Asianet Suvarna News Asianet Suvarna News

ನಟೋರಿಯಸ್ ರೌಡಿ ಭೇಟಿಗೆ ದುಂಬಾಲು ಬಿದ್ದ ದರ್ಶನ್! ನಟನಿಗೂ ರೌಡಿ ನಾಗನಿಗೂ ಇರುವ ಲಿಂಕ್‌ ಏನು?

ವಿಲ್ಸನ್ ಗಾರ್ಡನ್ ನಾಗನ ಭೇಟಿ‌ಗೆ ಜೈಲು ಅಧಿಕಾರಿಗಳ ಬಳಿ ನಟ ದರ್ಶನ್‌ ಪಟ್ಟು ಹಿಡಿದಿದ್ದಾರಂತೆ. ಯಾವ ಕಾರಣಕ್ಕೆ ನಾಗನ ಭೇಟಿಗೆ ನಟ ದರ್ಶನ್ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲು ಬೆಂಗಳೂರು ‌ಪೊಲೀಸರು ಮುಂದಾಗಿದ್ದಾರೆ.

ನಟ ದರ್ಶನ್‌ಗೆ ಸಂಬಂಧಿಸಿದ ಮತ್ತೊಂದು ಎಕ್ಸ್‌ಕ್ಲೂಸಿವ್‌ ಸುದ್ದಿ ನಿಮ್ಮ ಏಷ್ಯಾನೆಟ್‌ ಸುವರ್ಣನ್ಯೂಸ್ ಬ್ರೇಕ್ ಮಾಡ್ತಿದೆ. ಜೈಲಿನಲ್ಲಿ ಯಾರನ್ನೋ ಭೇಟಿ‌ ಮಾಡಲು ನಟ ದರ್ಶನ್‌ (Darshan) ಹಾತೊರೆಯುತ್ತಿದ್ದಾರಂತೆ. ಆ ರೌಡಿ ಭೇಟಿ ಮಾಡಲು ಅವಕಾಶ ಕೊಡಿ ಎಂದು ಅಧಿಕಾರಿಗಳ ಬಳಿ ದರ್ಶನ್ ಪಟ್ಟು ಹಿಡಿದಿದ್ದಾರಂತೆ. ಜೈಲಿಗೆ  ಹೋದ ಕ್ಷಣದಿಂದ ಜೈಲು ಅಧಿಕಾರಿಗಯನ್ನು ಭೇಟಿಗೆ ಬೇಡಿಕೊಳ್ಳುತ್ತಿದ್ದಾರಂತೆ. ಆದ್ರೆ ನಟೋರಿಯಸ್ ರೌಡಿ ಭೇಟಿಗೆ ಅವಕಾಶವನ್ನು ಜೈಲು ಅಧಿಕಾರಿಗಳು ಮಾಡಿಕೊಡುತ್ತಿಲ್ಲ. ಈವರೆಗೂ ಆ ರೌಡಿ ಭೇಟಿಗೆ ಅವಕಾಶ ನೀಡದ ಜೈಲು ಅಧಿಕಾರಿಗಳು. ವಿಲ್ಸನ್ ಗಾರ್ಡನ್ ನಾಗನನ್ನ(Wilson Garden Naga) ಭೇಟಿ‌ಮಾಡಲು ನಟ ದರ್ಶನ್ ಕಾತರವಾಗಿದ್ದು, ಸದ್ಯ ರೌಡಿ ಮಹೇಶನ ಕೊಲೆ ‌ಕೇಸ್‌ನಲ್ಲಿ ವಿಲ್ಸನ್ ಗಾರ್ಡನ್ ನಾಗ ಜೈಲು ಸೇರಿದ್ದಾನೆ. ಕಳೆದ 10 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಲ್ಸನ್ ಗಾರ್ಡನ್ ನಾಗ ಇದ್ದಾನೆ. ನಾಗನ ವಿರುದ್ಧ ಕೊಲೆ, ಕೊಲೆಯತ್ನ, ಸುಲಿಗೆ ಸೇರಿ 15 ಕ್ಕೂ ಹೆಚ್ಚು ಕೇಸ್ ಗಳು ಇವೆ. ಯಾವ ಕಾರಣಕ್ಕೆ ನಾಗನ ಭೇಟಿಗೆ ನಟ ದರ್ಶನ್ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಲು ಬೆಂಗಳೂರು ‌ಪೊಲೀಸರು (Bengaluru police) ಮುಂದಾಗಿದ್ದಾರೆ.

ಇದನ್ನೂ ವೀಕ್ಷಿಸಿ:  ಸಹವಾಸ ದೋಷದಿಂದಲೇ ದರ್ಶನ್‌ಗೆ ಈ ಗತಿ ಬಂತಾ..? ಅಭಿಮಾನ ಇರಬೇಕು..ಅಂಧಾಭಿಮಾನ ಇರಬಾರದು..!

Video Top Stories