11:35 PM (IST) Aug 30

Karnataka News Live 30 August 2026ಪ್ರೇಕ್ಷಕರು ನನಗಿಂತ ಬುದ್ಧಿವಂತರೆಂಬ ಎಚ್ಚರಿಕೆಯಿಂದ ಸಿನಿಮಾ ಮಾಡಿದ್ದೇನೆ - ನಾಗತಿಹಳ್ಳಿ ಚಂದ್ರಶೇಖರ್‌

‘ಅಮೆರಿಕಾ ಅಮೆರಿಕಾ 2’ ಸಿನಿಮಾದ ಟ್ರೇಲರ್ ಮೈಸೂರಿನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ಈ ಸಿನಿಮಾದ ಬಗ್ಗೆ ಡಾಲಿ ಧನಂಜಯ, ನಿರೂಪ್ ಭಂಡಾರಿ, ಪೃಥ್ವಿ ಅಂಬಾರ್ ಹಾಗೂ ಶಾನ್ವಿ ಶ್ರೀವತ್ಸ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Read Full Story
11:13 PM (IST) Aug 30

Karnataka News Live 30 August 2026Tech - ಹೆಚ್ಚಿತು ಭಾರತದ ಶಕ್ತಿ; ಕೇವಲ 20 ನಿಮಿಷ ಸಾಕು, ಅರ್ಧ ಜಗತ್ತೇ ಬೂದಿ! ಜಗತ್ತನ್ನೇ ನಡುಗಿಸುತ್ತಿದೆ ಇಂಡಿಯಾದ ಈ ಅಣು ಬ್ರಹ್ಮಾಸ್ತ್ರ!

1989ರಲ್ಲಿ ಉಡಾವಣೆಯಾದ 'ಅಗ್ನಿ' ಕ್ಷಿಪಣಿಯು ಭಾರತವನ್ನು ಮಿಲಿಟರಿ ಸೂಪರ್ ಪವರ್ ಆಗಿ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನೇತೃತ್ವದಲ್ಲಿ, ಅಂತರರಾಷ್ಟ್ರೀಯ ನಿರ್ಬಂಧಗಳನ್ನು ಮೀರಿ ಸ್ವದೇಶಿ ತಂತ್ರಜ್ಞಾನದಿಂದ ಅಗ್ನಿ-1 ರಿಂದ ಅಗ್ನಿ-5 ರವರೆಗೆ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಯಿತು.

Read Full Story
10:39 PM (IST) Aug 30

Karnataka News Live 30 August 2026ಸಲಾಡ್‌ ಅಷ್ಟೇ ತಿಂದು ಫಿಟ್ನೆಟ್ ಮೈಂಟೇನ್ ಮಾಡುತ್ತಿರುವ ಬಿಗ್‌ಬಾಸ್‌ ಖ್ಯಾತಿಯ ಸಂಗೀತಾ ಶೃಂಗೇರಿ

ವರ್ಕೌಟ್‌ಗೆ ಸಮಯ ಸಿಗದ ಕಾರಣ ಸಂಗೀತಾ ಶೃಂಗೇರಿ ತಮ್ಮ ಡಯಟ್‌ನಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಅನ್ನ, ರೋಟಿ, ದೋಸೆಗೆ ಬ್ರೇಕ್‌ ನೀಡಿ ಹಣ್ಣು-ತರಕಾರಿ ಸಲಾಡ್‌ಗೆ ಆದ್ಯತೆ ನೀಡುತ್ತಿರುವುದಾಗಿ ನಟಿ ಹೇಳಿದ್ದಾರೆ.

Read Full Story
10:35 PM (IST) Aug 30

Karnataka News Live 30 August 2026ಒಂದೇ ಓವರ್‌ನಲ್ಲಿ 6, 6, 6, 6, 6, 6! 26 ಎಸೆತಗಳಲ್ಲಿ 77 ರನ್ ಚಚ್ಚಿದ ಅಭಿಷೇಕ್ ಶರ್ಮಾ..!

ಪಂಜಾಬ್ ಟಿ20 ಲೀಗ್‌ನಲ್ಲಿ ಒಂದೇ ಓವರ್‌ನಲ್ಲಿ 6 ಸಿಕ್ಸರ್ ಸಿಡಿಸಿದ ಅಭಿಷೇಕ್ ಶರ್ಮಾ, ಕೇವಲ 26 ಎಸೆತಗಳಲ್ಲಿ 77 ರನ್ ಚಚ್ಚುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ಇವರ ಈ ಬಿರುಗಾಳಿಯಂತಹ ಬ್ಯಾಟಿಂಗ್ ನೆರವಿನಿಂದ ಅಮೃತಸರ ಸೂರ್ಮಾಸ್ ತಂಡ 258 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ.

Read Full Story
09:16 PM (IST) Aug 30

Karnataka News Live 30 August 2026ಕಷ್ಟದಲ್ಲಿದ್ದ 4 ಕುಟುಂಬಗಳಿಗೆ ಕಿಚ್ಚ ಸುದೀಪ್‌ ಆಸರೆ - ತಾಯಿಯ ನೆನಪಿನಲ್ಲಿ ಮಹತ್ವದ ಕಾರ್ಯ

ಕಿಚ್ಚ ಸುದೀಪ್‌ ಅವರು ತಮ್ಮ ತಾಯಿ ಸರೋಜಾ ಸಂಜೀವ್‌ ಅವರ ಸ್ಮರಣಾರ್ಥ ಆರ್ಥಿಕ ಸಂಕಷ್ಟದಲ್ಲಿದ್ದ ನಾಲ್ಕು ಕುಟುಂಬಗಳಿಗೆ ಉಚಿತ ಆಟೋ ರಿಕ್ಷಾಗಳನ್ನು ನೀಡಿ ಸ್ವಾವಲಂಬಿ ಬದುಕಿಗೆ ನೆರವಾಗಿದ್ದಾರೆ.

Read Full Story
09:09 PM (IST) Aug 30

Karnataka News Live 30 August 2026ಬೆಂಗಳೂರಿನ 'ಆರ್ಟ್ ಆಫ್ ಲಿವಿಂಗ್' ಆಶ್ರಮದಲ್ಲಿ ದೈವಿಕ ಸಂಗಮ - ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶೀರ್ವಾದ ಪಡೆದ ಕೇಜ್ರಿವಾಲ್, ಭಗವಂತ್ ಮಾನ್

ಪಂಜಾಬ್ ಸಿಎಂ ಭಗವಂತ್ ಮಾನ್, ಅರವಿಂದ್ ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಅವರು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆಶೀರ್ವಾದ ಪಡೆದರು.

Read Full Story
08:52 PM (IST) Aug 30

Karnataka News Live 30 August 2026ಒರಿಜಿನಲ್ 'ಮಾನ್‌ಸ್ಟರ್' ಯಾರು ಅನ್ನೋ ಪ್ರಶ್ನೆ ಸೈಡ್‌ ಇಡಿ.. ಶಿವಣ್ಣ-ಸಲ್ಲೂ ಜೋಡಿ ಸಿನಿಮಾ ಬರ್ತಿದೆ ನೋಡಿ!

ಹೆಸರಿನ ವಿಚಾರದಲ್ಲಿ ಶುರುವಾಗಿದ್ದ ಗೊಂದಲಕ್ಕೆ ಶಿವಣ್ಣ ಸೌಮ್ಯವಾಗಿಯೇ ಉತ್ತರ ನೀಡಿದ್ದು, ಭವಿಷ್ಯದ ಮಲ್ಟಿಸ್ಟಾರರ್ ಸಿನಿಮಾದ ಕನಸನ್ನು ಅಭಿಮಾನಿಗಳ ಕಣ್ಣಲ್ಲಿ ಬಿತ್ತಿದ್ದಾರೆ. ಹಾಗಿದ್ರೆ, ಶಿವರಾಜ್‌ಕುಮಾರ್-ಸಲ್ಮಾನ್ ಖಾನ್ ಜೋಡಿಯ ಸಿನಿಮಾ ಯಾವಾಗ ಶುರು? ನೋಡಿ…

Read Full Story
08:43 PM (IST) Aug 30

Karnataka News Live 30 August 2026ಟ್ರ್ಯಾಕ್ಟರ್‌ಗೂ ಸವಾಲ್? 9 ಗಂಟೆಯಲ್ಲಿ 40 ಎಕರೆ ಎಡೆ ಹೊಡೆದ ವಿಜಯಪುರದ ಜೋಡೆತ್ತುಗಳು!

ಸಾಮಾನ್ಯವಾಗಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆಯಲು 18ರಿಂದ 20 ಗಂಟೆಗಳವರೆಗೆ ಸಮಯ ಬೇಕಾಗುತ್ತದೆ. ಆದರೆ ವಿಜಯಪುರ ಜಿಲ್ಲೆಯ ಗೊಳಸಂಗಿ ಗ್ರಾಮದ ಜೋಡೆತ್ತುಗಳು ಕೇವಲ 9 ಗಂಟೆಗಳಲ್ಲಿ ಬರೋಬ್ಬರಿ 40 ಎಕರೆ ಜಮೀನಿನಲ್ಲಿ ಎಡೆ ಹೊಡೆದು ಗಮನ ಸೆಳೆದಿವೆ.

Read Full Story
08:43 PM (IST) Aug 30

Karnataka News Live 30 August 2026ಎಲೆಕ್ಟ್ರಾನಿಕ್ ಸಿಟಿ ಸೇರಿ ಬೆಂಗಳೂರಿನ ಪ್ರಮುಖ ಫ್ಲೈಓವರ್ ಮೇಲೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧ

ಬೆಂಗಳೂರಿನ ಹಲವು ಪ್ರಮುಖ ಫ್ಲೈ ಓವರ್ ಮೇಲೆ ಬೈಕ್ ಸಂಚಾರಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ. ಬೆಂಗಳೂರು ಸಂಚಾರಿ ಪೊಲೀಸರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಯಾವೆಲ್ಲಾ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನ ನಿರ್ಬಂಧಿಸಲಾಗಿದೆ?

Read Full Story
08:34 PM (IST) Aug 30

Karnataka News Live 30 August 2026ಟಿಪ್ಪು ಕಟೌಟ್ ವಿವಾದ - ನಾಳೆ 'ಚಿಕ್ಕಮಗಳೂರು ಚಲೋ' ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿ!

ಟಿಪ್ಪು ಕಟೌಟ್ ಮೇಲೆ ಪಾಕಿಸ್ತಾನ ಪರ ಹಾಡು ಬಳಸಿದ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ನಾಳೆ 'ಚಿಕ್ಕಮಗಳೂರು ಚಲೋ'ಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಮಗಳೂರು ತಹಶೀಲ್ದಾರ್ ನಗರದಾದ್ಯಂತ ಬಿಎನ್‌ಎಸ್ 163 ಅಡಿ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ.

Read Full Story
08:14 PM (IST) Aug 30

Karnataka News Live 30 August 2026ನಾರಾಯಣ ಮೂರ್ತಿ ಕುಟುಂಬದಿಂದ ಹೊಸ ಶೇರು ಖರೀದಿ.. 5 ವರ್ಷದಲ್ಲಿ ಭಾರೀ ಲಾಭ, ಯಾವ ಕಂಪನಿ ಗೊತ್ತಾ?

ನಾರಾಯಣ ಮೂರ್ತಿ ಅವರ ಕುಟುಂಬದ ಕ್ಯಾಟಮರನ್ ವೆಂಚರ್ಸ್ ಹಾಗೂ ಎಲ್ಐಸಿಯಂತಹ ದಿಗ್ಗಜ ಸಂಸ್ಥೆಗಳು 'ಫೋಸೆಕೊ ಇಂಡಿಯಾ' ಕೆಮಿಕಲ್ ಕಂಪನಿಯ ಷೇರುಗಳನ್ನು ಖರೀದಿಸಿವೆ. ಕಳೆದ 5 ವರ್ಷಗಳಲ್ಲಿ ಶೇ. 324 ರಷ್ಟು ಮಲ್ಟಿಬ್ಯಾಗರ್ ಲಾಭ ನೀಡಿರುವ ಈ ಕಂಪನಿಯ ಪ್ರಬಲ ಆರ್ಥಿಕ ಬೆಳವಣಿಗೆಯೇ ಈ ಭಾರಿ ಹೂಡಿಕೆಗೆ ಕಾರಣವಾಗಿದೆ.

Read Full Story
07:59 PM (IST) Aug 30

Karnataka News Live 30 August 2026ಟಾಟಾ ಮೋಟಾರ್ಸ್ ಇವಿ ಬುಕಿಂಗ್‌ನಲ್ಲಿ 3 ಪಟ್ಟು ಹೆಚ್ಚಳ - ಉತ್ಪಾದನಾ ಸಾಮರ್ಥ್ಯವನ್ನೂ ಮೀರಿದ ಬೇಡಿಕೆ!

ಟಾಟಾ ಮೋಟಾರ್ಸ್‌ನ ಎಲೆಕ್ಟ್ರಿಕ್ ವಾಹನಗಳ ಬುಕಿಂಗ್ ಕಳೆದ ಆರು ತಿಂಗಳಲ್ಲಿ ಮೂರು ಪಟ್ಟು ಹೆಚ್ಚಾಗಿದ್ದು, ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸಿದೆ. ಉತ್ಪಾದನಾ ಸಾಮರ್ಥ್ಯದ ಮಿತಿಗಳ ಹೊರತಾಗಿಯೂ, ಹಬ್ಬದ ಋತುವಿನಲ್ಲಿ ದಾಖಲೆಯ ಮಾರಾಟವನ್ನು ನಿರೀಕ್ಷಿಸಲಾಗುತ್ತಿದೆ. ಬದಲಾಗುತ್ತಿರುವ ಗ್ರಾಹಕರ ಆದ್ಯತೆಗಳು ಮತ್ತು ಸರ್ಕಾರದ ನೀತಿಗಳು ಈ ಬೆಳವಣಿಗೆಗೆ ಪೂರಕವಾಗಿವೆ.
Read Full Story
07:52 PM (IST) Aug 30

Karnataka News Live 30 August 2026Vijaypura - ಬೈಕ್‌ನಲ್ಲಿ ಬೆನ್ನಟ್ಟಿದ ಭಜರಂಗದಳ ಕಾರ್ಯಕರ್ತರು; ಕೊನೆಗೆ ಸಿಕ್ಕಿಬಿತ್ತು 8 ಟನ್ ಗೋಮಾಂಸ ತುಂಬಿದ ಲಾರಿ!

ವಿಜಯಪುರ ಜಿಲ್ಲೆಯಲ್ಲಿ, ಭಜರಂಗದಳ ಕಾರ್ಯಕರ್ತರು ಬೈಕ್‌ನಲ್ಲಿ ಲಾರಿಯೊಂದನ್ನು ಬೆನ್ನಟ್ಟಿ ಅಕ್ರಮ ಗೋಮಾಂಸ ಸಾಗಾಟ ಜಾಲವನ್ನು ಬಯಲಿಗೆಳೆದಿದ್ದಾರೆ. ತೆಲಂಗಾಣಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 8 ಟನ್ ಗೋಮಾಂಸವನ್ನು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ.
Read Full Story
07:45 PM (IST) Aug 30

Karnataka News Live 30 August 2026ಧಾರವಾಡದಲ್ಲಿ ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನ, ಠಾಣೆಗೆ ಧಾವಿಸಿದ ಶಾಸಕ ಬೆಲ್ಲದ್

ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶಗಳು ಹೆಚ್ಚಾಗುತ್ತಿದೆ. ಠಾಣೆಗೆ ಶಾಸಕ ಅರವಿಂದ್ ಬೆಲ್ಲದ್ ಬೇಟಿ ನೀಡಿ ಪೊಲೀಸ್ ಕ್ರಮ ಪ್ರಶ್ನಿಸಿದ್ದಾರೆ.

Read Full Story
07:18 PM (IST) Aug 30

Karnataka News Live 30 August 2026ಈ ಬಾರಿಯ ಬಿಗ್‌ ಬಾಸ್ ನನಗೆ 'ತುಂಬಾ ಅನುಕೂಲ'.. ಗ್ರೇಟ್ ಸೀಕ್ರೆಟ್ ಬಿಚ್ಚಿಟ್ಟು ಶಾಕ್ ಮೂಡಿಸಿದ ಕಿಚ್ಚ ಸುದೀಪ್!

"ಮುಂದಿನ ಬೇಟೆ" (Next Hunt) ಎಂಬ ಪದದ ಬಗ್ಗೆ ಕೇಳಿದಾಗ, ಸುದೀಪ್ ತುಂಬಾ ಮಾರ್ಮಿಕವಾಗಿ ಉತ್ತರಿಸಿದ್ದಾರೆ. "ಸದ್ಯಕ್ಕೆ ಬಿಗ್ ಬಾಸ್ ಮೇಲೆ ಮಾತ್ರ ಗಮನವಿರಲಿ. ನನ್ನ ಮುಂದಿನ ಸಿನಿಮಾ ಮತ್ತು ಬೇಟೆಯ ಬಗ್ಗೆ ಸರಿಯಾದ ಸಮಯ ಬಂದಾಗ ಖಂಡಿತಾ ಎಲ್ಲವನ್ನೂ ಹಂಚಿಕೊಳ್ಳುತ್ತೇನೆ" ಎಂದು ಹೇಳುವ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ.

Read Full Story
06:46 PM (IST) Aug 30

Karnataka News Live 30 August 2026ಬೆಂಗಳೂರಿಗೆ ಮತ್ತೊಂದು ಟೋಲ್ ಆಧಾರಿತ ಎಲಿವೇಟೆಡ್ ಕಾರಿಡಾರ್! ರಾಗಿಗುಡ್ಡ ಟು ಕನಕಪುರ ರಸ್ತೆ..! ವಿಶೇಷತೆ ಏನು?

ದಕ್ಷಿಣ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡಲು ರಾಗಿಗುಡ್ಡದಿಂದ ಕನಕಪುರ ರಸ್ತೆಯವರೆಗೆ 18.5 ಕಿ.ಮೀ ಉದ್ದದ ಹೊಸ ಟೋಲ್ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲು ಸರ್ಕಾರ ಬಿಡ್ ಆಹ್ವಾನಿಸಿದೆ. ₹18,000 ಕೋಟಿ ವೆಚ್ಚದ ಬೃಹತ್ ಯೋಜನೆಯ ಭಾಗವಾಗಿರುವ ಈ ರಸ್ತೆಯು ಪೈಪ್‌ಲೈನ್ ರಸ್ತೆಯ ಮೂಲಕ ಸಾಗಿ ನೈಸ್ ರಸ್ತೆಯನ್ನು ಸಂಪರ್ಕಿಸಲಿದೆ.

Read Full Story
06:41 PM (IST) Aug 30

Karnataka News Live 30 August 2026ದರ್ಶನ್ ಸಾಂಗ್ಸ್ 'ಬಿಗ್ ಬಾಸ್' ಮನೇಲಿ ಯಾಕ್ ಹಾಕಲ್ಲ? "ಓಪನ್ ಆಗಿ ಹೇಳ್ತಿನಿ" ಎಂದು ಸುದೀಪ್ ಹೇಳಿದ್ದೇನು?

ದರ್ಶನ್ ಹಾಡು ಬಿಗ್ ಬಾಸ್ ಮನೆಯಲ್ಲಿ ಏಕೆ ಪ್ಲೇ ಆಗೋದಿಲ್ಲ ಅನ್ನೋ ವಿಚಾರಕ್ಕೆ ಸಂಬಂಧಿಸಿ ಬಂದ ಪ್ರಶ್ನೆಗೆ ಸ್ಯಾಂಡಲ್‌ವುಡ್ ನಟ, ಬಿಗ್ ಬಾಸ್ ಕನ್ನಡದ ನಿರೂಪಕ ಕಿಚ್ಚ ಸುದೀಪ್ ಖಡಕ್ ಉತ್ತರ ನೀಡಿದ್ದಾರೆ. "ಓಪನ್ ಆಗಿ ಹೇಳ್ತಿನಿ" ಎಂದು ಮಾತು ಶುರು ಮಾಡಿದ ಸುದೀಪ್ ಹೇಳಿದ್ದೇನು? ಈ ಸ್ಟೋರಿ ನೋಡಿ..

Read Full Story
06:36 PM (IST) Aug 30

Karnataka News Live 30 August 2026‘ಇದನ್ನು ಈ ದೃಷ್ಟಿಕೋನದಿಂದ ನೋಡಿ’ - ಯಶ್ ಟಾಕ್ಸಿಕ್ ಟೀಕೆಗೆ ಮಾಸ್ಟರ್ ಆನಂದ್ ತಿರುಗೇಟು

ರಾಕಿಂಗ್‌ ಸ್ಟಾರ್‌ ಯಶ್‌ ‘ಟಾಕ್ಸಿಕ್’ ಸಿನಿಮಾದಲ್ಲಿ ಕಥೆಯೇ ಇಲ್ಲ ಎಂಬ ಟೀಕೆಗೆ ಮಾಸ್ಟರ್ ಆನಂದ್ ಪ್ರತಿಕ್ರಿಯಿಸಿದ್ದಾರೆ. ಯಶ್ ಅಭಿನಯದ ಚಿತ್ರದ ನಾನ್-ಲೀನಿಯರ್ ಕಥೆ, ಕ್ಲೈಮ್ಯಾಕ್ಸ್‌ ಹಾಗೂ ಪಾತ್ರದ ಹಿನ್ನೆಲೆ ಬಗ್ಗೆ ಅವರು ವಿವರಿಸಿದ್ದಾರೆ.

Read Full Story
05:29 PM (IST) Aug 30

Karnataka News Live 30 August 2026ಉಡಲು ತಂದ ಸೀರೆಯೇ ಉಸಿರು ನೀಡಿತು - ನೇಪಾಳದಲ್ಲಿ 21 ಜೀವ ಕಾಪಾಡಿ ದೇವದೂತರಾದ ತಮಿಳುನಾಡು ದಂಪತಿ!

ಕೈಲಾಸ ಯಾತ್ರೆಗೆ ತೆರಳಿದ್ದ ತಮಿಳುನಾಡಿನ 21 ಯಾತ್ರಿಕರು ನೇಪಾಳದ ಭೀಕರ ಪ್ರವಾಹದಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ, ರತ್ನಕುಮಾರ್ ಮತ್ತು ಪೂಂಗುಳಲಿ ಎಂಬ ದಂಪತಿ ಜಾರುವ ಬೆಟ್ಟದಿಂದ ಎಲ್ಲರನ್ನೂ ಮೇಲೆತ್ತಿ ಜೀವ ಉಳಿಸಿದರು. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

Read Full Story
05:25 PM (IST) Aug 30

Karnataka News Live 30 August 2026ನಟಿ ಪ್ರೇಮಾ ಜೀವನದಲ್ಲಿ ನಿಜಕ್ಕೂ ನಡೆದಿದ್ದೇನು? ವಿಚ್ಛೇದನ, ಕ್ಯಾನ್ಸರ್‌ ವದಂತಿ ಬಗ್ಗೆ ಕೊನೆಗೂ ಸ್ಪಷ್ಟನೆ

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದ ಜನಪ್ರಿಯ ನಾಯಕಿಯಾಗಿ ಮಿಂಚಿದ್ದ ನಟಿ ಪ್ರೇಮಾ, ಇತ್ತೀಚಿನ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನದ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ವೈಯಕ್ತಿಕ ಜೀವನ ಮತ್ತು ಕುಟುಂಬದ ಕುರಿತು ನಟಿ ಹೇಳಿದ್ದೇನು?

Read Full Story