15 ವರ್ಷದ ಬೆಂಗಳೂರಿನ ಬಾಲಕ ಲಾಕ್‌ಡೌನ್ ಸಮಯದಲ್ಲಿ ತನ್ನ ಇಷ್ಟದ ಪ್ರಾಜೆಕ್ಟ್ ಕೆಲಸ ಆರಂಭಿಸಿದ್ದ. ಶಾಲಾ ಕಾಲೇಜು ಮುಚ್ಚಿದ ಕಾರಣ ಕೆಲಸದಲ್ಲಿ ಮಗ್ನನಾದ. ಇದೀಗ ಇದೇ ಬಾಲಕ 500 ಕೋಟಿ ರೂಪಾಯಿ ಸ್ಟಾರ್ಟ್ಅಪ್ ಕಂಪನಿ ಮಾಲೀಕ.
ಬೆಂಗಳೂರು (ಆ.30) ಕೋವಿಡ್ ಲಾಕ್‌ಡೌನ್ ವೇಳೆ ಹಲವರು ಸ್ವಂತ ಉದ್ಯಮ, ಕೃಷಿ ಸೇರಿದಂತೆ ಹಲವು ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಈ ಸಮಯದಲ್ಲಿ ವಿದ್ಯಾರ್ಥಿಗಳು ಹೆಚ್ಚು ಪ್ರಯಾಸ ಪಟ್ಟಿದ್ದರು. ಆನ್‌ಲೈನ್ ಕ್ಲಾಸ್, ಶಾಲಾ ಕಾಲೇಜಿಗೆ ಹೋಗದೆ ವರ್ಷ ಕಳೆದಿದ್ದರು. ಹೀಗೆ ಬೆಂಗಳೂರಿನ 15 ವರ್ಷದ ಬಾಲಕ ತನ್ನ ಇಷ್ಟದ ಡ್ರೋನ್ ಮಾಡಲು ಮುಂದಾಗಿದ್ದ. ಓಪನ್ ಡ್ರೋನ್ ಆರಂಭಿಸಿದ್ದ. ವಿಶೇಷ ಅಂದರೆ ಇದೀಗ ಇದೇ ಬಾಲಕ 500 ಕೋಟಿ ರೂಪಾಯಿ ಮೌಲ್ಯದ ಸ್ಟಾರ್ಟ್ಅಪ್ ಕಂಪನಿ ಮಾಲೀಕನಾಗಿದ್ದಾನೆ.
ನಮನ್ ಪುಷ್ಪಾ ಸ್ಪೂರ್ತಿಯ ಕತೆ
ನಮನ್ ಪುಷ್ಪ ಪಯಣ ಹಲವರಿಗೆ ಸ್ಪೂರ್ತಿಯಾಗಿದೆ. ಬೆಂಗಳೂರಿನ ಈ ಹುಡುಗ ಈಗ ಸರಿಸುಮಾರು 500 ಕೋಟಿ ಮೌಲ್ಯದ ಸ್ಟಾರ್ಟ್ಅಪ್ ಕಂಪನಿಯ ಮಾಲೀಕನಾಗಿದ್ದಾನೆ. ಲಾಕ್‌ಡೌನ್ ಸಮಯದಲ್ಲಿ ತರಗತಿಗಳು ಇರಲಿಲ್ಲ. ಹೀಗಾಗಿ ಡ್ರೋನ್ ಮಾಡಲು ಕುಳಿತಿದ್ದು. ಕೋವಿಡ್ ಲಾಕ್‌ಡೌನ್ ಕಾರಣ ಈತನ ಪ್ರಯತ್ನಕ್ಕೆ ಸಮಯವೂ ಸಿಕ್ಕಿತು, ಜೊತೆಗೆ ಯಾವುದೇ ಟೀಕೆಗಳಿಲ್ಲದೆ ತನ್ನ ಯೋಜನೆ ಮಂದುವರಿಸಲು ಸಾಧ್ಯವಾಗಿತ್ತು. ಓಪನ್ ಡ್ರೋನ್ ಅಭಿವೃದ್ಧಿಪಡಿಸಿದ ನಮನ್ ಪುಷ್ಪಾ ಈ ಡ್ರೋನ್‌ನ್ನು ಹ್ಯಾಕಥಾನ್ ಪ್ರದರ್ಶನಕ್ಕೆ ಕೊಂಡೊಯ್ದಿದ್ದರು. ಇಲ್ಲಿ 500 ಡಾಲರ್ ಬಹುಮಾನ ಗೆದ್ದುಕೊಂಡಿದ್ದರು. ಈ ಬಹುಮಾನ ನಮನ್ ಪುಷ್ಪಾ ಆತ್ಮವಿಶ್ವಾಸ ಹೆಚ್ಚಿಸಿತ್ತು. ತಾನು ಇದೇ ಕ್ಷೇತ್ರದಲ್ಲಿ ಮುಂದುವರಿಯಲು ಗಟ್ಟಿ ನಿರ್ಧಾರ ಮಾಡಿದ್ದರು.
ನಮನ್ ಪುಷ್ಪಾ ಬೆಂಗಳೂರಿನಲ್ಲಿ ನೆಲೆಸಿದ್ದಾನೆ. ಮುಂಬೈನಲ್ಲಿ ಜನಸಿದ ನಮನ್, ಕೆಲ ವರ್ಷವನ್ನು ಹೈದರಾಬಾದ್ ಹಾಗೂ ಮಲೇಷ್ಯಾದಲ್ಲಿ ಕಳೆದಿದಿದ್ದಾರೆ. ಮಲೇಷ್ಯಾದಲ್ಲಿ ರೋಬೋಟ್ ತಯಾರಿಸಲು ಆರಂಭಿಸಿದ್ದರು. ಇನ್ನು ರೋಬೋಟಿಕ್ಸ್, ಎಂಜಿನಿಯರಿಂಗ್ ಯೋಜನೆಗಳಲ್ಲಿ ಪಾಲ್ಗೊಂಡಿದ್ದರು.ಪಿಯಿಸಿಯಲ್ಲಿ ನಮನ್ ಡ್ರೋನ್ ಪ್ರಾಜ್ಕೆಟ್ ಆರಂಭಿಸಿದ್ದ. ಲಾಕ್‌ಡೌನ್ ಮುಗಿದು ಕಾಲೇಜು ಆರಂಭಗೊಂಡರೂ ನಮನ್ ತನ್ನ ಡ್ರೋನ್‌ನಲ್ಲೇ ಮುಳುಗಿದ್ದ.
2023ರಲ್ಲಿ ಏರ್‌ಬೌಂಡ್ ಸ್ಟಾರ್ಟ್ಅಪ್ ಕಂಪನಿ ಆರಂಭ
ಸ್ಟಾರ್ಟ್ಅಪ್ ಕಂಪನಿಗಳ ಹಬ್ ಆಗಿರುವ ಬೆಂಗಳೂರಿನಲ್ಲಿ ನಮನ್ ಪುಷ್ಪಾ ಏರ್‌ಬೌಂಡ್ ಅನ್ನೋ ಸ್ಟಾರ್ಟ್ಅಪ್ ಕಂಪನಿ ಆರಂಭಿಸಿದ್ದ. ಹಲವು ಉಪಯೋಗಗಳ ಡ್ರೋನ್ ತಯಾರಿಕೆಯಲ್ಲಿ ತೊಡಗಿಸಿಕೊಂಡ. ಏರ್‌ಬೌಂಡ್ ಕಂಪನಿ ಹಲವು ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ತ್ವರಿಗತಿಯಲ್ಲಿ ಆಸ್ಪತ್ರೆ ತುರ್ತು ಅವಶ್ಯಕತೆಗಾಗಿ ಡ್ರೋನ್ ಬಳಕೆ ಮಾಡಲಾಗುತ್ತಿದೆ. ಹಲವು ಕಂಪನಿಗಳು ಒಪ್ಪಂದ ಮಾಡಿಕೊಂಡಿದೆ.
ಇತ್ತೀಚೆಗೆ 300 ಕೋಟಿ ರೂ ಹೂಡಿಕೆ ಸಂಗ್ರಹಿಸಿದ ಏರ್‌ಬೌಂಡ್
ಇತ್ತೀಚೆಗೆ ಏರ್‌ಬೌಂಡ್ ಕಂಪನಿ ಗ್ರಿನೋಕ್ಸ್ ನೇತೃತ್ವದ ಸೀರೀಸ್ ಎ ಹೂಡಿಕೆ ವೇದಿಕೆಯಲ್ಲಿ 300 ಕೋಟಿ ರೂಪಾಯಿ ಬಂಡವಾಳ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಕಂಪನಿ ಮೌಲ್ಯ ಇದೀಗ ಸರಿಸುಮಾರು 500 ಕೋಟಿ ರೂಪಾಯಿಗೆ ತಲುಪಿದೆ. ಏರ್‌ಬೌಂಡ್ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ಆಗಿರುವ ನಮನ್ ಪುಷ್ಪಾ 21ರ ಹರೆಯದಲ್ಲೇ ದೊಡ್ಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾನೆ.


