Today Horoscope-ಈಶ್ವರನ ಆರಾಧನೆಗೆ ಇಂದು ಪ್ರಶಸ್ತ ಕಾಲ: ಈ ದಿನ 12 ರಾಶಿಗಳಿಗೂ ಆರೋಗ್ಯದ ಸಮಸ್ಯೆ ಕಾಡಲಿದೆ !

ಸೋಮವಾರದ 12 ರಾಶಿಗಳ ಫಲಾಫಲ ಈ ರೀತಿ ಇದ್ದು, ಇಂದಿನಿಂದ ಎಲ್ಲಾರು ಆರೋಗ್ಯದ ಕಡೆ ಗಮನಹರಿಸುವುದು ಒಳ್ಳೆಯದು.

Share this Video
  • FB
  • Linkdin
  • Whatsapp

ಶುಭೋದಯ ಓದುಗರೇ, ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖಾ ಮಾಸ, ಕೃಷ್ಣ ಪಕ್ಷ, ಸೋಮವಾರ, ಏಕಾದಶಿ ತಿಥಿ, ಪೂರ್ವಭಾರ್ದ ನಕ್ಷತ್ರ.

ಈ ದಿನ ಈಶ್ವರನ ಆರಾಧನೆಗೆ ಪ್ರಶಸ್ತ ಕಾಲ. ಅಲ್ಲದೇ ಇಂದು ರವಿ ಸಂಕ್ರಾತಿ ದಿನ ಸಹ ಆಗಿದೆ. ಇಷ್ಟು ದಿನ ಉಚ್ಛ ಸ್ಥಾನದಲ್ಲಿದ್ದ ಸೂರ್ಯ ತನ್ನ ಶತ್ರು ಮನೆಗೆ ಪ್ರವೇಶ ಮಾಡುತ್ತಿದ್ದಾನೆ. ಅಂದರೆ ವೃಷಭ ರಾಶಿಗೆ ಸೂರ್ಯ ಪ್ರವೇಶಿಸುತ್ತಿದ್ದು, ಈ ರಾಶಿಗೆ ಅಧಿಪತಿ ಶುಕ್ರ ಆಗಿದ್ದಾನೆ. ಹೀಗಾಗಿ ಸಾಮಾನ್ಯವಾಗಿ ತೊಡಕುಗಳು ಹೆಚ್ಚಾಗುತ್ತವೆ. 12 ರಾಶಿಗಳಿಗೂ ಸ್ವಲ್ಪ ತೊಂದರೆ, ಕಿರಿಕಿರಿ ಉಂಟಾಗುವ ಸಾದ್ಯತೆ ಹೆಚ್ಚಾಗಿದೆ. ಇದರಲ್ಲಿ ಹೊಟ್ಟೆ ನೋವು, ಅರ್ಜೀಣ, ಕಣ್ಣಿನ ಸಮಸ್ಯೆಗಳನ್ನು ರವಿ ಉಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಇಂದಿನಿಂದ ಸೂರ್ಯನನ್ನು ಪ್ರಾರ್ಥಿಸುವುದು ತುಂಬಾ ಒಳ್ಳೆಯದು. ಈ ದಿನದಿಂದ ಆರೋಗ್ಯದ ವಿಚಾರದಲ್ಲಿ ಎಲ್ಲಾರು ಎಚ್ಚರವಹಿಸಿ.

ಇದನ್ನೂ ವೀಕ್ಷಿಸಿ: Suvarna Special: ಪಕ್ಕಾ 136ರ ಲೆಕ್ಕ ಹೇಳಿ ಗೆದ್ದ ಡಿ.ಕೆ.ಶಿವಕುಮಾರ್‌!

Related Video