ದರ್ಶನ್‌ಗೆ ಮಾನಸಿಕ ಚಿಕಿತ್ಸೆ ಅಗತ್ಯವಿದ್ದು, ಅವರ ಕ್ರೂರ ಮನಸ್ಥಿತಿಗೆ ಕೌನ್ಸಿಲಿಂಗ್ ಅಗತ್ಯ- ಡಾ. ಚಂದ್ರಿಕಾ!

ದರ್ಶನ್ ಮನಸ್ಥಿತಿ ಬಗ್ಗೆ ಮನೋವೈದ್ಯೆ ಚಂದ್ರಿಕಾ ಮಾತನಾಡಿದ್ದು, ಅವರ ಮಾನಸಿಕ ಪರಿಸ್ಥಿತಿ ಸರಿಯಿಲ್ಲ. ಚಿಕಿತ್ಸೆ ನೀಡಬೇಕಾದ ಅಗತ್ಯ ಬಹಳವಿದೆ ಎಂದಿದ್ದಾರೆ.

Share this Video
  • FB
  • Linkdin
  • Whatsapp

ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಹೊಡೆದಾಗಲೆಲ್ಲಾ ಚಿತ್ರ ವಿಚಿತ್ರ ಹಿಂಸೆ ನೀಡಿದ್ದಾರೆ. ಹಾಗೆಯೇ ದರ್ಶನ್(Darshan) ಗೆಳತಿ ಪವಿತ್ರಾಗೆ ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿಯ(Renukaswamy murder case) ಪ್ರಾಣವೇ ಹೋಗಿದೆ. ಇದಕ್ಕೆಲ್ಲ ದರ್ಶನ್ ಕಾರಣ ಎನ್ನಲಾಗಿದೆ. ದರ್ಶನ್ ಮನಸ್ಥಿತಿ ಬಗ್ಗೆ ಮನೋವೈದ್ಯೆ ಚಂದ್ರಿಕಾ(Psychiatrist Chandrika) ಮಾತನಾಡಿದ್ದಾರೆ. ದರ್ಶನ್‌ಗೆ ಕೌನ್ಸಲಿಂಗ್ ಅಗತ್ಯವಿದೆ. ಅವರ ಮಾನಸಿಕ ಪರಿಸ್ಥಿತಿ(Mental condition) ಸರಿಯಿಲ್ಲ. ಚಿಕಿತ್ಸೆ ನೀಡಬೇಕಾದ ಅಗತ್ಯ ಬಹಳವಿದೆ ಎಂದು ನಾನು ಆಗಲೇ ಹೇಳಿದ್ದೆ ಎಂದಿದ್ದಾರೆ ವೈದ್ಯೆ. ಜನವರಿ-ಫೆಬ್ರವರಿಯಲ್ಲಿ ದರ್ಶನ್ ಅವರ ವಿಡಿಯೋ ನೋಡಿದೆ. ಅವರಲ್ಲಿ ಸಾಕಷ್ಟು ನೆಗೆಟಿವ್ ಥಾಟ್ ಇತ್ತು. ಚಿತ್ರರಂಗದಲ್ಲಿ ಗೊತ್ತಿದ್ದವರಿಗೆ ಮೆಸೇಜ್ ಮಾಡಿದೆ. ದರ್ಶನ್‌ಗೆ ಕೌನ್ಸಲಿಂಗ್ ಮಾಡಿಸಿ ಎಂದಿದ್ದೆ. ಅವರನ್ನು ನಿಯಂತ್ರಿಸಬೇಕು ಎಂದು ಹೇಳಿದ್ದೆ ಎಂದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್..! ಸೆರೆಮನೆಯಲ್ಲಿ ನಟನಿಗೆ ಹೇಗಿತ್ತು ಸೌಕರ್ಯ ?

Related Video