ರಾಜಕೀಯದ ಬಗ್ಗೆ ಕೋಡಿಹಳ್ಳಿ ಶ್ರೀ ಹೇಳಿದ್ದೇನು? : ನಿಜವಾಯ್ತು ಭವಿಷ್ಯ !

ಕೋಡಿಹಳ್ಳಿ ಶ್ರೀಗಳು ಈ ಹಿಂದೆ ರಾಜಕೀಯದ ಬಗ್ಗೆ ನುಡಿದಿದ್ದ ಭವಿಷ್ಯ ಸತ್ಯವಾಗಿದೆ. ಅವರು ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಹೇಳಿದ್ದರು.

First Published May 15, 2023, 11:17 AM IST | Last Updated May 15, 2023, 11:17 AM IST

ವಿಜಯನಗರ: ಮತ್ತೊಮ್ಮೆ ಕೋಡಿಹಳ್ಳಿ ಶ್ರೀಗಳ ಭವಿಷ್ಯವಾಣಿ ನಿಜವಾಗಿದೆ.  ಈ ಹಿಂದೆ ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರುತ್ತದೆ. 2023ರಲ್ಲಿ ರಾಜ್ಯದಲ್ಲಿ ಅತಂತ್ರ ಸರ್ಕಾರ ಬರುವುದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಜನವರಿ 13ರಂದು ಹೊಸಪೇಟೆಯಲ್ಲಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು.  ಈ ಮೂಲಕ ಕೋಡಿಮಠದ ಶ್ರೀಗಳ ಮೇಲಿರುವ ಅಪಾರ ನಂಬಿಕೆ ಮತ್ತು ವಿಶ್ವಾಸ ಈ  ಭವಿಷ್ಯದ ಮೂಲಕ  ಮತ್ತಷ್ಟು ಹೆಚ್ಚಾಗಿದೆ. ಅಂದು ಕೋಡಿಶ್ರೀಗಳು ನುಡಿದ ಭವಿಷ್ಯದ ಬಗ್ಗೆ ಭಾರೀ ಚರ್ಚೆ ನಡೆದಿತ್ತು. ಇದೀಗ ಅದು ನಿಜವಾಗಿದೆ. ಅಲ್ಲದೇ ಈ ವಿಡಿಯೋ  ವೈರಲ್‌ ಆಗುತ್ತಿದೆ.

ಇದನ್ನೂ ವೀಕ್ಷಿಸಿ: Today Horoscope-ಈಶ್ವರನ ಆರಾಧನೆಗೆ ಇಂದು ಪ್ರಶಸ್ತ ಕಾಲ: ಈ ದಿನ 12 ರಾಶಿಗಳಿಗೂ ಆರೋಗ್ಯದ ಸಮಸ್ಯೆ ಕಾಡಲಿದೆ !