‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದು, ಹೀರೋ ಆಗಲ್ಲ ಎಂದ ಬಿಗ್‌ ಬಾಸ್‌ ಹನುಮಂತ!

ಹನುಮಂತ ಈಗ ಉತ್ತರ ಕರ್ನಾಟಕದ ಜಾತ್ರೆ, ಉತ್ಸವಗಳು, ಊರಹಬ್ಬಗಳಿಗೆ ಕರೆದಾಗ ಒಲ್ಲೆ ಎನಲಾರದೇ ಎಲ್ಲ ಕಡೆಯೂ ಹೋಗಿ ಬರುತ್ತಾರೆ, ಇತ್ತೀಚಿಗೆ ಸಾಲು ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಹಾಡಿ ರಂಜಿಸುತ್ತಾರೆ. 

Share this Video
  • FB
  • Linkdin
  • Whatsapp

ಬಿಗ್ ಬಾಸ್ ವಿನ್ನರ್ ಹನುಮಂತ ಹೊಸ ಗೆಟಪ್​​ನಲ್ಲಿ ಪೋಸ್ ಕೊಟ್ಟಿದ್ದಾನೆ. ಮಸ್ತ್ ಕಾಸ್ಟ್ಯೂಮ್ ತೊಟ್ಟು ‘ಕುಂತ್ರೆ ಕುರುಬ.. ನಿಂತ್ರೆ ಕಿರುಬ’ ಅಂತ ಡೈಲಾಗ್ ಹೊಡೆದಿದ್ದಾನೆ. ಹಾಗಾದ್ರೆ ಹನುಮಂತ ಹೀರೋ ಆಗೇಬಿಟ್ನಾ..? ಬಿಗ್ ಬಾಸ್ ಬಳಿಕ ಹನುಮಂತ ಏನ್ ಮಾಡ್ತಿದ್ದಾನೆ..? ಚಿಲ್ಲೂರ ಬಡ್ನಿ ಚಿಂಗಾರಿ ಲೈಫ್​ನಲ್ಲಿ ಏನೆಲ್ಲಾ ನಡೀತಾ ಇದೆ.. ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ.

Add Asianetnews Kannada as a Preferred SourcegooglePreferred

ನೀನೇನು ಸ್ಪರ್ಧಿನೋ ಇಲ್ಲಾ ಅತಿಥಿನೋ ಅಂದ್ರೆ ‘ಏನ್ ಮಾಡೋದ್ರಿ ಸಿಕ್ಕಾಪಟ್ಟೆ ಪ್ರೊಗ್ರಾಮ್ ಇದಾವ.. ಯಾವುದಕ್ಕೆ ಹೋಗೋದು ಯಾವುದಕ್ಕೆ ಬಿಡೋದು.. ಗೊತ್ತಾಗವಲ್ತು ನೋಡ್ರಿ ಅಂತಾನೇ ಹನುಮಂತ. ಹೌದು ಬಿಗ್ ಬಾಸ್ ವಿನ್ನರ್ ಆದ ಮೇಲೆ ಉತ್ತರ ಕರ್ನಾಟಕದಲ್ಲಿ ಯಾವುದೇ ಪ್ರೋಗ್ರಾಮ್ ಇದ್ರೂ ಹನುಮಂತ ಫಿಕ್ಸ್ ಅತಿಥಿ. ಬೇರೆ ಯಾರೇ ಆದ್ರೂ ಹೀರೋ ಆಗೋ ಅವಕಾಶನಾ ಬೇಡ ಅಂತಾರಾ..? ಆದ್ರೆ ಹನುಮಂತ ಮಾತ್ರ ಅಷ್ಟು ಸೀದಾ ಸಾದಾ. ಇದೆಲ್ಲಾ ನನಗೆ ಬೇಡ ಅನ್ನೋದು ಇವನ ದೃಡ ತೀರ್ಮಾನ. ಹಾಗಂತ ಹನುಮಂತನಿಗೇನೂ ನಟನೆ ಬರಲ್ಲ ಅನ್ನೋ ಹಾಗಿಲ್ಲ, ಇತ್ತೀಚಿಗೆ ಬಾಯ್ಸ್ ವೆರ್ಸಸ್ ಗರ್ಲ್ಸ್ ಮತ್ತು ಮಜಾ ಟಾಕೀಸ್ ಮಹಾಸಂಗಮ ವೇದಿಕೆಯಲ್ಲಿ ನಟನೆ ಮಾಡಿ ಎಲ್ಲರಿಂದ ಸೈ ಅನ್ನಿಸಿಕೊಂಡಿದ್ದ. ಹನುಮಂತ ಹೀರೋ ಆಗಬೇಕು ಅನ್ನೋದು ಅವನ ಅಭಿಮಾನಿಗಳ ಬೇಡಿಕೆ. ಆದ್ರೆ ಹನುಮಂತ ಮಾತ್ರ ಅದೆಲ್ಲಾ ಬ್ಯಾಡ್ರಿಪಾ.. ನನ್ನ ಪಾಡಿಗೆ ಹಾಡಿಕೊಂಡು ಇರ್ತೀನಿ. ಈಗಲೇ ಕೈ ತುಂಬಾ ಕೆಲಸ ಇದೆ. ಅಷ್ಟು ಸಾಕು ಅಂತಿದ್ದಾನೆ. 

Related Video