ ಆಂಡರ್ಸನ್ ನಂತರದ ಸ್ಥಾನ ಪಡೆದಿದ್ದಾರೆ.
India News Liveದಕ್ಷಿಣ ಬ್ರೆಜಿಲ್‌ನಲ್ಲಿ ಅಪರೂಪದ ಪಳೆಯುಳಿಕೆ ಪತ್ತೆ - ಡೈನೋಸಾರ್ ಡೈನೋಸಾರ್‌ಗಳ ಆರಂಭಿಕ ವಿಕಾಸದ ಹೊಸ ರಹಸ್ಯ ಬೆಳಕಿಗೆ
ದಕ್ಷಿಣ ಬ್ರೆಜಿಲ್‌ನಲ್ಲಿ ಪತ್ತೆಯಾದ 'ಸಿಲೆಸೆಲಿಡಾ ಅಕ್ರಿಸ್ಟಾಟಾ' ಎಂಬ ಹೊಸ ಪ್ರಭೇದದ ಪಳೆಯುಳಿಕೆಯು, ಆರ್ಕೋಸಾರ್ ವಂಶಾವಳಿಯ ಆರಂಭಿಕ ವಿಕಾಸದ ಮೇಲೆ ಬೆಳಕು ಚೆಲ್ಲಿದೆ. ಮಧ್ಯ ಟ್ರಯಾಸಿಕ್ ಯುಗದ ಈ ಸರೀსೃಪದ ವಿಶಿಷ್ಟ ಅಂಗರಚನೆಯು, ಡೈನೋಸಾರ್‌ಗಳು ಮತ್ತು ಮೊಸಳೆಗಳ ಪೂರ್ವಜರ ಅಧ್ಯಯನಕ್ಕೆ ಹೊಸ ದಿಕ್ಕು ತೋರಿದೆ.
India News Liveಕಿಡ್ನಿ ಕಾಯಿಲೆ ಸೈಲೆಂಟ್ ಕಿಲ್ಲರ್! ಈ 5 ಸಿಂಪಲ್ ಟೆಸ್ಟ್‌ಗಳಿಂದ ಆರಂಭದಲ್ಲೇ ಪತ್ತೆ ಹಚ್ಚಬಹುದು..!
ಹೃದಯ ಮತ್ತು ಕಿಡ್ನಿ ಕಾಯಿಲೆಗಳಿಗೆ ನಿಕಟ ಸಂಬಂಧವಿದೆ. ಹೃದಯದ ಸಮಸ್ಯೆ ಇರುವವರಲ್ಲಿ ಕಿಡ್ನಿ ಕಾಯಿಲೆಯು ಆರಂಭದಲ್ಲಿ ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ, ನಿಯಮಿತ ರಕ್ತ ಮತ್ತು ಮೂತ್ರ ಪರೀಕ್ಷೆಗಳ ಮೂಲಕ ಕಿಡ್ನಿ ಸಮಸ್ಯೆಯನ್ನು ಆರಂಭದಲ್ಲೇ ಪತ್ತೆಹಚ್ಚಿ, ಗಂಭೀರ ಅಪಾಯವನ್ನು ತಪ್ಪಿಸಬಹುದು.
India News Live'ಸರ್ ತನ್ ಸೇ ಜುದಾ' ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಘೋಷಣೆ, ಕ್ರಿಮಿನಲ್ ಮೌಲಾನಾ ತೌಕೀರ್ ಜಾಮೀನು ಅರ್ಜಿ ವಜಾ!
ಬರೇಲಿ ಹಿಂಸಾಚಾರ ಪ್ರಕರಣದ ಮಾಸ್ಟರ್‌ಮೈಂಡ್ ಎನ್ನಲಾದ ತೌಕೀರ್ ರಜಾ ಖಾನ್ ಅವರ ಜಾಮೀನು ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ. 'ಸರ್ ತನ್ ಸೆ ಜುದಾ' ಘೋಷಣೆಯು ದೇಶದ ಕಾನೂನಿಗೆ ನೇರ ಸವಾಲಾಗಿದ್ದು, ಸಶಸ್ತ್ರ ದಂಗೆಗೆ ಪ್ರಚೋದಿಸುತ್ತದೆ ಎಂದು ನ್ಯಾಯಾಲಯ ಕಟುವಾಗಿ ಹೇಳಿದೆ.
India News Live'ತಾಯಿಯ ಕಾಲಿಗೆ ಬಿದ್ದು ಮಾಡಿದ ತಪ್ಪಿಗೆ ಕ್ಷಮೆ ಕೇಳು' ಆಸ್ತಿ ಕಬಳಿಸಲು ಯತ್ನಿಸಿದ ಮಗನಿಗೆ ಸುಪ್ರೀಂ ಕೋರ್ಟ್ ಮಾನವೀಯತೆಯ ಪಾಠ!
ಆಸ್ತಿ ವಿವಾದದಲ್ಲಿ ಹೆತ್ತವರನ್ನೇ ನ್ಯಾಯಾಲಯಕ್ಕೆ ಎಳೆದಿದ್ದ ಮಗನಿಗೆ ಸುಪ್ರೀಂ ಕೋರ್ಟ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಮೊದಲು ತಾಯಿಯ ಕಾಲಿಗೆ ಬಿದ್ದು ಕ್ಷಮೆ ಕೇಳುವಂತೆ ಬುದ್ಧಿಮಾತು ಹೇಳಿದ ನ್ಯಾಯಪೀಠ, ಮಗ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ.
India News Liveಬಿಸಿಸಿಐಗೆ ಬಿಗ್ ಶಾಕ್? ರಾಷ್ಟ್ರೀಯ ಕ್ರೀಡಾ ನೀತಿ ವ್ಯಾಪ್ತಿಗೆ ಯಾಕೆ ತರಬಾರದು ಎಂದ ಸುಪ್ರೀಂ ಕೋರ್ಟ್
ಬಿಸಿಸಿಐ ಮತ್ತು ರಾಜ್ಯ ಕ್ರಿಕೆಟ್ ಸಂಸ್ಥೆಗಳನ್ನು ರಾಷ್ಟ್ರೀಯ ಕ್ರೀಡಾ ನೀತಿಯ ವ್ಯಾಪ್ತಿಗೆ ಯಾಕೆ ತರಬಾರದು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಲೋಧಾ ಸಮಿತಿ ಶಿಫಾರಸುಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ಈ ವಿಚಾರಣೆಯಲ್ಲಿ, ಪದಾಧಿಕಾರಿಗಳ ಸೇವಾ ನಿಯಮಗಳ ಬಗ್ಗೆಯೂ ಕೋರ್ಟ್ ಸ್ಪಷ್ಟನೆ ಕೇಳಿದ್ದು, ಇದು ಬಿಸಿಸಿಐ ಆಡಳಿತದಲ್ಲಿ ಮಹತ್ವದ ಬದಲಾವಣೆ ತರುವ ಸಾಧ್ಯತೆ ಇದೆ.
India News LiveSuccess Story - ಟಾಯ್ಲೆಟ್ ಕ್ಲೀನ್ ಮಾಡ್ತಿದ್ದ ಮಹಿಳೆ, ಇಂದು ಅದೇ ಬ್ಯಾಂಕ್ ಮ್ಯಾನೇಜರ್- SBI ಉದ್ಯೋಗಿ ಯಶೋಗಾಥೆ
ಪ್ರತಿಕ್ಷಾ ತೋಂಡ್ವಾಲ್ಕರ್ ಅವರು ಪತಿಯ ಮರಣದ ನಂತರ, ತಾವು ಕಸಗುಡಿಸುತ್ತಿದ್ದ ಎಸ್‌ಬಿಐ ಬ್ಯಾಂಕ್‌ನಲ್ಲಿಯೇ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ತಮ್ಮ ಕಠಿಣ ಪರಿಶ್ರಮ ಮತ್ತು ಆತ್ಮವಿಶ್ವಾಸದಿಂದ, ಅವರು ಅದೇ ಬ್ಯಾಂಕ್‌ನಲ್ಲಿ ಸಹಾಯಕ ಜನರಲ್ ಮ್ಯಾನೇಜರ್ (AGM) ಹುದ್ದೆಗೆ ಏರಿದರು. ಈ ಕಥೆಯು ಧೈರ್ಯ ಮತ್ತು ದೃಢಸಂಕಲ್ಪದಿಂದ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಫೂರ್ತಿಯಾಗಿದೆ.
India News Liveಮೆಟಾದಿಂದ ಲೇ-ಆಫ್ ಆಗಿದ್ದೇ ಲಕ್ ತಂದಿತು! 3 ತಿಂಗಳಲ್ಲಿ ₹25 ಲಕ್ಷ ಹೆಚ್ಚುವರಿ ಗಳಿಸಿದ ಟೆಕ್ಕಿಯ ಕಥೆ ವೈರಲ್!
ಮೆಟಾ ಸಂಸ್ಥೆಯಿಂದ ವಜಾಗೊಂಡ ಮಾಜಿ ಉದ್ಯೋಗಿಯೊಬ್ಬರು, ಲೇ-ಆಫ್ ಅವಧಿಯಲ್ಲೇ ಹೊಸ ಉದ್ಯೋಗ ಪಡೆದು ಆರ್ಥಿಕವಾಗಿ ಲಾಭ ಗಳಿಸಿದ್ದಾರೆ. ಹೊಸ ಕಂಪನಿಯ ಸಂಬಳದ ಜೊತೆಗೆ ಮೆಟಾದಿಂದ ಪರಿಹಾರ, 3 ತಿಂಗಳ ವೇತನ ಮತ್ತು ಸ್ಟಾಕ್ ವೆಸ್ಟ್ ಪಡೆದು, ಸುಮಾರು ₹25 ಲಕ್ಷಕ್ಕೂ ಹೆಚ್ಚು ಹೆಚ್ಚುವರಿ ಹಣ ಗಳಿಸಿದ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ತಂತ್ರಜ್ಞಾನ ಕಂಪನಿಗಳ ಲೇ-ಆಫ್ ನೀತಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ.
India News LiveTTD - ದೇಶದಲ್ಲಿಯೇ ಮೊದಲು, ತಿರುಮಲ ತಿಮ್ಮಪ್ಪನ ನೋಡಲು ಬರುವ ಭಕ್ತರಿಗೆ ವಿಮೆ ಸೌಲಭ್ಯ
ತಿರುಮಲ ಶ್ರೀವಾರಿ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಟಿಟಿಡಿ ಆಡಳಿತ ಮಂಡಳಿಯು ಹೊಸ ವಿಮಾ ಸೌಲಭ್ಯವನ್ನು ಘೋಷಿಸಿದೆ. ಈ ಯೋಜನೆಯಡಿ, ಅಪಘಾತದಲ್ಲಿ ಮರಣ ಹೊಂದಿದ ಭಕ್ತರ ಕುಟುಂಬಕ್ಕೆ 10 ಲಕ್ಷ ರೂಪಾಯಿ ಹಾಗೂ ತಿರುಮಲದಲ್ಲಿ ಸಹಜವಾಗಿ ಮರಣ ಹೊಂದಿದವರ ಕುಟುಂಬಕ್ಕೆ 2 ಲಕ್ಷ ರೂಪಾಯಿ ವಿಮೆ ನೀಡಲು ನಿರ್ಧರಿಸಲಾಗಿದೆ.
ಮಧ್ಯಪ್ರದೇಶದ ಪವಿತ್ರ ನಗರಿ ಉಜ್ಜಯಿನಿಯಲ್ಲಿ ಅಚ್ಚರಿ ಘಟನೆ ಬೆಳಕಿಗೆ ಬಂದಿದೆ. ಛತ್ರಿ ಚೌಕ್ ರಸ್ತೆ ಅಗಲೀಕರಣ ಕಾಮಗಾರಿಗಾಗಿ ಸ್ಥಳಾಂತರಿಸಲು ಮುಂದಾಗಿದ್ದ 150 ವರ್ಷಗಳ ಇತಿಹಾಸವಿರುವ ಖಡೆ ಹನುಮಾನ್ (ನಿಂತಿರುವ ಆಂಜನೇಯ) ವಿಗ್ರಹವು ಇಂಚೂ ಕದಲದೆ ಇದ್ದ ಜಾಗದಲ್ಲೇ ಗಟ್ಟಿಯಾಗಿ ನಿಂತಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
India News Liveಕನ್ನಡಿಗ ಪಡಿಕ್ಕಲ್, ಗಾಯಕ್ವಾಡ್‌ಗೆ ನಾಯಕ ಪಟ್ಟ, ರಜತ್ ಪಾಟೀದಾರ್, ಪಾಂಡ್ಯಗೂ ಚಾನ್ಸ್..! ಆಸೀಸ್ ಸರಣಿಗೆ ಬಿಸಿಸಿಐನಿಂದ ತಂಡ ಪ್ರಕಟ
ಮುಂಬರುವ ಆಸ್ಟ್ರೇಲಿಯಾ 'ಎ' ವಿರುದ್ಧದ ಏಕದಿನ ಹಾಗೂ ಮಲ್ಟಿ ಡೇ ಪಂದ್ಯಗಳಿಗೆ ಬಿಸಿಸಿಐ ಭಾರತ 'ಎ' ತಂಡವನ್ನು ಪ್ರಕಟಿಸಿದೆ. ಮಲ್ಟಿ ಡೇ ಪಂದ್ಯಗಳಿಗೆ ಕನ್ನಡಿಗ ದೇವದತ್ ಪಡಿಕ್ಕಲ್ ನಾಯಕರಾದರೆ, ಏಕದಿನ ಸರಣಿಗೆ ಋತುರಾಜ್ ಗಾಯಕ್ವಾಡ್ ಸಾರಥ್ಯ ವಹಿಸಲಿದ್ದಾರೆ. ಈ ಎಲ್ಲಾ ಪಂದ್ಯಗಳು ಪುದುಚೆರಿಯಲ್ಲಿ ನಡೆಯಲಿವೆ.
India News Liveಮಾರುಕಟ್ಟೆಯಲ್ಲಿ ಧರೆಗುರುಳಿದ ಇನ್ಫೋಸಿಸ್, ಒಂದೇ ವಾರದಲ್ಲಿ 40 ಸಾವಿರ ಕೋಟಿ ನಷ್ಟ!
ಇನ್ಫೋಸಿಸ್ ಶೇರುಗಳು ಸತತ ಆರನೇ ದಿನವೂ ಕುಸಿತ ಕಂಡು, ಮಾರುಕಟ್ಟೆ ಬಂಡವಾಳದಲ್ಲಿ ₹40,000 ಕೋಟಿಗೂ ಅಧಿಕ ನಷ್ಟವಾಗಿದೆ. ಈ ಕುಸಿತಕ್ಕೆ ಎಐ-ಆಧಾರಿತ ಬೆಲೆ ಇಳಿಕೆ ಮತ್ತು ಕೆಲವು ವಲಯಗಳಲ್ಲಿನ ಬೇಡಿಕೆಯ ಮಂದಗತಿ ಪ್ರಮುಖ ಕಾರಣಗಳಾಗಿವೆ. ಜೆಪಿ ಮಾರ್ಗನ್ ಸಂಸ್ಥೆಯು 'ನ್ಯೂಟ್ರಲ್' ರೇಟಿಂಗ್ ನೀಡಿದೆ.
India News Liveಅತ್ತಿಗೆ ಸಾನಿಯಾ ಜತೆ ಟ್ವಿನ್ಸ್ ರೀತಿ ಡ್ರೆಸ್ ಮಾಡಿಕೊಂಡ ಸಾರಾ ತೆಂಡೂಲ್ಕರ್..! ಯಾರ ದೃಷ್ಟಿಯೂ ಬೀಳದಿರಲಿ ಎಂದ ಫ್ಯಾನ್ಸ್
ಸಾರಾ ತೆಂಡೂಲ್ಕರ್ ಮತ್ತು ಅವರ ಅತ್ತಿಗೆ ಸಾನಿಯಾ ಚಾಂದೋಕ್ ಅವರು ಫ್ಯಾಮಿಲಿ ಸೆಲಿಬ್ರೇಷನ್‌ಗಾಗಿ ಟ್ವಿನ್ಸ್ ರೀತಿ ಡ್ರೆಸ್ ಮಾಡಿಕೊಂಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. 'ಗೆಟ್ ರೆಡಿ ವಿತ್ ಅಸ್' ಶೀರ್ಷಿಕೆಯ ಈ ವಿಡಿಯೋದಲ್ಲಿ ಅವರ ತಮಾಷೆಯ ಬಾಂಧವ್ಯವು ನೆಟ್ಟಿಗರ ಮನಗೆದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
India News Live4500KM ದೂರದಿಂದ ಭಾರತದ ಕಾಡಿಗೆ ಬಂದಿದ್ದು ಹೇಗೆ ಅಪರೂಪದ ಒರಾಂಗುಟಾನ್? ಅತಿದೊಡ್ಡ ಸಮಸ್ಯೆ ಯಾಕೆ?
ಒಡಿಶಾದ ಬಾಲಸೋರ್ ಜಿಲ್ಲೆಯ ಅರಣ್ಯದಲ್ಲಿ ಐದು ಒರಾಂಗುಟಾನ್ ಮರಿಗಳನ್ನು ಅರಣ್ಯ ಇಲಾಖೆ ರಕ್ಷಿಸಿದೆ. ಭಾರತದಲ್ಲಿ ಕಂಡುಬರದ ಈ ಪ್ರಾಣಿಗಳು ಇಲ್ಲಿಗೆ ಹೇಗೆ ಬಂದವು ಎಂಬುದು ನಿಗೂಢವಾಗಿದ್ದು, ಇದು ಅಕ್ರಮ ಕಳ್ಳಸಾಗಣೆ ಜಾಲದ ಕೃತ್ಯವಿರಬಹುದೆಂದು ಶಂಕಿಸಿ ತನಿಖೆ ನಡೆಸಲಾಗುತ್ತಿದೆ.
India News LiveKia Car Offers - ಕಿಯಾ ಕಾರ್‌ಗಳ ಮೇಲೆ ಭರ್ಜರಿ ಹಬ್ಬದ ಆಫರ್! ₹1.5 ಲಕ್ಷದವರೆಗೆ ರಿಯಾಯಿತಿ ಘೋಷಣೆ
ಹಬ್ಬದ ಸೀಸನ್ ಪ್ರಯುಕ್ತ ಕಿಯಾ ಇಂಡಿಯಾ ಸೆಪ್ಟೆಂಬರ್ ತಿಂಗಳಿನಲ್ಲಿ ತನ್ನ ಕಾರುಗಳ ಮೇಲೆ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಈ ಆಫರ್ ಅಡಿಯಲ್ಲಿ ಗ್ರಾಹಕರು ಬರೋಬ್ಬರಿ 1.5 ಲಕ್ಷದವರೆಗೆ ಉಳಿತಾಯ ಮಾಡಬಹುದಾಗಿದ್ದು, ಯಾವ ಮಾಡೆಲ್ ಮೇಲೆ ಈ ದೊಡ್ಡ ರಿಯಾಯಿತಿ ಲಭ್ಯವಿದೆ ಎಂಬ ಕುತೂಹಲ ಹೆಚ್ಚಾಗಿದೆ.
India News LivePF ಅಕೌಂಟ್ ಇರುವವರಿಗೆ ಕೇಂದ್ರದ ಗುಡ್‌ನ್ಯೂಸ್; ಈ ಸಿಂಪಲ್ ಕೆಲಸ ಮಾಡಿ, ಖಾತೆಗೆ ಬೀಳುತ್ತೆ 15 ಸಾವಿರ ರೂ.
ಹೊಸದಾಗಿ ಕೆಲಸಕ್ಕೆ ಸೇರುವ ಉದ್ಯೋಗಿಗಳಿಗೆ ಇಪಿಎಫ್‌ಓ ಮಹತ್ವದ ಎಚ್ಚರಿಕೆ ನೀಡಿದೆ. ಪ್ರಧಾನಮಂತ್ರಿ ವಿಕಸಿತ್ ಭಾರತ್ ರೋಜ್ ಗಾರ್ ಯೋಜನೆ ಅಡಿಯಲ್ಲಿ ₹15,000 ಲಾಭ ಪಡೆಯಲು, ಉದ್ಯೋಗಿಗಳು ತಮ್ಮ ಪಿಎಫ್ ಖಾತೆಗೆ ಸಂಬಂಧಿಸಿದ ಡಿಬಿಟಿ ಸೌಲಭ್ಯ ಮತ್ತು ಎನ್‌ಪಿಸಿಐ ಮ್ಯಾಪಿಂಗ್ ಅನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಗಳನ್ನು ಪೂರ್ಣಗೊಳಿಸದಿದ್ದರೆ ಆರ್ಥಿಕ ನೆರವು ಕೈತಪ್ಪಲಿದೆ.
India News Live'ನಮಗೆ ಟ್ರೋಫಿ ಬೇಡ, ಭಾರತವನ್ನು ಸೋಲಿಸಬೇಕಷ್ಟೇ' - ವಹಾಬ್ ರಿಯಾಜ್ ಎದುರು ನೋವು ಹೊರಹಾಕಿದ ಪಾಕಿಸ್ತಾನ ಅಭಿಮಾನಿ
ಮಹಿಳಾ ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದ ಬಳಿಕ, ಅಭಿಮಾನಿಯೊಬ್ಬರು ಕೋಚ್ ವಹಾಬ್ ರಿಯಾಜ್ ಬಳಿ ಭಾರತವನ್ನು ಸೋಲಿಸುವಂತೆ ಮನವಿ ಮಾಡಿದ್ದಾರೆ. ನಮಗೆ ಏಷ್ಯಾಕಪ್ ಟ್ರೋಫಿಗಿಂತ ಭಾರತದ ವಿರುದ್ಧದ ಗೆಲುವೇ ಮುಖ್ಯ ಎಂದು ಹತಾಶೆಯಿಂದ ಕೇಳಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.