
3ದಿನ, 500ಕೋಟಿ ಪುಷ್ಪನ ಎದುರು ಹಣದ ಹೊಳೆ! ಪವನ್ ಕಲ್ಯಾಣ್‌ಗೆ ವಿಶೇಷ ಧನ್ಯವಾದ ಹೇಳಿದ ಅಳಿಮಯ್ಯ ಅಲ್ಲು!
ಪುಷ್ಪ-2 ಚಿತ್ರವು ಮೊದಲ ಮೂರು ದಿನಗಳಲ್ಲಿ 500 ಕೋಟಿ ಗಳಿಸಿ, 700 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಲ್ಲಿದೆ. ಈ ಯಶಸ್ಸಿಗೆ ಕಾರಣವಾದ ಅಂಶಗಳೇನು ಮತ್ತು ಅಲ್ಲು ಅರ್ಜುನ್ ಯಾರಿಗೆ ಥ್ಯಾಂಕ್ಸ್ ಹೇಳಿದ್ದಾರೆ ಎಂಬುದನ್ನು ತಿಳಿಯಿರಿ.
ಪುಷ್ಪ-ದಿ ರೂಲ್. ಇಂಡಿಯನ್ ಸಿನಿಇಂಡಸ್ಟ್ರಿಯ ಬಾಕ್ಸ್ ಆಫೀಸ್ನ ಅಕ್ಷರಶಃ ರೂಲ್ ಮಾಡ್ತಾ ಇದೆ. ಮೊದಲ ಮೂರು ದಿನದಲ್ಲಿ 500 ಕೋಟಿ ಕ್ಲಬ್ ಸೇರಿರೋ ಪುಷ್ಪ-2 ಭಾನುವಾರದ ಅಂತ್ಯಕ್ಕೆ 700 ಕೋಟಿ ಗಳಿಸೋ ಸಾಧ್ಯತೆ ಇದೆ. ಅಲ್ಲಿಗೆ ಪುಷ್ಪರಾಜ್ ಅಕ್ಷರಶಃ ಹಣದ ಹೊಳೆಯನ್ನೇ ಹರಿಸಿದ್ದಾನೆ. ಪುಷ್ಪನ ಈ ಅಬ್ಬರದ ಎದುರು ಇಂಡಿಯನ್ ಸಿನಿಮಾದ ಆಲ್ಟೈಂ ರೆಕಾರ್ಡ್ ಗಳೆಲ್ಲಾ ಪೀಸ್ ಪೀಸ್ ಆಗಿವೆ. ಎಲ್ಲಾ ದಾಖಲೆಗಳನ್ನ ಗುಡಿಸಿ ನಂ.1 ಸ್ಥಾನಕ್ಕೇರಿದ್ದಾನೆ ಒನ್ ಎಂಡ್ ಓನ್ಲಿ ಪುಷ್ಪರಾಜ್.
ಈ ಮಧ್ಯೆ ಅಲ್ಲು ಅರ್ಜುನ್ ಹೇಳಿದ ಅದೊಂದು ಥ್ಯಾಂಕ್ಸ್ ಸಿನಿಮಾಗಿಂತ ದೊಡ್ಡ ಸೆನ್ಷೇಷನ್ ಸೃಷ್ಟಿಸಿದೆ. ಹಾಗಿದ್ರೆ, ಯಾರಿಗೆ ಆ ಧನ್ಯವಾದ..? ಯಾವ ಕಾರಣಕ್ಕೆ ಆ ಕೃತಜ್ಞತೆ..? ಆ ಇನ್ ಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ ನೋಡಿ.
4 ದಿನದ ಅಂತ್ಯಕ್ಕೆ 700 ಕೋಟಿ ಗಡಿ ದಾಟಿರೋ ಪುಷ್ಪ-2 ಮೂವಿ ಇಡೀ ಇಂಡಸ್ಟ್ರಿಯಲ್ಲೇ ಹೊಸ ದಾಖಲೆ ಸೃಷ್ಟಿಸಿದೆ. ಹಾಗಾದ್ರೆ ಪುಷ್ಪನ ಇಷ್ಟು ದೊಡ್ಡ ಸಕ್ಸಸ್ಗೆ ಕಾರಣವಾದ ಆ ಮೂರು ಇಂಪಾರ್ಟೆಂಟ್ ವಿಷ್ಯಗಳೇನು..?
ಒಟ್ಟಾರೆ ಹಳೆ ರೆಕಾರ್ಡ್ಸ್ನೆಲ್ಲಾ ಬ್ರೇಕ್ ಮಾಡಿ ಮುನ್ನುಗ್ತಾ ಇರೋ ಪುಷ್ಪ-2 ಇನ್ನೂ ಏನೆನೆಲ್ಲಾ ರೆಕಾರ್ಡ್ ಸೆಟ್ ಮಾಡುತ್ತೆ ಕಾದುನೋಡೋಣ.