ಅತಿಯಾದ ಧರ್ಮ ಪಾಲನೆಯೇ ಮುಸ್ಲಿಮರಿಗೆ ಸಮಸ್ಯೆನಾ ? ಅಂಬೇಡ್ಕರ್ ಸಂವಿಧಾನ ಅವರಿಗೆ ಅನ್ವಯಿಸಲ್ವಾ ?

ಮುಸ್ಲಿಂ ಲೀಡರ್‌ ಉಮರ್ ಶರೀಫ್‌ ಏಷ್ಯಾನೆಟ್‌ ಸುವರ್ಣ ನ್ಯೂಸ್‌ನಲ್ಲಿ ಇಸ್ರೇಲ್ ಮತ್ತು ಹಮಾಸ್‌ ಯುದ್ಧದ ಬಗ್ಗೆ ಮಾತನಾಡಿದ್ದು, ಇದರ ವಿಡಿಯೋ ಇಲ್ಲಿದೆ..

First Published Nov 12, 2023, 12:41 PM IST | Last Updated Nov 12, 2023, 12:41 PM IST

ಒಂದು ಮಗುವನ್ನು ಕೊಲ್ಲುವವನಿಗೆ ಯಾರೂ ಕೂಡ ಸಪೋರ್ಟ್‌ ಮಾಡಬಾರದು. ಇದು ಇಸ್ಲಾಂ(Islam) ಸಂಸ್ಕೃತಿ ಅಲ್ಲ. ಯಹೂದಿ, ಕ್ರೈಸ್ತರು, ಹಿಂದೂಗಳು ಎಲ್ಲಾರು ನಮ್ಮವರೇ ಎಂದು ಉಮರ್‌ ಶರೀಫ್‌(Umar Sharif) ಹೇಳುತ್ತಾರೆ. ಕಾಶ್ಮೀರದಲ್ಲಿ ಹಿಂದೂಗಳಿಗಿಂತ ಜಾಸ್ತಿ,ಮುಸ್ಲಿಮರು ಸತ್ತಿದ್ದಾರೆ. ಅದು ಕೂಡ ಮುಸ್ಲಿಮರ ಕೈಯಲ್ಲೇ. ತೇರಾ ಮೇರಾ ರಿಸ್ತಾ ಅಂದರೆ ಒಬ್ಬ ಮುಸಲ್ಮಾನ ನ್ಯಾಯಕ್ಕಾಗಿ ನಿಲ್ಲಬೇಕು. ಅನ್ಯಾಯ ಮಾಡಿದವರಿಗೆ ಶಿಕ್ಷೆ ನೀಡಬೇಕು ಎಂದು ಕುರಾನ್‌(Quran) ಹೇಳುತ್ತದೆ ಎಂದು ಉಮರ್‌ ಶರೀಫ್‌ ಹೇಳುತ್ತಾರೆ. ಹಮಾಸ್‌ಗೆ ಬೆಂಬಲ ನೀಡುವ ಇರಾನ್‌, ಟು ನೇಷನ್‌ ಥೇಯರಿಗೆ ಸಪೋರ್ಟ್ ಮಾಡಿದೆ. ನಮ್ಮಲ್ಲಿ ಈ ಕಾಲದಲ್ಲಿ ಅನೇಕರು ಉಗ್ರರಾಗುತ್ತಿದ್ದಾರೆ. ಇದಕ್ಕೆ ಕಾರಣ ಅವರಿಗೆ ಸಿಗುತ್ತಿರುವ ತಪ್ಪು ಮಾಹಿತಿ. ಸೌದಿ ಅರೇಬಿಯಾದಲ್ಲಿ ಅತ್ಯಂತ ಸ್ಕಾಲರ್ಸ್‌ ಇದ್ದಾರೆ ಎಂದು ಉಮರ್‌ ಶರೀಫ್‌ ಹೇಳುತ್ತಾರೆ. 

ಇದನ್ನೂ ವೀಕ್ಷಿಸಿ:  ಬೆಂಗಳೂರು ಎಪಿಎಂಸಿಯಲ್ಲಿ ಭ್ರಷ್ಟಾಚಾರ..? ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಕೆ