Asianet Suvarna News Asianet Suvarna News

ಜೈಲಿನಲ್ಲಿ ಮೊದಲ ದಿನ ಕಳೆದ ದರ್ಶನ್..! ಸೆರೆಮನೆಯಲ್ಲಿ ನಟನಿಗೆ ಹೇಗಿತ್ತು ಸೌಕರ್ಯ ?

13 ವರ್ಷಗಳ ನಂತರ ದರ್ಶನ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಇಡೀ ಗ್ಯಾಂಗ್ ಕೊನೆಗೂ ಜೈಲುಪಾಲಾಗಿದೆ.
 

ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ಬಳಿಕ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. 2011ರ ನಂತರ 2ನೇ ಬಾರಿ ಪರಪ್ಪನ ಅಗ್ರಹಾರ ಜೈಲು(Parappana agrahara jail) ಸೇರಿರುವ ನಟ ದರ್ಶನ್ (Darshan) ಫುಲ್ ಸೈಲೆಂಟಾಗಿದ್ದಾರೆ. ಕಂಬಿ ಹಿಂದೆ ಕಾಟೇರ  ವಿಲವಿಲ ಒದ್ದಾಡುವಂತಾಗಿದೆ ಒಂದು ಕ್ಷಣದ ಕೋಪ. ಸಿಡುಕಿನ ಸ್ವಭಾವ ಕತ್ತಲೆಕೋಣೆಗೆ ತಳ್ಳಿದೆ. ಕೈಕಟ್ಟಿ ಕೂರುವ ಪರಿಸ್ಥಿತಿ ತಂದಿದೆ. ಕಾನೂನಿನ ಎಲ್ಲೆ ಮೀರಿ ರೇಣುಕಾಸ್ವಾಮಿಯ ಜೀವ(Renukaswamy murder case) ತೆಗೆದ ಗ್ಯಾಂಗ್ ಜೈಲು ಸೇರಿದೆ. 4 ಗೋಡೆಗಳ ಮಧ್ಯೆ ಕಂಬಿ ಎಣಿಸುವಂತಾಗಿದೆ. ಸಿಟ್ಟು ಸಹವಾಸದೋಷ..ಜೀವನ ಸರ್ವನಾಶವಾಗುವಂತೆ ಮಾಡಿದೆ. ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಚಿತ್ರದುರ್ಗದ ರೇಣುಕಾಸ್ವಾಮಿಯ ಹತ್ಯೆ ಕೇಸ್‌ನಲ್ಲಿ ನಟ ದರ್ಶನ್ ಸೇರಿ ಎಲ್ಲಾ 17 ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದಂತಾಗಿದೆ. ಎ1 ಪವಿತ್ರಾಗೌಡ ಸೇರಿ 13 ಆರೋಪಿಗಳನ್ನು ಒಂದು ಬ್ಯಾಚ್‌ನಲ್ಲಿ ಜೈಲಿಗೆ ಕಳುಹಿಸಿದ್ದ 24ನೇ ಎಸಿಎಂಎಂ ಕೋರ್ಟ,  2ನೇ ಬ್ಯಾಚ್‌ನಲ್ಲಿ ಎ2 ದರ್ಶನ್ ಸೇರಿ ಧನರಾಜ ವಿನಯ್, ಪ್ರದೂಶ್‌ರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ 13 ದಿನಗಳ ಕಸ್ಟಡಿಯಲ್ಲಿ ಸಂಪೂರ್ಣ ವಿಚಾರಣೆ ಬಳಿಕ ಡಿ ಗ್ಯಾಂಗ್‌ಗೆ ಪರಪ್ಪನ ಅಗ್ರಹಾರ ಜೈಲಿನ ದರ್ಶನ ಆಗಿದೆ. ಹತ್ಯೆ ಕೇಸ್ನಲ್ಲಿ ಲಾಕ್ ಆಗಿರೋದು ನಟ ದರ್ಶನ್ಗೆ ಬರಸಿಡಿಲು ಬಡಿದಂತಾಗಿದೆ. 

ಇದನ್ನೂ ವೀಕ್ಷಿಸಿ:  Renukaswamy murder case: ಐ ವಿಟ್ನೆಸ್‌ಗಳಿಗೆ ಇದೆಯಂತೆ ಜೀವ ಭಯ..! ಸಾಕ್ಷ್ಯ ನಾಶಕ್ಕಾಗಿ ಏನೆಲ್ಲಾ ನಡೆಯುತ್ತಿದೆ ಗೊತ್ತಾ..?

Video Top Stories