MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Sandalwood
  • Yash Movie: ಟಾಕ್ಸಿಕ್ ಗಲ್ಲಾಪೆಟ್ಟಿಗೆಗೆ ಮೂರು ದಿನದಲ್ಲಿ ಸೇರಿದ್ದೆಷ್ಟು ಕೋಟಿ ?

Yash Movie: ಟಾಕ್ಸಿಕ್ ಗಲ್ಲಾಪೆಟ್ಟಿಗೆಗೆ ಮೂರು ದಿನದಲ್ಲಿ ಸೇರಿದ್ದೆಷ್ಟು ಕೋಟಿ ?

ಗೀತು ಮೋಹನದಾಸ್ ನಿರ್ದೇಶನದ, ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾ ಮೊದಲ ದಿನವೇ 100 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ಮಿಶ್ರ ಪ್ರತಿಕ್ರಿಯೆಗಳ ನಡುವೆಯೂ, ಚಿತ್ರವು ಬಿಡುಗಡೆಯಾದ ಮೂರೇ ದಿನಗಳಲ್ಲಿ ಉತ್ತಮ ಕಲೆಕ್ಷನ್ ದಾಟಿ, ಪ್ಯಾನ್-ಇಂಡಿಯಾ ಮಟ್ಟದಲ್ಲಿ ತನ್ನ ಯಶಸ್ಸನ್ನು ಸಾಬೀತುಪಡಿಸಿದೆ.

2 Min read
Author : Mahmad Rafik
Published : Aug 29 2026, 12:41 PM IST
Share this Photo Gallery
  • FB
  • TW
  • Linkdin
  • Whatsapp
15
ಯಶ್ ಅಭಿನಯದ ಟಾಕ್ಸಿಕ್
Image Credit : X

ಯಶ್ ಅಭಿನಯದ ಟಾಕ್ಸಿಕ್

ಯಶ್ ಅವರ 'ಟಾಕ್ಸಿಕ್' ಸಿನಿಮಾ ಆಗಸ್ಟ್ 26 ರಂದು ಭಾರತದಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆಯಾಯಿತು. ಸಕ್ನಿಲ್ಕ್ ಡೇಟಾವನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದಂತೆ, ಈ ಚಿತ್ರವು ಮೊದಲ ದಿನವೇ ಭಾರತದಲ್ಲಿ 101.10 ಕೋಟಿ ರೂಪಾಯಿ ನಿವ್ವಳ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಒಟ್ಟು 120.75 ಕೋಟಿ ಮತ್ತು ವಿಶ್ವಾದ್ಯಂತ 140.75 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಆಗಿದೆ ಎಂದು ವರದಿ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪ್ಯಾನ್ ಇಂಡಿಯಾ ಸಿನಿಮಾ
Image Credit : X

ಪ್ಯಾನ್ ಇಂಡಿಯಾ ಸಿನಿಮಾ

ಮೊದಲ ದಿನವೇ 100 ಕೋಟಿ ದಾಟಿದ ಈ ಗಳಿಕೆ, ಯಶ್ ಅವರ ಪ್ಯಾನ್-ಇಂಡಿಯಾ ಮಾರುಕಟ್ಟೆಯಲ್ಲಿ ಚಿತ್ರಕ್ಕೆ ಸಿಕ್ಕಿರುವ ದೊಡ್ಡ ಸ್ವಾಗತವನ್ನು ತೋರಿಸುತ್ತದೆ. ಎರಡು ದಿನಗಳಲ್ಲಿ ಗೀತು ಮೋಹನದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಮಿಶ್ರ ಪ್ರತಿಕ್ರಿಯೆ ನಡುವೆಯೂ ಚಿತ್ರಮಂದಿರಗಳತ್ತ ಜನರನ್ನು ಆಕರ್ಷಿಸುತ್ತಿದೆ. ಇದೀಗ ಎರಡು ದಿನಗಳಲ್ಲಿ ಟಾಕ್ಸಿಕ್ ಕಲೆಕ್ಷನ್ ಎಷ್ಟೆಂದು ನೋಡೋಣ ಬನ್ನಿ.

Related Articles

Related image1
ಆಂಕರ್ ಅನುಶ್ರೀ ಫಸ್ಟ್ ಆನಿವರ್ಸರಿ @ ಕೀನ್ಯಾ: ಕಾಡಲ್ಲಿ ಸಾಥ್ ಕೊಟ್ಟ ರೋಷನ್ ರಾಜ
Related image2
ನಂದಗೋಕುಲ: ಕೇಶವ ಪಾತ್ರಧಾರಿ ಯಶವಂತ್ ಧಾರಾವಾಹಿ ತೊರೆದಿದ್ದೇಕೆ? ಪತ್ರದಲ್ಲಿ ಏನಿದೆ?
35
ವಿಶ್ವಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್
Image Credit : X

ವಿಶ್ವಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್

ಬಿಡುಗಡೆಯಾದ ಮೂರೇ ದಿನಗಳಲ್ಲಿ 'ಟಾಕ್ಸಿಕ್' ವಿಶ್ವಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್ ದಾಟಿದೆ ಎಂದು ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಮೊದಲ ದಿನದ ವೇಗಕ್ಕೆ ಹೋಲಿಸಿದರೆ ಮುಂದಿನ ದಿನಗಳಲ್ಲಿ ಕಲೆಕ್ಷನ್‌ನಲ್ಲಿ ಸ್ವಲ್ಪ ಏರಿಳಿತ ಕಂಡರೂ, ವಾರಾಂತ್ಯದೊಳಗೆ ದೊಡ್ಡ ಮೊತ್ತ ಗಳಿಸಿದ್ದು ಚಿತ್ರತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇದೇ ವೇಳೆ, ಬೇರೆ ಬೇರೆ ಸಂಸ್ಥೆಗಳು ನಿವ್ವಳ ಮತ್ತು ಒಟ್ಟು ಗಳಿಕೆಯನ್ನು ವಿಭಿನ್ನವಾಗಿ ಲೆಕ್ಕ ಹಾಕುವುದರಿಂದ, ಕಲೆಕ್ಷನ್ ಮಾಹಿತಿಯನ್ನು ಹೋಲಿಸುವಾಗ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು.

45
ಮಲ್ಟಿಸ್ಟಾರ್‌ ಕಲಾವಿದರ ಸಿನಿಮಾ
Image Credit : Asianet News

ಮಲ್ಟಿಸ್ಟಾರ್‌ ಕಲಾವಿದರ ಸಿನಿಮಾ

ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಯಶ್ ಮತ್ತು ಗೀತು ಮೋಹನ್‌ದಾಸ್ ಸೇರಿ ರೂಪಿಸಿದ ಈ ಚಿತ್ರವನ್ನು ವೆಂಕಟ್ ಕೆ. ನಾರಾಯಣ ಮತ್ತು ಯಶ್ ನಿರ್ಮಿಸಿದ್ದಾರೆ.

ಇದನ್ನೂ ಓದಿ: 'ಟಾಕ್ಸಿಕ್‌'ನಲ್ಲಿ ಮೆಚ್ಚುಗೆ ಗಳಿಸಿದ 'ಟಿಕೆಟ್' ಪುಟ್ಟ ಹುಡುಗ ಯಾರು? ಈತನ ಹಿನ್ನೆಲೆ ತಿಳಿದರೆ ಶಾಕ್ ಆಗ್ತೀರ!

55
ಆರು ಭಾಷೆಗಳಲ್ಲಿ ಬಿಡುಗಡೆ
Image Credit : Asianet News

ಆರು ಭಾಷೆಗಳಲ್ಲಿ ಬಿಡುಗಡೆ

ಟಾಕ್ಸಿಕ್ ಸಿನಿಮಾ ಕನ್ನಡ ಮಾತ್ರವಲ್ಲದೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಿದ್ದರಿಂದ, ವಿವಿಧ ರಾಜ್ಯಗಳ ಅಭಿಮಾನಿಗಳ ಗಮನ ಸೆಳೆದಿದೆ. ಸದ್ಯ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಹಲವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ.

ಇದನ್ನೂ ಓದಿ: 'ಟಾಕ್ಸಿಕ್' ನೆಗೆಟಿವ್ ರೀವ್ಯೂ-ಟಾಕ್ ಬಗ್ಗೆ ಶಿವರಾಜ್‌ಕುಮಾರ್ ಖಡಕ್ ಮಾತು.. ಯಶ್ ಬಗ್ಗೆ 'ಹ್ಯಾಟ್ರಿಕ್ ಹೀರೋ' ಹೇಳಿದ್ದಿಷ್ಟು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಟಾಕ್ಸಿಕ್
ಟಾಕ್ಸಿಕ್
ಯಶ್
ಬಾಕ್ಸ್ ಆಫೀಸ್ ಕಲೆಕ್ಷನ್
ಸ್ಯಾಂಡಲ್ವುಡ್ ಫಿಲ್ಮ್
ಸ್ಯಾಂಡಲ್‌ವುಡ್
ಸಿನಿಮಾ
ಕಿಯಾರಾ ಅಡ್ವಾಣಿ
ನಯನತಾರ
ರುಕ್ಮಿಣಿ ವಸಂತ್
 

Latest Videos
Recommended Stories
Recommended image1
‘ಪ್ರೇಮದ ಊರಲಿ’ಗೂ ‘ಬೃಂದಾವಿಹಾರಿ’ಗೂ ಏನು ಸಂಬಂಧ? ಗೋಲ್ಡನ್ ಸ್ಟಾರ್ ಗಣೇಶ್ ಏನ್ ಹೇಳಿದ್ರು?
Recommended image2
ಸ್ವಾಮೀಜಿ ಸಲಹೆ, ಮದುವೆ ನಿರ್ಧಾರ: ರಾಜ್‌ಕುಮಾರ್ ಜೊತೆ ನಟಿಸಿದ ಮಾಧವಿಯ ಈ ಕಥೆ ಗೊತ್ತಾ?
Recommended image3
'ಪ್ರೇಮದ ಊರಲಿ' ರೈಟ್ಸ್‌ಗೆ OTT ದೈತ್ಯರ ಕಾದಾಟ.. ಕನ್ನಡ ಒಟಿಟಿ 'ಎವಿಆರ್ ಸಿನಿಮ್ಯಾಕ್ಸ್‌'ನಲ್ಲೇ ಬರಲಿದ್ಯಾ ಈ ಸೂಪರ್ ಹಿಟ್ ಸಿನಿಮಾ?
Related Stories
Recommended image1
ಆಂಕರ್ ಅನುಶ್ರೀ ಫಸ್ಟ್ ಆನಿವರ್ಸರಿ @ ಕೀನ್ಯಾ: ಕಾಡಲ್ಲಿ ಸಾಥ್ ಕೊಟ್ಟ ರೋಷನ್ ರಾಜ
Recommended image2
ನಂದಗೋಕುಲ: ಕೇಶವ ಪಾತ್ರಧಾರಿ ಯಶವಂತ್ ಧಾರಾವಾಹಿ ತೊರೆದಿದ್ದೇಕೆ? ಪತ್ರದಲ್ಲಿ ಏನಿದೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved