ಧಾರವಾಡದ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪರಿಸ್ಥಿತಿ ತೀವ್ರಗೊಂಡಿದೆ. ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನಕ್ಕೆ ಆಕ್ರೋಶಗಳು ಹೆಚ್ಚಾಗುತ್ತಿದೆ. ಠಾಣೆಗೆ ಶಾಸಕ ಅರವಿಂದ್ ಬೆಲ್ಲದ್ ಬೇಟಿ ನೀಡಿ ಪೊಲೀಸ್ ಕ್ರಮ ಪ್ರಶ್ನಿಸಿದ್ದಾರೆ.

ಧಾರವಾಡ (ಆ.30) ಧಾರವಾಡದಲ್ಲಿ ಎಬಿವಿಪಿ, ಆರ್‌ಎಸ್ಎಸ್ ಕಾರ್ಯಕರ್ತರ ಬಂಧನ ಇದೀಗ ತೀವ್ರ ಕೋಲಾಹಲ ಸೃಷ್ಟಿಸಿದೆ. ನಟ ಪ್ರಕಾಶ್ ಕಾರ್ಯಕ್ರಮ ವಿಚಾರದಲ್ಲಿ ಶುರುವಾದ ಜಟಾಪಟಿ ಬೆನ್ನಲ್ಲೇ ಪೊಲೀಸರು ಆರ್‌ಎಸ್ಎಸ್ ಹಾಗೂ ಎಬಿವಿಪಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಶಹರ ಪೊಲೀಸ್ ಠಾಣೆಗೆ ಧಾವಿಸಿದ ಶಾಸಕ ಅರವಿಂದ್ ಬೆಲ್ಲದ್ ಆಕ್ರೋಶ ಹೊರಹಾಕಿದ್ದಾರೆ. ಆರ್‌ಎಸ್ಎಸ್‌ಗೆ ದಿಕ್ಕಾರ್ ಕೂಗಿದವರನ್ನು ಬಂಧನ ಮಾಡಿಲ್ಲ ಯಾಕೆ ಎಂದು ಬೆಲ್ಲದ್ ಪೊಲೀಸರ ಪ್ರಶ್ನಿಸಿದ್ದಾರೆ. ಇದೇ ವೇಳೆ ಗಾಯಗೊಂಡ ಕಾರ್ಯಕರ್ತರನ್ನು ಅರವಿಂದ್ ಬೆಲ್ಲದ್ ಬೇಟಿ ಮಾಡಿದ್ದಾರೆ.

ಏನಿದು ಗಲಾಟೆ

ಧಾರವಾಡದ ವಿದ್ಯಾವರ್ತನ ಸಂಘದಲ್ಲಿ ಆಯೋದಿಸಿದ್ದ ಮನುಷ್ಯತ್ವದೆಡೆಗೆ ಸಮುದಾಯ ಕಾರ್ಯಕ್ರಮದಲ್ಲಿ ವಿವಾದ ಶುರುವಾಗಿದೆ. ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಲು ಮುಂದಾದ ಬಿಜೆಪಿ ಕಾರ್ಯಕರ್ತನನ್ನು ಹೊರಗೆ ಕಳುಹಿಸಲಾಗಿದೆ. ಆಯೋಜಕರ ನಡೆ, ಕಾರ್ಯಕ್ರಮದ ವಿರುದ್ಧ ಬಿಜೆಪಿ, ಎಬಿವಿಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಆಯೋಜಕರು ಹಾಗೂ ಬಿಜೆಪಿ ಕಾರ್ಯಕರ್ತನ ನಡುವೆ ವಾಗ್ವಾದ ತೀವ್ರಗೊಂಡಿದೆ. ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಪರಿಣಾಮ ಪ್ರಕಾಶ್ ರಾಜ್‌ಗೆ ಘೇರಾವ್ ಹಾಕಲು ಎಬಿವಿಪಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಆಗಮಿಸಿದ್ದಾರೆ. ಹೀಗಾಗಿ ಪರಿಸ್ಥಿತಿ ಉದ್ವಿಘ್ನಗೊಂಡು ಜಪಾಟಿ ನಡೆದಿದೆ.ಇತ್ತ ಪೊಲೀಸರು ಎಬಿವಿಪಿ, ಆರ್‌ಎಸ್ಎಸ್, ಬಿಜೆಪಿ ಕಾರ್ಯಕರ್ತರ ಬಂಧಿಸಿದ್ದಾರೆ.

ಪ್ರಕಾಶ್ ರಾಜ್‌ಗೆ ಧಿಕ್ಕಾರ ಕೂಗಿದ ಕಾರಣಕ್ಕೆ ಕಾರ್ಯಕರ್ತರ ಅರೆಸ್ಟ್ ಮಾಡೋದಾದರೆ, ಆರ್‌ಎಸ್ಎಸ್‌ಗೆ ಧಿಕ್ಕಾರ ಕೂಗಿದವರನ್ನು ಯಾಕೆ ಬಂಧಿಸಿಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ್ ಪ್ರಶ್ನಿಸಿದ್ದಾರೆ. ಕಾರ್ಯಕ್ರಮಕ್ಕೆ ಅತಿಥಿಯಾಗಿ, ಸಮಾಜ ವಿರೋಧಿ, ಧರ್ಮ ವಿರೋಧಿ ಪ್ರಕಾಶ್ ರಾಜ್ ಹಾಜರಾಗಿದ್ದರು. ಈ ಕಾರ್ಯಕ್ರಮದಲ್ಲಿ ಕೆಲವರು ಆರ್‌ಎಸ್ಎಸ್ ವಿರುದ್ದ ಘೋಷಣೆ ಕೂಗಿದ್ದಾರೆ. ಪ್ರಶ್ನೆ ಮಾಡಿದ್ದಕ್ಕೆ ನಮ್ಮವರ ಮೇಲೆ ಕ್ರಮ ಕೈಗೊಂಡಿದ್ದಾರೆ ಎಂದು ಅರವಿಂದ್ ಬೆಲ್ಲದ್ ಆಕ್ರೋಶ ಹೊರಹಾಕಿದ್ದಾರೆ. ಈ ಸರ್ಕಾರಕ್ಕೆ ಏನು ಹೇಳಿದರೂ ಕೇಳುವುದಿಲ್ಲ. ಮಾನವ ಹಕ್ಕು ಆಯೋಗಕ್ಕೆ ಎಬಿವಿಪಿ ಕಾರ್ಯಕರ್ತನ ಮೆಲೆ ಹಲ್ಲೆ ಮಾಡಿರುವ ವಿಡಿಯೋ ಕೊಡುತ್ತೆವೆ ಎಂದು ಅರವಿಂದ್ ಬೆಲ್ಲದ್ ಎಚ್ಚರಿಸಿದ್ದಾರೆ.

ಘಟನೆಯಿಂದ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಒಂದೆಡೆ ಭಾರತ್ ಮಾತಾ ಕಿ ಜೈ ಘೋಷಣೆಗಳು ಮೊಳಗಿದೆ. ಮತ್ತೊಂದೆಡೆ ಆರ್‌ಎಸ್ಎಸ್ ದಿಕ್ಕಾರ ಘೋಷಣೆಗಳು ಮೊಳಗಿದೆ. ಶಹರ ಪೊಲೀಸ್ ಠಾಣೆ ಮುಂದೆ ಅರವಿಂದ್ ಬೆಲ್ಲದ್ ಸೇರಿದಂತೆ ಕಾರ್ಯಕರ್ತರು ಜಮಾಯಿಸಿ ಕ್ರಮ ಖಂಡಿಸಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಬಿಗು ಬಂದೋಬಸ್ತ್ ನಡೆಸಿದ್ದಾರೆ.