ಅಪ್ಪುವಿಗೆ ‘ಕರ್ನಾಟಕ ರತ್ನ’ ಅರ್ಪಿಸಿದ ಅಶ್ವಿನಿ: ಫೋಟೋದಲ್ಲಿ ನಕ್ಕ ಪುನೀತ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗಿದ್ದು, ಅದನ್ನು ಅಪ್ಪು ಫೋಟೋಗೆ ಹಾಕಲಾಗಿದೆ.

Share this Video
  • FB
  • Linkdin
  • Whatsapp

ಯುವರತ್ನ ಪುನೀತ್ ರಾಜ್ ಕುಮಾರ್ ಈಗ ಕರ್ನಾಟಕ ರತ್ನ. ಅಪ್ಪು ಮಡದಿ ಅಶ್ವಿನಿ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಪತಿಯ ಪರವಾಗಿ ಸ್ವೀಕರಿಸಿದ್ದಾರೆ. ಆ ಪ್ರಶಸ್ತಿಯನ್ನು ಅವರು ಅಪ್ಪುಗೆ ಅರ್ಪಿಸಿದ್ದು, ಸದಾಶಿವ ನಗರದ ಮನೆಗೆ ಬರುತ್ತಿದ್ದಂತೆ ಅಶ್ವಿನಿ ಹಾಗೂ ಮಗಳು ವಂದಿತ ‘ಕರ್ನಾಟಕ ರತ್ನ’ವನ್ನು ಅಪ್ಪು ಫೋಟೋಗೆ ಹಾಕಿದ್ದಾರೆ. ಬಳಿಕ ಪ್ರಶಸ್ತಿ ಸ್ವೀಕರಿಸಿ ಕ್ಷಣ ಹಾಗೂ ಅಪ್ಪುಗೆ ಅರ್ಪಿಸಿದ ಕ್ಷಣವನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಧನ್ಯವಾದ ತಿಳಿಸಿದ್ದಾರೆ.

ಡಾ.ರಾಜ್ ಅವರ ಈ ಸಿನಿಮಾ 63 ವರ್ಷಗಳ ಹಿಂದೆಯೇ 8 ಭಾಷೆಗಳಿಗೆ ಡಬ್ ಆಗಿತ್ತು!
 

Related Video