Asianet Suvarna News Asianet Suvarna News

ಜನಧನ್ ಖಾತೆ ಹಣ ವಿತ್‌ಡ್ರಾ ಮಾಡದಿದ್ರೆ ಇಂದೇ ವಾಪಸ್? ಇಲ್ಲಿದೆ ಬ್ಯಾಂಕರ್ ರೆಸ್ಪಾನ್ಸ್

  • ಜನ ಧನ್ ಖಾತೆಯಿಂದ ಹಣ ಇಂದೇ ವಿತ್‌ಡ್ರಾ ಮಾಡದಿದ್ರೆ ವಾಪಾಸ್ ಎಂಬ ವದಂತಿ
  • ಹಣ ತೆಗೆಯಲು ಎಟಿಎಂಗೆ ಮುಗಿ ಬಿದ್ದ ಜನಧನ್ ಖಾತೆದಾರರು, 
  • ಸುಳ್ಳು ಸುದ್ದಿ ನಂಬಬೇಡಿ, ಎಸ್‌ಬಿಐ ಹಿರಿಯ ಅಧಿಕಾರಿ ಸ್ಪಷ್ಟನೆ 

ಬೆಂಗಳೂರು (ಏ.10): ಜನಧನ್ ಖಾತೆಗೆ ಬಿದ್ದ ಹಣ ತೆಗೆದುಕೊಳ್ಳದೆ ಹೋದರೆ ಇಂದೇ ವಾಪಸ್ ಹೋಗತ್ತೆ. ಇಂಥದ್ದೊಂದು ವದಂತಿ ನಂಬಿ ರಾಜ್ಯಾದ್ಯಂತ ಹಲವೆಡೆ ಜನರು ಬ್ಯಾಂಕ್, ಎಟಿಎಂ ಗಳಿಗೆ ಮುಗಿಬಿದ್ದಿದ್ದಾರೆ. ಆದರೆ ಇದೊಂದು ಸುಳ್ಳು ಸುದ್ದಿಯಾಗಿದ್ದು, ಖಾತೆಗೆ ಬಂದ ಹಣ ಯಾವುದೇ ಕಾರಣಕ್ಕೂ ಹಿಂದೆ ಹೋಗುವುದಿಲ್ಲ ಎಂದು SBI Chief ಜನರಲ್  ಮ್ಯಾನೇಜರ್  ಅಭಿಜಿತ್ ಮುಜುಂದಾರ್ ಸ್ಪಷ್ಟಪಡಿಸಿದ್ದಾರೆ. 
ಇದನ್ನೂ ನೋಡಿ | ರಾಜ್ಯದ 18 ಜಿಲ್ಲೆಗಳಲ್ಲಿ ಸೀಲ್ ಡೌನ್‌ಗೆ ಮುಂದಾದ ಸರ್ಕಾರ...
ಖಾತೆಗೆ ಬಂದ ಹಣವನ್ನು ಯಾವಾಗ ಬೇಕಿದ್ದರೂ ಪಡೆಯಬಹುದು. ತುರ್ತು ಅಗತ್ಯವಿದ್ದರೆ ಮಾತ್ರ ಹಣ ತೆಗೆದುಕೊಳ್ಳಿ, ಇಲ್ಲದಿದ್ದರೆ ಲಾಕ್ ಡೌನ್ ಕಾಲ ಮುಗಿದ ನಂತರ ಹಣ ಪಡೆಯುವಂತೆ ವಿನಂತಿಸಿದ್ದಾರೆ. 
ಬೆಂಗ್ಳೂರಿನ 13 ವಾರ್ಡ್‌ಗಳಲ್ಲಿ ಸೀಲ್‌ಡೌನ್; ಶುರುವಾಯ್ತು ಕೌಂಟ್‌ಡೌನ್...
"