ಇನ್ಮೇಲಾದರೂ ಕೆಲಸಕ್ಕೆ ಬಾರದವರನ್ನ ಕಿತ್ತಾಕಿ: ಬಿಎಸ್‌ವೈ ವಿರುದ್ಧ ಮತ್ತೆ ಗುಡುಗಿದ ಸೋಮಣ್ಣ

ಜೆಡಿಎಸ್ ಸಹಕಾರ, ಬಿಜೆಪಿ ಹೊಂದಾಣಿಕೆಯಿಂದ ಗೆದ್ದಿದ್ದೇನೆ. ಇನ್ಮೇಲಾದರೂ ಕೆಲಸಕ್ಕೆ ಬಾರದವರನ್ನ ಕಿತ್ತಾಕಿ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಮಾಜಿ ಸಿಎಂ ಬಿ.ಸ್‌.ಯಡಿಯೂರಪ್ಪ(BS Yediyurappa) ವಿರುದ್ಧ ಮತ್ತೆ ಕೇಂದ್ರ ಸಚಿವ ವಿ. ಸೋಮಣ್ಣ(V Somanna) ಗುಡುಗಿದ್ದಾರೆ. ವೇದಿಕೆಯಲ್ಲೇ ವಿಜಯೇಂದ್ರಗೆ(Vijayendra) ಪಾಠವನ್ನು ಮಾಡಿದ್ದಾರೆ. ಇನ್ಮೇಲಾದರೂ ಕೆಲಸಕ್ಕೆ ಬಾರದವರನ್ನ ಕಿತ್ತಾಕಿ. ಯಾರೋ ಮಾಡಿದ ಪಾಪಕ್ಕೆ ಯಾರನ್ನೋ ಗುರಿ ಮಾಡಬೇಡಿ ಎಂದು ದಾವಣಗೆರೆ ಸೋಲನ್ನ ಪ್ರಸ್ತಾಪಿಸಿ ಕೇಂದ್ರ ಸಚಿವ ಸೋಮಣ್ಣ ಮಾತನಾಡಿದ್ದಾರೆ. ಜೆಡಿಎಸ್ ಸಹಕಾರ, ಬಿಜೆಪಿ ಹೊಂದಾಣಿಕೆಯಿಂದ ಗೆದ್ದಿದ್ದೇನೆ ಎಂದು ಹೇಳಿದರು. ಇನ್ನೂ ಸೋಮಣ್ಣ ಮಾತಿಗೆ ವೇದಿಯಲ್ಲೇ ಬಿಎಸ್‌ವೈ ಟಕ್ಕರ್‌ ಕೊಟ್ಟಿದ್ದಾರೆ. ನಾವು ಇನ್ನೂ ಎರಡು ಮೂರು ಕ್ಷೇತ್ರ ಗೆಲ್ಲಬಹುದಿತ್ತು. ಸೀಟ್ ಕೊಡುವಲ್ಲಿ ವ್ಯತ್ಯಾಸ ಆಯ್ತು ಎಂದು ಯಡಿಯೂರಪ್ಪ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ:  ಬರ್ಬರ ಹತ್ಯೆಯ ಕೇಸ್ ಕ್ಲೋಸ್ ಮಾಡ್ಸೋ ಪ್ಲ್ಯಾನ್ ಇತ್ತಾ..? ಅಭಿಮಾನಿಗಳೇ ಆರೋಪಿಗಳು..ಫ್ಯಾನ್ಸ್‌ಗೆ ಇದೇನಾ ಸಂದೇಶ?

Related Video