Asianet Suvarna News Asianet Suvarna News

ಬೆಂಗಳೂರು ಎಪಿಎಂಸಿಯಲ್ಲಿ ಭ್ರಷ್ಟಾಚಾರ..? ಈ ಬಗ್ಗೆ ರಾಜ್ಯಪಾಲರಿಗೆ ದೂರು ಸಲ್ಲಿಕೆ

ರಾಜ್ಯದ ದೊಡ್ಡ ಎಪಿಎಂಸಿ ಮಾರುಕಟ್ಟೆಗಳಲ್ಲಿ  ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆ ಸಹ ಒಂದು. ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೈತರು, ವರ್ತಕರು ತಮ್ಮ ವ್ಯವಹಾರವನ್ನ ಇದೇ ಮಾರುಕಟ್ಟೆ ಮೂಲಕ ಮಾಡ್ತಾರೆ.‌ ಆದರೆ ಈಗ ಇದೇ ಮಾರುಕಟ್ಟೆಯ ಆಡಳಿತ ಮಂಡಳಿ ವಿರುದ್ಧ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ..ಅಷ್ಟೇ ಅಲ್ಲದೇ ರಾಜ್ಯಪಾಲರ ಬಳಿ ಅಧಿಕಾರಿಗಳ ವಿರುದ್ಧ ದೂರು ದಾಖಲಾಗಿದೆ.

ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಗಳಾದ(APMC market) ಯಶವಂತಪುರ(Yeshavantpur) ಮತ್ತು ದಾಸನಪುರ ಮಾರ್ಕೆಟ್(Dasanpur market) ಭ್ರಷ್ಟಾಚಾರ(Corruption) ತಾಂಡವವಾಡುತ್ತಿದೆಯಂತೆ . ಸೆಕ್ಯುರಿಟಿ ಗಾರ್ಡ್ ಮತ್ತು ಕಸ ಗೂಡಿಸುವವರ ಹೆಸರಲ್ಲಿ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಹಣವನ್ನು ಸುಳ್ಳು ಲೆಕ್ಕ ತೋರಿಸಿ ದೋಚುತ್ತಿದ್ದರಂತೆ. ಈ ರೀತಿ ಸಾಕಷ್ಟು ಸುಳ್ಳು ಲೆಕ್ಕ ತೋರಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರುಪಾಯಿ ನಷ್ಟ ಉಂಟು ಮಾಡಿರುವ  ಆರೋಪ ಕೇಳಿಬಂದಿದೆ. ಈ ಸಂಬಂಧ ಎಪಿಎಂಸಿ ಅಧಿಕಾರಿಗಳ ವಿರುದ್ಧ ರಾಜ್ಯಪಾಲರಿಗೆ ಸಾಮಾಜಿಕ ಕಾರ್ಯಕರ್ತ ಪರಮೇಶ್ ದೂರು ನೀಡಿದ್ದಾರೆ. ಇನ್ನೂ ರಾಜ್ಯಪಾಲರಿಗೆ ಸಲ್ಲಿಕೆಯಾಗಿರೋ ದೂರಿನಲ್ಲಿ ಭ್ರಷ್ಟಾಚಾರದ ಬಗ್ಗೆ ಕೃಷಿ ಉತ್ಪನ್ನ ಸಚಿವರ ಗಮನಕ್ಕಿದ್ರೂ, ಸಚಿವರು ಮಾತ್ರ ಸೈಲೆಂಟ್ ಆಗಿದ್ದಾರೆ ಎಂಬ ಆರೋಪ  ಚರ್ಚೆ ಗ್ರಾಸವಾಗಿದೆ. ನಿತ್ಯ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಯುವ ಜಾಗದಲ್ಲಿ ಸದ್ಯ ಅಧಿಕಾರಿಗಳ ವಿರುದ್ಧ ಕೇಳಿಬಂದಿರೋ ಆರೋಪ ಗಂಭೀರವಾದದ್ದೆ. ಆದರೆ ಸದ್ಯ ಸಲ್ಲಿಕೆಯಾಗಿರೋ ದೂರಿನನ್ವಯ ರಾಜ್ಯಪಾಲರು ಯಾವ ರೀತಿ ಕ್ರಮವಹಿಸುತ್ತಾರೆ ಕಾದುನೋಡಬೇಕಿದೆ.

ಇದನ್ನೂ ವೀಕ್ಷಿಸಿ:  ಮಹೇಶ್ ಬಾಬು ಜೊತೆ ಶ್ರೀಲೀಲಾ ಲುಂಗಿ ಡ್ಯಾನ್ಸ್‌: ಗುಂಟೂರು ಖಾರಂ ಸಿಕ್ಕಾಪಟ್ಟೆ ಘಾಟು ನಾಟು!