ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಿರುವ ಬಿ. ನಾಗೇಂದ್ರ ಅವರು ಏನೂ ತಪ್ಪು ಮಾಡಿಲ್ಲ, ಅವರನ್ನು ಬಿಜೆಪಿ ಬಲಿ ಕೊಟ್ಟಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಅಭಿವೃದ್ಧಿ ಬಿಟ್ಟು ರಾಜಕಾರಣ ಮಾಡುತ್ತಿರುವ ಬಿಜೆಪಿ ಹಾಗೂ ಬಾಯಿ ಚಪಲಕ್ಕೆ ಮಾತನಾಡುವ ಹೆಚ್‌ಡಿಕೆಗೆ ತಿರುಗೇಟು.

ಮೈಸೂರು(ಆ.29): ನಾಗೇಂದ್ರ ಪಕ್ಷಕ್ಕಾಗಿ ರಾಜೀನಾಮೆ ಕೊಟ್ಟಿದ್ದಾರೆ. ಏನೂ ತಪ್ಪು ಮಾಡದ ನಾಗೇಂದ್ರನನ್ನು ಬಿಜೆಪಿ ಬಲಿ ಕೊಟ್ಟಿದೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.

ವಾಲ್ಮೀಕಿ ನಿಗಮ ಹಗರಣ ಪ್ರಕರಣ ಆರೋಪ ಸಂಬಂಧ ಸಚಿವ ಸ್ಥಾನಕ್ಕೆ ಬಿ ನಾಗೇಂದ್ರ ರಾಜೀನಾಮೆ ಕೊಟ್ಟಿರುವ ವಿಚಾರದ ಬಗ್ಗೆ ಮುಖ್ಯಮಂತ್ರಿ ಡಿಕೆ ಶಿವಕುಮಾರ ಮಾಧ್ಯಮ ಪ್ರತಿನಿದಿಗಳೊಂದಿಗೆ ಮಾತನಾಡಿದರು.

ಇದನ್ನೂ ಓದಿ: 'ಏಯ್ ನಾಗೇಂದ್ರ, ನಿನ್ನದು ಕರ್ಮದ ಕಣ್ಣೀರು ಕಣೋ..' ವಾಲ್ಮೀಕಿ ಹಗರಣ, ಚಾರ್ಜ್‌ಶೀಟ್ ಇಟ್ಟುಕೊಂಡು ರೆಡ್ಡಿ ವಾಗ್ದಾಳಿ!

ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸ ಬೇಕಿಲ್ಲ

ರಾಜೀನಾಮೆ ನೀಡಿದ್ರೂ ಬಿಜೆಪಿ ಪಾದಯಾತ್ರೆ ಮುಂದುವರಿಸುವುದಾಗಿ ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಅವರು, ಬಿಜೆಪಿಯವರಿಗೆ ಅಭಿವೃದ್ಧಿ ಕೆಲಸಗಳು ಬೇಕಾಗಿಲ್ಲ. ಅವರಿಗೆ ರಾಜಕಾರಣ, ಟೀಕೆ ಅಷ್ಟೇ ಬೇಕಾಗಿದೆ. ಟೀಕೆಗಳು ಸಾಯುತ್ತವೆ, ಅಭಿವೃದ್ಧಿ ಕೆಲಸಗಳು ಉಳಿಯುತ್ತವೆ. ನನ್ನದು ಒಂದೇ ಒಂದು ಪ್ರಶ್ನೆಗೆ ಬಿಜೆಪಿ ಉತ್ತರ ಕೊಟ್ಟಿಲ್ಲ. ಯಾವ ಕಾರಣಕ್ಕಾಗಿ ಬಿಜೆಪಿ ನಾಗೇಂದ್ರನ ರಾಜೀನಾಮೆ ಕೇಳಿತ್ತೋ ಗೊತ್ತಿಲ್ಲ. ಏನೂ ತಪ್ಪು ಮಾಡದ ನಾಗೇಂದ್ರನನ್ನ ಬಿಜೆಪಿ ಬಲಿ ಪಡೆದಿದೆ ಎಂದರು.

ಇದನ್ನೂ ಓದಿ: B Nagendra Redux: ಒಂದೇ ಹಗರಣಕ್ಕೆ ಎರಡು ಬಾರಿ ನಾಗೇಂದ್ರ ರಾಜೀನಾಮೆ, ಸಂಪುಟದ 2 ಖಾಲಿ ಸ್ಥಾನಗಳು ಯಾರಿಗೆ?

ಕುಮಾರಸ್ವಾಮಿಗೆ ಬಾಯಿ ಚಪಲ

ಡಿಕೆ ಶಿವಕುಮಾರ ವಿಧಾನಸೌಧ ಮಾರುತ್ತಾರೆ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದ ಮುಖ್ಯಮಂತ್ರಿಗಳು, 'ಯಾರಾರು ಏನೇನು ಮಾರಲು ಹೊರಟಿದ್ದರು ಅನ್ನೋದು ಇತಿಹಾಸ ಬಿಚ್ಚಿಟ್ಟರೆ ಎಲ್ಲವೂ ಗೊತ್ತಾಗುತ್ತದೆ. ಕುಮಾರಸ್ವಾಮಿಗೆ ಬಾಯಿಚಪಲ. ಹೀಗಾಗಿ ನನ್ನ ಬಗ್ಗೆ ಏನೇನೋ ಮಾತಾಡ್ತಾರೆ. ಬಾಯಿ ಚಪಲಕ್ಕೆ ಮಾತಾಡಿಕೊಳ್ತಾರೆ, ಮಾತಾಡಿಕೊಳ್ಳಲಿ ಬಿಡಿ. ಟೀಕೆಗೆ ನಾನು ಹೆದರುವವನಲ್ಲ. ಇಡೀ ಎನ್‌ಡಿಎಗೆ ನಾನು ಮುಖ್ಯಮಂತ್ರಿ ಆಗಿರೋದು ಸಹಿಸಲಾಗುತ್ತಿಲ್ಲ. ಅವರ ಅಸೂಯೆತನಕ್ಕೆ ಕೊನೆಯಿಲ್ಲ, ಅದಕ್ಕೆ ಮದ್ದಿಲ್ಲ ಎಂದರು.