ಬರ್ಬರ ಹತ್ಯೆಯ ಕೇಸ್ ಕ್ಲೋಸ್ ಮಾಡ್ಸೋ ಪ್ಲ್ಯಾನ್ ಇತ್ತಾ..? ಅಭಿಮಾನಿಗಳೇ ಆರೋಪಿಗಳು..ಫ್ಯಾನ್ಸ್‌ಗೆ ಇದೇನಾ ಸಂದೇಶ?

ದುಡ್ಡಿನ ಮದದಲ್ಲಿ ಕೇಸ್ ಕ್ಲೋಸ್ ಪ್ರಯತ್ನವಾಯ್ತಾ..?
ಅನ್ಯಾಯದ ಸಾವಿಗೆ ನ್ಯಾಯ ಕೊಡಿಸುತ್ತಾ ಆ ಸಾಕ್ಷಿ..?
ದರ್ಶನ್ ಪಟಾಲಂ ವಿರುದ್ಧ ಸಿಕ್ಕ ಮಹತ್ವದ ಸಾಕ್ಷಿ ಏನು? 

Share this Video
  • FB
  • Linkdin
  • Whatsapp

ರೇಣುಕಾಸ್ವಾಮಿಯ ಭೀಕರ ಕೊಲೆ(Renukaswamy murder case) ರಾಜ್ಯ ಇನ್ನೆಷ್ಟು ವರ್ಷಗಳ ಕಾಲ ನೆನಪಿಡಲಿದೆಯೋ ಗೊತ್ತಿಲ್ಲ.ಯಾಕಂದ್ರೆ ಅದರ ಭೀಕರತೆ ಅಂಥದ್ದು. ಆ ಭೀಕರತೆಯ ಹಿಂದಿರೋ ಕಾರಣವೂ ಅಂಥದ್ದು. ನಟ ದರ್ಶನ್ (Darshan). ಅಭಿಮಾನಿಗಳ ಪಾಲಿಗೆ ಸೋ ಕಾಲ್ಡ್, ಡಿ ಬಾಸ್. ಇವತ್ತು ರಾಜಕಾಲುವೆಯ ಮೋರಿಯಲ್ಲಿ ರೇಣುಕಾಸ್ವಾಮಿ ರಕ್ತ ಹರಿಯೋಕೆ ಕಾರಣವೇ ದರ್ಶನ್. ಅದೇ ಕಾರಣಕ್ಕಾಗಿಯೇ ಇವತ್ತು, ದರ್ಶನ್ ಮಾತ್ರವೇ ಅಲ್ಲ, ಆತನ ಪಟಾಲಂ ಕೂಡ, ಸೆರೆವಾಸದ ಭೀತಿಯಲ್ಲಿದೆ. ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ(Murder Case) ಆರೋಪ ಹೊತ್ತಿರೋ ನಟ ದರ್ಶನ್‌ನನ್ನ ಮತ್ತೆ ಪೊಲೀಸ್‌ ಕಸ್ಟಡಿಗೆ ನೀಡಲಾಗಿದೆ. ಈಗಾಗಲೇ 9 ದಿನಗಳ ಕಾಲ ಪೊಲೀಸರ ವಿಚಾರಣೆ ಎದುರಿಸಿದ್ದ ನಟ, ಈಗ ಮತ್ತೆರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಹೋಗ್ಬೇಕಾಗುತ್ತೆ. ಅಲ್ಲಿ ವಿಚಾರಣೆ ಮುಂದುವರಿದಿದೆ. ಆದ್ರೆ ದರ್ಶನ್ ಗೆಳತಿ ಪವಿತ್ರಾಗೌಡ ಸೇರಿದಂತೆ ಉಳಿದ 10 ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟಾಗಿದ್ದಾರೆ. ಈಗಾಗಲೇ ಈ ಕೊಲೆ ಕೇಸಿಗೆ ಸಂಬಂಧ ಪಟ್ಟಂತೆ, ನಟ ದರ್ಶನ್ ಹೇಳಿಕೆ ದಾಖಲಾಗಿದೆ. ಅದೂ ಅಲ್ಲದೇ ಅಗತ್ಯ ವಸ್ತುಗಳ ರಿಕವರಿ ಕೂಡ ಆಗಿದೆ. ಹಾಗಾಗಿ, ಕಸ್ಟಡಿ ಅಗತ್ಯವೇ ಇಲ್ಲ ಅಂತ ಅರೋಪಿ ದರ್ಶನ್ ಪರ ವಕೀಲರು ವಾದಿಸಿದ್ರು. ಆದ್ರೆ, ದರ್ಶನ್ ತಮ್ಮ ಕಸ್ಟಡಿಗೆ ಯಾಕೆ ಬೇಕು ಅಂತ, ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ವಾದ ನಡೆಸಿದ್ರು.

ಇದನ್ನೂ ವೀಕ್ಷಿಸಿ:  ದರ್ಶನ್‌ನನ್ನ ಮತ್ತೆ ಕಸ್ಟಡಿಗೆ ತೆಗೆದುಕೊಳ್ಳಲು ಕಾರಣವೇನು..? ಬಾಯಿ ಬಿಡಬೇಕಿದೆ 40 ಲಕ್ಷದ ಸೀಕ್ರೆಟ್ !

Related Video